197 ಗ್ರಾಪಂ ಸದಸ್ಯರ ಅವಿರೋಧ ಆಯ್ಕೆ
Team Udayavani, Dec 16, 2020, 5:02 PM IST
ಹಾಸನ: ಮೊದಲ ಹಂತದಲ್ಲಿ ನಡೆಯುವ ಜಿಲ್ಲೆಯ ನಾಲ್ಕು ತಾಲೂಕುಗಳ 125 ಗ್ರಾಮ ಪಂಚಾಯಿತಿ ಒಟ್ಟು 1703 ಸದಸ್ಯ ಸ್ಥಾನಗಳ ಪೈಕಿ 197 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ1472ಸ್ಥಾನಗಳಿಗೆ ಡಿ.22 ರಂದು ಚುನಾವಣೆ ನಡೆಯಲಿದ್ದು, ಅಂತಿಮವಾಗಿ 3867 ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚುನಾವಣೆಯ ಮಾಹಿತಿ ನೀಡಿದ ಅವರು, ಹಾಸನ ತಾಲೂಕಿನಲ್ಲಿ 45, ಅರಕಲಗೂಡು 45, ಚನ್ನರಾಯಪಟ್ಟಣ 84, ಸಕಲೇಶಪುರ 23 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆಎಂದು ತಿಳಿಸಿದರು. ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮ ಪಂಚಾಯ್ತಿಯ ಒಂದು ಹಾಗೂಸಕಲೇಶಪುರ ತಾಲೂಕಿನ 34 ಸದಸ್ಯ ಸ್ಥಾನಗಳಿಗೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ದೇವಲದಕೆರೆ ಗ್ರಾಮ ಪಂಚಾಯಿತಿಯ 29 ಸ್ಥಾನಗಳಿಗೆ 28 ನಾಮ ಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರ ಹಿಂಪಡೆಯಲು ಡಿ.14ಕೊನೆಯ ದಿನಾಂಕವಾಗಿತ್ತು. ಈ ಗ್ರಾಮದಲ್ಲಿ ಅಧಿಕಾರಿಗಳು ಸಭೆ ಮಾಡಿ ಮನವರಿಕೆ ಮಾಡಲು ಪ್ರಯತ್ನಿಸಿದರೂ 28ನಾಮಪತ್ರ ಹಿಂಪಡೆಯಲಾಗಿದೆ. ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದೆ ಎಂದು ಹೇಳಿದರು.
ಜಿಲ್ಲಾಡಳಿತದಿಂದ ಪಿಪಿಇ ಕಿಟ್: ಚುನಾವಣೆಗೆ ಸಂಬಂಧಿಸಿದಂತೆ ಸಿಬ್ಬಂದಿಗೆ ತರಬೇತಿ ನೀಡಲಾಗು ತ್ತಿದ್ದು, ಮೊದಲ ಹಂತಕ್ಕೆ ಡಿ.16 ಮತ್ತು 17 ರಂದು ತರಬೇತಿ ನಡೆಯುತ್ತದೆ. ಮತದಾನದ ದಿನ ಕೊನೆಯಒಂದು ಗಂಟೆಯ ಅವಧಿ ಕೋವಿಡ್ ರೋಗಿಗಳಿಗೆ ಮೀಸಲಿಟ್ಟಿದ್ದು, ಅವರು ಮೊದಲೇ ಬೂತ್ ಮಟ್ಟದ ಅಧಿಕಾರಿಯ ಬಳಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿತರು ಮತಗಟ್ಟೆಗೆ ಬರಲು ವಾಹನದ ವ್ಯವಸ್ಥೆ ಪಿಪಿಇ ಕಿಟ್‌ಗಳನ್ನು ಜಿಲ್ಲಾಡಳಿತದಿಂದಲೇ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಎರಡನೇ ಹಂತದಲ್ಲಿ ನಾಲ್ಕು ತಾಲೂಕುಗಳ 1648 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಡಿ.14ರವರೆಗೆ 1,513 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಲು 16ರವರೆಗೆಕಾಲವಕಾಶವಿದ್ದು, ಯಾವುದೇ ಭಯ ಒತ್ತಡವಿಲ್ಲದೆ ನಾಮ ಪತ್ರ ಸಲ್ಲಿಸಬಹುದು ಎಂದು ಹೇಳಿದರು.
ಮದ್ಯದಂಗಡಿ ವಿರುದ್ಧವೂ ಕ್ರಮ: ಜಿಲ್ಲೆಯಲ್ಲಿಚುನಾವಣೆ ಆಕ್ರಮಗಳನ್ನು ತಡೆಯಲು ಸ್ವೀಪ್‌ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಮದ್ಯ, ಹಣಹಂಚಿಕೆ ಮಾಡುವುದು. ಅಥವಾ ಟೋಕನ್‌ಗಳನ್ನು ಹಂಚಿಕೆಮಾಡುವುದುಕಂಡುಬಂದಲ್ಲಿಅಧಿಕಾರಿಗಳಿಗೆ ದೂರು ನೀಡಬಹುದು.ಕಳೆದ ಆರು ತಿಂಗಳ ಮದ್ಯದ ಸರಾಸರಿ ವ್ಯಾಪಾರವನ್ನು ಗಮನಿಸಿ ಈ ತಿಂಗಳಅವಧಿಯಲ್ಲಿ ಅತಿ ಹೆಚ್ಚು ಮದ್ಯ ಮಾರಾಟ ಮಾಡಿದ್ದರೆ ಅಂತಹ ಮದ್ಯದಂಗಡಿ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾಧ್ಯಮಗಳಲ್ಲಿ ಪ್ರಚಾರ: ಜಿಪಂ ಸಿಇಒ ಬಿ.ಭಾರತಿ ಮಾತನಾಡಿ, ಜಿಲ್ಲೆಯಲ್ಲಿ ಬೀದಿ ನಾಟಕ, ಜನಪದ ಹಾಡುಗಳು, ಪೋಸ್ಟರ್ ಅಂಟಿಸುವುದು, ಬ್ಯಾನರ್‌ಹಾಕುವ ಮೂಲಕ ಮತದಾನದ ಜಾಗೃತಿಕಾರ್ಯಕ್ರಮ ನಡೆಸಲಾಗುತ್ತಿದೆ. ಮತದಾನದಿಂದಯಾರೂ ಹಿಂದೆ ಉಳಿಯಬೇಡಿ ಎಂದು, ಸ್ಥಳೀಯಕೇಬಲ್ ನೆಟ್‌ವರ್ಕ್, ರೇಡಿಯೋ ಮೂಲಕವು ಪ್ರಚಾರ ಮಾಡಲಾಗುತ್ತಿದೆ. ಮತದಾನ ಮಾಡುವಅಂಗವಿಕಲರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸ ಲಾಗುವುದು ಎಂದು ಹೇಳಿದರು.
ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಹಾಗೂ ವಿವಿಧಸ್ಥಳಗಳಿಗೆ ಅಂಟಿಸುವ ಪೋಸ್ಟರ್ ಬಿಡುಗಡೆ ಮಾಡ ಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೀದಿ ನಾಟಕಕ್ಕೆ ಚಾಲನೆ ನೀಡಲಾಯಿತು. ಅಪರಜಿಲ್ಲಾಧಿಕಾರಿ ಕವಿತಾ ರಾಜರಾಂ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.
ಸದಸ್ಯತ್ವ ಹರಾಜು: 43 ಜನರ ಮೇಲೆಕೇಸ್ : ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ನಡೆಯಲು ಅಗತ್ಯಕಾನೂನುಕ್ರಮಕೈಗೊಳ್ಳಲಾಗಿದೆ. ಚುನಾವಣೆ ಅಕ್ರಮಗಳು ನಡೆಯುವುದರ ಮಾಹಿತಿ ನೀಡಿದರೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿ ವಾಸ್‌ಗೌಡಸ್ಪಷ್ಟಪಡಿಸಿದರು. ಅರಕಲಗೂಡು ತಾಲೂಕು ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಬಿಳಗುಲಿ ಗ್ರಾಮದಲ್ಲಿ ಹರಾಜಿನ ಮೂಲಕ ಸದಸ್ಯಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಸಲಾಗಿತ್ತು. ಈ ಸಂಬಂಧ3 ಜನ ಹಾಗೂ ಸಂಗಡಿಗರು ಸೇರಿ 43 ಜನರ ವಿರುದ್ಧ ಐಪಿಸಿ ಕಲಂ171 ಹಾಗೂ 171ಎಫ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Enquiry: ತನ್ನದೇ ವೀಡಿಯೋ ಕೋರ್ಟ್‌ನಲ್ಲಿ ವೀಕ್ಷಿಸಲು ಮಾಜಿ ಸಂಸದ ಪ್ರಜ್ವಲ್‌ಗೆ ಅನುಮತಿ
Discomfort: ಬಿಜೆಪಿ ತೊರೆಯುವರೇ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ?
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.