ಭತ್ತ ಖರೀದಿಗೆ ನೋಂದಣಿ ಕೇಂದ್ರ ಆರಂಭ


Team Udayavani, Dec 16, 2020, 4:17 PM IST

ಭತ್ತ ಖರೀದಿಗೆ ನೋಂದಣಿ ಕೇಂದ್ರ ಆರಂಭ

ಮಂಡ್ಯ: 2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿರೈತರಿಂದ ಭತ್ತ ಖರೀದಿಸಲು ಜಿಲ್ಲೆಯಲ್ಲಿ ನೋಂದಣಿ ಕೇಂದ್ರಗಳನ್ನು ತೆರೆದಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದ್ದಾರೆ.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕವ್ಯವಹಾರಗಳ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆಮಹಾಮಂಡಳಖರೀದಿಏಜೆನ್ಸಿಯಾಗಿಕಾರ್ಯನಿರ್ವಹಿಸುತ್ತಿದ್ದು, ಪ್ರತಿರೈತನಿಂದ ಗರಿಷ್ಠ 75 ಕ್ವಿಂಟಾಲ್‌ ಭತ್ತ ಸ್ವೀಕರಿಸಬಹುದಾಗಿದೆ.ಭತ್ತ (ಸಾಮಾನ್ಯ)ಕ್ಕೆ ನಿಗದಿಪಡಿಸಿರುವ ಕನಿಷ್ಠ ಬೆಂಬಲಬೆಲೆ ಕ್ವಿಂಟಾಲ್‌ಗೆ 1868 ರೂ. ಇದೆ.ಈ ಸಂಬಂಧಮಾನದಂಡಗಳನ್ವಯ ಏಫ್‌ಎಕ್ಯೂ ಗುಣ ಮಟ್ಟದ ಭತ್ತವನ್ನು, ಸರ್ಕಾರದ ನಿಗದಿಪಡಿಸಿರುವ ಬೆಲೆಯಂತೆ ರೈತರಿಂದ ಸ್ವೀಕರಿಸಬಹುದಾಗಿದೆ. ರೈತರ ನೋಂದಣಿ ಅವಧಿಯು 30 ನವೆಂಬರ್‌ 2020ರಿಂದ 30 ಡಿಸೆಂಬರ್‌2020ಆಗಿದೆ. ನೋಂದಾಯಿತರೈತರಿಂದಭತ್ತವನ್ನು ಖರೀದಿಸಿ, ಮಿಲ್‌ಗ‌ಳಲ್ಲಿ ಶೇಖರಿಸುವಮತ್ತು ಪರಿವರ್ತಿಸುವ ಕಾರ್ಯಾರಂಭ ಅವಧಿಯು ಡಿ.20ರಿಂದ ಮುಂದಿನ ಜನವರಿ 7ರವರೆಗೆನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೋಂದಣಿ ಕೇಂದ್ರಗಳು: ಮಂಡ್ಯ ಜಿಲ್ಲೆಯಲ್ಲಿ ಒಟ್ಟು 31 ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ.ಮಂಡ್ಯದ ಕೆರಗೋಡು ರೈತ ಸಂಪರ್ಕ ಕೇಂದ್ರ, ಉಮ್ಮಡಹಳ್ಳಿರಾಜ್ಯ ಉಗ್ರಾಣ ನಿಗಮ ಆವರಣ, ಯಲಿಯೂರು ರಾಜ್ಯ ಉಗ್ರಾಣ ನಿಗಮ ಆವರಣ, ದುದ್ದ ರೈತಸಂಪರ್ಕ ಕೇಂದ್ರ, ಬಸರಾಳು ನಾಡಕಚೇರಿ, ಕೊತ್ತತ್ತಿ ರೈತ ಸಂಪರ್ಕ ಕೇಂದ್ರ,ಮದ್ದೂರಿನ ಎಪಿಎಂಸಿ ಆವರಣ, ಗ್ರಾಪಂ ಕೆ.ಎಂ.ದೊಡ್ಡಿ, ಗ್ರಾಪಂಕೊಪ್ಪ, ರಾಜ್ಯ ಉಗ್ರಾಣ ನಿಗಮ ಆವರಣ ಚಾಮನಹಳ್ಳಿ, ಗ್ರಾಪಂ ಕೆಸ್ತೂರು, ಮಳವಳ್ಳಿಯ ಎಪಿಎಂಸಿ ಆವರಣ, ರಾಜ್ಯ ಉಗ್ರಾಣನಿಗಮ ಆವರಣ ಕಿರುಗಾವಲು, ಹಲಗೂರು ರೈತಸಂಪರ್ಕ ಕೇಂದ್ರ, ಬಿ.ಜಿ.ಪುರ ನಾಡ ಕಚೇರಿ, ಕೆ.ಆರ್‌ .ಪೇಟೆಯ ಎಪಿಎಂಸಿ ಆವರಣ, ಕಿಕ್ಕೇರಿ ರೈತ ಸಂಪರ್ಕ ಕೇಂದ್ರ, ಬೂಕನಕೆರೆ ರೈತ ಸಂಪರ್ಕ ಕೇಂದ್ರ,ಅಕ್ಕಿ ಹೆಬ್ಟಾಳು ರೈತ ಸಂಪರ್ಕ ಕೇಂದ್ರ, ತೆಂಡೆಕೆರೆ ಗ್ರಾಪಂ, ಸಂತೇಬಾಚಹಳ್ಳಿ ರೈತ ಸಂಪರ್ಕ ಕೇಂದ್ರ, ಪಾಂಡವಪುರದ ಎಪಿಎಂಸಿ ಆವರಣ, ಜಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರ, ಚಿನಕುರಳಿ ರೈತ ಸಂಪರ್ಕ ಕೇಂದ್ರ, ಕ್ಯಾತನಹಳ್ಳಿ ಗ್ರಾಪಂ, ಶ್ರೀರಂಗಪಟ್ಟಣದ ಎಪಿಎಂಸಿ ಕಚೇರಿಬೆಂಗಳೂರು-ಮೈಸೂರು ಹೆದ್ದಾರಿ, ಪಿಎಸಿಎಸ್‌ ಅರಕೆರೆ, ರೈತ ಸಂಪರ್ಕ ಕೇಂದ್ರ ಬೆಳಗೋಳ,ಪಿಎಸಿಎಸ್‌ಕೆ.ಶೆಟ್ಟಹಳ್ಳಿ,ನಾಗಮಂಗಲದ ಎಪಿಎಂಸಿ ಆವರಣ, ಬೆಳ್ಳೂರು ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಮಾಡಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಗುಣಮಟ್ಟದ ಭತ್ತಸ್ವೀ ಕಾರ: ನೋಂದಾಯಿಸಿಕೊಂಡ ರೈತರ ಮೊಬೈಲ್‌ ಸಂಖ್ಯೆಗೆ ಸಂದೇಶ ಕಳುಹಿಸಲಾ ಗುತ್ತದೆ. ಮೊಬೈಲ್‌ಗೆ ಸಂದೇಶ ಸ್ವೀಕೃತವಾಗಿರುವರೈತರು ರೈಸ್‌ಮಿಲ್‌ಗೆ ಭತ್ತವನ್ನು ನೀಡುವ ಸಂದರ್ಭದಲ್ಲಿ ಸರ್ಕಾರವು ನಿಗದಿಪಡಿಸಿರುವಉತ್ತಮ ಸರಾಸರಿ ಗುಣಮಟ್ಟದಿಂದ ಕೂಡಿರಬೇಕು. ಉತ್ತಮ ಸರಾಸರಿ ಗುಣಮಟ್ಟ ಹೊಂದಿರದಭತ್ತವನ್ನು ಸ್ವೀಕರಿಸಲಾಗುವುದಿಲ್ಲ. ಆದ್ದರಿಂದ ರೈತರು

ಉತ್ತಮ ಗುಣಮಟ್ಟದ ಭತ್ತವನ್ನು ನೀಡಬೇಕು. ಯಾವುದೇ ಕಾರಣಕ್ಕೂ ಭತ್ತವನ್ನು ಮಧ್ಯವರ್ತಿಗಳಿಗೆಮಾರಾಟ ಮಾಡದೇ ಸರ್ಕಾರದ ಈ ಯೋಜನೆಯಡಿ ಸರಬರಾಜು ಮಾಡಿ ಸದುಪಯೋಗಪಡಿಸಿಕೊಳ್ಳಿ ಹಾಗೂ ಕೋವಿಡ್‌-19 ಹರಡುವಿಕೆಯನ್ನು ತಡೆಗಟ್ಟುವ ಬಗ್ಗೆ ಜಿಲ್ಲಾಡಳಿತ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-reee

Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.