ಈ ವಾರ ತೆರೆಗೆ ನಾಲ್ಕು ಚಿತ್ರಗಳು
Team Udayavani, Dec 18, 2020, 1:06 PM IST
ದಿನಕಳೆದಂತೆ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಈ ವಾರ ನಾಲ್ಕು ಸಿನಿಮಾಗಳು ತೆರೆಕಾಣುತ್ತಿವೆ. “ನಾನೊಂಥರ’, “ಆರ್.ಎಚ್.100′, “ಕಿಲಾಡಿಗಳು’ ಹಾಗೂ “ತನಿಖೆ’ ಚಿತ್ರಗಳು ಬಿಡುಗಡೆಯಾಗುತ್ತಿವೆ.
ನಾನೊಂಥರ: ವೃತ್ತಿಯಲ್ಲಿ ವೈದೈಯಾಗಿರುವ ಜಾಕ್ಲಿನ್ ಫ್ರಾನ್ಸಿಸ್ “ನಾನೊಂಥರ’ ಸಿನಿಮಾದನಿರ್ಮಾಪಕರು.ರಮೇಶ್‌ಕಗ್ಗಲ್ ನಿರ್ದೇಶಕರು. ಈ ಚಿತ್ರದಲ್ಲಿನಾಯಕರಾಗಿ ತಾರಕ್ ಶೇಖರಪ್ಪನಟಿಸಿದ್ದಾರೆ. ನಿರ್ಮಾಪಕರ ಪುತ್ರ ಜೈಸನ್‌ಕೂಡಾ ನಟಿಸಿದ್ದು, ನಾಯಕನ ಸಹೋದರನಾಗಿ ಬಣ್ಣಹಚ್ಚಿದ್ದಾರೆ.ನಾಯಕಿ ರಕ್ಷಿಕಾ ಇಲ್ಲಿ ಸಂಪ್ರದಾಯಸ್ಥಕುಟುಂಬದಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ :‘ಬಘೀರ’ ನಾಗಿ ತೆರೆಮೇಲೆ ಬರುತ್ತಿದ್ದಾನೆ ಶ್ರೀ ಮುರಳಿ
ಚಿತ್ರದ ಬಗ್ಗೆ ಮಾತನಾಡುವ ರಮೇಶ್, ಚಿತ್ರದ ನಾಯಕ ಅವನಿಗೆ ಬೇಕಾದಂತೆ ಬದುಕುತ್ತಿರುತ್ತಾನೆ.ಕುಡಿಬೇಕು ಎಂದಾಗಕುಡೀತಾನೆ, ಪ್ರೀತಿಸಬೇಕು ಎಂದಾಗಪ್ರೀತಿಸುತ್ತಾನೆ…. ಹೀಗೆ ತನಗೆ ಏನು ಅನಿಸುತ್ತದೆ ಅದನ್ನು ಮಾಡುತ್ತಾನೆ. ಆತನ ವ್ಯಕ್ತಿತ್ವವೇ ಒಂಥರಾ ಇರೋದರಿಂದ ಸಿನಿಮಾಕ್ಕೆ “ನಾನೊಂಥರ’ ಎಂಬ ಟೈಟಲ್ ಇಡಲಾಗಿದೆ. ಇಲ್ಲಿ ನಾಯಕ ಏನೋ ಅಂದುಕೊಂಡರೆ ಆತನ ಜೀವನದಲ್ಲಿ ಬರುವ ಟ್ವಿಸ್ಟ್‌ಗಳು ಆತನನ್ನು ಇನ್ನೊಂದು ಹಾದಿಗೆ ಸಾಗುವಂತೆ ಮಾಡುತ್ತದೆ ಎನ್ನುತ್ತಾರೆ.
“ಆರ್ ಎಚ್ 100′ : “ಆರ್ ಎಚ್ 100′ ಚಿತ್ರದ ಟ್ರೇಲರ್‌ಕಳೆದ ವಾರಬಿಡುಗಡೆಯಾಗಿತ್ತು. ಈಗ ಟ್ರೇಲರ್‌ಗೆಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ಈ ವಾರತೆರೆಕಾಣುತ್ತಿದ್ದು, ಸಿನಿಮಾವನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ.ಈ ಚಿತ್ರವನ್ನು ಎಸ್.ಎಲ್.ಎಸ್ ಪ್ರೊಡಕ್ಷನ್ಸ್ ನಡಿ ಹರೀಶ್‌ಕುಮಾರ್. ಎಲ್ ನಿರ್ಮಿಸಿದ್ದು, ಮಹೇಶ್ ಎಂ.ಸಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಿತ್ರದ ಚಿತ್ರೀಕರಣ 38 ದಿನಗಳಕಾಲ ಬೆಂಗಳೂರು ಮತ್ತು ಕೊಡಚಾದ್ರಿಯಲ್ಲಿ ಚಿತ್ರದ ಬಹುಪಾಲು ಶೂಟಿಂಗ್ ಮಾಡಲಾಗಿದೆ. ಚಿತ್ರಕ್ಕೆ ಮನೋಜ್ ಹಾಗೂ ಸಿದ್ದುಕೋಡಿಪುರ್ ಹಾಡುಗಳನ್ನು ಬರೆದಿದ್ದು, ಮೆಲ್ವಿನ್ ಮೈಕಲ್ ಸಂಗೀತ ನೀಡಿದ್ದಾರೆ.ಸಂಜಿತ್ ಹೆಗ್ಡೆ, ಅನುರಾಧ ಭಟ್, ಸಿದ್ದಾರ್ಥ್ ಬೆಲ್ ಮನು ಅವರಕಂಠಸಿರಿಯಲ್ಲಿ ಈ ಚಿತ್ರದ ಹಾಡುಗಳು ಮೂಡಿಬಂದಿವೆ.
ಕಿಲಾಡಿಗಳು: “ಕಿಲಾಡಿಗಳು’ ಚಿತ್ರ ಇಂದು ತೆರೆಕಾಣುತ್ತಿದೆ. ಬಿ.ಪಿ.ಹರಿಹರನ್ ಅವರ ನಿರ್ದೇಶನ, ನಿರ್ಮಾಣವಿದೆ. ಮಹೇಂದ್ರ ಮಣೋತ್ ಕೂಡಾ ಚಿತ್ರದ ನಿರ್ಮಾಣದಲ್ಲಿಕೈ ಜೋಡಿಸುವ ಜೊತೆಗೆ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಹರಿಹರನ್, “ಇದು ಮನುಷ್ಯನ ಅಂಗಾಂಗಗಳ ಕಳ್ಳಸಾಗಣಿಕೆ ಕುರಿತಾದ ಸಿನಿಮಾ. ಈ ಚಿತ್ರದಲ್ಲಿ ಮಕ್ಕಳನ್ನು ಕಿಡ್ನಾಪ್ ಮಾಡಿ, ಅವರ ಅಂಗಾಂಗಗಳನ್ನು ಯಾವ ರೀತಿ ವಿದೇಶಕ್ಕೆ ಕಳ್ಳ ಸಾಗಾಣಿಕೆ ಮಾಡುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ’ ಎನ್ನುವುದು ನಿರ್ದೇಶಕರಮಾತು.
ತನಿಖೆ: ಸಂಪೂರ್ಣ ಹೊಸಬರೇ ಸೇರಿ ನಿರ್ಮಿಸಿರುವ “ತನಿಖೆ’ ಎಂಬ ಚಿತ್ರವೂ ಈ ವಾರ ತೆರೆಕಾಣುತ್ತಿದೆ.ಕಲಿಗೌಡ ಈ ಚಿತ್ರದ ನಿರ್ದೇಶನ, ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆರ್.ಡಿ. ಅನಿಲ್ ಈ ಚಿತ್ರದ ನಾಯಕ, ಚಂದನಾ ನಾಯಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Rapper Badshah: ಬಾಲಿವುಡ್ ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂಬ್ ಸ್ಪೋಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.