ಇಂದು ಶ್ರೀವಿಶ್ವೇಶತೀರ್ಥರ ವೃಂದಾವನ ಪ್ರತಿಷ್ಠೆ
Team Udayavani, Dec 17, 2020, 5:49 AM IST
ಉಡುಪಿ/ಬೆಂಗಳೂರು: ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಡಿ.17ರಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರ ಪೂರ್ಣಪ್ರಮಾಣದ ವೃಂದಾವನ ಪ್ರತಿಷ್ಠಾಪನೆಯಾಗಲಿದೆ.
ಸ್ವಾಮೀಜಿಯವರು ನಿರ್ಯಾಣರಾದ ಸಂದರ್ಭದಲ್ಲಿ ಇದೇ ಸ್ಥಳದಲ್ಲಿ ಅವರ ಭೌತಿಕ ಶರೀರವನ್ನು ವೃಂದಾವನಸ್ಥಗೊಳಿಸಲಾಯಿತು. ಸಂಪ್ರದಾಯದಂತೆ ಶಿಲಾ ವೃಂದಾವನವನ್ನು ಅದೇ ಸ್ಥಳದಲ್ಲಿ ವರ್ಷದೊಳಗೆ ನಿರ್ಮಿಸಲಾಗಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಪಕ್ಕದಲ್ಲಿಯೇ ಸ್ವಾಮೀಜಿಯವರ ವಿದ್ಯಾಗುರು ಪಲಿಮಾರು- ಭಂಡಾರಕೇರಿ ಮಠದ ಶ್ರೀವಿದ್ಯಾಮಾನ್ಯತೀರ್ಥ ಶ್ರೀಗಳ ಮೃತ್ತಿಕಾ ವೃಂದಾವನವನ್ನೂ ನಿರ್ಮಿಸಲಾಗಿದೆ. ಪ್ರತಿಷ್ಠಾಪನೆ ಅಂಗವಾಗಿ ಈಗಾಗಲೇ ಧಾರ್ಮಿಕ ವಿಧಿಗಳು ಆರಂಭವಾಗಿದ್ದು ಗುರುವಾರ ಶ್ರೀವಿಶ್ವಪ್ರಸನ್ನತೀರ್ಥರು ವೃಂದಾವನ ಪ್ರತಿಷ್ಠಾಪನೆ ಮಾಡಲಿದ್ದಾರೆ. ಸದ್ಯ ವಿದ್ಯಾಪೀಠದಲ್ಲಿ ಡಿ.10ರಿಂದಲೇ ಪ್ರಥಮ ಆರಾಧನ ಮಹೋತ್ಸವವು ನಡೆಯುತ್ತಿದೆ. ಈ ದಿನಗಳಲ್ಲಿ ವಿಶೇಷ ಪೂಜೆ, ವಿಚಾರಗೋಷ್ಠಿಗಳು ನಡೆಯುತ್ತಿವೆ.
ಆನ್‌ಲೈನ್ ವೀಕ್ಷಣೆಗೆ ಮನವಿ
ಕೊರೊನಾ ಹಿನ್ನೆಲೆ ಆರಾಧನ ಮಹೋತ್ಸವದಲ್ಲಿ ಸಾರ್ವಜನಿಕರು ಭಾಗವಹಿಸಲು ಹಾಗೂ ಮಠಕ್ಕೆ ಭೇಟಿ ನೀಡಲು ಅವಕಾಶವಿಲ್ಲ. ವೀಡಿಯೋ ಕಾನ್ಫರೆನ್ಸ್, ಯುಟ್ಯೂಬ್ ಹಾಗೂ ಫೇಸ್‌ಬುಕ್ ಮೂಲಕ ವೀಕ್ಷಿಸಬಹುದು ಎಂದು ವಿದ್ಯಾಪೀಠದ ವ್ಯವಸ್ಥಾಪಕರು ತಿಳಿಸಿದ್ದಾರೆ. ಪೂರ್ಣ ಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ/ ವಿಶ್ವೇಶವಾಣಿ ಫೇಸ್‌ಬುಕ್ ಪುಟ ಅಥವಾ ಪೇಜಾವರ ಮಠ ದಿವಾನರು ಯುಟ್ಯೂಬ್ ಚಾನೆಲ್‌ನಲ್ಲಿ ಆರಾಧನೆಯ ನೇರವೀಕ್ಷಣೆ ಲಭ್ಯವಿದೆ.
ಪೂರ್ಣಪ್ರಮಾಣದ ವೃಂದಾವನ
ಗುರುಶಿಷ್ಯರಿಬ್ಬರ ವೃಂದಾವನವನ್ನು ಮುರುಡೇಶ್ವರ, ಎಲ್ಲೂರು, ಕಾರ್ಕಳದಲ್ಲಿ ಸಿದ್ಧಪಡಿಸಲಾಗಿದೆ. ವಿದ್ವಾಂಸರು ಸೂಚಿಸಿದ ಕ್ರಮದಲ್ಲಿ ಶಿಲ್ಪಿಗಳು, ವಾಸ್ತು ತಜ್ಞರು ವೃಂದಾವನ ನಿರ್ಮಾಣ ಮಾಡಿದ್ದಾರೆ. ಅನೇಕ ಶಾಸ್ತ್ರೀಯ ಚಿಂತನೆಗಳಿಗೆ ಅನುಗುಣವಾಗಿ ಏಳು ಹಂತದ ಶಿಲ್ಪ ಕಲೆಗಳನ್ನು ಒಳಗೊಂಡಿದೆ. ಮೇಲ್ಭಾಗದಲ್ಲಿ ಉಡುಪಿ ಶ್ರೀಕೃಷ್ಣ ಮತ್ತು ಮಧ್ವಾಚಾರ್ಯರು ಪೇಜಾವರ ಮಠಕ್ಕೆ ನೀಡಿರುವ ರಾಮ, ವಿಟuಲ ದೇವರ ಮೂಲ ಪ್ರತಿಮೆಗಳ ಪ್ರತೀಕವನ್ನು ಚಿತ್ರಿಸಲಾಗಿದೆ. ವಾಯುದೇವರ ಅವತಾರತ್ರಯಗಳನ್ನು, ವೇದವ್ಯಾಸರ ಪ್ರತೀಕಗಳನ್ನು ಕಲಾತ್ಮಕವಾಗಿ ಚಿತ್ರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.