ಭೂಮಿಗೆ ಭಾರ ಹಾಕುತ್ತಿರುವ ಮಾನವ
ಮಾನವ ನಿರ್ಮಿತ ಉತ್ಪನ್ನಗಳ ತೂಕ, ಒಟ್ಟು ಜೀವರಾಶಿಗಿಂತಲೂ ಹೆಚ್ಚು!
Team Udayavani, Dec 16, 2020, 6:09 AM IST
ಲಂಡನ್: ಮನುಷ್ಯ ನಿರ್ಮಿಸಿರುವ ಕಟ್ಟಡಗಳು, ರಸ್ತೆಗಳು, ಕಾರುಗಳು ಹಾಗೂ ಒಟ್ಟಾರೆ ಎಲ್ಲ ರೀತಿಯ ಉತ್ಪನ್ನಗಳ ರಾಶಿ ಎಷ್ಟಿರಬಹುದು? ಇತ್ತೀಚಿನ ಸಂಶೋ ಧನ ವರದಿಯೊಂದರ ಪ್ರಕಾರ, ಇವೆಲ್ಲದರ ಒಟ್ಟು ತೂಕವು ಭೂಮಿಯ ಮೇಲಿನ ಮರಗಿಡಗಳು ಹಾಗೂ ಎಲ್ಲ ಪ್ರಾಣಿ ಪಕ್ಷಿಗಳಿಗಿಂತಲೂ ಅಧಿಕವಿದೆ! ನೇಚರ್ ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟವಾದ ಈ ವರದಿ, ಪ್ರತಿ ವಾರದ ಮಾನವ ನಿರ್ಮಿತ ವಸ್ತುಗಳ ಒಟ್ಟು ಭಾರವೇ, ಜಗತ್ತಿನಲ್ಲಿರುವ ಅಜಮಾಸು 800 ಕೋಟಿ ಜನರ ತೂಕಕ್ಕೆ ಸಮವಾಗಿದೆ ಎಂದೂ ಹೇಳುತ್ತದೆ.
ಇಂದು ರಸ್ತೆ, ಕಟ್ಟಡಗಳು, ವಾಹನ, ಆಟಿಕೆ, ಆಟೊಮೊಬೈಲ್, ಎಲೆಕ್ಟ್ರಾನಿಕ್ಸ್ ವಸ್ತುಗಳ ಸೇರಿ ಮಾನವ ನಿರ್ಮಿತ ಉತ್ಪನ್ನಗಳ ಭಾರ 1.1 ಟೆರಾಟನ್‌ಗಳಷ್ಟಿದೆ ಎನ್ನುತ್ತದೆ ಈ ವರದಿ(1 ಟೆರಾಟನ್ ಅಂದರೆ 1,00,00,00,00,00,00,000 ಕೆಜಿ!). ಇನ್ನೊಂದೆಡೆ ಇತರ ಜೀವರಾಶಿಯ(ಮರಗಿಡ, ಪ್ರಾಣಿ) ಒಟ್ಟು ಭಾರ ಪ್ರಸಕ್ತ 1 ಟೆರಾಟನ್‌ನಷ್ಟಿದೆ. 2040ರ ವೇಳೆಗೆ ಮನುಷ್ಯ ನಿರ್ಮಿತ ವಸ್ತುಗಳ ಪ್ರಮಾಣ 3 ಟೆರಾಟನ್‌ನಷ್ಟಾಗಬಹುದು ಎಂಬ ಅಂದಾಜಿದೆೆ.
ಕಾರಣವೇನು?: 20ನೇ ಶತಮಾನದ ಆರಂಭದಲ್ಲಿ ಮಾನವ ನಿರ್ಮಾಣಗಳ ಪ್ರಮಾಣ ಒಟ್ಟಾರೆ ಜೀವರಾಶಿಯ ಪ್ರಮಾಣಕ್ಕೆ ಹೋಲಿಸಿದರೆ ಕೇವಲ 3 ಪ್ರತಿಶತದಷ್ಟಿತ್ತು. ಆದರೆ ಜಗತ್ತು ಕೈಗಾರಿಕೀಕರಣದತ್ತ ವೇಗವಾಗಿ ಹೊರಳಿದ್ದು, ಕೃಷಿ ಕ್ರಾಂತಿ, ಹೆಚ್ಚಾದ ಜನಸಂಖ್ಯೆಯಿಂದ ನೈಸರ್ಗಿಕ ಸಂಪನ್ಮೂಲಗಳ ಅಪರಿಮಿತ ಬಳಕೆಯು ಮರಗಿಡಗಳು, ಪ್ರಾಣಿಗಳ ಸಂಖ್ಯೆಯನ್ನು ತಗ್ಗಿಸಿತು. ಇನ್ನೊಂದೆಡೆ ನವನವೀನ ಆವಿಷ್ಕಾರಗಳಿಗೆ ಜೋತು ಬಿದ್ದ ಮನುಷ್ಯ, ನಿತ್ಯವೂ ಭೂಮಿಯ ಮೇಲೆ ಭಾರಹಾಕುತ್ತಲೇ ಇದ್ದಾನೆ. ಜಗತ್ತು ಕಾಂಕ್ರೀಟ್‌ಮಯವಾಗಿರುವುದು ಭೂಮಿಗೆ ಭಾರ ಹೆಚ್ಚುತ್ತಲೇ ಸಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.