ವೀರೇಂದ್ರ ಪಾಟೀಲ-ಧರ್ಮಸಿಂಗ್ ಸ್ಫೂರ್ತಿ
Team Udayavani, Dec 19, 2020, 5:04 PM IST
ಕಲಬುರಗಿ: ಮುಖ್ಯಮಂತ್ರಿಗಳಾಗಿದ್ದ ದಿ. ವೀರೇಂದ್ರ ಪಾಟೀಲ ಮತ್ತು ದಿ. ಎನ್. ಧರ್ಮಸಿಂಗ್ ನಾಡು ಕಂಡ ಅಪ್ರತಿಮ, ಸಾತ್ವಿಕ ರಾಜಕಾರಣಿಗಳಾಗಿದ್ದರು.ಇಬ್ಬರು ನಾಯಕರು ಪ್ರತಿಯೊಬ್ಬರಿಗೂ ಮಾದರಿಮತ್ತು ಸ್ಫೂರ್ತಿಯಾಗಿದ್ದರು ಎಂದು ಮಾಜಿ ಶಾಸಕ ಕೈಲಾಸನಾಥ ಪಾಟೀಲ ಹೇಳಿದರು.
ನಗರದ ಪಿಡಿಎ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಹೈದ್ರಾಬಾದ-ಕರ್ನಾಟಕ ಶಿಕ್ಷಣಸಂಸ್ಥೆ ಸಹಯೋಗದಲ್ಲಿ ಅಂಚೆ ಇಲಾಖೆಹೊರ ತಂದ ವೀರೇಂದ್ರ ಪಾಟೀಲ ಮತ್ತುಧರ್ಮಸಿಂಗ್ ಭಾವಚಿತ್ರಯುಳ್ಳ ವಿಶೇಷ ಅಂಚೆಲಕೋಟೆಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಉಭಯ ನಾಯಕರು ಅಪರೂಪದ ವ್ಯಕ್ತಿತ್ವ ಹೊಂದಿದ್ದರು. ಹೈ.ಕ ಶಿಕ್ಷಣ ಸಂಸ್ಥೆ ಮತ್ತುರಾಜ್ಯದ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ.ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಅಧ್ಯಯನ ನಡೆಸಬೇಕು. ಅವರು ಮಾಡಿದ ಕಾರ್ಯಗಳು ದಾಖಲೀಕರಣವಾಗಬೇಕು. ವಿಶ್ವವಿದ್ಯಾಲಯಗಳಲ್ಲಿ ಈ ಇಬ್ಬರು ಮಾಜಿ ಮುಖ್ಯಮಂತ್ರಿಗಳಅಧ್ಯಯನ ಪೀಠ ಸ್ಥಾಪಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಫಜಲಪುರ ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕಾಣಲುವೀರೇಂದ್ರ ಪಾಟೀಲ ಮತ್ತು ಧರ್ಮಸಿಂಗ್ ಸಾಕಷ್ಟುಶ್ರಮಿಸಿದ್ದಾರೆ. ಪ್ರಗತಿಗೆ ತಮ್ಮದೇ ಆದ ಕೊಡುಗೆನೀಡಿದ್ದಾರೆ. ಈ ನಾಯಕರ ಅಧ್ಯಯನ ಪೀಠಗಳಸ್ಥಾಪನೆ ಅಗತ್ಯವಾಗಿದೆ ಎಂದು ಕೈಲಾಸನಾಥರಹೇಳಿಕೆಗೆ ಧ್ವನಿಗೂಡಿಸಿದರು. ಅಲ್ಲದೇ, ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಒತ್ತಡ ಹೇರುವುದಾಗಿ ಹೇಳಿದರು.
ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕರಾದ ಜೇವರ್ಗಿ ಶಾಸಕ ಡಾ| ಅಜಯಸಿಂಗ್ ಮಾತನಾಡಿ,ವಿರೇಂದ್ರ ಪಾಟೀಲ ಮತ್ತು ಧರ್ಮಸಿಂಗ್ ಜನಪರಕೆಲಸ ಮಾಡಿದ್ದಾರೆ. ಧೀಮಂತ ನಾಯಕರು. ತಮ್ಮ ತಂದೆ ಧರ್ಮಸಿಂಗ್ ನಮ್ಮನ್ನು ಅಗಲುವ ಮುನ್ನ ನಡೆದ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲೇ ಇದು ನನ್ನ ಕೊನೆ ಕಾರ್ಯಕ್ರಮ ಎಂದು ಹೇಳಿದ್ದರು. ನಂತರ ತಮ್ಮ ಸ್ನೇಹಿತರನ್ನು ಅವರೇ ಖುದ್ದು ಆಹ್ವಾನಿಸಿ ಮಾತನಾಡಿದ್ದರು. ಕೊನೆ ಕಾರ್ಯಕ್ರಮ ಎಂದಾಗಹಾಗೆ ಅನ್ನಬೇಡಿ ಅಂತಿದ್ದೆವು. ಆದರೆ, ಅದಾದ ಆರೇಳು ತಿಂಗಳಿಗೆ ಅಗಲಿದರು ಎಂದು ಭಾವುಕರಾದರು.
ಹೈ.ಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಭೀಮಾಶಂಕರ ಬಲಗುಂದಿ ಮಾತನಾಡಿ, ಅಂಚೆ ಲಕೋಟೆಸಂಪರ್ಕದ ಕೊಂಡಿಯಾಗಿವೆ. ಈಗ ಮೊಬೈಲ್ ಬಂದ ಬಳಿಕ ಒಂದಿಷ್ಟು ಬೇಡಿಕೆ ಕಡಿಮೆಯಾಗಿದೆ. ಆದರೂ, ಅಂಚೆಯೇ ದೇಶದ ಜನರ ಬಾಂಧವ್ಯದ ಬೆಸುಗೆ ಕೊಂಡಿಯಂತೆ ಕೆಲಸ ಮಾಡುತ್ತಿದೆ. ವೀರೇಂದ್ರಪಾಟೀಲ ಮತ್ತು ಧರ್ಮಸಿಂಗ್ ಭಾವಚಿತ್ರವುಳ್ಳಲಕೋಟೆಗಳು ಹೊರತಂದ ಕಾರ್ಯ ಶ್ಲಾ ನೀಯ ಎಂದರು.
ವೀರೇಂದ್ರ ಪಾಟೀಲರ ಲಕೋಟೆಗಳನ್ನು ಅವರ ಪುತ್ರಿ ಲಲಿತಾ ಬಿ.ಜವಳಿ ಮತ್ತು ಎನ್.ಧರ್ಮಸಿಂಗ್ ಅವರ ಭಾವಚಿತ್ರ ಸಹಿತ ವಿಶೇಷ ಅಂಚೆ ಲಕೋಟೆಗಳನ್ನು ಅವರ ಪತ್ನಿ ಪ್ರಭಾವತಿ ಧರ್ಮಸಿಂಗ್ ಬಿಡುಗಡೆಮಾಡಿದರು. ಇದಕ್ಕೂ ಮುನ್ನ ಅಂಚೆ ಇಲಾಖೆಅಧಿಕಾರಿ ವಿಠuಲ್ ಚಿತಕೋಟಿ ಲಕೋಟೆಗಳನ್ನುಕುಟುಂಬದವರಿಗೆ ಹಸ್ತಾಂತರಿಸಿದರು. ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಂಸದ ಡಾ| ಬಿ.ಜಿ.ಜವಳಿ, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಧರ್ಮಸಿಂಗ್,ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಎಚ್‌ಕೆಇ ಉಪಾಧ್ಯಕ್ಷ ಡಾ| ಶಿವಾನಂದ ದೇವರಮನಿ,ಪದಾಧಿಕಾರಿಗಳಾದ ನಿತೀನ ಜವಳಿ, ಗಂಗಾಧರಎಲಿ, ಡಾ| ಶರಣಬಸಪ್ಪ ಕಾಮರೆಡ್ಡಿ, ಸಂಪತ್ತಕುಮಾರಲೋಯಾ, ವಿಜಯಕುಮಾರ ದೇಶಮುಖ, ಅರುಣಕುಮಾರ ಎಂ.ಪಾಟೀಲ, ಉದಯ ಕುಮಾರ ಚಿಂಚೋಳಿ, ಅನುರಾಧಾ ದೇಸಾಯಿ, ಡಾ| ನಾಗೇಂದ್ರಮಂಠಾಳೆ, ಸತೀಶ ಹಡಗಲಿಮಠ, ಸಂಜಯಮಾಕಲ್, ಮುಖಂಡರಾದ ಸಿ.ಬಿ. ಪಾಟೀಲಒಕಳಿ, ನೀಲಕಂಠ ಮೂಲಗೆ, ನಾರಾಯಣರಾವ್ ಕಾಳೆ, ವಿಜಯಕುಮಾರ ಪಾಟೀಲ ಹಂಗರಗಿ, ಸಂತೋಷ ಬಿಲಗುಂದಿ, ಶರಣು ಬಿಲ್ಲಾಡ ಪಾಲ್ಗೊಂಡಿದ್ದರು.
ಅಜಯಸಿಂಗ್ ಮೈಸ್ಟ್ಯಾಂಪ್ : ಜೇವರ್ಗಿ ಶಾಸಕ ಡಾ| ಅಜಯಸಿಂಗ್ ಭಾವಚಿತ್ರವಿರುವ ವಿಶೇಷ ಅಂಚೆ ಚೀಟಿಗಳನ್ನು(ಮೈ ಸ್ಟಾಂಪ್) ಬಿಡುಗಡೆ ಮಾಡಲಾಯಿತು.ಇದು ಸ್ವತಃ ಅಜಯಸಿಂಗ್ ಅವರಿಗೆ ಅಚ್ಚರಿ ಕೊಡುಗೆ ನೀಡಿದಂತಾಯಿತು. ನನ್ನ ಚಿತ್ರವಿರುವಅಂಚೆ ಚೀಟಿ ಹೊರ ತಂದಿರುವುದು ಆಶ್ಚರ್ಯವಾಗಿದೆ ಎಂದು ಶಾಸಕ ಡಾ| ಅಜಯಸಿಂಗ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
ಗಮನ ಬೇರೆಡೆ ಸೆಳೆದು ಚಿನ್ನಾಭರಣ, ಹಣ ಕಳ್ಳತನ: ಓಜಿಕುಪ್ಪಂ ಗ್ಯಾಂಗ್ ಸದಸ್ಯರ ಸೆರೆ
Drug Selling Case: 1 ತಿಂಗಳಲ್ಲಿ 85 ಆರೋಪಿಗಳ ಬಂಧನ
Arrested: ಮನೆ ಬಳಿ ಶೂನಲ್ಲಿಡುವ ಕೀ ಬಳಸಿ ಕನ್ನ ಹಾಕುತ್ತಿದ್ದ ಖತರ್ನಾಕ್ ಮಹಿಳೆ ಸೆರೆ
Lalbagh Flower Show: ಲಾಲ್‌ಬಾಗ್ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ನಿಷೇಧ
Lalbagh Flower Show: ಲಾಲ್‌ಬಾಗ್‌ನಲ್ಲಿ ಇಂದಿನಿಂದ 11 ದಿನ ಫಲಪುಷ್ಪ ಮೇಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.