ಕುಂತ್ರೆ ನಿಂತ್ರೆ ಅದೇ ಧ್ಯಾನ, ಜೀವಕ್ಕಿಲ್ಲ ಸಮಾಧಾನ

| ಖರ್ಚು-ವೆಚ್ಚಕ್ಕಿಲ್ಲ ಕಡಿವಾಣ | ಹರಿಯುತ್ತಿದೆ ಹೆಂಡ-ಹಣದ ಹೊಳೆ | ದಾಬಾಗಳು ಹೌಸ್‌ಫುಲ್‌

Team Udayavani, Dec 19, 2020, 12:56 PM IST

Huballi-tdy-1

ಧಾರವಾಡ: ಕುಂತಲ್ಲೇ ಕೂರಲಾಗುತ್ತಿಲ್ಲ, ನಿಂತಲ್ಲೇ ನಿಲ್ಲಲಾಗುತ್ತಿಲ್ಲ. ಒಂದೊಂದು ಸದಸ್ಯ ಸ್ಥಾನಕ್ಕೂ ಕನಿಷ್ಠ ಹತ್ತತ್ತು ಜನ ಅಭ್ಯರ್ಥಿಗಳು. ಸೇರಿಗೆ ಸವ್ವಾ ಸೇರು, ನಿಂದು ಕರಿನೋಟಾದರೆ ನಂದು ಗುಲಾಬಿ ನೋಟು. ಒಟ್ಟಿನಲ್ಲಿ ನಾನು ಗೆಲ್ಲಲೇಬೇಕು. ಪಂಚಾಯಿತಿ ಗದ್ದುಗೆ ಏರಲೇಬೇಕು…

ಮೊದಲ ಹಂತದ ಚುನಾವಣೆಗೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದ್ದು, ಜಿಲ್ಲೆಯಗ್ರಾಪಂ ಕ್ಷೇತ್ರಗಳಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು ಇದೀಗ ಚುನಾವಣೆ ಗೆಲುವು ಮಂತ್ರ ಜಪಿಸುತ್ತಿದ್ದಾರೆ. ಅದಕ್ಕಾಗಿ ಜಾತಿ, ಹಣ, ಹೆಂಡ ಅಷ್ಟೇಯಲ್ಲ ಶಿರ ಸಾಷ್ಟಾಂಗ ನಮಸ್ಕಾರ ಹಾಕುತ್ತಿದ್ದಾರೆ.ವಿಧಾನಸಭೆ ಚುನಾವಣೆ ಅತ್ಯಂತ ತುರುಸು ಮತ್ತುಭರಾಟೆಯಿಂದ ನಡೆಯುವ ಚುನಾವಣೆ. ಆದರೆ ಈವರ್ಷದ ಗ್ರಾಪಂ ಚುನಾವಣೆ ಮಾತ್ರ ಹಿಂದೆ ಕಂಡುಕೇಳರಿಯದಷ್ಟು ತುರುಸಿನ ಕಣವಾಗಿ ಮಾರ್ಪಾಟಾಗಿದೆ. ಗರಿ ಗರಿ ನೋಟುಗಳು ಮತದಾರರ ಜೇಬಿಗೆ ಬೀಳುತ್ತಿವೆ. ಅಭ್ಯರ್ಥಿಗಳು ತಮ್ಮ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿದ್ದು, ಕಿರು ರಣತಂತ್ರ ಹೆಣೆಯುತ್ತಿದ್ದಾರೆ.

ಹಿಡನ್‌ ಅಜೆಂಡಾ: ಗೆಲುವು ಸಾಧ್ಯ ಎನ್ನುವ ಆತ್ಮವಿಶ್ವಾಸದಲ್ಲಿದ್ದವರು ಈಗಿನಿಂದಲೇ ಗ್ರಾಪಂಅಧ್ಯಕ್ಷ-ಉಪಾಧ್ಯಕ್ಷ ಗದ್ದುಗೆ ಮೇಲೆ ಕಣ್ಣಿಟ್ಟಿದ್ದು, ತಾವೇಅಧ್ಯಕ್ಷ ಸ್ಥಾನ ಅಲಂಕರಿಸಬೇಕು ಎನ್ನುವ ಮಹಾತ್ವಾಕಾಂಕ್ಷೆಪ್ರಬಲ ಅಭ್ಯರ್ಥಿಗಳಿಂದ ಕೇಳಿ ಬರುತ್ತಿದೆ. ಅಷ್ಟೇಯಲ್ಲ,ಚುನಾವಣೆಯಲ್ಲಿ ಮತ ಹಾಕುವಾಗಲೇ ವಿಚಾರ ಮಾಡಿ ಎನ್ನುವ ಸಂದೇಶವನ್ನು ಮತದಾರರಿಗೆ ಅಭ್ಯರ್ಥಿಗಳು ಕೆಲವು ಕಡೆಗಳಲ್ಲಿ ಇಡುತ್ತಾರೆ.ಇಂತಹ ವ್ಯಕ್ತಿ ಆಯ್ಕೆಯಾದರೆ, ಆತನೇ ಅಧ್ಯಕ್ಷಸ್ಥಾನ ಅಲಂಕರಿಸುವ ಅಪಾಯವಿದೆ. ಹೀಗಾಗಿನಮಗೆ ಮತ ಕೊಡಿ ಎನ್ನುವಂತಹ ಹಿಡನ್‌ಅಜೆಂಡಾಗಳು ಕೂಡ ಸದ್ಯಕ್ಕೆ ಗ್ರಾಪಂಗಳಲ್ಲಿ ಕೆಲಸಮಾಡುತ್ತಿವೆ.

ಖರ್ಚು-ವೆಚ್ಚಕ್ಕಿಲ್ಲ ಕಡಿವಾಣ: ವಿಧಾನಸಭೆ, ಲೋಕಸಭೆಚುನಾವಣೆಗಳಿಗೆ ವಿಧಿಸಿದಂತೆ ಗ್ರಾಪಂ ಚುನಾವಣೆಎದುರಿಸುವ ಅಭ್ಯರ್ಥಿಗೆ ಖರ್ಚು-ವೆಚ್ಚದ ಕಡಿವಾಣವೇ ಇಲ್ಲವಾಗಿದೆ. ಒಂದು ವಾರ್ಡ್‌ನಲ್ಲಿ ಸಾವಿರ ಮತಗಳಿದ್ದರೆ, ನಾಮಪತ್ರ ಸಲ್ಲಿಕೆ ದಿನದಿಂದಮತದಾನ ನಡೆಯುವ ವರೆಗೂ ಅಭ್ಯರ್ಥಿ ಬೇಕಾದಷ್ಟು ಜನರಿಗೆ ಮೃಷ್ಟಾನ್ನ ಭೋಜನದಿಂದ ಹಿಡಿದು ಕಾಣಿಕೆಯನ್ನೂ ಕೊಡಬಹುದು. ಮದ್ಯಸೇವನೆ, ಹಣ ಹಂಚುವಿಕೆ ಕಡ್ಡಾಯವಾಗಿ ನಿಷೇಧವಿದ್ದರೂ, ಹಳ್ಳಿಯ ಚುನಾವಣೆಗಳಲ್ಲಿ ಸ್ಥಳೀಯ ತಂತ್ರಗಾರಿಕೆಯಿಂದಲೇ ಹಣದ ಹೊಳೆ ಹರಿಯುತ್ತದೆ.

ಧಾರವಾಡದಲ್ಲಿರುವ ಅಬ್ದುಲ್‌ ನಜೀರ್‌ಸಾಬ್‌ ಪಂಚಾಯತ್‌ ರಾಜ್‌ ಪೀಠದಿಂದ ನಡೆಸಿದ ಅಧ್ಯಯನದ ಪ್ರಕಾರ, ಹಿಂದುಳಿದ ವರ್ಗ ಮತ್ತು ಆರ್ಥಿಕವಾಗಿ ಬಲವಿಲ್ಲದವರು ಕೇವಲ ಚಹಾಪಾನೀಯದಲ್ಲಿ ಚುನಾವಣೆ ಮುಗಿಸಬಹುದು. ಆದರೆಈ ಹಿಂದಿನ ಅವಧಿಯಲ್ಲಿ ಸಾಕಷ್ಟು ಹಣ ಮಾಡಿಕೊಂಡ ಅಭ್ಯರ್ಥಿ ಮರಳಿ ಚುನಾವಣೆಗೆ ಇಳಿದರೆ, ಗೆಲ್ಲುವುದಕ್ಕೆ ಆತ 8-10 ಲಕ್ಷ ರೂ. ವರೆಗೂ ಖರ್ಚು ಮಾಡುತ್ತಾನೆ. 30 ತಿಂಗಳು ಅಧಿಕಾರವಧಿ ಪೂರ್ಣಗೊಳಿಸಿದ 140 ಗ್ರಾಪಂ ಅಧ್ಯಕ್ಷರನ್ನು ಸಿಎಂಡಿಆರ್‌ ಸಂಸ್ಥೆ ಈ ಹಿಂದೆಯೇ ಸಮೀಕ್ಷೆ ಮಾಡಿದ್ದು, ಕಡಿಮೆ ಖರ್ಚು ಆಗಿದೆ. ಆದರೆಈ ಬಾರಿಯ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಲಕ್ಷಾಂತರ ರೂ.ಬಿಡ್ಡಿಂಗ್‌ ಆಗುವ ಸಾಧ್ಯತೆ ಇದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಮಂಗಳೂರು: ಪೊಲೀಸರ ಮೇಲೆ ದಾಳಿ ನಡೆಸಿ ಬಂದೂಕು ಮುರಿದ ನಾಲ್ವರು ಯುವಕರು

ದಾಬಾಗಳಲ್ಲಿ ಫುಲ್‌ ಪಾರ್ಟಿ : ಗ್ರಾಮಗಳಲ್ಲಿ ಸದ್ಯಕ್ಕೆ ಚುನಾವಣೆ ಪ್ರಚಾರ ರಂಗೇರಿದ್ದು, ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಅಭ್ಯರ್ಥಿಗಳು ದಾಬಾ ಪಾರ್ಟಿಗಳನ್ನು ಏರ್ಪಡಿಸುತ್ತಿದ್ದಾರೆ. ಕೋವಿಡ್ದಿಂದ ಸಂಕಷ್ಟಕ್ಕೆಒಳಗಾಗಿದ್ದ ದಾಬಾ ಮಾಲೀಕರು ಹಳ್ಳಿಗಳಿಂದಬರುವ ಗ್ರಾಪಂ ಅಭ್ಯರ್ಥಿಗಳ ಬೆಂಬಲಿಗರಿಗೆ ಪಂಚ ಪಕ್ವಾನ್ನಗಳನ್ನು ಮಾಡಿ ಉಣಬಡಿಸುತ್ತಿದ್ದು, ಸದ್ದಿಲ್ಲದೇ ಹಣ ಸಂಪಾದಿಸುತ್ತಿದ್ದಾರೆ. ಯುವಕರಿಗೆ ಗುಂಡು ಮತ್ತು ತುಂಡಿನ ವ್ಯವಸ್ಥೆ ಗ್ರಾಮಗಳ ಹೊರವಲಯದಲ್ಲಿ ಎಗ್ಗಿಲ್ಲದೇ ಸಾಗಿದ್ದರೆ, ಸಾರಾಯಿ ಹಂಚಿಕೆಯಂತೂ ಮಿತಿಮೀರಿದೆ.

ತಾಪಂ-ಜಿಪಂಗೆ ಈಗಲೇ ಟವೆಲ್‌! : ಗ್ರಾಪಂ ಚುನಾವಣೆ ತಾಪಂ ಮತ್ತು ಜಿಪಂ ಚುನಾವಣೆಗೆ ಸ್ಪರ್ಧಿಸುವವರ ಬೇರುಗಳನ್ನು ಗಟ್ಟಿಗೊಳಿಸುವ ಚುನಾವಣೆಗಳಾಗಿವೆ. ಹೀಗಾಗಿ ಮುಂದಾಲೋಚನೆಯಲ್ಲಿ ತೊಡಗಿರುವ ತಾಪಂ-ಜಿಪಂ ಚುನಾವಣೆ ಅಕಾಂಕ್ಷಿಗಳು ಈಗಿನಿಂದಲೇ ಗ್ರಾಪಂನಲ್ಲಿ ತಮ್ಮ ಅಭ್ಯರ್ಥಿಗಳನ್ನು ಗಟ್ಟಿಗೊಳಿಸುತ್ತಿದ್ದಾರೆ. ಅದಕ್ಕಾಗಿ ತಕ್ಕಮಟ್ಟಿನ ಹಣಕಾಸು ನೆರವು, ಜಾತಿ ಬೆಂಬಲಿಗರ ಮೂಲಕ ಮತ ಹಾಕಿಸುವುದು ಕೂಡ ಈಗಲೇ ನಡೆದಿದೆ. ಹಿಂದೆ ಜಿಪಂನಲ್ಲಿ ಸೋಲುಂಡ ಅಭ್ಯರ್ಥಿಗಳೂಸದ್ಯಕ್ಕೆ ಕಣದಲ್ಲಿರುವ ಗ್ರಾಪಂ ಅಭ್ಯರ್ಥಿಗಳನ್ನು ಪಕ್ಷವಾರು ಬೆಂಬಲಿಸುತ್ತಿದ್ದಾರೆ. ಮೇಲ್ನೋಟಕ್ಕೆರಾಜಕೀಯ ಪಕ್ಷಗಳ ಪ್ರಭಾವ ಇಲ್ಲದ ಚುನಾವಣೆಯಾದರೂ ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳು ಹೆಚ್ಚು ಕಡಿಮೆ ಎಲ್ಲಾ ವಾರ್ಡ್‌ಗಳಲ್ಲೂ ಪರಸ್ಪರ ಪ್ರಬಲ ಅಭ್ಯರ್ಥಿಗಳಾಗಿ ಬಿಂಬಿತವಾಗುತ್ತಿದ್ದಾರೆ.

ಹಣ-ಹೆಂಡದ ಹಂಚಿಕೆ, ಖಂಡದ ಊಟಗಳ ಪಾರ್ಟಿಗಳು ಗ್ರಾಮಸ್ವರಾಜ್ಯ ಪರಿಕಲ್ಪನೆಗೆ ವಿರುದ್ಧವಾಗಿವೆ. ಆದರೆ, ಸದ್ಯಕ್ಕೆ ಇಂತಹ ಸನ್ನಿವೇಶಗಳು ಗ್ರಾಮಗಳಲ್ಲಿ ಸಾಮಾನ್ಯ ಎನ್ನುವ ಹಂತಕ್ಕೆ ಎಲ್ಲರೂ ತಲುಪಿಯಾಗಿದೆ. ಆದರೆ ಸಾಮಾಜಿಕ ಜವಾಬ್ದಾರಿ ಅರಿತವರು ಸದಸ್ಯರಾದರೆ ಗ್ರಾಮಗಳ ಭವಿಷ್ಯ ಉಜ್ವಲವಾಗುತ್ತದೆ. -ಡಾ| ನಯನತಾರಾ, ಪಂಚಾಯತ್‌ರಾಜ್‌ ತಜ್ಞರು

ಗ್ರಾಪಂ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಚಿನ್ಹೆಗಳು ಇಲ್ಲದೇ ಇರಬಹುದು. ಆದರೆ ಚುನಾವಣೆ ಖರ್ಚು-ವೆಚ್ಚಕ್ಕೆ ಕಡಿವಾಣ ಹಾಕಲೇಬೇಕು. ಇಲ್ಲವಾದರೆ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಅರ್ಥ ಬರುವುದಿಲ್ಲ. ಬಸವಪ್ರಭು ಹೊಸಕೇರಿ, ಗಾಂಧೀವಾದಿಗಳು

 

ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.