ಜಪಾನಿಗರನ್ನು ಬೆಚ್ಚಿ ಬೀಳಿಸಿದ್ದ “ಟ್ವೀಟರ್ ಕಿಲ್ಲರ್”ಗೆ ಮರಣದಂಡನೆ ವಿಧಿಸಿದ ಕೋರ್ಟ್
ಸೀರಿಯಲ್ ಹತ್ಯೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಇದರಲ್ಲಿ 8 ಮಂದಿ ಯುವತಿಯರು, ಒಬ್ಬ ಯುವಕ ಸೇರಿದ್ದಾನೆ.
Team Udayavani, Dec 15, 2020, 4:05 PM IST
ಜಪಾನ್/ಟೋಕಿಯೊ: ಟ್ವೀಟರ್ ಬಳಸಿಕೊಂಡು ಒಂಬತ್ತು ಮಂದಿಯನ್ನು ಹತ್ಯೆಗೈದಿದ್ದ ಜಪಾನ್ ನ ಟ್ವೀಟರ್ ಕಿಲ್ಲರ್ ಗೆ ಟೋಕಿಯೋ ಕೋರ್ಟ್ ಮಂಗಳವಾರ(ಡಿಸೆಂಬರ್ 15, 2020) ಗಲ್ಲುಶಿಕ್ಷೆ ವಿಧಿಸಿದೆ ಎಂದು ವರದಿ ತಿಳಿಸಿದೆ.
ಟ್ವೀಟರ್ ನಲ್ಲಿ ಪರಿಚಯವಾದ ಯುವ ಸಂತ್ರಸ್ತರನ್ನು ಹತ್ಯೆಗೈದಿರುವುದಾಗಿ ಟಕಹಿರೋ ಶಿರೈಷಿ (30ವರ್ಷ)ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ಗಂಭೀರ ಅಪರಾಧಕ್ಕಾಗಿ ಟೋಕಿಯೊ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ.
ಟ್ವೀಟರ್ ಕಿಲ್ಲರ್!
ಟ್ವೀಟರ್ ಕಿಲ್ಲರ್ ಕುಖ್ಯಾತಿಯ ಜಪಾನ್ ನ ಟಕಹಿರೋ ಶಿರೈಷಿ (27) ಎಂಬಾತನನ್ನು ಬಂಧಿಸಿದ್ದ ಪೊಲೀಸರ ಬಳಿ ತನ್ನ ಸೀರಿಯಲ್ ಹತ್ಯೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಇದರಲ್ಲಿ 8 ಮಂದಿ ಯುವತಿಯರು, ಒಬ್ಬ ಯುವಕ ಸೇರಿದ್ದಾನೆ.
ಟ್ವೀಟರ್ ಅನ್ನು ಬಳಸಿಕೊಂಡು ಟಕಹಿರೋ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿಮಗೆ ಅನ್ನಿಸಿದರೆ, ನಾನು ನಿಮಗೆ ನೆರವು ನೀಡುತ್ತೇನೆ ಎಂದು ಹೇಳಿ ಆಕರ್ಷಿಸುತ್ತಿದ್ದನಂತೆ. ಅದರಂತೆ ಈತನ ಮಾತನ್ನು ನಂಬಿ ಬಂದವರನ್ನು ಕೊಲೆಗೈಯುತ್ತಿದ್ದ!
ಇದನ್ನೂ ಓದಿ:2022ರಲ್ಲಿ ಸ್ಪರ್ಧೆ- ಉತ್ತರಪ್ರದೇಶದಲ್ಲಿ ಈ ಬಾರಿ ನಮಗೊಂದು ಅವಕಾಶ ಕೊಡಿ: ಕೇಜ್ರಿವಾಲ್
ಟ್ವೀಟರ್ ಮಾಧ್ಯಮವನ್ನೇ ಬಳಸಿಕೊಂಡು ಶಂಕಿತ ಹಂತಕನನ್ನು ಪೊಲೀಸರು ಬಂಧಿಸಿದ್ದರು. ಫೆಬ್ರುವರಿಯಲ್ಲಿ ಶಂಕಿತ ಹಂತಕನನ್ನು ಸಂಘಟಿತ ಅಪರಾಧದ ಆರೋಪದಡಿ ಬಂಧಿಸಿದ್ದರು, ಆದರೆ ಜೈಲುವಾಸವನ್ನು ಅಮಾನತ್ತಿನಲ್ಲಿಟ್ಟಿರುವುದಾಗಿ ವರದಿ ತಿಳಿಸಿದೆ.
2009 ರಿಂದ 2011ರ ಜುಲೈವರೆಗೆ ಈತ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಬಳಿಕ ಕೆಲವನ್ನು ಬಿಟ್ಟಿದ್ದ. ತದನಂತರ ಕೆಲಸಕ್ಕಾಗಿ ತುಂಬಾ ಪ್ರಯತ್ನಪಟ್ಟಿದ್ದರೂ ಯಾವ ಕೆಲಸವೂ ಸಿಕ್ಕಿರಲಿಲ್ಲವಾಗಿತ್ತು.
ಮಾನಸಿಕವಾಗಿ ಕುಗ್ಗಿಹೋಗಿದ್ದ ಶಿರೈಷಿ ಆಯ್ದುಕೊಂಡಿದ್ದು ಟ್ವೀಟರ್ ಅನ್ನು, ಈ ಸೀರಿಯಲ್ ಹತ್ಯೆಯ ಘಟನೆಗೆ ಜಪಾನಿಗರು ಬೆಚ್ಚಿಬಿದ್ದಿದ್ದರು. ಯಾಕೆಂದರೆ ಜಪಾನ್ ನಲ್ಲಿ ಅಪರಾಧಗಳ ಸಂಖ್ಯೆ ತುಂಬಾ ಕಡಿಮೆ.
ಇದನ್ನೂ ಓದಿ:ಮೇಲ್ಮನೆಯಲ್ಲಿ ಹೊಯ್ ಕೈ, ಎಳೆದಾಟ.. ಪರಿಷತ್ ಪೀಠದ ಮೇಲೆ ಜಂಗೀಕುಸ್ತಿ: ಕಲಾಪ ಮುಂದೂಡಿಕೆ
ನಾನು ಟ್ಟೀಟರ್ ಮೂಲಕ ಸಂತ್ರಸ್ತೆರನ್ನು ಸಂಪರ್ಕಿಸಿ ನಂತರ ಅವರನ್ನು ನನ್ನ ಸಂಪರ್ಕಿಸಲು ಬಂದಾಗ ಕೊಲೆಗೈಯುತ್ತಿದ್ದೆ ಎಂದು ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಟೋಕಿಯೋದ ನೈಋತ್ಯ ಪ್ರದೇಶದ ಝಾಮಾ ಎಂಬಲ್ಲಿ ಫ್ಲ್ಯಾಟ್ ಹೊಂದಿದ್ದ, ಆಗಸ್ಟ್ 22ರಂದು ಟ್ವೀಟ್ ಮೂಲಕ ಸಂತ್ರಸ್ತೆಯೊಬ್ಬಳನ್ನು ಸಂಪರ್ಕಿಸಿ ಆತ್ಮಹತ್ಯೆ ಯೋಚನೆಗೆ ನೆರವು ನೀಡುವುದಾಗಿ ಹೇಳಿದ್ದ ಎಂದು ಶಿಂಬನ್ ಡೈಲಿ ವರದಿ ಮಾಡಿದೆ. ಇದರ ಜಾಡನ್ನು ಹಿಡಿದು ಹೊರಟ ಪೊಲೀಸರಿಗೆ ಹಂತಕ ಸಿಕ್ಕಿಬಿದ್ದಿದ್ದ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
ಕಾಸರಗೋಡು: ಬೈಕ್ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.