ಸಿದ್ಧಿ ಆಂತರ್ಯದಿಂದ ಸ್ಪುರಿಸುವುದು
Team Udayavani, Dec 19, 2020, 5:31 AM IST
ವಿಜ್ಞಾನ, ಪ್ರಣಯ, ಚೌರ್ಯ, ಸಂಗೀತ, ಕ್ರೀಡೆ, ಅಧ್ಯಾತ್ಮ – ಕ್ಷೇತ್ರ ಯಾವುದೇ ಆಗಿರಲಿ; ಪ್ರಾವೀಣ್ಯ ಸಿದ್ಧಿಸುವುದು ಮನಸ್ಸು – ಮೆದುಳಿನಿಂದ ಅಲ್ಲ. ಅದು ಸ್ಪುರಿಸುವುದು. ಅದು ಒಳಗಿನಿಂದ ಅರಳಬೇಕು.
ಜಪಾನಿನ ಕಥೆ ಇದು. ಅಲ್ಲೊಬ್ಬ ಕಳ್ಳನಿದ್ದ. ಅವನು ತಸ್ಕರ ವಿದ್ಯೆಯಲ್ಲಿ ಎಷ್ಟು ಪಾರಂಗತ ಎಂದರೆ ದೇಶದೆಲ್ಲೆಡೆ ಅವನ ಹೆಸರು ಪಸರಿಸಿತ್ತು. ಅವನ ಪ್ರಸಿದ್ಧಿ ಯಾವ ಮಟ್ಟಕ್ಕೆ ಏರಿತ್ತು ಎಂದರೆ, ಅವನಿಂದ ಕನ್ನ ಹಾಕಿಸಿ ಕೊಳ್ಳುವುದು ಪ್ರತಿಷ್ಠೆ ಎಂಬಂತಾಗಿತ್ತು.
ಕಾಲಾಂತರದಲ್ಲಿ ಅವನಿಗೂ ವಯಸ್ಸಾ ಯಿತು. ಒಂದು ದಿನ ಅವನ ಮಗ ಅವನ ಬಳಿಗೆ ಬಂದು, “ನಿಮ್ಮ ವಿದ್ಯೆಯನ್ನು ನನಗೂ ಕಲಿಸಿಕೊಡಿ ಅಪ್ಪಾ’ ಎಂದು ಕೇಳಿಕೊಂಡ. ಅದಕ್ಕೆ ತಂದೆ, “ಸರಿ, ಇವತ್ತು ರಾತ್ರಿ ನೀನೂ ಬಾ’ ಎಂದ. ಮಗನಿಗೆ ದಿಗಿಲಾಯಿತು, ಆದರೂ ಒಪ್ಪಿಕೊಂಡ.
ಇರುಳಾಯಿತು. ಅಪ್ಪ ಮಗ ಇಬ್ಬರೂ ಹೊರಟರು. ಅಪ್ಪ ಅಂದು ನಗರದ ಶ್ರೀಮಂತನೊಬ್ಬನ ಮಹ ಲನ್ನು ಆರಿಸಿಕೊಂಡಿದ್ದ. ಕಾರಿ ರುಳಿನಲ್ಲಿ ಅಲ್ಲಿಗೆ ತಲುಪಿದ ಮೇಲೆ ಅಪ್ಪ ಕನ್ನ ಹಾಕಲು ಆರಂಭಿಸಿದ. ವಯಸ್ಸಾದರೂ ನುರಿತ ಶಸ್ತ್ರಚಿಕಿತ್ಸಾ ತಜ್ಞನಂತೆ, ಪರಿಣತ ಪಿಟೀಲು ವಾದಕನಂತೆ ಅವನ ಕೈ ಮಹಲಿನ ಗೋಡೆಯಲ್ಲಿ ಕನ್ನ ಕೊರೆಯಿತು. ಇತ್ತ ಮಗನ ಕಾಲುಗಳು ಹೆದರಿಕೆಯಿಂದ ನಡುಗುತ್ತಿದ್ದವು.
ಆಮೇಲೆ ಅಪ್ಪ ಒಳ ನುಗ್ಗಿದ. ಮಗನೂ ಅಂಜುತ್ತಲೇ ಒಳಹೊಕ್ಕ. ಅಪ್ಪ ಕಗೂìಢ ಕತ್ತಲಿನಲ್ಲೂ ಚಾಲೂಕಾಗಿ ಅತ್ತಿತ್ತ ಚಲಿಸುತ್ತಿದ್ದ. ಮಗನೋ, ಈಗಲೋ ಆಗಲೋ ಕುಸಿಯು ವಂತಿದ್ದ. ಅವರು ತಿಜೋರಿಯಿದ್ದ ಸ್ಥಳವನ್ನು ತಲುಪಿದರು. ಅಲ್ಲಿ ಅಪ್ಪ ನಾಜೂಕಾಗಿ ತಿಜೋರಿಯ ಬಾಗಿಲು ತೆರೆದು ಮಗನನ್ನು ಒಳಹೊಗುವಂತೆ ಹೇಳಿದ. ಅದರಂತೆ ಮಗ ಒಳಹೊಕ್ಕ. ಅಪ್ಪ ಆ ಕೂಡಲೇ ಬಾಗಿಲು ಹಾಕಿ ಬೀಗ ಜಡಿದುಬಿಟ್ಟ. ಬಳಿಕ, “ಕಳ್ಳ… ಕಳ್ಳ’ ಎಂದು ಕೂಗುತ್ತ ಹೊರಗೋಡಿ ಬಿಟ್ಟ.
ಅಪ್ಪ ಮಾಡಿದ್ದು ಅರಿವಾಗುವಷ್ಟರಲ್ಲಿ ಕಾಲ ಮಿಂಚಿತ್ತು. ನಸುಕಿನ ಹೊತ್ತಿಗೆ ಮಗ ಮನೆಗೆ ಮರಳಿ ದಾಗ ಅಪ್ಪ ಹಾಯಾಗಿ ಗೊರಕೆ ಹೊಡೆಯು ತ್ತಿದ್ದ. ಅವನ ಹೊದಿಕೆ ಹಾರಿಸಿದವನೇ ಮಗ ಹೇಳಿದ, “ಎಂಥದ್ದಿದು ನೀವು ಮಾಡಿದ್ದು’. ಅಪ್ಪ ಆಕಳಿಸುತ್ತಲೇ ಹೇಳಿದ, “ನೀನು ಬಂದೆಯಲ್ಲ, ಬೇರೇನೂ ಹೇಳುವ ಅಗತ್ಯ ವಿಲ್ಲ’. ಆದರೆ ಮಗನಿಗೆ ತಡೆಯದು, “ನಾನು ಹೇಳಲೇ ಬೇಕು’ ಎಂದ. “ಆಯಿತು, ಹೇಳು’ ಎಂದ ಅಪ್ಪ ಕಳ್ಳ. ಮಗ ಆರಂಭಿಸಿದ, “ಎಲ್ಲಿಂದ ಅದು ಸ್ಪುರಿ ಸಿತೋ ಗೊತ್ತಿಲ್ಲ. ಅಲ್ಲಿಂದ ಪಾರಾಗುವ ಮಾರ್ಗ ಹೊಳೆ ಯಿತು…’. ಅಪ್ಪ ತಡೆದು ಹೇಳಿದ, “ಅದೇ ಅದೇ ಬೇಕಾದ್ದು. ಕ್ಷೇತ್ರ ಯಾವುದೇ ಆಗಿರಲಿ, ಆ ಸ್ಪುರಣೆಯೇ ಸಿದ್ಧಿ ತಂದುಕೊಡುತ್ತದೆ.’
ಮಗ ವಿವರಿಸಿದ, “ಎಲ್ಲರೂ ಹುಡುಕಾಟ ನಡೆ ಸುತ್ತಿದ್ದಾಗ ನಾನು ತಿಜೋರಿಯ ಒಳಗಿನಿಂದ ಸಾಕ್ಷಾತ್ ಬೆಕ್ಕಿನಂತೆ ಸದ್ದು ಮಾಡಿದೆ. ಬೆಕ್ಕು ಒಳಹೊಕ್ಕಿದೆ ಎಂದು ಕೊಂಡ ಮನೆಯಾಳು ಮೊಂಬತ್ತಿ ಹಿಡಿದು ಬಾಗಿಲು ತೆಗೆದ. ತತ್‌ಕ್ಷಣ ಮೊಂಬತ್ತಿಯನ್ನು ಊದಿ ಆರಿಸಿ ಓಟ ಕಿತ್ತೆ. ಎಲ್ಲರೂ ನನ್ನ ಹಿಂದೆ ಬಿದ್ದರು. ಇಷ್ಟರ ವರೆಗೆ ಓಡದಷ್ಟು ವೇಗದಲ್ಲಿ ಓಡಿದೆ. ಅಲ್ಲೊಂದು ಬಾವಿ ಸಿಕ್ಕಿತು. ಅದರ ಬದಿ ಯಲ್ಲೊಂದು ದೊಡ್ಡ ಕಲ್ಲಿತ್ತು. ಆಗ ಎಂಥ ಭೀಮಶಕ್ತಿ ಉಕ್ಕಿತ್ತು ಗೊತ್ತಾ, ಅದನ್ನೆತ್ತಿ ಬಾವಿ ಯೊಳಗೆ ಹಾಕಿದೆ. ಎಲ್ಲರೂ ಕಳ್ಳ ಬಾವಿಗೆ ಬಿದ್ದ ಎಂದುಕೊಂಡರು’ ಎಂದ ಮಗ.
ಅಪ್ಪ ಹೇಳಿದ, “ಸಿದ್ಧಹಸ್ತ ಎಂಬವ ಸಮಯಕ್ಕೆ ತಕ್ಕಂತೆ ಕಾರ್ಯಶೈಲಿ, ತಂತ್ರಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಅದು ಸನ್ನಿವೇಶಕ್ಕೆ ತಕ್ಕಂತೆ. ಅದಕ್ಕೆ ಸಿದ್ಧಸೂತ್ರ ಎಂದಿಲ್ಲ. ಅದು ನಡೆಯುವುದು ಅಂತ ಸ್ಫೂರ್ತಿ, ಅಂತಃಶಕ್ತಿಯಿಂದ. ನಾಳೆಯಿಂದ ಸ್ವಂತವಾಗಿ ವೃತ್ತಿ ಆರಂಭಿಸು…’
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.