ಕೊರೊನಾ: ದೇಶಕ್ಕೆ ಎರಡನೇ ಅಲೆ ಭಯವಿಲ್ಲ; ಆರೋಗ್ಯ ತಜ್ಞರ ವಿಶ್ಲೇಷಣೆ
Team Udayavani, Dec 20, 2020, 7:00 AM IST
ಹೊಸದಿಲ್ಲಿ: ದೇಶಕ್ಕೆ ಕೊರೊನಾ ವೈರಸ್‌ನ ಎರಡನೇ ಅಲೆಯ ಆತಂಕ ಇಲ್ಲ!
-ಇದು ಆರೋಗ್ಯ ವಲಯದ ತಜ್ಞರ ವಿಶ್ಲೇಷಣೆ. ಒಂದು ವೇಳೆ 2ನೇ ಅಲೆ ಎದುರಾದರೂ ಅದು ಮೊದಲಿನದರಷ್ಟು ತೀವ್ರವಾಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಒಂದು ಕೋಟಿ ದಾಟಿದ ಬೆನ್ನಲ್ಲೇ ಆರೋಗ್ಯ ತಜ್ಞರಿಂದ ಈ ಹೇಳಿಕೆ ಹೊರಬಿದ್ದಿದೆ. ಜತೆಗೆ ಇತ್ತೀಚೆಗೆ ದಿನನಿತ್ಯ ದೃಢವಾಗುತ್ತಿರುವ ಸೋಂಕು ಪ್ರಕರಣಗಳ ಸಂಖ್ಯೆಯೂ ಇಳಿಕೆಯಾಗಿರುವುದರಿಂದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಸಿದ್ಧ ವೈರಾಲಜಿಸ್ಟ್ ಡಾ| ಶಹೀದ್ ಜಮೀಲ್ ಅವರ ಪ್ರಕಾರ ದೇಶದಲ್ಲಿ ದಿನನಿತ್ಯ ಕೇಸುಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಸೆಪ್ಟಂಬರ್ ಮಧ್ಯ ಭಾಗದಲ್ಲಿ ಪ್ರಕರಣಗಳ ಸಂಖ್ಯೆ ಉಚ್ಛಾಯದಲ್ಲಿದ್ದರೆ, ಈಗ ಇಳಿಕೆಯ ಹಾದಿಯಲ್ಲಿದೆ. ಸದ್ಯ ನಾವು ದಿನನಿತ್ಯ ಸುಮಾರು 25,500 ಸೋಂಕು ಪ್ರಕರಣಗಳನ್ನು ಕಾಣುತ್ತಿದ್ದೇವೆ. ಆದರೆ ಸೆಪ್ಟಂಬರ್ ಮಧ್ಯಭಾಗದಲ್ಲಿ ದಿನಕ್ಕೆ 93 ಸಾವಿರ ಪ್ರಕರಣಗಳು ದೃಢಪಡುತ್ತಿದ್ದವು ಎಂದಿದ್ದಾರೆ. ಅವರ ಪ್ರಕಾರ ಕೊರೊನಾ ಸೋಂಕಿನ ಅತ್ಯಂತ ಕೆಟ್ಟ ದಿನಗಳು ಕಳೆದಿವೆ.
1 ಕೋಟಿ ಸೋಂಕು
ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1 ಕೋಟಿ ದಾಟಿದೆ. ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಬೆಳಗ್ಗೆಯವರೆಗೆ ದೇಶದಲ್ಲಿ 25,152 ಪ್ರಕರಣಗಳು ದೃಢ ಪಟ್ಟಿವೆ. 347 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕುಪೀಡಿತರ ಸಂಖ್ಯೆ 1,00,04,599ಕ್ಕೆ ಮುಟ್ಟಿತು. ಸಮಾಧಾನಕರ ವಿಷಯವೆಂದರೆ, ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 95.50 ಲಕ್ಷ ದಾಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.