400 ವರ್ಷಗಳ ಬಳಿಕ ಇಂದು ಗುರು-ಶನಿ ಗ್ರಹ ಅತೀ ಸಮೀಪ
1623ರಲ್ಲಿ ಘಟಿಸಿದ್ದ ಮಹಾ ಸಂಯೋಗ
Team Udayavani, Dec 21, 2020, 1:24 AM IST
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: 2020ರ ಡಿಸೆಂಬರ್, ಬಾಹ್ಯಾಕಾಶದ ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಿದೆ. ಜೆಮಿನಿಡ್ಸ್ ಉಲ್ಕಾಪಾತ, ಸಂಪೂರ್ಣ ಸೂರ್ಯಗ್ರಹಣ… ಇದರ ಬೆನ್ನಲ್ಲೇ ಸೋಮವಾರದಂದು ಸೌರವ್ಯೂಹದ 2 ದೈತ್ಯ ಗ್ರಹಗಳಾದ ಗುರು ಮತ್ತು ಶನಿ ಅತೀ ಹತ್ತಿರದಲ್ಲಿ ಹಾದುಹೋಗಲಿವೆ!
ಗುರು- ಶನಿಯ “ಮಹಾ ಸಂಯೋಗ’ ಇದಾಗಿದ್ದು, ನಾಸಾ ಇದನ್ನು ಈ ವರ್ಷದ “ಕ್ರಿಸ್ಮಸ್ ಸ್ಟಾರ್’ಗೆ ಹೋಲಿಸಿದೆ. ಖಗೋಳ ವಿಜ್ಞಾನದ ಈ ವಿದ್ಯಮಾನ ಸುಮಾರು 400 ವರ್ಷಗಳ ಅನಂತರ ಘಟಿಸುತ್ತಿದೆ. 1623ರಲ್ಲಿ ಗುರು- ಶನಿ ಗ್ರಹಗಳ ಮಹಾ ಸಂಯೋಗ ನಡೆದಿತ್ತು.
ಅದರಲ್ಲೂ ಚಳಿಗಾಲ ಋತುವಿನ ಅತ್ಯಂತ ದೀರ್ಘ ದಿನ ಡಿ.21ರಂದೇ ಈ ಅಪರೂಪದ ವಿದ್ಯಮಾನ ಘಟಿಸುತ್ತಿರುವುದು ವಿಜ್ಞಾನಿಗಳ ಕುತೂಹಲ ನೂರ್ಮ ಡಿಗೊಳಿಸಿದೆ. ಈ ವರ್ಷ ಮಹಾ ಸಂಯೋಗ ವೀಕ್ಷಣೆ ತಪ್ಪಿಸಿಕೊಂಡರೆ, ಮತ್ತೆ ಇದರ ವೀಕ್ಷಣೆಗೆ 60 ವರ್ಷ ಕಾಯಬೇಕು. 2080ರಲ್ಲಿ ಮತ್ತೆ ಗುರು- ಶನಿ ಅತ್ಯಂತ ಸಮೀಪದಲ್ಲಿ ಗೋಚರಿಸಲಿವೆ.
ವಿಜ್ಞಾನಿಗಳಿಗೇಕೆ ಕುತೂಹಲ?
1623ರಲ್ಲಿ ಗುರು- ಶನಿ ಮಹಾ ಸಂಯೋಗ ವಾಗಿ ಕೇವಲ 13 ವರ್ಷದಲ್ಲಿ ವಿಜ್ಞಾನಿ ಗೆಲಿ ಲಿಯೊ ಗೆಲಿಲಿ ಮೊತ್ತಮೊದಲ ದೂರದರ್ಶಕ ಕಂಡುಹಿಡಿದಿದ್ದರು. ಗುರುವಿನ ಕಕ್ಷೆಯಲ್ಲಿ ಸುತ್ತುವ 4 ಉಪಗ್ರಹ, ಶನಿಯ ಉಂಗುರ, ಸೂರ್ಯನ ಕಲೆಗಳನ್ನು ಆ ವೇಳೆ ಗುರುತಿಸಿ ದ್ದರು. ಪ್ರಸ್ತುತ, ಗುರು- ಶನಿ ವಾತಾವರಣಗಳ ಇನ್ನಷ್ಟು ರಹಸ್ಯಗಳನ್ನು ಬೆಳಕಿಗೆ ತರಲು “ಮಹಾ ಸಂಯೋಗ’ ಕಾರಣವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.