ವಿಶ್ವಾಸಾರ್ಹ ಸುದ್ದಿಗಾಗಿ “ಉದಯವಾಣಿ’ ಮುಂಚೂಣಿಯಲ್ಲಿ : ರಾಮ ನಾಯ್ಕ


Team Udayavani, Dec 20, 2020, 11:07 AM IST

ವಿಶ್ವಾಸಾರ್ಹ ಸುದ್ದಿಗಾಗಿ “ಉದಯವಾಣಿ’ ಮುಂಚೂಣಿಯಲ್ಲಿ : ರಾಮ ನಾಯ್ಕ

ಉಡುಪಿ : “ಉದಯವಾಣಿ’ ಪತ್ರಿಕೆ 50 ವರ್ಷಗಳಿಂದ ನಿರಂತರವಾಗಿ ತಾಜಾ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಓದುಗರಿಗೆ ನೀಡುತ್ತಿರುವುದರಿಂದ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿಯೂ ಮುಂಚೂಣಿ ಸ್ಥಾನವನ್ನು ಉಳಿಸಿಕೊಂಡು ಬಂದಿದೆ ಎಂದು ಕೆನರಾ ಬ್ಯಾಂಕ್‌ (ಹಿಂದಿನ ಸಿಂಡಿಕೇಟ್‌ ಬ್ಯಾಂಕ್‌) ಮಣಿಪಾಲ ವೃತ್ತ ಕಚೇರಿಯ ಮಹಾಪ್ರಬಂಧಕ ರಾಮ ನಾಯ್ಕ ಅಭಿಪ್ರಾಯಪಟ್ಟರು.
ಶನಿವಾರ ಮಣಿಪಾಲದ ಉದಯವಾಣಿ ಪ್ರಧಾನ ಕಚೇರಿಯಲ್ಲಿ ಉದಯವಾಣಿಯು ಮಂಗಳೂರು ಲೇಡಿಹಿಲ್‌ನ ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ ಸಹಯೋಗದಲ್ಲಿ ಆಯೋಜಿಸಿದ ದೀಪಾವಳಿ ವಿಶೇಷಾಂಕ ಧಮಾಕಾದ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.

ನಿರಂತರ ಓದುಗ
ನಾನು ಓದಲು ಆರಂಭಿಸಿದ ದಿನದಿಂದ ಇಂದಿನವರೆಗೂ “ಉದಯವಾಣಿ’ಯನ್ನು ಓದುತ್ತಿದ್ದೇನೆ. ಈಗ ದೀಪಾವಳಿ ವಿಶೇ ಷಾಂಕ ಧಮಾಕಾದ ಅದೃಷ್ಟಶಾಲಿ ಓದುಗರನ್ನು ಆಯ್ಕೆ ಮಾಡುವ ಅವಕಾಶ ನನಗೆ ಒದಗಿಬಂದಿರುವುದು ಭಾಗ್ಯ ಎಂದರು.

ಗುಣಮಟ್ಟದಿಂದ ಉಳಿದ ನಾಯಕತ್ವ
ಉದಯವಾಣಿಯ ಸುದೀರ್ಘ‌ ಇತಿಹಾಸವನ್ನು ಅವಲೋಕಿಸಿ ದಾಗ ಅದರ ಅಕ್ಷರ ಜೋಡಣೆ, ಮುದ್ರಣ, ವಿನ್ಯಾಸ, ಸುದ್ದಿ ಈ ಎಲ್ಲ ಆಯಾಮಗಳಲ್ಲಿಯೂ ಮುಂದಿರುವುದರಿಂದಲೇ ಸ್ಪರ್ಧಾತ್ಮಕ ಯುಗದಲ್ಲಿಯೂ ಅದರ ನಾಯಕತ್ವ ಮುಂದುವರಿಯುತ್ತಿದೆ. ನಮ್ಮ ಬ್ಯಾಂಕಿಗೂ ಉದಯವಾಣಿಗೂ ಸ್ಥಾಪಕರ ಆಯಾಮದಲ್ಲಿ ಅವಿನಾಭಾವ ಸಂಬಂಧವಿದೆ. ಉದಯವಾಣಿಗೆ ಇನ್ನಷ್ಟು ಉತ್ತಮ ಭವಿಷ್ಯ ದೊರಕಲಿ ಎಂದು ರಾಮ ನಾಯ್ಕ ಹಾರೈಸಿದರು.

ಓದುಗರ ವ್ಯಾಪಕತ್ವಕ್ಕೆ ಹರ್ಷ
20 ವರ್ಷಗಳಿಂದ ಉದಯವಾಣಿ ದೀಪಾವಳಿ ವಿಶೇಷಾಂಕ ಧಮಾಕಾವನ್ನು ನಡೆಸಿಕೊಂಡು ಬರುತ್ತಿದೆ. ಓದುಗರು ಮತ್ತು ಸಂಸ್ಥೆಯ ನಡುವಿನ ಸಂಬಂಧ ವೃದ್ಧಿಗಾಗಿ ಈ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಈಗ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದಾಗ ನಾಡಿನ ಮೂಲೆ ಮೂಲೆಗಳಿಂದ ಸ್ಪಂದನ ದೊರಕಿರುವುದು ಕಂಡು ಬಂದಿರುವುದು ಓದುಗರು ನಾಡಿನೆಲ್ಲೆಡೆ ಇರುವುದನ್ನು ಖಚಿತ ಪಡಿಸುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ. ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದ್‌ ಕುಮಾರ್‌ ಹರ್ಷ ವ್ಯಕ್ತಪಡಿಸಿದರು.

ಎಂಎಂಎನ್‌ಎಲ್‌ ಮ್ಯಾಗಜಿನ್ಸ್‌ ಆ್ಯಂಡ್‌ ಸ್ಪೆಶಲ್‌ ಇನೀಶಿಯೇಟಿವ್ಸ್‌ ನ್ಯಾಶನಲ್‌ ಹೆಡ್‌ ಆನಂದ್‌ ಕೆ. ಸ್ವಾಗತಿಸಿ ವ್ಯಾಪಾರಾಭಿವೃದ್ಧಿ ವಿಭಾಗದ ಡಿಜಿಎಂ ಸತೀಶ್‌ ಶೆಣೈ ವಂದಿಸಿದರು. ಸೀನಿಯರ್‌ ಪ್ರಾಡಕ್ಟ್ ಇವ್ಯಾಂಜುವಲಿಸ್ಟ್‌ ಅಶ್ವಿ‌ನಿ ಐಗಳ್‌ ಕಾರ್ಯಕ್ರಮ ನಿರ್ವಹಿಸಿದರು.

ನಿರೀಕ್ಷೆಗೂ ಮೀರಿದ ಓದುಗರ ಸ್ಪಂದನೆ
ದೀಪಾವಳಿ ವಿಶೇಷಾಂಕದಲ್ಲಿ ಐದು ಪ್ರಶ್ನೆಗಳನ್ನು ಕೊಟ್ಟು ಅದಕ್ಕೆ ಉತ್ತರವನ್ನು ಕಳುಹಿಸುವ ಸ್ಪರ್ಧೆ ದೀಪಾವಳಿ ಧಮಾಕಾ ಆಗಿದೆ. ಓದುಗರನ್ನು ಚಿಂತನೆಯಲ್ಲಿ ಸಕ್ರಿಯಗೊಳಿಸುವ ಪ್ರಯತ್ನದ ಅಂಗವಾಗಿ 20 ವರ್ಷಗಳಿಂದ ಧಮಾಕಾವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ 3,600 ಓದುಗರು ಪ್ರತಿಕ್ರಿಯೆ ನೀಡಿದ್ದು ಇದರಲ್ಲಿ 2,300 ಓದುಗರ ಉತ್ತರ ಸರಿಯಾಗಿತ್ತು. ಅವರಲ್ಲಿ ಒಟ್ಟು 27 ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು.

ಬಂಪರ್‌ ಬಹುಮಾನ ಹುಬ್ಬಳ್ಳಿಗೆ
ಬಂಪರ್‌ ಬಹುಮಾನ (ಚಿನ್ನದ ನೆಕ್ಲೆಸ್‌): ನೇತ್ರಾವತಿ ಅಣ್ಣಪ್ಪ, ಚೈತನ್ಯನಗರ, ಹುಬ್ಬಳ್ಳಿ

ಪ್ರಥಮ (ಚಿನ್ನದ ಬ್ರಾಸ್ಲೆಟ್‌): ಗಾಯತ್ರಿ ನಾಯಕ್‌, ದೇರೇಬೈಲ್‌, ಮಂಗಳೂರು

ದ್ವಿತೀಯ (ಚಿನ್ನದ ಉಂಗುರ): 1. ವಿದ್ಯಾಲಕ್ಷಿ$¾à ಎಸ್‌. ರಾವ್‌, ಪಲಿಮಾರು, ಉಡುಪಿ, 2. ಆರ್‌.ವಿ. ಕುಲಕರ್ಣಿ, ಅಂಜನೇಯ ನಗರ, ಬೆಳಗಾವಿ

ತೃತೀಯ (ಚಿನ್ನದ ಪೆಂಡೆಂಟ್‌): 1. ಶಾಂತಾ, ಶ್ರೀನಗರ, ಬೆಂಗಳೂರು, 2. ಎನ್‌.ಕೆ. ಆನಂದ ಬಾಬು, ಕೆ.ಆರ್‌.ರೋಡ್‌, ಹೊಸಕೋಟೆ, 3. ಚಿತ್ತಾರ ಯು., ಬೈಲೂರು, ಉಡುಪಿ

ಸಮಾಧಾನಕರ (ಜೋಡಿ ಬೆಳ್ಳಿಯ ನಾಣ್ಯ)
– ಪುಷ್ಪಾ ಮಂಜುನಾಥ್‌ ಆಚಾರ್ಯ, ಮಾರ್ಪಾಡಿ, ಮೂಡುಬಿದಿರೆ
– ಎ. ವಿಜಯಲಕ್ಷಿ$¾à ರಾವ್‌, 6ನೇ ಕ್ರಾಸ್‌, ಜೈಲ್‌ರೋಡ್‌, ಮಂಗಳೂರು
– ವಿ. ಯೋಗೀಶ್‌ ಪೇರಂದಡ್ಕ, ಕಾಶಿಪಟ್ಣ, ಬೆಳ್ತಂಗಡಿ
– ಎಸ್‌.ಎಲ್‌. ಸುಪ್ರಿಯಾ, ಚೆನ್ನಗಿರಿ ಟೌನ್‌, ದಾವಣಗೆರೆ
– ಸರಸ್ವತಿ ಕಮಲಾಕರ, ವಾಲಗಳ್ಳಿ, ಕುಮಟಾ
– ಪ್ರಶಾಂತ್‌ ಜಿ. ಪ್ರಭು, ಪೊಳಲಿ, ಬಂಟ್ವಾಳ
– ಕೆ. ಧನ್ಯಾಶ್ರೀ, ರಾಮ್‌ನಗರ, ಕಿನ್ನಿಗೋಳಿ
– ವಾಸುದೇವ್‌ ರಾಮ, ಕಾವೂರು, ಮಂಗಳೂರು
– ಸುರೇಶ್‌ ಪೂಜಾರಿ, ನೇರಳಕಟ್ಟೆ, ಕುಂದಾಪುರ
– ಯಶ್ವಿ‌à ಆರ್‌. ಆಚಾರ್ಯ, ಯರ್ಲಪಾಡಿ, ಕಾರ್ಕಳ
– ಕರುಣಾಕರ ಜಿ., ಕಿನ್ನಿಕಂಬÛ, ಮಂಗಳೂರು
– ವಿದ್ಯಾಲಕ್ಷಿ$¾à ಎಸ್‌. ಭಟ್‌, ದುರ್ಗ, ಕಾರ್ಕಳ
– ಡಾ| ಶೈಲೇಶ್‌, ಜಯನಗರ, ಬೆಂಗಳೂರು
– ಲತಾ ಆರ್‌., ಸಂತೆಕಟ್ಟೆ, ಚೇರ್ಕಾಡಿ, ಬ್ರಹ್ಮಾವರ
– ಮಹಾಲಿಂಗೇಶ್ವರ ದೇಲಂಪಾಡಿ, ಕಾಸರಗೋಡು
– ಆರ್‌. ಅನಸೂಯ ಕುಮಾರಿ, ಚಿಕ್ಕಲಸಂದ್ರ, ಬೆಂಗಳೂರು
– ವೈ.ವಿ. ವಿಶ್ವಜ್ಞ ಮೂರ್ತಿ, ಬರ್ಕೆ, ಮಂಗಳೂರು
– ವಿಶ್ವನಾಥ್‌ ನಾಯಕ್‌ ಕೆ., ಪರ್ಕಳ, ಉಡುಪಿ
– ಶಿವಾನಂದ, ಹುಕ್ರಟ್ಟೆ, ನಲ್ಲೂರು, ಕಾರ್ಕಳ
– ರಾಜೇಶ್ವರಿ ವಾಸುದೇವ್‌, ಪಡುಅಲೆವೂರು, ಉಡುಪಿ

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.