ದೇಶದ ಮೊದಲ ಹಿಂದ್ ಕೇಸರಿ : ಪೈಲ್ವಾನ್ ಶ್ರೀಪತಿ ಖಂಚನಾಳೆ ನಿಧನ
Team Udayavani, Dec 16, 2020, 11:36 AM IST
ಚಿಕ್ಕೋಡಿ: ತೊಡೆ ತಟ್ಟಿ ನೋಡ ನೋಡುತ್ತಿದ್ದಂತೆ ಎದುರಾಳಿಯನ್ನು ಚಿತ್ ಮಾಡುತ್ತಿದ್ದ ಭಾರತದ ಮೊದಲ ಹಿಂದ್ ಕೇಸರಿ,
ತಾಲೂಕಿನ ಯಕ್ಸಂಬಾದ ಪೈಲ್ವಾನ ಶ್ರೀಪತಿ ಶಂಕರ ಖಂಚನಾಳೆ (86) ಸೋಮವಾರ ನೆರೆಯ ಮಹಾರಾಷ್ಟ್ರ ಕೊಲ್ಲಾಪೂರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಶ್ರೀಪತಿ ಕಂಚನಾಳೆ 1959ರ ಡಿ. 20ರಂದು ದೆಹಲಿಯ ನ್ಯೂ ರೈಲ್ವೆ ಸ್ಟೇಡಿಯಂನಲ್ಲಿ ನಡೆದ ಕುಸ್ತಿಯಲ್ಲಿ ಪಂಜಾಬದ ಖ್ಯಾತ ಪೈಲ್ವಾನ್ ರುಸ್ತಮ-ಎ-ಪಂಜಾಬ್ ಬತ್ತಾಶಿಂಗ್ ಅವರನ್ನು ಪರಾಭವಗೊಳಿಸಿ ಹಿಂದ್ ಕೇಸರಿ ಆಗಿ ಹೊರಹೊಮ್ಮಿದ್ದರು. ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ ಅವರು ಖಂಚನಾಳೆಯವರಿಗೆ ಹಿಂದ್ ಕೇಸರಿ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು.
ತದನಂತರ ಕರ್ನಾಟಕ ಸರಕಾರ ಕರ್ನಾಟಕ ಭೂಷಣ ಮತ್ತು ಮಹಾರಾಷ್ಟ್ರ ಸರಕಾರ ಶಿವ ಛತ್ರಪತಿ ಪ್ರಶಸ್ತಿ ನೀಡಿ ಸನ್ಮಾನಿಸಿದ್ದವು. ಇವರು ರಾಷ್ಟ್ರೀಯ ತಾಲಿಮ (ಗರಡಿ ಮನೆ) ಸಂಘದ ಅಧ್ಯಕ್ಷರಾಗಿದ್ದರು. ಇವರು ಪಟ್ಟಣದ ಶ್ರೀಪತಿ ಹಿರುಕುಡೆ
ಇವರಿಂದ ಕುಸ್ತಿ ಕಲಿತಿದ್ದರು. ಇವರು ಅನೇಕ ವರ್ಷಗಳಿಂದ ಕೊಲ್ಲಾಪೂರ ನಗರದಲ್ಲಿ ವಾಸವಾಗಿ ಅಲ್ಲಿನ ಶಾಹುಪುರಿ ತಾಲಿಮಿನಲ್ಲಿ (ಗರಡಿ ಮನೆ) ಅನೇಕ ಪೈಲ್ವಾನ್‌ಗಳಿಗೆ ಮಾರ್ಗದರ್ಶನ ನೀಡುತ್ತಾ ಪೈಲ್ವಾನ್‌ಗಳನ್ನು ಸಿದ್ಧಪಡಿಸಿದ್ದರು. ಇವರ
ಮಾರ್ಗದರ್ಶನದಲ್ಲಿ ತಯಾರಾದ ಅನೇಕ ಪೈಲ್ವಾನರು ದೇಶ-ವಿದೇಶಗಳಲ್ಲಿ ಇಂದು ಹೆಸರು ಮಾಡಿದ್ದಾರೆ. ಮಂಗಳವಾರ ಮಧ್ಯಾಹ್ನ ಪಂಚಗಂಗಾ ಸ್ಮಶಾನಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಮೃತರು ಪತ್ನಿ, ಇಬ್ಬರು ಪುತ್ರರು, ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಇದನ್ನೂ ಓದಿ:ಪರಿಷತ್ ನಲ್ಲಿ ಗೂಂಡಾಗಿರಿ ಮಾಡಿದವರ ಅಮಾನತು ಮಾಡಲಿ: ಸಚಿವ ಎಸ್ ಟಿ ಸೋಮಶೇಖರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.