ಹವಾಮಾನದಲ್ಲಿ ಏರುಪೇರು: ಗೇರು ಕೃಷಿಗೆ ಸಂಕಷ್ಟ

ಗೇರು ಬೆಳೆಗಾರರಲ್ಲಿ ಆತಂಕ; ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಲು ಆಗ್ರಹ

Team Udayavani, Dec 17, 2020, 4:03 AM IST

ಹವಾಮಾನದಲ್ಲಿ ಏರುಪೇರು: ಗೇರು ಕೃಷಿಗೆ ಸಂಕಷ್ಟ

ಕುಂದಾಪುರ: ಅಕಾಲಿಕ ಮಳೆ, ಸುಡು ಬಿಸಿಲು, ಚಳಿ ವಿಳಂಬ, ಆಗಾಗ ಮೋಡ ಕವಿಯುವುದು ಹೀಗೆ ದಿನಕ್ಕೊಂದು ರೀತಿಯ ಹವಾಮಾನದಿಂದಾಗಿ ಕುಂದಾಪುರ ಸಹಿತ ಕರಾವಳಿ ಭಾಗದ ಪ್ರಮುಖ ಬೆಳೆಗಳಲ್ಲಿ ಒಂದಾದ ಗೇರು ಕೃಷಿಗೆ ಸಂಕಷ್ಟ ಎದುರಾಗಿದೆ. ಮಳೆ ಹೆಚ್ಚಿದ್ದರಿಂದ ಹೆಚ್ಚಿನ ಗೇರು ಮರಗಳಲ್ಲಿ ಹೂವು ಬಿಡುವ ಪ್ರಕ್ರಿಯೆ ವಿಳಂಬವಾಗಿದ್ದು, ಇದರಿಂದಾಗಿ ಆರಂಭಿಕ ಫಸಲು ಇಳಿಮುಖಗೊಳ್ಳುವ ಸಾಧ್ಯತೆಗಳಿವೆ.

ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಹೂ ಬಿಟ್ಟು, ಜನವರಿಯಲ್ಲಿ ಫಸಲು ತುಂಬಿಕೊಳ್ಳುವ ಗೇರು ಹಣ್ಣಿನ ಮರಗಳು, ಈ ಬಾರಿ ಅಕ್ಟೋಬರ್‌ವರೆಗೂ ನಿರಂತರ ಮಳೆ, ಆ ಬಳಿಕವೂ ಆಗಾಗ ಮಳೆ ಬರುತ್ತಿದ್ದುದರಿಂದ ಹೆಚ್ಚಿನೆಡೆಗಳಲ್ಲಿ ಹೂವು ಬಿಡುವ ಪ್ರಕ್ರಿಯೆಯೇ ಆಗಿಲ್ಲ. ಈಗಾಗಲೇ ಹೂವು ಬಿಟ್ಟಿದ್ದಕ್ಕೂ ಇತ್ತೀಚೆಗೆ ಬಂದ ಮಳೆಯಿಂದ ಕಂಟಕ ಎದುರಾಗಿದೆ.

5,997 ಹೆಕ್ಟೇರ್‌ ಪ್ರದೇಶ
ಉಡುಪಿ ಜಿಲ್ಲೆಯಲ್ಲಿ 17,386 ಹೆಕ್ಟೇರ್‌ ಪ್ರದೇಶದಲ್ಲಿ ವಾರ್ಷಿಕ 34,772 ಮೆಟ್ರಿಕ್‌ ಟನ್‌ ಗೇರುಬೀಜ ಉತ್ಪಾದನೆಯಾಗುತ್ತಿದ್ದು, 15ರಿಂದ 20 ಸಾವಿರ ಗೇರು ಕೃಷಿಕರಿದ್ದು ಗೇರು ಕೃಷಿ ಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಬೈಂದೂರು ಹಾಗೂ ಕುಂದಾಪುರ ಎರಡೂ ತಾಲೂಕುಗಳಲ್ಲಿ ಒಟ್ಟು 5,997 ಹೆಕ್ಟೇರ್‌ ಪ್ರದೇಶದಲ್ಲಿ ಗೇರು ಬೆಳೆಯಲಾಗುತ್ತಿದೆ.

ವೈಪರೀತ್ಯದ ಪರಿಣಾಮವೇನು?
ವಾತಾವರಣದಲ್ಲಾಗುತ್ತಿರುವ ಬದಲಾವಣೆ ಯಿಂದಾಗಿ ಬೆಳೆ ವಿಳಂಬದ ಜತೆಗೆ ಕೀಟ ಬಾಧೆ ಸಹಿತ ಇನ್ನಿತರ ರೋಗಬಾಧೆಗಳು ಕಾಣಿಸಿಕೊಳ್ಳುತ್ತವೆ. ಸೆಪ್ಟಂಬರ್‌, ಅಕ್ಟೋಬರ್‌ವರೆಗೂ ನಿರಂತರ ಮಳೆ ಬಂದಿದ್ದರಿಂದ ಗೇರು ಮರದ ಕಾಂಡ ಒಣಗಿರಲಿಲ್ಲ. ಕಾಂಡ ಒಣಗದಿದ್ದರೆ ಮರ ಬೆಳೆಯುತ್ತಲೇ ಇರುತ್ತದೆ. ಕಾಂಡ ಒಣಗಿದರೆ ಮಾತ್ರ ಬೆಳೆಯುವಿಕೆ ನಿಲ್ಲಿಸಿ, ಹೂವು ಬಿಡುತ್ತದೆ. ಆದರೆ ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ಹೂವು ಬಿಡುವ ಪ್ರಕ್ರಿಯೆ ವಿಳಂಬವಾಗಿದೆ. ಆ ಬಳಿಕ ಅಗತ್ಯದ ಚಳಿಯೂ ಇರಲಿಲ್ಲ. ಸೆಕೆ, ಮೋಡವೇ ಹೆಚ್ಚಿದ್ದುದರಿಂದ ಹೂವು ಬಿಡುವ ಪಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ಹೂವು ಬಿಟ್ಟ ಕಡೆಗಳಲ್ಲಿ ಇತ್ತೀಚೆಗೆ ಮಳೆ ಬಂದಿದ್ದರಿಂದ ಹೂವು ಅರಳುವುದಿಲ್ಲ. ಅಲ್ಲಿಯೇ ಒಣಗಿ ಹೋಗುತ್ತದೆ.

ಆರಂಭಿಕ ಇಳುವರಿಗೂ ಅಡ್ಡಿ
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈಗಾಗಲೇ ಕೆಲವೆಡೆಗಳಲ್ಲಿ ಗೇರು ಮರದಲ್ಲಿ ಹೂವು ಬಿಟ್ಟಿದ್ದು, ಅದೀಗ ಕರಟಿ ಹೋಗುವ ಸಂಭವವಿದ್ದು, ಇದರಿಂದ ಆರಂಭಿಕ ಹಂತದಲ್ಲಿ ಸಿಗುವ ಇಳುವರಿ ಮೇಲೂ ಹೊಡೆತ ಬಿದ್ದಂತಾಗಿದೆ. ಆರಂಭಿಕ ಹಂತದಲ್ಲಿ ಕಡಿಮೆ ಪ್ರಮಾಣದ ಇಳುವರಿ ಮಾರಾಟಕ್ಕೆ ಸಿಗುವುದರಿಂದ ಉತ್ತಮ ದರವಿರುತ್ತದೆ. ಆದರೆ ಈ ಬಾರಿ ಮಳೆ ಬಂದಿದ್ದರಿಂದ ಅದು ಸಹ ಬೆಳೆಗಾರರಿಗೆ ನಷ್ಟವನ್ನೇ ಉಂಟು ಮಾಡುವ ಸಾಧ್ಯತೆಗಳಿವೆ.

17,386 ಹೆಕ್ಟೇರ್‌ ಜಿಲ್ಲೆಯಲ್ಲಿ ಗೇರು ಬೆಳೆಯುವ ಪ್ರದೇಶ
34,772 ಮೆಟ್ರಿಕ್‌ ಟನ್‌ ಜಿಲ್ಲೆಯಲ್ಲಿ ಒಟ್ಟು ಗೇರು ಬೀಜ ಉತ್ಪಾದನೆ
15 - 20 ಸಾವಿರ ಜಿಲ್ಲೆಯಲ್ಲಿರುವ ಗೇರು ಕೃಷಿಕರ ಸಂಖ್ಯೆ
5997 ಹೆಕ್ಟೇರ್‌ ಬೈಂದೂರು, ಕುಂದಾಪುರ ಎರಡೂ ತಾಲೂಕುಗಳಲ್ಲಿ ಗೇರು ಬೆಳೆಯುವ ಪ್ರದೇಶ

ವಿಮೆ ವ್ಯಾಪ್ತಿಗೆ ಸೇರಿಸಿ
ಗೇರು ಕೃಷಿಕರು ಹವಾಮಾನ ವೈಪರೀತ್ಯದಿಂದಾಗಿ ಪ್ರತಿ ವರ್ಷ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಆದರೆ ಇತರ ತೋಟಗಾರಿಕಾ ಬೆಳೆಗಳಂತೆ ಗೇರು ಕೃಷಿಕರಿಗೆ ಯಾವುದೇ ರೀತಿಯ ವಿಮೆ ಸೌಲಭ್ಯಗಳು ಸಿಗುತ್ತಿಲ್ಲ. ಇನ್ನು ಮುಂದಿನ ದಿನಗಳಲ್ಲಿಯಾದರೂ ಗೇರು ಕೃಷಿಕರನ್ನು ಕೂಡ ವಿಮೆ ವ್ಯಾಪ್ತಿಯೊಳಗೆ ಸೇರಿಸಿದರೆ ನಷ್ಟದ ಸಂದರ್ಭದಲ್ಲಿ ಅಲ್ಪ – ಸ್ವಲ್ಪವಾದರೂ ಪ್ರಯೋಜನವಾಗಬಹುದು.
– ಕೆಂಚನೂರು ಚಂದ್ರಶೇಖರ ಉಡುಪ, ಗೇರು ಕೃಷಿಕರು

ಒಕ್ಕೂಟ ರಚನೆಗೆ ಪ್ರಯತ್ನ
ಗೇರು ಬೆಳೆಗಾರರಿಗೆ ವಿಮೆ ನೀಡುವಂತೆ ಬೆಳೆಗಾರರಿಂದ ಪ್ರಬಲ ಹಕ್ಕೊತ್ತಾಯ ಆಗಬೇಕಿದೆ. ಈ ವರೆಗೆ ಆ ಕೆಲಸ ಆಗದ ಕಾರಣ ಇನ್ನೂ ಕೂಡ ವಿಮೆ ವ್ಯಾಪ್ತಿಯಲ್ಲಿ ಒಳಪಟ್ಟಿಲ್ಲ. ಇದಕ್ಕಾಗಿ ಅವರೊಳಗೆ ಒಂದು ಒಕ್ಕೂಟ ರಚಿಸಿ, ಆ ಮೂಲಕ ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸಬಹುದು. ಇದಕ್ಕೆ ಇಲಾಖೆಯಿಂದಲೂ ಸಹಕಾರ ನೀಡಲಾಗುವುದು.
– ಸಂಜೀವ ನಾಯ್ಕ, ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ

ಟಾಪ್ ನ್ಯೂಸ್

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

2

Kundapura: ಒಂದು ಕರೆಗಾಗಿ 3-4 ಕಿ.ಮೀ. ನಡೆಯಬೇಕು!

Court-1

Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು

de

Kundapura: ಮಲಗಿದ್ದಲ್ಲಿಯೇ ವ್ಯಕ್ತಿ ಸಾವು

Brahmavar

Kumbhashi: ಅಪಘಾತದ ಗಾಯಾಳು ಆತ್ಮಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.