2020ರ ಅತ್ಯುತ್ತಮ ವೆಬ್ ಸರಣಿಗಳು

10 ಪ್ರಮುಖ ವೆಬ್ ಸೀರಿಸ್ ಗಳ ಕುರಿತಾದ ಮಾಹಿತಿ ಇಲ್ಲಿದೆ.

Team Udayavani, Dec 25, 2020, 9:37 AM IST

Top 10 Indian web series of 2020

ನವದೆಹಲಿ: ಭಾರತ ಡಿಜಿಟಲೀಕರಣದ ಹಾದಿಯಲ್ಲಿ ಸಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಓಟಿಟಿ ಚಿತ್ರೀಕರಣಗಳು ನಿಧಾನವಾಗಿ ಜನರ ಮನಸ್ಸಿನಲ್ಲಿ ಬೇರೂರಲಾರಂಭಿಸಿದೆ. ಅದರಲ್ಲೂ 2020 ರ ಕೋವಿಡ್ ಲಾಕ್ ಡೌನ್ ಆರಂಭವಾದ ಮೇಲಂತೂ ಓಟಿಟಿ ಹೊಸ ಅಲೆಯನ್ನೆ ಸೃಷ್ಟಿಸಿದೆ. ಮನೆಯಲ್ಲಿಯೆ ಕೂತು ಮನರಂಜನೆ ಬಯಸುವ ಜನರಿಗೆ ವೆಬ್ ಸಿರೀಸ್ ಗಳು ಓಟಿಟಿ ಪ್ಲಾಟ್ ಫಾರ್ಮ್ ಗಳಿಂದ ಸಿಕ್ಕ ವರವಾಗಿ ಪರಿಣಮಿಸಿದೆ.

ಕಳೆದ ಕೆಲವರ್ಷಗಳಿಂದ ಕೇವಲ ಕ್ರೈಂ ಆಧಾರಿತ ಕಾರ್ಯಕ್ರಮಗಳಿಂದಲೆ ಹೆಚ್ಚು ಪ್ರಸಿದ್ದಿಯನ್ನು ಪಡಿದಿದ್ದ ವೆಬ್ ಸೀರೀಸ್ ಗಳು ಇದೀಗ ಬೇರೆ ಬೇರೆ ಆಯಾಮದ ಕಥೆಗಳಿಂದಲೂ ಹೆಸರುವಾಸಿಯಾಗಿದೆ. ಕೋವಿಡ್ ನ ಹಿನ್ನೆಲೆಯಲ್ಲಿ ಬಹಳಷ್ಟು ಚಿತ್ರಿಕರಣ ನಿಂತಿದ್ದರೂ ಕೆಲವು ವೆಬ್ ಸೀರೀಸ್ ಗಳು ಜನರ ಮನಸ್ಸಿನಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸಿಕೊಂಡಿದ್ದು, ಅವುಗಳಲ್ಲಿ 10 ಪ್ರಮುಖ ವೆಬ್ ಸೀರೀಸ್ ಗಳ ಕುರಿತಾದ ಮಾಹಿತಿ ಇಲ್ಲಿದೆ.

1.ಸ್ಕ್ಯಾಮ್ 1992

ಹರ್ಷದ್ ಮೆಹ್ತಾ ಅವರ ಸ್ಕ್ಯಾಮ್ 1992 , ಭಾರತೀಯ ವೆಬ್ ಸೀರೀಸ್ ನಲ್ಲಿ ಹೊಸ ಅಲೆಯನ್ನೆ ಎಬ್ಬಿಸಿದೆ. ಪ್ರಸಿದ್ದ ವೇದಿಕೆಯಾದ Sony LIV ಲ್ಲಿ ಪ್ರಸಾರವಾದ ಈ ವೆಬ್ ಸೀರೀಸ್ 2020ರ ಸಾಲಿನ ಅತ್ಯುತ್ತಮ ವೆಬ್ ಸೀರಿಸ್ ಗಳ ಪಟ್ಟಿಯಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಂಡಿದೆ.

ಇದೊಂದು ಹಿಂದಿ ಭಾಷೆಯ ಕ್ರೈಂ ಡ್ರಾಮಾ ಆಗಿದ್ದು, 1992ರ ಭಾರತೀಯ ಶೇರು ಮಾರುಕಟ್ಟೆಯ ಹಗರಣದ ಎಳೆಯನ್ನು ಅತ್ಯಂತ ಸುಂದರವಾಗಿ ಪ್ರಸ್ತುತಪಡಿಸುತ್ತದೆ.

2020ರ  ಅಕ್ಟೋಬರ್ 9 ರಿಂದ ಪ್ರಸಾರವಾಗುತ್ತಿರುವ ಈ ಸೀರೀಸ್ ನ ಕಥೆಯನ್ನು  ಪತ್ರಕರ್ತೆ ಸುಚೇತಾ ದಲಾಲ್ ಅವರು ಬರೆದಿರುವ ‘ದಿ ಸ್ಕ್ಯಾಮ್’ ನಿಂದ ತೆಗೆದುಕೊಳ್ಳಲಾಗಿದೆ. ಇದು ಸ್ಟಾಕ್ ಬ್ರೋಕರ್ ಆಗಿದ್ದ ಹರ್ಷದ್ ಮೆಹ್ತಾ ಮಾಡಿದ 1992ರ ಭಾರತೀಯ ಷೇರು ಮಾರುಕಟ್ಟೆ ಹಗರಣವನ್ನು  ಮೇಲೆ ಬೆಳಕು ಚೆಲ್ಲುತ್ತದೆ. ಅತ್ಯಂತ ಸರಳವಾಗಿ ಹಾಗೂ ಅಚ್ಚುಕಟ್ಟಾಗಿ ರೂಪಿಸಲಾಗಿರುವ ಈ ವೆಬ್ ಸೀರೀಸ್  ಕೇವಲ ಕೆಲವೆ ಕೆಲವು ಎಪಿಸೋಡ್ ಗಳಲ್ಲಿ 1992ರ ಷೇರು ಮಾರುಕಟ್ಟೆ ಹಗರಣದ ಚಿತ್ರಣವನ್ನು ಜನರಿಗೆ ತಿಳಿಸುವಲ್ಲಿ ಯಶಕಂಡಿವೆ.

2.ಆರ್ಯ

Disney + Hot star ನಲ್ಲಿ ಪ್ರಸಾರವಾಗುತ್ತಿರುವ ಈ ವೆಬ್ ಸೀರೀಸ್ ಒಂದು ಕ್ರೈಂ ಡ್ರಾಮಾ ಆಗಿದ್ದು ರಾಮ್ ಮಾದ್ವಾನಿ ಹಾಗೂ ಸಂದೀಪ್ ಮೋದಿ ಅವರು ಜೊತೆಯಾಗಿ ನಿರ್ಮಿಸಿದ್ದಾರೆ. ಇದು ಮೂಲತ ಪೀಟರ್ ಬರ್ಟ್ ಕೋರ್ತುಯಿಸ್ ಅವರ ಪೆನೋಜಾ ಕಥೆಯನ್ನು ಆಧರಿಸಿದ್ದು,  ಖ್ಯಾತ ಭಾರತೀಯ ನಟಿ ಸುಶ್ಮಿತಾ ಸೇನ್ ಇದರಲ್ಲಿ ಅಭಿನಯಿಸಿದ್ದಾರೆ. ಹಳೆಯ ಹಿಂದಿ ಸಂಗೀತದ ಜೊತೆ ಜೊತೆಗೆ ರೂಪುಗೊಂಡಿರುವ ಈ ಕಥೆ ವೀಕ್ಷಕರ ಮನಗೆದ್ದಿದೆ.

3.ಸ್ಪೆಷಲ್ ಓಪ್ಸ್

Disney + Hot star ನಲ್ಲಿ ಪ್ರಸಾರವಾಗಿರುವ ಈ ವೆಬ್ ಸೀರೀಸ್ ಅನ್ನು ಖ್ಯಾತ ಭಾರತೀಯ ನಿರ್ದೇಶಕ ನೀರಜ್ ಪಾಂಡೆ ನಿರ್ದೇಶಿಸಿದ್ದಾರೆ. ಇದೊಂದು ಬೇಹುಗಾರಿಕೆಯ ಥ್ರಿಲ್ಲರ್ ಸರಣಿಯಾಗಿದೆ. ಈ ವೆಬ್ ಸರಣಿಯಲ್ಲಿ ನಟ ಕೆ ಕೆ ಮೆನನ್ ,ಮುಖ್ಯ ಪಾತ್ರಧಾರಿಯಾಗಿ ತೆರೆಮೇಲೆ ಬಂದಿದ್ದು ತನ್ನ   ಅಭಿನಯದ ಮೂಲಕ ಕಥೆಗೆ ಸೂಕ್ತ ಸ್ಥಾನಮಾನ ಒದಗಿಸಿಕೊಟ್ಟಿದ್ದಾರೆ. ಈ ಸರಣಿಯು 2020ರ ಮಾರ್ಚ್ ತಿಂಗಳಲ್ಲಿ ಮೊದಲು ಪ್ರದರ್ಶನಗೊಂಡಿತು.

4.ಪಾತಾಳ್ ಲೋಕ್

ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರಗೊಂಡಿರುವ ಪಾತಾಳ್ ಲೋಕ್ ಈ ವರ್ಷ ಅಮೆಜಾನ್ ಪ್ರೈಮ್  ಅತೀ ಹೆಚ್ಚು ಸದ್ದುಮಾಡಿದ ವೆಬ್ ಸರಣಿಗಳಲ್ಲಿ ಒಂದು. ಇದೊಂದು ಕ್ರೈಂ ಡ್ರಾಮಾ ಆಗಿದ್ದು ಹಿಂದಿ ಭಾಷೆಯಲ್ಲಿ ಪ್ರಸಾರವಾಗಿದೆ. ಈ ಸರಣಿಯಲ್ಲಿ ನಟ ಜೈದೀಪ್ ಅಹ್ಲಾವತ್ ಪೊಲೀಸ್ ಪಾತ್ರದ ಮೂಲಕ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನೆಗೆಟಿವ್ ಪಾತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ ನಟಿಸಿದ್ದಾರೆ. ಪತ್ರಕರ್ತರೊಬ್ಬರ ಕೊಲೆ ಸಂಚಿನಲ್ಲಿ ಸಾಗುವ ಈ ಕಥೆ  ವೀಕ್ಷಕರಲ್ಲಿ ಸದಾ ಕುತೂಹಲವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.

5.ಬ್ಯಾಂಡಿಷ್ ಬ್ಯಾಂಡಿಟ್ಸ್:

ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರಗೊಂಡಿರುವ ಈ ಸರಣಿಯು ಹಲವಾರು ಕ್ರೈಂ ಡ್ರಾಮಾಗಳ   ಅಲೆಯ ನಡುವೆ ಹೊಸ ಅಲೆಯೊಂದನ್ನು ಸೃಷ್ಟಿಸಿದೆ. ಈ ಸರಣಿಯನ್ನು ಆನಂದ್ ತಿವಾರಿ ನಿರ್ದೇಶಿಸಿದ್ದಾರೆ. ತನ್ನ ಕೆಲವೇ ಕಲವು ಸರಣಿಗಳಲ್ಲಿಯೇ ಶಾಸ್ತ್ರೀಯ ಸಂಗೀತದ ಎಳೆಯೊಂದಿಗೆ ಹೊಸ ಆಕರ್ಷಣೆಯನ್ನು ಮಾಡಿದೆ. ಈ ಸರಣಿಯಲ್ಲಿ ಮುಖ್ಯ ಪಾತ್ರವಾದ  ರಾಧೆ ರಾಥೋಡ್ ಪಾತ್ರದಲ್ಲಿ ರಿತ್ವಿಕ್ ಭೌಮಿಕ್ ಹಾಗೂ ತಮನ್ನಾ ಶರ್ಮಾ ಪಾತ್ರದಲ್ಲಿ ಶ್ರೇಯಾ ಚೌಧರಿ ಕಾಣಿಸಿಕೊಂಡಿದ್ದು, ಮ್ಯೂಸಿಕಲ್ ರೊಮ್ಯಾಂಟಿಕ್ ಡ್ರಾಮಾ ಆಗಿದೆ.

6.ಸಿಂಪಲ್ ಮರ್ಡರ್

Sony LIV ನ ಪ್ರಸಿದ್ದ ವೆಬ್ ಸರಣಿ ಇದಾಗಿದೆ. 2020ರ ನವೆಂಬರ್ 20 ರಂದು ಬಿಡುಗಡೆಗೊಂಡಿದೆ. ಈ ಸರಣಿಯಲ್ಲಿ ಪ್ರಿಯಾ ಆನಂದ್, ಸುಶಾಂತ್ ಸಿಂಗ್, ಗೋಪಾಲ್ ದತ್ತ್ ಒಳಗೊಂಡಂತೆ ಹಲವರು ನಟಿಸಿದ್ದಾರೆ.  ಈ ಸರಣಿಯಲ್ಲಿ ಸಾಮಾನ್ಯವಾದ ಕೊಲೆಯ ಕಥೆಯನ್ನು ತನ್ನ ಬರವಣಿಗೆಯ ಸಾಧ್ಯತೆಗಳ ಮೂಲಕ ಜನರ ಮನಗೆಲ್ಲುವಂತೆ ರೂಪಿಸಲಾಗಿದೆ. ಕೆಲವು ಗಂಭಿರವಾದ ವಿಚಾರಗಳನ್ನೂ ಕೂಡಾ  ಅತ್ಯಂತ ಸರಳವಾಗಿ ತೆರೆಮೇಲೆ ತರುವಲ್ಲಿ ತಂಡ ಯಶಸ್ವಿಯಾಗಿದೆ.

7.ಫ್ಲೆಶ್

Eros Now ನಲ್ಲಿ ಈ ಸರಣಿಯು ಪ್ರಸಾರಗೊಂಡಿದೆ. ಇದೊಂದು ಕ್ರೈಂ ಡ್ರಾಮಾ ಆಗಿದ್ದು ಮಾನವ ಸಾಗಾಣಿಕೆಗೆ ಸಂಬಂಧಿಸಿದ ಕಥೆ ಇದಾಗಿದೆ. ಮುಖ್ಯ ಪಾತ್ರಧಾರಿಯು ಪೊಲೀಸ್ ಪಾತ್ರದ ಮೂಲಕ ಅಪರಾಧದ ವಿರುದ್ಧ ಹೋರಾಟ ನಡೆಸುವುದನ್ನು ಕಾಣಬಹುದಾಗಿದೆ. ಈ ಕಥೆಯನ್ನು  ಪೂಜಾ ಲಾಧಾ ಸುರ್ತಿ ಅವರು ರಚಿಸಿದ್ದು, ಡ್ಯಾನಿಶ್ ಅಸ್ಲಾಮ್ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:ಡ್ರಗ್ಸ್‌ ಪೆಡ್ಲರ್‌ಗಳ ಕಿಂಗ್‌ಪಿನ್‌ “ಚೀಫ್’ ಬಂಧನ

8.ಪಂಚಾಯತ್

ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರಗೊಂಡಿರುವ ಈ ಸರಣಿಯು ಒಂದು ಕಾಮಿಡಿ ಡ್ರಾಮಾ ಆಗಿದೆ. 2020ರ ಏಪ್ರಿಲ್ 3 ರಂದು ಮೊದಲು ಪ್ರಸಾರವಾದ ಈ ಸರಣಿಯನ್ನು ದಿ ವೈರಲ್ ಫೀವರ್ ನಿರ್ಮಿಸಿದೆ. ಇಂಜಿನಿಯರಿಂಗ್  ಪದವಿ ಪೂರೈಸಿದ ನಿರುದ್ಯೋಗಿ ವ್ಯಕ್ತಿಯೊಬ್ಬನ ಜೀವನವನ್ನು ಇಲ್ಲಿ ಚಿತ್ರಿಸಲಾಗಿದ್ದು, ಉತ್ತಮವಾದ ನೌಕರಿಯ ಗುರಿಯೊಂದನ್ನು ಮನದಲ್ಲಿಟ್ಟುಕೊಂಡು  ಅನಿವಾರ್ಯವಾಗಿ ಕುಗ್ರಾಮವೊಂದರ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ಕೆಲಸ ಮಾಡುವ ಬದುಕಿನ ಸುತ್ತ ಕತೆ ಹೆಣೆಯಲಾಗಿದೆ. ಈ ಸರಣಿಯಲ್ಲಿ ನಟ ಜಿತೇದ್ರ ಕುಮಾರ್  ಅವರು ಅಭಿಷೇಕ್ ತ್ರಿಪಾಠಿಯ ಪಾತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹಾಗೂ ನೀನಾ ಗುಪ್ತಾ , ರಘುಬೀರ್ ಯಾಧವ್ ಮುಂತಾದವರು ನಟಿಸಿದ್ದಾರೆ.

9.ಮಿರ್ಜಾಪುರ್

ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರಗೊಂಡಿರುವ ಈ ಸರಣಿಯು ಆ್ಯಕ್ಷನ್ ಕ್ರೈಂ ಥ್ರಿಲ್ಲರ್ ಸರಣಿ ಆಗಿದೆ. ಎಕ್ಸೆಲ್ ಎಂಟರ್ ಟೈನ್ಮೆಂಟ್ ನಿರ್ಮಿಸಿರುವ ಈ ಸರಣಿಯನ್ನು ಆರಂಭಿಕವಾಗಿ  ಮಿರ್ಜಾಪುರ್ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದ್ದು, ಇನ್ನುಳಿದ ಚಿತ್ರೀರಣವನ್ನು ಜೈಪುರ ಸೇರಿದಂತೆ ವಿವಿದೆಡೆ ಚಿತ್ರಿಸಲಾಗಿದೆ. ಈ ಸರಣಿಯು ಮಾದಕ ವಸ್ತು ಜಾಲ, ಬಂದೂಕುಗಳು, ಕೊಲೆ, ಅರಾಜಕತೆ ಮುಂತಾದ ವಿಷಯಗಳ ಸುತ್ತ ಸುತ್ತುತ್ತದೆ.  ಉತ್ತರಪ್ರದೇಶದಲ್ಲಿ ಚಾಲ್ತಿಯಲ್ಲಿರುವ    ಅಪರಾಧಗಳನ್ನು ಇದು ಚಿತ್ರಿಸಿದೆ. ಇದರ  ಮೊದಲ ಸೀಸನ್ ನಲ್ಲಿ  9 ಎಪಿಸೋಡ್ ಗಳನ್ನು ಒಳಗೊಂಡಿದ್ದು, ಪಂಕಜ್ ತ್ರಿಪಾಠಿ ಅದ್ಭುತವಾಗಿ ನಟಿಸಿದ್ದಾರೆ.

10ಅಸುರ್

ವೂಟ್ ನಲ್ಲಿ ಪ್ರಸಾರವಾದ   ಅಸುರ್ ಇದೊಂದು ಹಿಂದೂ  ಮೆಥಾಲಾಜಿಕಲ್ ಪೌರಾಣಿಕ ಕಾಲ್ಪನಿಕ ಮತ್ತು ಥ್ರಿಲ್ಲರ್ ಸರಣಿಯಾಗಿದೆ. ಸರಣಿ ಕೊಲೆಗಳ ಸುತ್ತ ಸುತ್ತುವ ಈ ಕಥೆ ಪ್ರತಿ ಹಂತದಲ್ಲಿಯೂ ವೀಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸುತ್ತದೆ. ಈ ಸರಣಿಯು ಅತೀಂದ್ರಿಯ ಕೇಂದ್ರ ವಾರಣಾಸಿಯ ಹಿನ್ನೆಲೆಯಲ್ಲಿಯಲ್ಲಿ ಸಾಗಿದ್ದು ಈ ಸರಣಿಯು ವೂಟ್ ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ.

ಟಾಪ್ ನ್ಯೂಸ್

Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ

Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

vidhana-Soudha

Cabinet Decission: ಏಳು ತಾಲೂಕುಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆ

CM-Siddaramaiah

CM Siddaramaiah: ಮುಡಾ ಹಗರಣದಲ್ಲಿ ನನ್ನ ತಪ್ಪಿಲ್ಲ

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟHeavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

Heavy Rain ನಾವುಂದ, ಸಾಲ್ಬುಡಾ, ಅರೆಹೊಳೆ ಜಲಾವೃತ; ನೂರಕ್ಕೂ ಮಿಕ್ಕಿ ಮನೆಗಳು ದಿಗ್ಬಂಧನ

Heavy Rain ನಾವುಂದ, ಸಾಲ್ಬುಡಾ, ಅರೆಹೊಳೆ ಜಲಾವೃತ; ನೂರಕ್ಕೂ ಮಿಕ್ಕಿ ಮನೆಗಳು ದಿಗ್ಬಂಧನ

BJP Meeting; ತಾಕತ್ತಿದ್ದರೆ ಚುನಾವಣೆಗೆ ಬನ್ನಿ: ಬಿ.ಎಸ್‌.ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

ಬಿಗ್‌ ಬಾಸ್‌ ಮನೆಗೆ ವಿವಾದಿತ ಜ್ಯೋತಿಷಿ ವೇಣುಸ್ವಾಮಿ? ಈತ ಹೇಳಿದೆಲ್ಲವೂ ಆಗಿದೆ ಆದರೆ..

ಬಿಗ್‌ ಬಾಸ್‌ ಮನೆಗೆ ವಿವಾದಿತ ಜ್ಯೋತಿಷಿ ವೇಣುಸ್ವಾಮಿ? ಈತ ಹೇಳಿದೆಲ್ಲವೂ ಆಗಿದೆ ಆದರೆ..

“ದರ್ಶನ್‌ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್

“ದರ್ಶನ್‌ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್

Renukaswamy Case: ದರ್ಶನ್‌, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಮತ್ತೆ ಜೈಲೇ ಗತಿ

Renukaswamy Case: ದರ್ಶನ್‌, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಮತ್ತೆ ಜೈಲೇ ಗತಿ

ಅವನು ಇಷ್ಟ ಪಟ್ಟಳನ್ನು ನಾನು ಒಪ್ಪುವೆ… ತರುಣ್‌ ಮದುವೆ ಕುರಿತು ತಾಯಿ ಮಾಲತಿ ಮಾತು

ಅವನು ಇಷ್ಟ ಪಟ್ಟಳನ್ನು ನಾನು ಒಪ್ಪುವೆ… ತರುಣ್‌ ಮದುವೆ ಕುರಿತು ತಾಯಿ ಮಾಲತಿ ಮಾತು

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ

Dengue: ಆರೋಗ್ಯ ಅಧಿಕಾರಿಯೇ ಆಹುತಿ: ಒಂದೇ ದಿನ 286 ಪ್ರಕರಣ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

vidhana-Soudha

Cabinet Decission: ಏಳು ತಾಲೂಕುಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆ

Rohan Bopanna

Wimbledon tennis match: ಬೋಪಣ್ಣ-ಎಬ್ಡೆನ್‌ ಮುನ್ನಡೆ

1-athli

Paris Olympics; ಆ್ಯತ್ಲೀಟ್‌ ಗಳಿಂದ ಶ್ರೇಷ್ಠ ನಿರ್ವಹಣೆ: ಮೋದಿ ವಿಶ್ವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.