ದತ್ತು ಶಾಲೆಯಲ್ಲಿ ಶಾಸಕ ಹಿಟ್ನಾಳ “ಯೋಜನೆ’

ಮೂರು ಶಾಲೆಗಳಿಗೆ ಬೇಕಿದೆ ಸ್ಮಾರ್ಟ್‌ ಕ್ಲಾಸ್‌,ಕೊಠಡಿ, ಮೇಲ್ಛಾವಣಿ, ಕಿಟಕಿಗಳ ದುರಸ್ತಿ

Team Udayavani, Dec 19, 2020, 4:35 PM IST

ದತ್ತು ಶಾಲೆಯಲ್ಲಿ ಶಾಸಕ ಹಿಟ್ನಾಳ “ಯೋಜನೆ’

ಕೊಪ್ಪಳ: ರಾಜ್ಯ ಸರ್ಕಾರ ಆರಂಭಿಸಿದ ಶಾಲೆಗಳ ದತ್ತು ಯೋಜನೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಅಭಿವೃದ್ಧಿ ಮಾಡಲು 3 ಶಾಲೆಗಳನ್ನು ದತ್ತು ಪಡೆದಿದ್ದಾರೆ. ಇನ್ನೂ ಅನುದಾನ ಹಂಚಿಕೆ ಮಾಡಿಲ್ಲವಾದರೂ ಶಾಲಾಭಿವೃದ್ಧಿಗೆ ರೂಪುರೇಷೆ ತಯಾರಿಗೆ ಸೂಚನೆ ನೀಡಿದ್ದಾರೆ. ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯ ಕರ್ನಾಟಕ ಪಬ್ಲಿಕ್‌ ಶಾಲೆ, ಅಳವಂಡಿಯ ಸಿಪಿಎಸ್‌ ಶಾಲೆ, ಹಿಟ್ನಾಳದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆ ಮಾಡಿಕೊಂಡಿದ್ದು, ಅಭಿವೃದ್ಧಿ ಕಾರ್ಯಕ್ಕೆ ಸಿದ್ಧತೆಮಾಡಿಕೊಳ್ಳುತ್ತಿದ್ದಾರೆ. ಶಾಸಕರಿಗೆ ಸರ್ಕಾರ ಕೊಡುವ ಕ್ಷೇತ್ರಾಭಿವೃದ್ಧಿ ಅನುದಾನದಲ್ಲೇ ದತ್ತು ಶಾಲೆ ಅಭಿವೃದ್ಧಿ ಮಾಡಬೇಕಿದೆ.

ದತ್ತು ಪಡೆದ ಮೂರು ಶಾಲೆಗಳಲ್ಲಿಬಹುಮುಖ್ಯವಾಗಿ ಕೊಠಡಿಗಳದ್ದೇ ಸಮಸ್ಯೆಯಿದೆ. ಶಾಲಾ ಕೊಠಡಿಗಳುಶಿಥಿಲಾವಸ್ಥೆ ತಲುಪಿವೆ. ಕೆಲವು ಶಾಲೆಗಮೇಲ್ಛಾವಣಿ ಪದೇ ಪದೆ ಉದುರಿ ಮಕ್ಕಳ ಮೇಲೆ ಬೀಳುತ್ತಿದೆ. ಇದರಿಂದವಿದ್ಯಾರ್ಥಿಗಳು ಆತಂಕದಲ್ಲೇ ಪಾಠ ಕೇಳುವಂತ ಸ್ಥಿತಿಯಿದೆ. ಶಿಕ್ಷಕರೂ ಸಹಿತ ಮಕ್ಕಳ ಯೋಗ ಕ್ಷೇಮ ನೋಡುವ ಹೊಣೆಗಾರಿಕೆಯೂ ಹೆಚ್ಚಾಗಿದೆ. ಇದಲ್ಲದೇ ಶೌಚಾಲಯ ಹಾಗೂ ಕುಡಿಯುವ ನೀರು, ಗ್ರಂಥಾಲಯ, ಸ್ಮಾರ್ಟ್‌ ಕ್ಲಾಸ್‌ಗಳ ಅಗತ್ಯವಿದೆ. ಒಟ್ಟಿನಲ್ಲಿ ಶಾಸಕರು ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿಯೇ ದತ್ತು ಪಡೆದ ಶಾಲೆಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಿದೆ. ಶಿಕ್ಷಣ ಇಲಾಖೆ ಇನ್ನೂ ಕ್ರಿಯಾಯೋಜನೆ ರೂಪಿಸಿಲ್ಲ. ಶಾಸಕರು ಶಾಲೆಯಲ್ಲಿಕೈಗೊಳ್ಳಬೇಕಾದ ಯೋಜನೆಗಳ ಕುರಿತು ಮಾಹಿತಿ ಕೇಳಿದೆ. ಶಾಲೆಯಲ್ಲಿನಸಮಸ್ಯೆಗಳ ಕುರಿತು ಶಾಸಕರು ಕಾಳಜಿ ವಹಿಸುವ ಜೊತೆಗೆ ಅಭಿವೃದ್ಧಿಗೆ ಒತ್ತು ನೀಡಿ ಮಕ್ಕಳ ಶಿಕ್ಷಕಣಕ್ಕೆ ಆದ್ಯತೆ ನೀಡಬೇಕಿದೆ.

ಹಿಟ್ನಾಳ ಶಾಲೆಗೆ ಬೇಕಿದೆ ಸ್ಮಾರ್ಟ್‌ ಕ್ಲಾಸ್‌ :  ತಾಲೂಕಿನ ಹಿಟ್ನಾಳ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 463 ವಿದ್ಯಾರ್ಥಿಗಳ ಹಾಜರಾತಿ ಇದೆ. ವಿದ್ಯಾರ್ಥಿಗಳಿಗೆ ಆಧುನಿಕತೆಗೆ ತಕ್ಕಂತೆ ಹೈಟೆಕ್‌ ಕ್ಲಾಸ್‌ ಮಾಡಬೇಕಿದೆ. ಸ್ಮಾರ್ಟ್‌ ಕ್ಲಾಸ್‌ಸಹಿತ ಅವಶ್ಯವಿದೆ. ಇರುವ ಕೊಠಡಿಗಳಲ್ಲೇ ಅದಕ್ಕೆ ಆದ್ಯತೆ ನೀಡಿದರೆ ತುಂಬ ನೆರವಾಗಲಿದೆ. ಈ ಶಾಲಾ ಕಟ್ಟಡಗಳ ಮೇಲ್ಛಾವಣಿ ಪದೇ ಪದೆ ಉದುರುತ್ತಿವೆ. ಮೇಲ್ಛಾವಣಿ ರಿಪೇರಿ ಕಾರ್ಯ ನಡೆಯಬೇಕಿದೆ. ಗ್ರಂಥಾಲಯ, ಸಭಾಭವನ, ಕಾರ್ಯಾಲಯ ಮಾಡಬೇಕಿದೆ.ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಕೊಠಡಿಮಾಡಬೇಕಿದೆ. ವಿಜ್ಞಾನ ಶಿಕ್ಷಕರ ಕೊರತೆಯಿದ್ದು ಅವರ ನೇಮಕವೂನಡೆಯಬೇಕಿದೆ ಎಂದೆನ್ನುತ್ತಿದೆ ಶಾಲಾ ಆಡಳಿತ ವರ್ಗ. ಶಾಸಕರಾಘವೇಂದ್ರ ಹಿಟ್ನಾಳ ಅವರು ಇದೇ ಗ್ರಾಮದವರಾಗಿದ್ದರಿಂದ ಅವುಗಳ ಬಗ್ಗೆ ಕಾಳಜಿ ವಹಿಸಿ ವಿದ್ಯಾರ್ಥಿಗಳಿಗೆ ಅತಿ ಅವಶ್ಯವಿರುವ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಬೇಕಿದೆ.

ನಮ್ಮ ಶಾಲೆ ಮೇಲಂತಸ್ತಿನ ಕೊಠಡಿಗಳ ಮೇಲ್ಛಾವಣಿ ಹಾಳಾಗಿದೆ. ಕಿಟಕಿಗಳು ದುರಸ್ತಿಯಲ್ಲಿವೆ. ಅವು ರಿಪೇರಿಯಾಗಬೇಕಿದೆ. ಇದಲ್ಲದೇ ಗ್ರಂಥಾಲಯ, ಸ್ಮಾರ್ಟ್‌ ಕ್ಲಾಸ್‌ಸೇರಿ ಗಾರ್ಡನ್‌, ರ್ಯಾಕ್‌ ವ್ಯವಸ್ಥೆ ಮಾಡಬೇಕಿದೆ. ಇಲ್ಲಿ ಓರ್ವವಿಜ್ಞಾನ ಶಿಕ್ಷಕರ ಕೊರತೆಯಿದೆ. ಅವರನ್ನು ನಿಯೋಜಿಸಬೇಕಿದೆ.- ಬೇನಾಳಪ್ಪ ದೊಡ್ಡಮನಿ, ಹಿಟ್ನಾಳ ಎಂಎಚ್‌ಪಿಎಸ್‌ ಶಾಲೆ ಮುಖ್ಯಶಿಕ್ಷಕ

ಅಳವಂಡಿ ಶಾಲೆಗೆ ಬೇಕು ಶೌಚಾಲಯ  : ಅಳವಂಡಿ ಸಿಪಿಎಸ್‌ ಶಾಲೆ 233 ವಿದ್ಯಾರ್ಥಿಗಳ ಹಾಜರಾತಿ ಹೊಂದಿದ್ದು, ಇಲ್ಲಿ ಶೌಚಾಲಯದ ಅತಿ ಅವಶ್ಯಕತೆಯಿದೆ. ಈಗಿರುವ ಶೌಚಾಲಯದಲ್ಲಿ ಸೌಲಭ್ಯಗಳಿಲ್ಲ. ಇನ್ನೂಮಕ್ಕಳು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಅಗತ್ಯವಿದೆ.ಇನ್ನು ಕನಿಷ್ಟವೆಂದರೂ 50-60 ಬೆಂಚ್‌ಗಳು ಬೇಕಾಗುತ್ತವೆ.ಇನ್ನೂ ನಲಿ-ಕಲಿ ಇಲ್ಲಿದ್ದು, ಅವುಗಳು ಸೇರಿ ಸ್ಮಾರ್ಟ್‌ ಕ್ಲಾಸ್‌ ಶಾಲೆಗಳ ಅಗತ್ಯವಿದೆ. ಶುದ್ಧ ಕುಡಿಯುವ ನೀರಿನ ಘಟಕದುರಸ್ತಿಯಲ್ಲಿದೆ. ಅಲ್ಲದೇ ಬರೊಬ್ಬರಿ 70 ವರ್ಷಗಳ ಹಳೆಯದಾದ ಈ ಶಾಲೆ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. 4 ಕೊಠಡಿ ಮೇಲ್ಛಾವಣಿ ಪದರು ಉದುರುತ್ತಿವೆ. ಅವುಗಳ ರಿಪೇರಿ ಕಾರ್ಯ ನಡೆಯಬೇಕಿದೆ. 1-3ನೇ ತರಗತಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಮ್ಯಾಟ್‌ ವ್ಯವಸ್ಥೆ ಅಗತ್ಯವಿದೆ. ಗ್ರಂಥಾಲಯ, ಪೀಠೊಪಕರಣ ಬೇಕಾಗಿದೆ.

ನಮ್ಮ ಶಾಲೆ ಕೊಠಡಿಗಳ ಮೇಲ್ಛಾವಣಿ ಉದುರಿ ಮಕ್ಕಳಿಗೆ ತೊಂದರೆಯಾಗುತ್ತಿದೆ. ಇದಲ್ಲದೇ ಸ್ಮಾರ್ಟ್ ಕ್ಲಾಸ್‌, ಶೌಚಾಲಯ ನಿರ್ಮಾಣ ಮಾಡುವುದು ಬಾಕಿಯಿದೆ. ನಮ್ಮ ಶಾಲೆ ಶಾಸಕರು ದತ್ತು ಪಡೆದಿದ್ದು ಸಂತಸ ತಂದಿದೆ. ಅವರು ಶಾಲೆಗೆ ಭೇಡಿ ನೀಡಿದ ವೇಳೆ ಇಲ್ಲಿನ ಹಲವು ಸಮಸ್ಯೆಗಳ ಕುರಿತು ಅವರ ಗಮನಕ್ಕೆ ತರಲಿದ್ದೇವೆ. – ಎ. ಶಾಂಬಾಚಾರಿ, ಅಳವಂಡಿ ಶಾಲೆ ಮುಖ್ಯಶಿಕ್ಷಕ

ಹಿರೇಸಿಂದೋಗಿ ಕ. ಪಬ್ಲಿಕ್‌ ಶಾಲೆ : ತಾಲೂಕಿನ ಹಿರೇಸಿಂದೋಗಿ ಪಬ್ಲಿಕ್‌ ಶಾಲೆ 600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿ ಹೊಂದಿದೆ. ಈಶಾಲೆ 50 ವರ್ಷ ಹಳೆಯದಾಗಿದ್ದು, ಇಲ್ಲಿ 15 ಕೊಠಡಿಶಿಥಿಲಾವಸ್ಥೆಯಲ್ಲಿವೆ. ಇವುಗಳ ತೆರವಿಗೆ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಕ-ಕ ಮಂಡಳಿಯಿಂದ 2 ಕೋಟಿ ಅನುದಾನ ಮಂಜೂರಾಗಿದೆ. ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಅಗತ್ಯವಾಗಿ 10-11 ಕೊಠಡಿಗಳು ನಿರ್ಮಾಣವಾಗಬೇಕಿದೆ. ಗ್ರಂಥಾಲಯ ನಿರ್ಮಾಣ, ಸ್ಮಾರ್ಟ್‌ ಕ್ಲಾಸ್‌, ಪ್ರಯೋಗಾಲಯ, ಕಂಪ್ಯೂಟರ್‌ ಕೊಠಡಿ ಅವಶ್ಯವಾಗಿದೆ. ಈ ಬಗ್ಗೆ ಶಾಸಕರು ಗಮನ ನೀಡಬೇಕಿದೆ.

ನಮ್ಮ ಶಾಲಾ ಕೊಠಡಿಗಳು ತುಂಬಹಳೆಯದಾಗಿವೆ. ಅವುಗಳನ್ನು ನೆಲಸಮಗೊಳಿಸಿ15 ಕೊಠಡಿ ನಿರ್ಮಾಣ ಮಾಡುವ ಅಗತ್ಯವಿದೆ.ಇದಲ್ಲದೇ, ಗ್ರಂಥಾಲಯ, ಸ್ಮಾರ್ಟ್‌ ಕ್ಲಾಸ್‌ ಸೇರಿಗಾರ್ಡನ್‌ ನಿರ್ಮಾಣ ಮಾಡಬೇಕಿದೆ. ಇಲ್ಲಿನ  ಸಮಸ್ಯೆ ಕುರಿತು ಶಾಸಕರ-ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದೇವೆ.- ದೇವೇಂದ್ರಪ್ಪ ಕುರಡಗಿ, ಹಿರೇಸಿಂದೋಗಿ ಶಾಲೆ ಮುಖ್ಯಶಿಕ್ಷಕ

ನನ್ನ ಕ್ಷೇತ್ರದಲ್ಲಿ ಮೂರು ಶಾಲೆಗಳನ್ನು ದತ್ತು ಪಡೆದಿದ್ದೇನೆ. ಆ ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುವೆ. ಶಾಲೆಗಳಿಗೆ ಬೇಕಾದ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಏನು ಬೇಕೋಅದೆಲ್ಲವೂ ಮಾಡುವೆ. ಶಾಲಾ ಅಭಿವೃದ್ಧಿಗೆ ಯೋಜನೆ ರೂಪಿಸಲು ಸೂಚನೆ ನೀಡಿದ್ದೇನೆ. – ರಾಘವೇಂದ್ರ ಹಿಟ್ನಾಳ, ಕೊಪ್ಪಳ ಶಾಸಕ

 

ದತ್ತು ಕಮ್ಮಾರ

ಟಾಪ್ ನ್ಯೂಸ್

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

3-tavaragera

Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್

4-gangavathi

Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ

12-koppala

Koppala ಗವಿಮಠ ಜಾತ್ರೆಗೆ ನಟ ಅಮಿತಾಬ್‌ ಬಚ್ಚನ್‌?

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

India’s first FIP ​​Padel tournament begins

FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.