ತಂತ್ರಜ್ಞಾನದ ವೇಗದಲ್ಲಿ ಸುಳ್ಳು ಸುದ್ದಿಗಳ ವಿಜೃಂಭಣೆ
ಡಾ| ಎಂ.ವಿ. ಕಾಮತ್ ಸ್ಮರಣಾರ್ಥ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉಪನ್ಯಾಸ
Team Udayavani, Dec 19, 2020, 6:25 AM IST
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತನಾಡಿದರು.
ಉಡುಪಿ: ಆಧುನಿಕ ತಂತ್ರ ಜ್ಞಾನದ ವೇಗದ ನಡುವೆ ಸುಳ್ಳು ಸುದ್ದಿಗಳು ವಿಜೃಂಭಿಸುತ್ತಿವೆ. ದಿ| ಎಂ.ವಿ. ಕಾಮತ್ ಅವರನ್ನು ಸ್ಮರಿಸುತ್ತ ಮೌಲ್ಯಾ ಧಾರಿತ ಪತ್ರಿಕಾರಂಗಕ್ಕೆ ಮತ್ತೆ ಹೊರಳಬೇಕಾಗಿದೆ. ಪತ್ರಿಕಾರಂಗದ ಪಾವಿತ್ರ್ಯ ವನ್ನು ಪುನರ್‌ಸ್ಥಾಪಿಸಬೇಕಿದ್ದು ಸ್ವಯಂ ನಿಯಂತ್ರಣವನ್ನು ವಿಧಿಸಿಕೊಳ್ಳಬೇಕಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾಧ್ಯಮ ರಂಗಕ್ಕೆ ಕರೆ ನೀಡಿದರು.
ಅವರು ಮಣಿಪಾಲದ ಡಾ| ಟಿಎಂಎ ಪೈ ಸಭಾಂಗಣದಲ್ಲಿ ಶುಕ್ರವಾರ ಉದಯವಾಣಿಯ ಮಾಧ್ಯಮ ಪಾಲುದಾರಿಕೆಯಲ್ಲಿ ಮಾಹೆಯ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಂಐಸಿ) ವತಿಯಿಂದ ಆಯೋಜಿಸಲಾದ ಸಂಸ್ಥೆಯ ಸ್ಥಾಪಕ ಗೌರವ ನಿರ್ದೇಶಕ ಡಾ| ಎಂ.ವಿ. ಕಾಮತ್ ಸ್ಮರಣಾರ್ಥ ದತ್ತಿ ಉಪನ್ಯಾಸವನ್ನು “ಪತ್ರಿಕಾ ರಂಗ: ನಿನ್ನೆ, ಇಂದು ಮತ್ತು ಮುಂದೆ’ ವಿಷಯದ ಕುರಿತು ವರ್ಚುವಲ್ ವಿಧಾನದಲ್ಲಿ ನಡೆಸಿಕೊಟ್ಟರು.
ಪತ್ರಿಕಾ ಸ್ವಾತಂತ್ರ್ಯ, ಸೆನ್ಸಾರ್‌ಶಿಪ್, ವರದಿಗಾರಿಕೆ ಕ್ರಮ, ಸಾಮಾಜಿಕ ಹೊಣೆ ಗಾರಿಕೆ, ಮೌಲ್ಯಗಳ ಕುಸಿತ, ನೈತಿಕತೆ, ಪೀತ ಪತ್ರಿಕೋದ್ಯಮ, ಸುಳ್ಳು ಸುದ್ದಿ, ಲಾಭಕ್ಕಾಗಿ ವರದಿಗಾರಿಕೆ, ಇಂಟರ್‌ನೆಟ್‌ನಿಂದ ಆಗುತ್ತಿರುವ ತೊಂದರೆ ಇವು ಮಾಧ್ಯಮ ಮತ್ತು ಪತ್ರಿಕಾರಂಗ ಎದುರಿಸುತ್ತಿರುವ ಸವಾಲುಗಳಾಗಿವೆ. ಪೀತ ಪತ್ರಿಕೋದ್ಯಮವು ಉತ್ತಮ ಆಕರ್ಷಕ ಶೀರ್ಷಿಕೆಗಳಿಂದ ಕೂಡಿ ತಪ್ಪು ಮಾಹಿತಿಯನ್ನು ಕೊಡುತ್ತಿವೆ. ಇತ್ತೀಚೆಗೆ ಚಲನಚಿತ್ರ ನಟರೊಬ್ಬರ ಆತ್ಮಹತ್ಯೆಯ ಸುದ್ದಿಯನ್ನು ವೈಭವೀಕರಿಸಲಾಯಿತು. ಇವೆಲ್ಲವೂ ಓದುಗರನ್ನು ಹೆಚ್ಚಿಸಿಕೊಳ್ಳಲು ಮಾಡುತ್ತಿರುವ ತಂತ್ರಗಳಾಗಿದ್ದು ಇವುಗಳನ್ನು ತಡೆಹಿಡಿಯಬೇಕಾಗಿದೆ ಎಂದು ಆಶಿಸಿದರು.
ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಮಾತನಾಡಿದರು. ಎಂಐಸಿ ನಿರ್ದೇಶಕಿ ಡಾ| ಪದ್ಮಾರಾಣಿ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರುತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ಅನುಪಾ ಲುವಿಸ್ ವಂದಿಸಿದರು. ಮಂಜುಳಾ ವೆಂಕಟನಾರಾಯಣ ಪರಿಚಯಿಸಿದರು.
ನ್ಯೂಸ್- ವ್ಯೂಸ್!
ಮಾಧ್ಯಮ ಮಿತ್ರರು ಸುದ್ದಿ ಮತ್ತು ಅಭಿಪ್ರಾಯಗಳ (ನ್ಯೂಸ್‌ಮತ್ತು ವ್ಯೂಸ್) ನಡುವೆ ಲಕ್ಷ್ಮಣ ರೇಖೆಯನ್ನು ಹಾಕಿಕೊಂಡಿರ ಬೇಕು. ದಿ| ಎಂ.ವಿ. ಕಾಮತ್ ಅವರೂ ಈ ಅಂತರ ಕಾಯ್ದು ಕೊಂಡಿದ್ದರು. ತಮ್ಮ ನೀತಿ ಮತ್ತು ಜೀವನ ಶೈಲಿಯಿಂದಾಗಿ ದೇಶ ಮತ್ತು ವಿದೇಶಗಳಲ್ಲೂ ಅವರು ಗೌರವಕ್ಕೆ ಪಾತ್ರರಾಗಿದ್ದರು ಎಂದು ನಾಯ್ಡು ಬಣ್ಣಿಸಿದರು.
ಜಂಕ್ ಫುಡ್‌ಗೆ ಬರೆ, ಯೋಗಕ್ಕೆ ಕರೆ
ಪ್ರಕೃತಿ ಮತ್ತು ಸಂಸ್ಕೃತಿ, ಮೌಲ್ಯ ಮತ್ತು ನೈತಿಕತೆಯನ್ನು ಪೋಷಿಸಬೇಕು. ದೈಹಿಕ ಕ್ಷಮತೆಗಾಗಿ ನಿತ್ಯ ಯೋಗ ಮಾಡಬೇಕು. ಜಂಕ್-ಇನ್‌ಸ್ಟಂಟ್ ಫುಡ್‌ಗಳನ್ನು ತ್ಯಜಿಸಿ ಉತ್ತಮ ಆಹಾರ ಸ್ವೀಕರಿಸಬೇಕು ಎಂದರು.
ಸಾಮಾಜಿಕ ಮಾಧ್ಯಮಗಳ ಆದಾಯದಲ್ಲಿ ಮುದ್ರಣಕ್ಕೂ ಪಾಲಿರಲಿ
ವೃತ್ತಪತ್ರಿಕೆಗಳಂತಹ ಸಾಂಪ್ರದಾಯಿಕ ಮಾಧ್ಯಮಗಳ ಆದಾಯವನ್ನು ಸಾಮಾಜಿಕ ಮಾಧ್ಯಮಗಳ ಕಂಪೆನಿಗಳು ಕಿತ್ತುಕೊಳ್ಳುತ್ತಿವೆ. ಹಾಗಾಗಿ ಕೆಲವು ರಾಷ್ಟ್ರಗಳಲ್ಲಿ ಇರುವಂತೆ ಸಾಮಾಜಿಕ ಮಾಧ್ಯಮಗಳ ಆದಾಯದಲ್ಲಿ ಮುದ್ರಣ ಮಾಧ್ಯಮಗಳಿಗೂ ಪಾಲು ದೊರಕುವಂಥ ನಿಯಮವನ್ನು ನಮ್ಮಲ್ಲೂ ಜಾರಿತರಬೇಕೆಂದು ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.
ಕಾಫಿ ಇಲ್ಲದೆ ಪತ್ರಿಕೆ ಓದುತ್ತೇನೆ!
ಇಂಟರ್‌ನೆಟ್‌ನ ಈ ಕಾಲಘಟ್ಟದಲ್ಲಿಯೂ ಕಾಫಿಯ ಸೇವನೆ ಜತೆ ವೃತ್ತಪತ್ರಿಕೆ ಓದನ್ನು ಲಕ್ಷಾಂತರ ಜನರು ಮುಂದುವರಿಸುತ್ತಿದ್ದಾರೆ. “ನಾನೂ ಕೂಡ ಮುಂಜಾನೆ ಪತ್ರಿಕೆಗಳನ್ನು ಓದುತ್ತೇನೆ, ಆದರೆ ಕಾಫಿ ಇಲ್ಲದೆ’ ಎಂದು ನಾಯ್ಡು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indrali ರೈಲ್ವೇ ನಿಲ್ದಾಣಕ್ಕೆ ಶೆಲ್ಟರ್ ಅಳವಡಿಕೆ
Deepavali ಹಿರಿಯರ ನೆನಪಿನ ಬೆಳಕು; ನರಕ ಚತುರ್ದಶಿಗೂ ಮೊದಲೇ ನಡೆಯುತ್ತದೆ ಸೈತಿನಕ್ಲೆನ ಪರ್ಬ
Udupi: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
Udupi: ಶ್ರೀ ಪುತ್ತಿಗೆ ಮಠದ ವತಿಯಿಂದ ನಟ ರಜನೀಕಾಂತ್ ಆಮಂತ್ರಣ
Udupi: ಗೀತಾರ್ಥ ಚಿಂತನೆ- 81: ಮೇಲ್ನೋಟದಲ್ಲಿ ಕಳಕಳಿ, ಒಳನೋಟದಲ್ಲಿ ರಾಜ್ಯಲೋಭ!
MUST WATCH
ಹೊಸ ಸೇರ್ಪಡೆ
Darshan; ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ನಟ: ಬಿಗಿ ಪೊಲೀಸ್ ಬಂದೋಬಸ್ತ್
Tulu Cinema: ವಿನೀತ್ ಕುಮಾರ್ ನಟನೆಯ “90 ಎಮ್ ಎಲ್” ಸಿನಿಮಾ ಮುಹೂರ್ತ
Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು
Tulu Cinema: “ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ
Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.