ಸೌಲಭ್ಯಕ್ಕಾಗಿ ಕಾಯುತ್ತಿರುವ ಪ್ರಾಥಮಿಕ ಶಾಲೆಗಳು
Team Udayavani, Dec 16, 2020, 4:48 PM IST
ಶ್ರೀನಿವಾಸಪುರ: ತಾಲೂಕು ಶೈಕ್ಷಣಿಕ ಕ್ಷೇತ್ರದಲ್ಲೂ ಗುರ್ತಿಸಿಕೊಂಡಿದ್ದು, ಖಾಸಗಿ ವ್ಯಾಮೋಹ ತಪ್ಪಿಸಲುಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯಗಳು ಒದಗಿಸಬೇಕು ಈ ನಿಟ್ಟಿನಲ್ಲಿ ಶಾಸಕರು ದತ್ತು ಪಡೆದ ತಾಡಿಗೋಳ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವು ಸೌಕರ್ಯಗಳ ಅವಶ್ಯಕತೆಯಿದೆ.
ಶ್ರೀನಿವಾಸಪುರ ತಾಲೂಕು ರೋಣೂರು ಹೋ ಬಳಿ ವ್ಯಾಪ್ತಿ ತಾಡಿಗೋಳ್ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 120 ಮಂದಿಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ 70 ಮಂದಿಹೆಣ್ಣು ಮಕ್ಕಳುಇದ್ದಾರೆ.10 ಕೊಠಡಿಗಳಿದ್ದರೂಬಹಳಷ್ಟು ಕೊಠಡಿಗಳು ಮಳೆಯಿಂದ ಸೋರುತ್ತಿವೆ .ಶಾಲೆಗೆ ಕೌಂಪೌಂಡ್ ಇದ್ದರೂ ಆಟದ ಮೈದಾನವಿಲ್ಲ ತಗ್ಗಿನಲ್ಲಿರುವ ಶಾಲೆಯ ಆವರಣದಲ್ಲಿ ಮಳೆಯಾದರೆ ಕೆರೆಯಾಗುತ್ತದೆ. ನೀರಿನ ವ್ಯವಸ್ಥೆ ಗ್ರಾಪಂ ಕಡೆಯಿಂದಮಾಡಿಕೊಟ್ಟಿದ್ದರೂ ಶುದ್ಧ ಕುಡಿವ ನೀರಿನ ಘಟಬೇಕಾಗಿದೆ. ಇಲ್ಲಿ ಪುಸ್ತಕಗಳ ಸೌಲಭ್ಯವಿದ್ದರೂ ಪ್ರತ್ಯೇಕ ಗ್ರಂಥಾಲಯವಿಲ್ಲ,5ಮಂದಿ ಶಿಕ್ಷಕರಿದ್ದು, ದೈಹಿಕ ಶಿಕ್ಷಕರು ಸೇರಿ ಇನ್ನು ಇಬ್ಬರ ಶಿಕ್ಷಕರ ಅವಶ್ಯಕತೆ ಇದೆಯೆಂದು ತಿಳಿದು ಬರುತ್ತದೆ. ಮುಖ್ಯವಾಗಿ ಇರುವ ಶೌಚಾಲಯ ಶಿಥಿಲವಾಗಿ ಒಂದು ವರ್ಷವಾಗುತ್ತಿದೆ ಹಾಗಾಗಿ ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಜರೂರಾಗಿ ಆಗಬೇಕಿದೆ ಎನ್ನುವುದು ಶಿಥಿಲಗೊಂಡ ಶೌಚಾಲಯ ಉದಾಹರಣೆಯಾಗಿದೆ.
ಬಿಸಿಯೂಟಉತ್ತಮವಾಗಿನಡೆಯುತ್ತಿದೆ.ವಿದ್ಯಾರ್ಥಿಗಳು ಸೈಕಲ್‌ನಲ್ಲಿ ಬರುತ್ತಾರೆ, ರಂಗ ಮಂದಿರ, ಮಕ್ಕಳಿಗೆ ತಕ್ಕಂತೆ ಕುರ್ಚಿ, ಮೇಜು, ಡೆಸ್ಕ್, ಬೀರುಗಳು ಬೇಕಾಗಿದೆ, ಶಾಲಾಆವರಣವನ್ನು ಎತ್ತರಿಸಿ ಸಿಮೆಂಟ್ ನೆಲಹಾಸು ಹಾಕಿಸಬೇಕು ಸುಮಾರು 150 ಮಂದಿ ಮಕ್ಕಳುಕುಳಿತುಊಟ ಮಾಡುವ ಡೈನಿಂಗ್ ಹಾಲ್ ಅವಶ್ಯವಿದೆ.ಶಾಲೆಗೆಅಗತ್ಯಮೂಲಸೌಕರ್ಯಗಳನ್ನು ಒದಗಿಸಿದರೆ ಮತ್ತಷ್ಟು ಮಕ್ಕಳ ಹಾಜರಾತಿ ಸಾಧ್ಯವಿದೆಎಂದು ಶಾಲೆಯ ಶಿಕ್ಷಕರ ಒತ್ತಾಯವಾಗಿದೆ.
ಶಾಲೆಯಿಂದಕೆ ಲವು ಬೇಡಿಕೆಗಳಿದ್ದರೂ ಅಗತ್ಯವಾದುದನ್ನು ಪೂರೈಸಿದರೆಈ ಭಾಗದಲ್ಲಿ ಮಕ್ಕಳ ಹಾಜರಾತಿಹೆ ಚ್ಚುತ್ತದೆ. – ಶ್ರೀನಿವಾಸರೆಡ್ಡಿ ಸಿಆರ್‌ಪಿ
ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳು ಇದ್ದರೂ ಎಲ್ಲವನ್ನು ಸುಧಾರಿಸುವುದುಕಷ್ಟ. ಆದರೆ, ಅಗತ್ಯವಾದ ಸೌಲಭ್ಯಗಳನ್ನು ನೀಡಿದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಸಹಕಾರಿಯಾಗುತ್ತದೆ. ಶಾಸಕರು ಲಭ್ಯವಿರುವ ಅನುದಾನದಲ್ಲಿ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ. – ಉಮಾದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ
ಕೊಠಡಿಗಳಲ್ಲಿ ಮಳೆ ನೀರುಸೋರುತ್ತಿವೆ ಅವರಣಎತ್ತರಿಸಿ ಸಿಮೆಂಟ್ ನೆಲಹಾಸುಹಾಕಿದರೆಅನುಕೂಲವಾಗುತ್ತದೆ.ಕೆಲವು ಸೌಲಭ್ಯಗಳನ್ನು ಅಗತ್ಯವಾಗಿ ಕಲ್ಪಿಸಬೆಕಾಗಿದೆ.– ಸುನಂದಮ್ಮ ಮುಖ್ಯ ಶಿಕ್ಷಕಿ ಸ.ಹಿ.ಪ್ರಾ. ಶಾಲೆ. ತಾಡಿಗೋಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.