ಮುಂಬಯಿ ಷೇರುಪೇಟೆ ಅಲ್ಪ ಏರಿಕೆ
Team Udayavani, Dec 16, 2020, 6:06 AM IST
ಸಾಂದರ್ಭಿಕ ಚಿತ್ರ
ಮುಂಬಯಿ: ಜಾಗತಿಕ ಮಟ್ಟದಲ್ಲಿನ ಮಿಶ್ರ ಬೆಳವಣಿಗೆಗಳ ನಡುವೆಯೂ ಎಫ್ಎಂಸಿಜಿ, ಬ್ಯಾಂಕಿಂಗ್ ವಲಯಗಳ ಷೇರುಗಳ ಖರೀದಿ ಹೆಚ್ಚಳವಾಗಿದ್ದು ಮುಂಬಯಿ ಷೇರುಪೇಟೆಗೆ ಲಾಭ ತಂದುಕೊಟ್ಟಿದೆ. ಮಂಗಳವಾರ ವಹಿವಾಟಿನ ಆರಂಭದಲ್ಲಿ ಇಳಿಕೆಯತ್ತ ಸಾಗಿದ್ದ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ದಿನಾಂತ್ಯಕ್ಕೆ 9.71ರ ಅಲ್ಪ ಏರಿಕೆ ಕಂಡು, 46,263ರಲ್ಲಿ ಕೊನೆಗೊಂಡಿತು. ಇನ್ನು, ನಿಫ್ಟಿ ಕೂಡ 9.70 ಅಂಕ ಏರಿಕೆಯಾಗಿ, 13,567ರಲ್ಲಿ ವಹಿವಾಟು ಅಂತ್ಯಗೊಳಿಸಿ ಸಾರ್ವಕಾಲಿಕ ದಾಖಲೆ ಬರೆಯಿತು. ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಳ, ಹರಿದುಬರುತ್ತಿರುವ ವಿದೇಶಿ ಸಾಂಸ್ಥಿಕ ಹೂಡಿಕೆ ಕೂಡ ಸೆನ್ಸೆಕ್ಸ್ ಏರಿಕೆಗೆ ಕಾರಣವಾಯಿತು. ಬಜಾಜ್ ಫೈನಾನ್ಸ್, ಎಚ್‌ಡಿಎಫ್ಸಿ, ಟೆಕ್ ಮಹೀಂದ್ರಾ, ಎಚ್‌ಡಿಎಫ್ಸಿ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್‌ಗಳು ಸೆನ್ಸೆಕ್ಸ್ ಏರಿಕೆಗೆ ಸಹಾಯ ಮಾಡಿದವು.
ಚಿನ್ನದ ದರ ಏರಿಕೆ: ದಿಲ್ಲಿ ಶನಿವಾರ ಮಾರುಕಟ್ಟೆಯಲ್ಲಿ ಚಿನ್ನದ ದರ 514 ರೂ. ಹೆಚ್ಚಳವಾಗಿದ್ದು, 10 ಗ್ರಾಂಗೆ 48,847ಕ್ಕೇರಿಕೆಯಾಗಿದೆ. ಬೆಳ್ಳಿ ದರ 1046 ರೂ. ಹೆಚ್ಚಳವಾಗಿ, ಕೆಜಿಗೆ 63,612 ರೂ.ಗೆ ತಲುಪಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಮಂಗಳವಾರ 8 ಪೈಸೆ ಇಳಿಕೆಯಾಗಿ, 73.63 ಆಗಿದೆ.
ರಫ್ತು ಶೇ.8.74 ಇಳಿಕೆ
ನವೆಂಬರ್ ತಿಂಗಳಲ್ಲಿ ದೇಶದ ರಫ್ತು ಪ್ರಮಾಣ ಶೇ.8.74ರಷ್ಟು ಇಳಿಕೆ ಯಾಗಿದ್ದು, 23.52 ಶತಕೋಟಿ ಡಾಲರ್‌ಗೆ ತಲುಪಿದೆ ಎಂದು ಅಧಿಕೃತ ಅಂಕಿಅಂಶ ತಿಳಿಸಿದೆ. ಪೆಟ್ರೋಲಿಯಂ, ಎಂಜಿನಿಯರಿಂಗ್, ರಾಸಾ ಯನಿಕ, ಆಭರಣ ಕ್ಷೇತ್ರಗಳ ಮೇಲೆ ಕೊರೊನಾ ಲಾಕ್‌ಡೌನ್‌ನಿಂದಾದ ಪ್ರತಿಕೂಲ ಪರಿಣಾಮವೇ ರಫ್ತು ಇಳಿಕೆಗೆ ಕಾರಣ ಎನ್ನಲಾಗಿದೆ.
ಆರ್ಥಿಕ ಪ್ರಗತಿ ಹೆಚ್ಚಳದ ನಿರೀಕ್ಷೆ
ಎಸ್ ಆ್ಯಂಡ್ ಪಿ ಜಾಗತಿಕ ರೇಟಿಂಗ್ಸ್ ಸಂಸ್ಥೆಯು ಪ್ರಸ್ತುತ ಹಣಕಾಸು ವರ್ಷದ ಭಾರತದ ಆರ್ಥಿಕ ಪ್ರಗತಿ ದರದ ನಿರೀಕ್ಷೆಯನ್ನು ಹೆಚ್ಚಳ ಮಾಡಿದೆ. ಈ ಹಿಂದೆ ಜಿಡಿಪಿ ದರವನ್ನು ಮೈನಸ್ 9 ಎಂದು ಅಂದಾಜಿಸಿದ್ದ ಸಂಸ್ಥೆ ಈಗ ಅದನ್ನು ಮೈನಸ್ 7ಕ್ಕೆ ಏರಿಸಿದೆ. ಉತ್ಪನ್ನಗಳು ಹಾಗೂ ಸೇವೆಗಳ ಬೇಡಿಕೆ ಹೆಚ್ಚಳ ಮತ್ತು ಕೊರೊನಾ ಪ್ರಕರಣಗಳ ಇಳಿಕೆಯಿಂದಾಗಿ ಆರ್ಥಿಕತೆ ಬೇಗನೆ ಚೇತರಿಸಿಕೊಳ್ಳಲಿದೆ ಎಂದು ಸಂಸ್ಥೆ ಹೇಳಿದೆ. 2021-22ರಲ್ಲಿ ಜಿಡಿಪಿ ಶೇ.10ಕ್ಕೇರಲಿದೆ ಎಂದೂ ಅಂದಾಜಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.