ಎಚ್ಚರ..ಫೋನ್ ನಂಬರ್ ಮಾರಾಟ ಆದೀತು!ಸಕ್ರಿಯವಾಗಿದೆ ಹೆಣ್ಮಕ್ಕಳ ಫೋನ್ ನಂಬರ್ ಮಾರಾಟ ದಂಧೆ!
Team Udayavani, Dec 16, 2020, 9:49 AM IST
ಬೆಂಗಳೂರು: ಮೊಬೈಲ್ ರೀಜಾರ್ಜ್ ಅಂಗಡಿಗಳು, ಶಾಪಿಂಗ್ ಮಾಲ್‌ಗಳು, ಫೇಸ್‌ಬುಕ್, ಆನ್‌ಲೈನ್ ಮೂಲಕ ಕಾಣುವ ಮಹಿಳೆಯರು ಮತ್ತು ಯುವತಿಯರ ಮೊಬೈಲ್ ನಂಬರ್‌ಗಳನ್ನು ಸೈಬರ್ ಕಳ್ಳರು ಮಾರಾಟ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಕೆಲ ಪ್ರಕರಣಗಳ ತನಿಖೆ ಜಾಡಿನಲ್ಲಿ ಇಂತಹ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಇಂತಹದೊಂದು ದಂಧೆಯನ್ನು ಸೈಬರ್ ಕ್ರೈಂ ಪೊಲೀಸರ ವರದಿಗಳಲ್ಲಿ ಹೇಳಿದ್ದರೂ, ಹೆಚ್ಚಿನ ತನಿಖೆ ನಡೆದಿಲ್ಲ. ರೀಚಾರ್ಜ್ ಮಾಡಿಸಿಕೊಳ್ಳಲೆಂದು ಬರುವ ಯುವತಿಯರು, ಮಹಿಳೆಯರ ಸಂಖ್ಯೆ ಬರೆದಿಟ್ಟುಕೊಂಡು ಕೆಲವು ಸಮಾಜ ಘಾತುಕ ವ್ಯಕ್ತಿಗಳಿಗೆ ಮಾರುವ ಈ ದಂಧೆ ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಅವ್ಯಾಹತವಾಗಿದೆ.
ರಾಜಧಾನಿ ಬೆಂಗಳೂರಿನ ಉತ್ತರ, ಪಶ್ಚಿಮ ಮತ್ತು ರಾಜ್ಯ ದ ಗ್ರಾಮಾಂತರ ಪ್ರದೇಶಗಳ ಕೆಲವು ಮೊಬೈಲ್‌ಮಾರಾಟ ಅಂಗಡಿ, ಶಾಪಿಂಗ್ ಮಾಲ್, ಕರೆನ್ಸಿ ರೀಚಾರ್ಜ್ ಮಳಿಗೆ, ಆನ್‌ಲೈನ್ ಜಾಹೀರಾತು, ಉಡುಗೊರೆ ನೀಡುವ ಸಂಬಂಧ ಬರುವ ಸಂದೇಶ, ಹೆಚ್ಚು ಜನಜಂಗುಳಿ ಸ್ಥಳಗಳಲ್ಲಿರುವ (ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಇತರೆ) ಅಂಗಡಿ, ಇಂಟರ್‌ನೆಟ್ ಬ್ರೌಸಿಂಗ್ ಸೆಂಟರ್, ಕೊರಿಯರ್ ಸಂಸ್ಥೆಗಳು ಈ ದಂಧೆಯಲ್ಲಿ ತೊಡಗಿವೆ ಎನ್ನುತ್ತವೆ ಪೊಲೀಸ್ ಮೂಲಗಳು.
ಇದನ್ನೂ ಓದಿ:ಉ.ಪ್ರದೇಶದ ಮೊದಲ ಲವ್ ಜಿಹಾದ್ ಪ್ರಕರಣಕ್ಕೆ ತಿರುವು: ಯುವತಿಗೆ ಗರ್ಭಪಾತ! ಕಾಯ್ದೆಗೆ ಹಿನ್ನಡೆ
ಮಹಿಳಾ ಸಹಾಯವಾಣಿಯಲ್ಲೂ ದೂರು: ಇಂತಹ ಸಾವಿರಾರು ದೂರು ಮಹಿಳಾ ಸಹಾಯವಾಣಿಗೆ ಬರುತ್ತವೆ. ಈ ಪೈಕಿ ಶೇ.80ರಷ್ಟು ದೂರು ಮಹಿಳೆಯರ ಮೊಬೈಲ್‌ಗೆಕರೆ ಮಾಡಿ ಕಿರುಕುಳ ನೀಡಿದ ಪ್ರಕರಣಗಳೇ ಆಗಿವೆ. ಹೊರರಾಜ್ಯಗಳಿಂದಲೂ ಯುವಕರೂ ಕರೆ ಮಾಡಿ ತೊಂದರೆ ನೀಡುತ್ತಿರುವುದು ಮಹಿಳಾ ಸಹಾಯವಾಣಿ ಕೇಂದ್ರದಲ್ಲಿರುವ ಪೊಲೀಸ್ ಸಿಬ್ಬಂದಿಯಿಂದ ತಿಳಿದು ಬಂದಿದೆ. ಸಹಾಯವಾಣಿ ಸಿಬ್ಬಂದಿ ಮಾತ್ರ ಮಹಿಳೆಯರಿಂದ ದೂರು ಬರುತ್ತಿದ್ದಂತೆ ಸಂಬಂಧಿಸಿದ ವ್ಯಕ್ತಿಗೆ ಕರೆ ಮಾಡಿ ಎಚ್ಚರಿಕೆ ನೀಡುತ್ತಿತ್ತಾರೆ. ಈ ವೇಳೆ ಬೇರೆ ಬೇರೆ ಕಾರಣ ನೀಡಿ ನುಣುಚಿಕೊಳ್ಳುತ್ತಿದ್ದಾರೆ.
ಮಾರಾಟ ಎಲ್ಲಿ?: ಇಂಟರ್‌ರ್ನೆಟ್ ಬಳಕೆ ವೇಳೆ ಉಡುಗೊರೆ ಹಾಗೂ ರಿಯಾಯ್ತಿ ದರದಲ್ಲಿ ಬಟ್ಟೆ, ಇತರೆ ವಸ್ತುಗಳ ಮಾರಾಟದ ಕುರಿತ ಕೆಲ ಜಾಹೀರಾತು ಏಕಾಏಕಿ ಮೊಬೈಲ್ ಅಥವಾ ಆ್ಯಪ್ ಬಳಸುವಾಗ ಸ್ಕ್ರೀನ್ ಮೇಲೆ ಬರುತ್ತವೆ. ಇದನ್ನು ಕ್ಲಿಕ್ ಮಾಡಿದ ನಂತರ ಮೊಬೈಲ್ ಸಂಖ್ಯೆ, ಸಂಪೂರ್ಣ ವಿಳಾಸ ಪಡೆಯಲಾಗುತ್ತದೆ. ಕೆಲ ಕಿಡಿಗೇಡಿಗಳು ಆಗಾಗ್ಗೆ ಕರೆ ಮಾಡಿ ತೊಂದರೆ ಕೊಡುವುದು ಹಾಗೂ ಅಶ್ಲೀಲ ಸಂದೇಶ ಕಳುಹಿಸಿ ಲೈಂಗಿಕ ಕ್ರಿಯೆಗೆ ಆಹ್ವಾನಿಸುವುದು ಮಾಡುತ್ತಾರೆ. ಈ ಮೂಲಕ ಪಡೆದ ನಂಬರ್‌ನಿಂದ ಕೆಲವರು ನಿರ್ದಿಷ್ಟ ಯುವತಿ ಅಥವಾ ಮಹಿಳಿಗೆ ಕರೆ ಮಾಡಿದಾಗ ಸರಿಯಾಗಿ ಸ್ಪಂದನೆ ಸಿಗದಿದ್ದಾಗ ಆಕೆಯ ನಂಬರ್ ಅನ್ನು ಅಶ್ಲೀಲ ವೆಬ್‌ಸೈಟ್‌ಗೆ ಹಾಕಿ ತೊಂದರೆ ಕೊಟ್ಟಿರುವ ಸಾಕಷ್ಟು ಪ್ರಕರಣಗಳೂ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿವೆ.
ಫೇಸ್‌ಬುಕ್‌ನಲ್ಲಿ ನಂಬರ್ ಹಾಕಬೇಡಿ: ಜತೆಗೆ ಫೇಸ್ ಬುಕ್‌ನಲ್ಲಿ ಮಹಿಳೆಯರು ತಮ್ಮ ಮೊಬೈಲ್ ನಂಬರ್ ಅನ್ನು ದಾಖಲಿಸಿರುತ್ತಾರೆ. ಈ ವೇಳೆ ಮೊಬೈಲ್ ನಂಬರ್ ಪಡೆದುಕೊಳ್ಳುವ ಕಿಡಿಗೇಡಿಗಳು, ನಿಧಾನವಾಗಿ ಅವರೊಂದಿಗೆ ಮೊಬೈಲ್ ಚಾಟಿಂಗ್ ಮಾಡಲು ಶುರು ಮಾಡುತ್ತಾರೆ. ಸ್ವಲ್ಪ ಸಲುಗೆಯಾಗುತ್ತಿದ್ದಂತೆ ಅಶ್ಲೀಲ ಮಾತಿಗಿಳಿಯುತ್ತಾರೆ. ಇಂತಹ ಪ್ರಕರಣ ಬಹಳಷ್ಟು ದಾಖಲಾಗಿವೆ. ಹೀಗಾಗಿ ಫೇಸ್‌ಬುಕ್‌ನಲ್ಲಿ ಮೊಬೈಲ್ ನಂಬರ್ ದಾಖಲಿಸಿದರೂ ಅದನ್ನು ಮುಚ್ಚಿಡಿ ಎಂದು ಸೈಬರ್ ಪೊಲೀಸರು ಸಲಹೆ ನೀಡುತ್ತಾರೆ.
50 ರೂ.ನಿಂದ 500 ರೂ.ಗೆ ಮಾರಾಟ: ಯುವತಿಯರ ಮೊಬೈಲ್ ಸಂಖ್ಯೆ ಸಂಗ್ರಹಿಸುವ ದಂಧೆಕೋರರು, ಸುಂದರ ಯುವತಿಯರ ಮೊಬೈಲ್ ಸಂಖ್ಯೆಗೆ ಯಾವ ರೀತಿ ಕೋಡ್ ಕೊಡುತ್ತಾರೆ? ಎಷ್ಟು ಮೌಲ್ಯಕ್ಕೆ ಮಾರಾಟ ಮಾಡುತ್ತಾರೆ ಎಂಬುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಮಹಿಳೆಯರು, ಯುವತಿಯರ ಮೊಬೈಲ್ ನಂಬರ್ ಪಡೆಯುವ ಶಾಪಿಂಗ್ ಮಾಲ್, ಜಾಹೀರಾತು ಸಂಸ್ಥೆ, ರೀಚಾರ್ಜ್ ಸೆಂಟರ್ ಮಾಲೀಕರು, ಮಹಿಳೆಯರು ಮತ್ತು ಯುವತಿಯರು ಎಂದು ಅವರೇ ಪ್ರತ್ಯೇಕಿಸಿ 50 ರೂ.ನಿಂದ 500 ರೂ.ವರೆಗೆ ಮಾರಾಟ ಮಾಡುತ್ತಾರೆ. ಅಲ್ಲದೆ, ಮಹಿಳೆಯರ ನಂಬರ್ ಗೆ ನೀಲಿ, ಯುವತಿ ಯರ ನಂಬರ್‌ಗೆ ಕೆಂಪು ಬಣ್ಣದ ಪೆನ್‌ನಿಂದ ಗುರುತು ಹಾಕುತ್ತಾರೆ. ಕೆಲವೆಡೆ ಯುವತಿಯರಿಗೆ (ಗರ್ಲ್) ಮಹಿಳೆಯರಿಗೆ(ಲೇಡಿ) ಎಂದು ತಮ್ಮದೇ ಆದ ಸಂಜ್ಞೆ ಮೂಲಕ ಗುರುತು ಮಾಡಿಕೊಂಡು ಕಾಮುಕರಿಗೆ ಮಾರಾಟ ಮಾಡುತ್ತಿರುವ ವಿಚಾರ ಪೊಲೀಸರ ವಿವಿಧ ಪ್ರಕರಣಗಳ ತನಿಖೆಯಲ್ಲಿ ಪತ್ತೆಯಾಗಿದೆ. ಆದರೆ, ಈ ಬಗ್ಗೆ ಹೆಚ್ಚು ಪ್ರಕರಣದಾಖಲಾಗಿಲ್ಲ ಎಂದು ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದರು.
ಇನ್ನು ಈ ನಂಬರ್ ಅನ್ನು ಹಣಕೊಟ್ಟು ಖರೀದಿಸಿದ ವ್ಯಕ್ತಿ ಕೂಡಲೇ ಯುವತಿಯರು ಅಥವಾ ಮಹಿಳೆಯರಿಗೆ ಕರೆ ಮಾಡಿ, ಸ್ನೇಹ ಬೆಳೆಸಲು ಮುಂದಾಗುತ್ತಾನೆ. ಅದಕ್ಕೆ ಸರಿಯಾಗಿ ಪ್ರತಿಕ್ರಿಯೆ ಬಾರದಿದ್ದರೂ ಸುಮ್ಮನಿರದ ವ್ಯಕ್ತಿ ಪದೇ ಪದೇ ಫೋನ್, ಸಂದೇಶ ಕಳುಹಿಸಿ ಕಿರಿಕಿರಿ ಉಂಟು ಮಾಡುತ್ತಿರುತ್ತಾನೆ. ಇನ್ನೂ ಕೆಲವರು ಕರೆ ಮಾಡಿ ಮಾಡಿ ನೇರವಾಗಿ ಅಶ್ಲೀಲ ಸಂಭಾಷಣೆಗೆ ಇಳಿಯುತ್ತಾರೆ ಅಥವಾ ಅಶ್ಲೀಲ ಚಿತ್ರ ಅಥವಾ ವಿಡಿಯೋ ರವಾನಿಸುತ್ತಾರೆ.ಕೆಲವು ಮಹಿಳೆಯರು ಅದರ ವಿರುದ್ಧ ದನಿ ಎತ್ತುತ್ತಾರೆ. ಇನ್ನೂ ಕೆಲವರು ಬ್ಲಾಕ್ ಲಿಸ್ಟ್‌ಗೆ ಸೇರಿಸಿ ಸುಮ್ಮನಾಗುತ್ತಾರೆ. ಆಗಲೂ ಬಗೆಹರಿಯದಿದ್ದಾಗ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ.
7 ವರ್ಷ ಜೈಲು ಶಿಕ್ಷೆ: ಈ ರೀತಿ ಮಹಿಳೆಯರು, ಯುವತಿಯರ ಮೊಬೈಲ್ ನಂಬರ್ ಮಾತ್ರವಲ್ಲ, ಡೇಟಾ ಮಾರಾಟ ಮಾಡಿದರೂ ಅಕ್ರಮವಾಗುತ್ತದೆ. ಒಂದು ವೇಳೆ ಸಂತ್ರಸ್ತೆ ಸಾಕ್ಷ್ಯ ಸಮೇತ ದೂರು ನೀಡಿ ಅದು ಸಾಬೀತಾದರೆ ಆರು ತಿಂಗಳಿಂದ ಏಳು ವರ್ಷ ಶಿಕ್ಷೆಯಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಇಲ್ಲೆಲ್ಲ ಎಚ್ಚರಿಕೆ ಇರಲಿ: ಶಾಪಿಂಗ್ ಮಾಲ್, ಕರೆನ್ಸಿ ರೀಚಾರ್ಜ್ ಸೆಂಟರ್, ಮೊಬೈಲ್ ಮಾರಾಟ ಸಂಸ್ಥೆಗಳು, ಮಾರುಕಟ್ಟೆಯಲ್ಲಿರುವ ಸಣ್ಣ ಪುಟ್ಟ ರೀಚಾರ್ಜ್ ಅಂಗಡಿ ಬಸ್-ರೈಲ್ವೆ ನಿಲ್ದಾಣ ಇತರೆಡೆ ನಂಬರ್ ಮಾರಾಟ ದಂಧೆ.
ರೀಚಾರ್ಜ್ ಕೇಂದ್ರಗಳ ಮಾಲೀಕರು ಮಾತ್ರವಲ್ಲ,ಬೇರೆ ಯಾವುದೇ ಸಂಸ್ಥೆಗಳು ಮಹಿಳೆಯರು, ಯುವತಿಯರ ಮೊಬೈಲ್ ನಂಬರ್ ಅಥವಾ ಬೇರೆ ಯಾವುದೇ ಡೇಟಾ ಪಡೆದು ಅದನ್ನು ಬೇರೆಯವರಿಗೆ ಮಾರಾಟ ಮಾಡಿದರೆ ಕಾನೂನುಬಾಹಿರ. ಅಂತಹರ ವಿರುದ್ಧ ಸಂತ್ರಸ್ತರು ದೂರು ನೀಡಿದರೆ ಕಠಿಣ ಕಾನೂನು ಜಾರಿಗೊಳಿಸಲಾಗುತ್ತದೆ. ಮತ್ತೂಂದೆಡೆ ಮಹಿಳೆಯರೂ ತಮ್ಮ ಮೊಬೈಲ್ ನಂಬರ್ ಅಥವಾ ಡೇಟಾ ಹಂಚಿಕೊಳ್ಳುವ ಮೊದಲು ಯೋಚಿಸಬೇಕು.
-ಕಮಲ್‌ಪಂತ್, ನಗರ ಪೊಲೀಸ್ ಆಯುಕ್ತ
ಮಹಿಳೆಯರು ಏನು ಮಾಡಬೇಕು?
* ಅಪರಿಚಿತ ನಂಬರ್‌ಗಳನ್ನು ನಿರ್ಲಕ್ಷ್ಯ ಮಾಡಬೇಕು
* ಮೊಬೈಲ್ ನಂಬರ್ ಕೊಡುವ ಮೊದಲು ಯೋಚಿಸಬೇಕು
* ಪ್ರಮುಖವಾಗಿ ಫೇಸ್‌ಬುಕ್‌ನಲ್ಲಿ ಮೊಬೈಲ್ ನಂಬರ್ ಪ್ರಕಟಿಸಬಾರದು.
* ಅಪರಿಚಿತ ನಂಬರ್‌ನಿಂದ ಪದೇ ಪದೇ ಕರೆ ಬರುತ್ತಿದ್ದರೆ ಕೂಡಲೇ ಠಾಣೆ ಅಥವಾ ಮನೆಯ ಹಿರಿಯರಿಗೆ ಮಾಹಿತಿ ನೀಡಬೇಕು.
* ಪರಿಚಯಸ್ಥರ ಮೂಲಕ ಆನ್‌ಲೈನ್ ರೀಚಾರ್ಜ್ ಮಾಡಿಕೊಳ್ಳಬಹುದು
ಪೊಲೀಸ್ ಅಥವಾ ಸರ್ಕಾರ ಏನು ಮಾಡಬೇಕು?
* ಗ್ರಾಮೀಣ, ನಗರ ಪ್ರದೇಶದ ಹೆಣ್ಣು ಮಕ್ಕಳಿಗೆ ಆನ್‌ಲೈನ್ ರೀಚಾರ್ಜ್ ಬಗ್ಗೆ ಅರಿವು ಮೂಡಿಸಬೇಕು
* ಮೊಬೈಲ್ ಆ್ಯಪ್‌ಗಳ ಮೂಲಕ ರೀಚಾರ್ಜ್ ಮಾಡುವ ಬಗ್ಗೆ ಮಾಹಿತಿ ನೀಡಬೇಕು
* ಸೈಬರ್ ಕ್ರೈಂ ವಿರುದ್ಧ ಕಟ್ಟುನಿಟ್ಟಿನ ಕಾನೂನು ತರಬೇಕು
- ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.