ಅಡಿಲೇಡ್ ನಲ್ಲಿ ಆಸೀಸ್ ವೇಗಿಗಳ ದಾಳಿಗೆ ಪತರುಗುಟ್ಟಿದ ಟೀಂ ಇಂಡಿಯಾ ಬ್ಯಾಟಿಂಗ್!
Team Udayavani, Dec 19, 2020, 11:01 AM IST
ಅಡಿಲೇಡ್: ಆಸೀಸ್ ವೇಗಿಗಳಾದ ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಜಲ್ ವುಡ್ ದಾಳಿಗೆ ನಲುಗಿದ ಟೀಂ ಇಂಡಿಯಾ ದ್ವಿತೀಯ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಕುಸಿತ ಕಂಡಿದೆ.
ಪಂದ್ಯ ಆರಂಭವಾಗಿ ಕೆಲವೇ ಕ್ಷಣಗಳಲ್ಲಿ ಭಾರತ ಸತತ ವಿಕೆಟ್ ಕಳೆದುಕೊಂಡಿತು. ಕೇವಲ 21.2 ಓವರ್ ನಲ್ಲಿ ಭಾರತ 36 ರನ್ ಗೆ 9 ವಿಕೆಟ್ ಕಳೆದುಕೊಂಡಿದೆ.
9 ರನ್ ಗೆ ಒಂದು ವಿಕೆಟ್ ಕಳೆದುಕೊಂಡಲ್ಲಿಂದ ತೃತೀಯ ದಿನದಾಟ ಆರಂಭಿಸಿದ ಭಾರತ ಮೊದಲು ನೈಟ್ ವಾಚ್ ಮ್ಯಾನ್ ಬುಮ್ರಾ ವಿಕೆಟ್ ಕಳೆದುಕೊಂಡಿತು. ಮಯಾಂಕ್ ಅಗರ್ವಾಲ್ ಕೂಡಾ 9 ರನ್ ಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದ ಪುಜಾರ, ಕೊಹ್ಲಿ, ರಹಾನೆ, ಸಹಾ ಕೂಡಾ ಹೆಚ್ಚು ಸಮಯ ವ್ಯರ್ಥ ಮಾಡಲಿಲ್ಲ.
ಕೊನೆಯಲ್ಲಿ ಶಮಿ ಗಾಯಗೊಂಡು ಮೈದಾನದಿಂದ ಹೊರನಡೆದರು. ಭಾರತ ಆಸೀಸ್ ಗೆ 90 ರನ್ ಗುರಿ ನೀಡಿದೆ. ಶಮಿ ಗಾಯಾಳಾಗಿರುವ ಕಾರಣ ಬೌಲಿಂಗ್ ನಲ್ಲೂ ಭಾರತಕ್ಕೆ ಹಿನ್ನಡೆಯಾಗಿದೆ. ಆಸೀಸ್ ನೆಲದಲ್ಲಿ ಆಡಿದ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಸೀಸ್ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.
ಆಸೀಸ್ ಪರ ಕಮಿನ್ಸ್ ಐದು ವಿಕೆಟ್ ಪಡೆದರೆ, ಹ್ಯಾಜಲ್ ವುಡ್ ನಾಲ್ಕು ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.