ಪರಿಸರ ಸ್ನೇಹಿ ಮಸೀದಿ, 300 ಬೆಡ್‌ಗಳ ಆಸ್ಪತ್ರೆ…
Team Udayavani, Dec 21, 2020, 5:14 AM IST
ಅಯೋಧ್ಯೆಯ 5 ಎಕ್ರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಮಸೀದಿ ಮತ್ತು ಇತರೆ ಸಂಕೀರ್ಣಗಳಿಗೆ ಸಂಬಂಧಿಸಿದ ನೀಲನಕ್ಷೆಯನ್ನು ಉತ್ತರಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಬಿಡುಗಡೆ ಮಾಡಿದೆ. ಫೈಜಾಬಾದ್ ಪಂಚಾಯತ್‌ನ ಅನುಮತಿ ದೊರೆತ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದು ಮಂಡಳಿ ಹೇಳಿದೆ. ಮಸೀದಿ ಹೇಗಿರಲಿದೆ ಎಂಬ ಮಾಹಿತಿ ಇಲ್ಲಿದೆ…
ಸಂಕೀರ್ಣದಲ್ಲಿ ಏನಿರುತ್ತದೆ?
ಆಯತಾಕಾರದ ಸಂಕೀರ್ಣದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯ ಅಡುಗೆ ಮನೆ ಮತ್ತು ಮ್ಯೂಸಿಯಂ ಇರುತ್ತದೆ. ಇವುಗಳಿಂದ ಕೆಲವೇ ಮೀಟರ್ ದೂರದಲ್ಲಿ ಮಸೀದಿಯಿ ರುತ್ತದೆ. ಮಸೀದಿ ಮತ್ತು ಸಂಕೀರ್ಣದ ಮಧ್ಯೆ ಶತಮಾನಗಳಷ್ಟು ಹಳೆಯ ಸೂಫಿ ಮಸೀದಿಯಿರುತ್ತದೆ.
ಪರಿಸರ ಸ್ನೇಹಿ
ಹವಾಮಾನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಡೀ ರಚನೆಯನ್ನು ಪರಿಸರ ಸ್ನೇಹಿಯಾಗಿಸಲು ತೀರ್ಮಾನಿಸ ಲಾಗಿದೆ. ಅದರಂತೆ, ಮಸೀದಿಗೆ ವಿದ್ಯುತ್ಛಕ್ತಿ ಸಂಪರ್ಕವನ್ನೇ ನೀಡದೇ, ಸೌರ ಫಲಕಗಳ ಮೂಲಕ ಸೌರಶಕ್ತಿಯನ್ನೇ ಸಂಪೂರ್ಣ ವಾಗಿ ಬಳಸಿಕೊಳ್ಳಲಾಗುತ್ತದೆ. ಅಮೆಜಾನ್ ಮಳೆಕಾಡು, ಭಾರತದ ವಿವಿಧ ಭೌಗೋಳಿಕ ಪ್ರದೇಶಗಳು ಸೇರಿದಂತೆ ವಿಶ್ವದ ಮೂಲೆ ಮೂಲೆಗಳಿಂದ ವಿಭಿನ್ನ ಸಸ್ಯಗಳನ್ನು ತಂದು ನೆಡಲಾಗುತ್ತದೆ.
ಮಸೀದಿಗಿಂತ 6 ಪಟ್ಟು ದೊಡ್ಡ ಆಸ್ಪತ್ರೆ
ಮಸೀದಿಯು ಗೋಳಾಕಾರದಲ್ಲಿದ್ದು, ಏಕಕಾಲಕ್ಕೆ 2,000 ಮಂದಿ ನಮಾಜ್ ಮಾಡಲು ಸಾಧ್ಯ. ಇದು ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿಗಿಂತ 4 ಪಟ್ಟು ದೊಡ್ಡದಾಗಿರುತ್ತದೆ. 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸಂಕೀರ್ಣವು ಮಸೀದಿಗಿಂತ 6 ಪಟ್ಟು ಬೃಹತ್ತಾಗಿರಲಿದೆ. 3,500 ಚದರ ಮೀಟರ್ ಪ್ರದೇಶದಲ್ಲಿ ಮಸೀದಿ ನಿರ್ಮಾಣವಾದರೆ, 24,150 ಚ.ಮೀ. ಪ್ರದೇಶದಲ್ಲಿ ಆಸ್ಪತ್ರೆ ಮತ್ತು ಇತರ ಕಟ್ಟಡಗಳು ತಲೆಎತ್ತಲಿವೆ.
ಶಿಲಾನ್ಯಾಸಕ್ಕಾಗಿ ಅದ್ದೂರಿ ಕಾರ್ಯಕ್ರಮ ನಡೆಸಲಾಗುವುದಿಲ್ಲ. ಮಸೀದಿಗೆ ಇನ್ನೂ ಯಾವುದೇ ಹೆಸರು ಅಂತಿಮಗೊಂಡಿಲ್ಲ. ಆದರೆ, ಬಾಬರ್ ಆಗಲೀ, ಬೇರೆ ಯಾವುದೇ ದೊರೆ ಅಥವಾ ರಾಜನ ಹೆಸರು ಇಡುವುದು ಬೇಡ ಎಂದು ನಿರ್ಧರಿಸಲಾಗಿದೆ.
ಉತ್ತರಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ
ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.