ಕಬ್ಬಿಣಾಂಶ ಕೊರತೆ: ನಿರ್ಲಕ್ಷ್ಯ ಬೇಡ…ಇದಕ್ಕೇನು ಪರಿಹಾರ?
ಈ ಲಕ್ಷಣಗಳು ನಮ್ಮ ದೇಹದಲ್ಲಿ ಕಬ್ಬಿಣಾಂಶ ಕೊರತೆಯಿಂದ ಮಾತ್ರ ಸಾಧ್ಯ.
Team Udayavani, Dec 17, 2020, 10:32 AM IST
ಒತ್ತಡದ ಜೀವನ ಶೈಲಿ, ಪೌಷ್ಟಿಕಾಂಶಯುಕ್ತ ಆಹಾರ ಸೇವಿಸದೆ ಇರುವುದರಿಂದ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾಗುತ್ತದೆ. ಇದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆಯಾಗದೆ ರಕ್ತ ಹೀನತೆ ಹೆಚ್ಚಾಗುತ್ತದೆ. ಇದರ ಲಕ್ಷಣಗಳು ಕಾಣಿಸಿಕೊಂಡಾಗಲೆ ಆಹಾರ ಕ್ರಮ ಬದಲಾಯಿಸಿಕೊಳ್ಳುವುದು ಉತ್ತಮ.
ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದರೆ ರಕ್ತಹೀನತೆ ಉಂಟಾಗುತ್ತದೆ. ಇದರಿಂದಾಗಿ ನಮ್ಮ ನಾಲಗೆ ದಪ್ಪವಾಗಿ ಊದಿಕೊಳ್ಳುತ್ತದೆ. ಈ ಸಂದರ್ಭ ರುಚಿ ಗ್ರಂಥಿಗೆ
ಆಹಾರದ ಸ್ವಾದ, ರುಚಿಯನ್ನು ಗ್ರಹಿಸಲು ಅಸಾಧ್ಯವಾಗುತ್ತದೆ.
ತುಂಬಾ ಚಳಿಯಿಂದಾಗಿ ಚಳಿಗಾಲದಲ್ಲಿ ತುಟಿಗಳು ಒಡೆಯುವುದು ಸಹಜ. ಆದರೆ ಇದಲ್ಲದೆ ಇನ್ನೊಂದು ಬಾರಿ ತುಟಿ ಒಡೆಯುವುದು ದೇಹದಲ್ಲಿ ಕಬ್ಬಿಣಾಂಶ
ಕಡಿಮೆಯಾದಾಗ ಮಾತ್ರ. ಇದರಿಂದ ಆಹಾರ ತಿನ್ನಲು, ಮಾತನಾಡಲು ಕಷ್ಟವಾಗುತ್ತದೆ. ಕಬ್ಬಿಣಾಂಶ ಕೊರತೆಯಿಂದಾಗಿ ನಾಲಿಗೆಯೂ ಊದಿಕೊಳ್ಳುತ್ತದೆ. ಈ
ಕಾರಣದಿಂದ ರೋಗಿಯು ಹೆಚ್ಚು ಮಂಜುಗಡ್ಡೆಯನ್ನು ತಿನ್ನಲು ಇಚ್ಛಿಸುತ್ತಾನೆ. ಅಲ್ಲದೆ ಮಣ್ಣು, ಪೈಂಟ್, ಪ್ಲಾಸ್ಟರ್ ತಿನ್ನಲು ಪ್ರಚೋದನೆಗೆ ಒಳಗಾಗುತ್ತಾನೆ ಎನ್ನುತ್ತದೆ ಅಧ್ಯಯನಗಳು.
ಇದನ್ನೂ ಓದಿ:ಅಟ್ಟಾರಿ ಗಡಿ ಪ್ರದೇಶದಲ್ಲಿ ಬಿಎಸ್ ಎಫ್ ಎನ್ ಕೌಂಟರ್ ಗೆ ಇಬ್ಬರು ನುಸುಳುಕೋರರ ಸಾವು
ಈ ಲಕ್ಷಣಗಳು ನಮ್ಮ ದೇಹದಲ್ಲಿ ಕಬ್ಬಿಣಾಂಶ ಕೊರತೆಯಿಂದ ಮಾತ್ರ ಸಾಧ್ಯ. ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗದಿದ್ದಾಗ ಅಥವಾ ರಕ್ತ ಕಡಿಮೆಯಿಂದಾಗಿ ಕಬ್ಬಿಣಾಂಶ ಕೊರತೆಯಿಂದ ಕೈ, ಕಾಲುಗಳಲ್ಲಿ ಜೋಮು ತುಂಬಿಕೊಳ್ಳುತ್ತದೆ. ಕಬ್ಬಿಣಾಂಶದ ಕೊರತೆಯಿಂದಾಗಿ ಉಗುರುಗಳು ತುಂಬಾ ಬಿರುಸಾಗುತ್ತವೆ. ಈ ಸಂದರ್ಭ ಸುಲಭವಾಗಿ ಮುರಿಯಬಹುದು. ಇದಕ್ಕಾಗಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.
ಪರಿಹಾರಗಳು
ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ಕಬ್ಬಿಣಾಂಶ ಹೆಚ್ಚಾಗಿರುವ ತರಕಾರಿ, ಸೊಪ್ಪು, ರಾಗಿ, ಮೊಳಕೆ ಕಟ್ಟಿದ ಕಾಳುಗಳು, ಬೆಲ್ಲ, ನೆಲ್ಲಿಕಾಯಿ, ಕಿತ್ತಳೆ ಹಣ್ಣು ಮೊದ ಲಾದವುಗಳ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ ದೊರೆಯುತ್ತದೆ. ಇದಲ್ಲದೆ ವೈದ್ಯರ ಸಲಹೆ ಮೇರೆಗೆ ಕಬ್ಬಿಣಾಂಶದ ಗುಳಿಗೆ ಅಥವಾ ಸಿರಪ್ ಸೇವಿಸಬಹುದು. ಇದು ರಕ್ತಹೀನತೆಯಾಗುವುದನ್ನು ತಡೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.