ಕುವೆಂಪು ವಿವಿ ಪ್ರವೇಶ ಕೌನ್ಸೆಲಿಂಗ್ ಆರಂಭ
Team Udayavani, Dec 19, 2020, 6:45 PM IST
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಸ್ನಾತಕೋತ್ತರ ಪದವಿ ಪ್ರವೇಶ ಕೌನ್ಸೆಲಿಂಗ್‌ನಲ್ಲಿ ಸುಮಾರು 30ಕ್ಕೂ ಹೆಚ್ಚು ವಿಭಾಗಗಳಿಗೆ ವಿದ್ಯಾರ್ಥಿಗಳು ಉತ್ಸಾಹದೊಂದಿಗೆ ಪ್ರವೇಶ ಪಡೆದುಕೊಂಡರು. ವಿಶ್ವವಿದ್ಯಾಲಯದ ಮುಖ್ಯಆವರಣ, ಕಡೂರು ಪಿ.ಜಿ.ಕೇಂದ್ರ, ಚಿಕ್ಕಮಗಳೂರು ಪಿಜಿ ಕೇಂದ್ರ ಮತ್ತು 20ಕ್ಕೂ ಹೆಚ್ಚು ಸ್ನಾತಕೋತ್ತರ ಕಾಲೇಜುಗಳ ಎಲ್ಲಾ ವಿಭಾಗಗಳಿಗೆ ಡಿಸೆಂಬರ್ 18, 19 ಮತ್ತು 21 ರಂದು ಪ್ರವೇಶಾತಿ ಕೌನ್ಸೆಲಿಂಗ್ ಹಮ್ಮಿಕೊಳ್ಳಲಾಗಿದೆ. ಮೊದಲದಿನವಾದ ಶುಕ್ರವಾರದಂದು ಮೆರಿಟ್ ಸೀಟುಗಳಿಗೆಪ್ರವೇಶಾತಿ ಪ್ರಕ್ರಿಯೆ ಯಾವುದೇ ತೊಡಕುಗಳಿಲ್ಲದೆ ನಡೆಯಿತು.
19 ಹಾಗೂ 21 ರಂದು ಪೇಮೆಂಟ್ ಮತ್ತು ಇತರೆ ಕೋಟಾಗಳ ಸೀಟುಗಳಿಗೆ ಪ್ರವೇಶಾತಿ ನಡೆಯಲಿದೆ. ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದಪ್ರಕಾರ ಶುಕ್ರವಾರ ಸಂಜೆ4 ಗಂಟೆಯ ಹೊತ್ತಿಗೆಎಲ್ಲ ಸ್ನಾತಕೋತ್ತರ ವಿಭಾಗಗಳ ಶೇ. 65ರಷ್ಟು ಸೀಟುಗಳು ಭರ್ತಿಯಾಗಿದ್ದವು ಹಾಗೂ ಕೋವಿಡ್19 ಕಾರಣದಿಂದಾಗಿ ಇನ್ನುಳಿದ ಆಕಾಂಕ್ಷಿಗಳು ಶನಿವಾರಮತ್ತು ಸೋಮವಾರ ವಿವಿಗೆ ಆಗಮಿಸಿ ಪ್ರವೇಶ ಪಡೆಯಲಿದ್ದಾರೆ.
ಆನ್‌ಲೈನ್-ಆಫ್‌ಲೈನ್: ಪ್ರವೇಶಾತಿ ಪಡೆದ ಕೋರ್ಸುಗಳ ದಾಖಲಾತಿ ನಿರ್ವಹಣೆ ಹಾಗೂ ಶುಲ್ಕವನ್ನು ಭರಿಸಲು ವಿದ್ಯಾರ್ಥಿಗಳಿಗೆ ಆನ್‌ಲೈನ್‌ಮತ್ತು ಆಫ್‌ಲೈನ್‌ನ ಎರಡೂ ಮಾದರಿಗಳಲ್ಲಿಅವಕಾಶಗಳನ್ನು ನೀಡಲಾಗಿತ್ತು. ಆಫ್‌ಲೈನ್‌ನಲ್ಲಿ ಶುಲ್ಕಭರಿಸುವವರ ಸಂಖ್ಯೆ ಹೆಚ್ಚಾದಂತೆ ಮೂರು ಕೌಂಟರ್‌ಗಳನ್ನು ಬ್ಯಾಂಕಿನಲ್ಲಿ ತೆರೆಯಲಾಗಿತ್ತು. ಕೋವಿಡ್-19 ಮಾರ್ಗದರ್ಶಿ ಸೂತ್ರಗಳೊಂದಿಗೆ ವಿದ್ಯಾರ್ಥಿಗಳುಮತ್ತು ಪಾಲಕರು ಸುರಕ್ಷಿತವಾಗಿ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ವಿಶ್ವವಿದ್ಯಾಲಯ ಪ್ರವೇಶ ಪ್ರಕ್ರಿಯೆಯನ್ನುಅಚ್ಚುಕಟ್ಟಾಗಿ ಆಯೋಜಿಸಿದ್ದು, ಕೊಠಡಿಗಳನ್ನುಸ್ಯಾನಿಟೈಸ್ ಮಾಡಲಾಗಿತ್ತು. ದೇಹದ ಉಷ್ಣಾಂಶ ಪರೀಕ್ಷಿಸಿ ವಿವಿ ಕ್ಯಾಂಪಸ್ ಒಳಗೆ ಬಿಡುವ ಜೊತೆಗೆವಿಭಾಗಗಳಲ್ಲಿ ಕೂರಲು 6ಅಡಿ ಅಂತರ ನೀಡಿಕುರ್ಚಿಗಳನ್ನು ಹಾಕಲಾಗಿತ್ತು. ಕರ್ನಾಟಕದ ವಿವಿಧಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚುಸೀಟು ಆಕಾಂಕ್ಷಿಗಳು ಮತ್ತು ಅವರ ಪೋಷಕರುಉತ್ಸುಕತೆಯಿಂದ ಪ್ರವೇಶ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.
ವಿವಿಯ ವಿಭಾಗಗಳನ್ನು ಕಲೆ ಮತ್ತು ಸಮಾಜ ವಿಜ್ಞಾನ ವಿಷಯಗಳು, ವಾಣಿಜ್ಯ ಮತ್ತು ನಿರ್ವಹಣಾ ವಿಷಯಗಳು, ಅನ್ವಯಿಕ ವಿಜ್ಞಾನಗಳು ಮತ್ತು ಮೂಲವಿಜ್ಞಾನಗಳೆಂದು ವಿಂಗಡಿಸಿ ಅನುಕ್ರಮವಾಗಿ ಸಮಾಜ ವಿಜ್ಞಾನ, ವಾಣಿಜ್ಯಶಾಸ್ತ್ರ, ಗಣಿತ ವಿಜ್ಞಾನ ಮತ್ತು ಜೀವವಿಜ್ಞಾನ ವಿಷಯಗಳ ಸಮುತ್ಛಯಗಳಲ್ಲಿ ಪ್ರವೇಶಾತಿ ಹಮ್ಮಿಕೊಳ್ಳಲಾಗಿತ್ತು. ಮುಂದಿನ ಎರಡು ದಿನವೂಇದೇ ಕಟ್ಟಡಗಳಲ್ಲಿ ಕೌನ್ಸೆಲಿಂಗ್ ನಡೆಯಲಿದೆ.ವಿಶ್ವವಿದ್ಯಾಲಯಕ್ಕೆ ಆಗಮಿಸುವ ವಿದ್ಯಾರ್ಥಿಗಳುಮತ್ತು ಪೋಷಕರಿಗೆ ವಿವಿಯದ್ವಾರದ ಬಳಿಯೇ ವಿಭಾಗವಾರು ಕೌನ್ಸೆಲಿಂಗ್ ಕಟ್ಟಡದ ವಿವರ, ಮಾರ್ಗ ತೋರುವ ಸೂಚನಾ ಫಲಕಗಳು, ಅಗತ್ಯ ದಾಖಲೆಗಳ ವಿವರ ಸೇರಿದಂತೆ ಸ್ವಾಗತ ಕೋರುವ ಫಲಕಗಳನ್ನು ಹಾಕಲಾಗಿತ್ತು. ಜೊತೆಗೆ ಪ್ರತಿಕಟ್ಟಡದ ಬಳಿಯೂ ಪೂರಕ ಮಾಹಿತಿ ನೀಡಲಾಗಿತ್ತು.
ಡಿಜಿಟಲ್ ಬೋರ್ಡ್‌ನಲ್ಲಿ ಮಾಹಿತಿ ಪ್ರದರ್ಶನ ; ಸೀಟುಗಳ ವಿವಿರ, ವಿದ್ಯಾರ್ಥಿ ಮಾಹಿತಿ, ಕಾಲೇಜು ಆಯ್ಕೆ ಕುರಿತ ಮಾಹಿತಿಗಳನ್ನುಯಾವುದೇ ಗೊಂದಲಗಳಿಗೆ ದಾರಿಯಾಗದಂತೆಡಿಜಿಟಲ್ ಬೋರ್ಡ್‌ಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು ಹಾಗೂ ಮೈಕ್‌ಮೂಲಕ ಆಯ್ಕೆಗೊಂಡವರ ಹೆಸರುಗಳನ್ನು ಘೋಷಿಸಲಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
B. Y. Raghavendra: 10 ವರ್ಷದಲ್ಲಿ ವಕ್ಫ್ ಆಸ್ತಿ ಶೇ.135 ಹೆಚ್ಚಳ
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.