2020 ರಲ್ಲಿ ದೇಶದಲ್ಲಿ ಟ್ರ್ಯಾಕ್ಟರ್‌ಗೆ ಹೆಚ್ಚಿದ ಬೇಡಿಕೆ

ನಿರೀಕ್ಷಿತ ಮಟ್ಟ ತಲುಪಲು ಇತರ ವಾಹನಗಳು ವಿಫ‌ಲ

Team Udayavani, Dec 18, 2020, 6:19 AM IST

Tractor

ಸಾಂದರ್ಭಿಕ ಚಿತ್ರ

2020ರಲ್ಲಿ ವಾಹನ ಮಾರಾಟ ವಲಯ ಕುಸಿತ ಕಂಡಿದೆ. ಫೆಡರೇಶನ್‌ ಆಫ್ ಆಟೋಮೊಬೈಲ್‌ ಡೀಲರ್ ಅಸೋಸಿಯೇಶನ್‌(ಎಫ್ಎಡಿಎ) ನವೆಂಬರ್‌ ತಿಂಗಳ ವಾಹನ ನೋಂದಣಿ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ನವೆಂಬರ್‌ನಲ್ಲಿ 18.28 ಲಕ್ಷ ಯುನಿಟ್‌ಗಳು ಮಾರಾಟವಾಗಿದ್ದು, ಕಳೆದ ವರ್ಷಕ್ಕಿಂತ ಶೇ. 19.29ರಷ್ಟು ಕಡಿಮೆ ಎಂದು ಹೇಳಿದೆ. ಆದರೆ ಟ್ರ್ಯಾಕ್ಟರ್‌ ಮಾರಾಟದಲ್ಲಿ ಮಾತ್ರ ಹೆಚ್ಚಳ ಕಂಡುಬಂದಿದೆ.

ಫೆಬ್ರವರಿಯಲ್ಲಿ ಹೆಚ್ಚಾಗಿತ್ತು; ಮಾರ್ಚ್‌ನಲ್ಲಿ ಶೂನ್ಯ!
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಫೆಬ್ರವರಿಯಲ್ಲಿ ಮಾತ್ರ ವಾಹನ ಮಾರಾಟವು ಶೇ. 2.60ರಷ್ಟು ಏರಿಕೆಯಾಗಿತ್ತು. ಆದರೆ ಆಟೋ ಮಾರಾಟದ ಇತಿಹಾಸದಲ್ಲಿ ಮೊದಲ ಬಾರಿಗೆ ಮಾರ್ಚ್‌ನಲ್ಲಿ ಒಂದೇ ಒಂದು ವಾಹನ ಮಾರಾಟವಾಗಿಲ್ಲ. ಎಫ್ಎಡಿಎ ಪ್ರತೀ ತಿಂಗಳು ದೇಶದಲ್ಲಿ ಮಾರಾಟವಾದ ವಾಹನಗಳ ಅಂಕಿಅಂಶವನ್ನು ಬಿಡುಗಡೆ ಮಾಡುತ್ತಿದ್ದು ಅದರಲ್ಲಿ ಮಾರ್ಚ್‌ ಮತ್ತು ಎಪ್ರಿಲ್‌ ತಿಂಗಳ ನೋಂದಣಿ ಮಾಹಿತಿ ಇಲ್ಲ. ಮೇ ತಿಂಗಳಲ್ಲಿ ಆಟೋ ವಲಯ ಮಹಾ ಕುಸಿತ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೇನಲ್ಲಿ ಶೇ. 88ರಷ್ಟು ಕಡಿಮೆ ಸಂಖ್ಯೆಯ ವಾಹನಗಳು ಮಾರಾಟಗೊಂಡಿವೆ. ಮೇ ತಿಂಗಳಿನಲ್ಲಿ ಬೈಕ್‌ಗಳು ಅತೀ ಹೆಚ್ಚು ಮಾರಾಟಗೊಂಡಿದ್ದು, ಇತರ ವಾಹನಗಳ ಪ್ರಮಾಣ ಕುಸಿತ ಕಂಡಿದೆ.

ಟ್ರ್ಯಾಕ್ಟರ್‌ಗೆ ಹೆಚ್ಚಿದ ಬೇಡಿಕೆ
ಆಟೋ ವಲಯ ಭಾರೀ ಕುಸಿತ ಕಂಡರೆ ದಾಖಲೆ ಸಂಖ್ಯೆಯಲ್ಲಿ ಟ್ರ್ಯಾಕ್ಟರ್‌ಗಳು ಮಾರಾಟವಾಗಿವೆ. ಈ ವರ್ಷ ಟ್ರ್ಯಾಕ್ಟರ್‌ ಮಾರಾಟವು ಶೇ. 30ರಷ್ಟು ವೃದ್ಧಿಯಾಗಿದೆ. ಆದರೆ ಇತರ ವಾಹನಗಳಂತೆ ಮೇ ತಿಂಗಳಿನಲ್ಲಿ ಮಾತ್ರ ಇಳಿಕೆ ಕಂಡಿದೆ. ಇನ್ನು ಸೆಪ್ಟಂಬರ್‌ತಿಂಗಳಿನಲ್ಲಿ ಅತೀ ಹೆಚ್ಚು ಅಂದರೆ ಶೇ. 80ರಷ್ಟು ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೇಶದಲ್ಲಿ ಕೃಷಿ ಚಟುವಟಿಕೆಗಳು ಚಿಗಿತುಕೊಂಡಿದ್ದವು. ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಜಾರಿ ಮಾಡಲಾಗಿದ್ದ ಲಾಕ್‌ಡೌನ್‌ನ ಸಂದರ್ಭದಲ್ಲಿ ಆಹಾರ ಪದಾರ್ಥಗಳು ಮತ್ತು ಧಾನ್ಯಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ರೈತರ ಸಂಪಾದನೆ ಹೆಚ್ಚುವಂತಾಯಿತು.

ಯಾವ ರಾಜ್ಯಗಳಲ್ಲಿ ಟ್ರ್ಯಾಕ್ಟರ್‌ಗೆ ಬೇಡಿಕೆ
ಬಿಹಾರ, ಗುಜರಾತ್‌, ಹರಿಯಾಣ, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ರಾಜ್ಯಗಳಲ್ಲಿ ಟ್ರ್ಯಾಕ್ಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಉತ್ತರ ಪ್ರದೇಶದಲ್ಲಿ ಪ್ರತೀ ತಿಂಗಳು ಸರಾಸರಿ 12,177 ಟ್ರಾಕ್ಟರ್‌ಗಳು ಮಾರಾಟವಾಗಿವೆ.

ಆಟೋ ರಿಕ್ಷಾಗೆ ಬೇಡಿಕೆ
ತ್ರಿಪುರಾ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಮೇ ತಿಂಗಳಿನಿಂದೀಚೆಗೆ ಆಟೋ ರಿಕ್ಷಾಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಉತ್ತರ ಪ್ರದೇಶ, ಬಿಹಾರ, ಗುಜರಾತ್‌, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ರಿಕ್ಷಾಗಳ ಬೇಡಿಕೆ ಕುಸಿತ ಕಂಡಿದೆ. ಈ ಹಿಂದೆ ಈ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತ್ರಿಚಕ್ರ ವಾಹನಗಳು ಮಾರಾಟವಾಗುತ್ತಿದ್ದವು.

ನಿಧಾನವಾಗಿ ಹೆಚ್ಚಿದ ಬೇಡಿಕೆ
ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳು ಕಳೆದ 3 ತಿಂಗಳುಗಳಿಂದ ಬೇಡಿಕೆ ಹೊಂದಿವೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಇವೆರಡರ ಮಾರಾಟ ಪ್ರಮಾಣ ತನ್ನ ಗುರಿಯನ್ನು ಮೀರಿಲ್ಲ. ಈ ವರ್ಷ ಖಾಸಗಿ ವಾಹನಗಳ ಮಾರಾಟವು ಸೆಪ್ಟಂಬರ್‌ನಲ್ಲಿ 1,95,665 ಯುನಿಟ್‌ಗಳಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 9.8ರಷ್ಟು ಏರಿಕೆಯಾಗಿದೆ. ಈ ತಿಂಗಳು ಮಾತ್ರ ಈ ವಲಯ ಚೇತರಿಕೆ ಕಂಡಿದೆ.

ಹಬ್ಬಗಳ ಸಂದರ್ಭ ನಿರೀಕ್ಷಿತ ಬೇಡಿಕೆ ಇಲ್ಲ
ಈ ವರ್ಷ ಹಬ್ಬದ ಋತುವಿನಲ್ಲಿ ಆಟೋ ಉದ್ಯಮ ಹೊಸ ನಿರೀಕ್ಷೆಯಲ್ಲಿತ್ತು. ಆದರೆ 42 ದಿನಗಳ ಹಬ್ಬದ ಸಂಭ್ರಮದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 4.74ರಷ್ಟು ಕಡಿಮೆ ಮಾರುಕಟ್ಟೆಯನ್ನು ಕಂಡಿದೆ. ಆದರೆ ಈ ಅವಧಿಯಲ್ಲಿ ಖಾಸಗಿ ವಾಹನ ಮತ್ತು ಟ್ರ್ಯಾಕ್ಟರ್‌ಗಳಿಗೆ ಬೇಡಿಕೆ ಕಂಡುಬಂದರೆ ವಾಣಿಜ್ಯ ಉದ್ದೇಶದ ವಾಹನಗಳು ಹಿಂದುಳಿದವು.

ಟಾಪ್ ನ್ಯೂಸ್

R.Ashok

Assembly Electionನಲ್ಲಿ ಮೈತ್ರಿಗೆ ದೇವೇಗೌಡರು ಒಪ್ಪಲಿಲ್ಲ: ಅಶೋಕ್‌

Sanganna-Kardi

BJPಯಲ್ಲಿ ಆರೆಸ್ಸೆಸ್‌ ಮಾತು ನಡೆಯಲ್ಲ: ಸಂಗಣ್ಣ ಕರಡಿ

Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ

Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ

Kharajola

MUDA Scam; ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಕಾರಜೋಳ

Dravid–gavskar

Indian Cricket; ರಾಹುಲ್‌ ದ್ರಾವಿಡ್‌ಗೆ ಭಾರತ ರತ್ನ ಕೊಡಿ: ಗವಾಸ್ಕರ್‌

rain 21

Heavy Rain; ಉತ್ತರ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಜುಲೈ 8 ರಂದು ಪಿಯುಸಿವರೆಗೆ ರಜೆ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-car

SU7; ಭಾರತಕ್ಕೂ ಶೀಘ್ರ ಬರಲಿದೆ ಶಿಯೋಮಿ ಎಲೆಕ್ಟ್ರಿಕ್‌ ಕಾರು!

Bajaj

Bajaj Freedom: ಬಜಾಜ್‌ ಫ್ರೀಡಂ 125 CNG ಬೈಕ್‌ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು?

musk

Tesla; ಭಾರತದಲ್ಲಿ ಹೂಡಿಕೆ ಮಾಡಲು ಉದ್ಯಮಿ ಮಸ್ಕ್ ಹಿಂದೇಟು

Tax

Tax ಸ್ಟಾಂಡರ್ಡ್‌ ಡಿಡಕ್ಷನ್‌ ಒಂದು ಲಕ್ಷ ರೂ.ಗೆ ಏರಿಕೆ?

tock Market: ಬಿಎಸ್‌ ಇ, ನಿಫ್ಟಿ ಭಾರೀ ಏರಿಕೆ-ಸೆಬಿಗೆ CJI ಚಂದ್ರಚೂಡ್‌ ಕೊಟ್ಟ ಸಲಹೆ ಏನು?

Stock Market: ಬಿಎಸ್‌ ಇ, ನಿಫ್ಟಿ ಭಾರೀ ಏರಿಕೆ-ಸೆಬಿಗೆ CJI ಚಂದ್ರಚೂಡ್‌ ಕೊಟ್ಟ ಸಲಹೆ ಏನು?

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

R.Ashok

Assembly Electionನಲ್ಲಿ ಮೈತ್ರಿಗೆ ದೇವೇಗೌಡರು ಒಪ್ಪಲಿಲ್ಲ: ಅಶೋಕ್‌

Sanganna-Kardi

BJPಯಲ್ಲಿ ಆರೆಸ್ಸೆಸ್‌ ಮಾತು ನಡೆಯಲ್ಲ: ಸಂಗಣ್ಣ ಕರಡಿ

Karadi sanganna

Mining; ಸಂಡೂರ ಪ್ರದೇಶದಲ್ಲಿ ಗಣಿಗಾರಿಕೆಗೆ ನಮ್ಮ ವಿರೋಧವಿದೆ: ಕರಡಿ ಸಂಗಣ್ಣ

Yellapur ಒಂದೇ ಮೊಗ್ಗಲ್ಲಿ ಹೂವೆರಡು; ಇದು ಪ್ರಕೃತಿಯ ಸೊಬಗು

Yellapur ಒಂದೇ ಮೊಗ್ಗಲ್ಲಿ ಹೂವೆರಡು; ಇದು ಪ್ರಕೃತಿಯ ಸೊಬಗು

Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ

Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.