ಸಾದಹಳ್ಳಿಯಲ್ಲಿ ಮೊದಲ ಬಾರಿಗೆ ಎಲೆಕ್ಷನ್
ಅವಿರೋಧವಾಗಿಯೇ ಆಯ್ಕೆಯಾಗುತ್ತಿದ್ದ ಅಭ್ಯರ್ಥಿಗಳು , ಸ್ವಪ್ರತಿಷ್ಠೆಯಿಂದ ಹಳ್ಳಿ ಫೈಟ್‌ಗೆ ಸಿದ್ಧತೆ
Team Udayavani, Dec 21, 2020, 1:58 PM IST
ದೇವನಹಳ್ಳಿ: ಗ್ರಾಪಂ ಪ್ರಾರಂಭವಾದಾಗಿನಿಂದಲೂ ಚುನಾವಣೆ ಇಲ್ಲದೆ ಗ್ರಾಮವೊಂದರಲ್ಲಿ ಅವಿರೋಧಆಯ್ಕೆಯಾಗುವಮೂಲಕ ಇಡೀಗ್ರಾಮವುಸತತ27ವರ್ಷಗಳಿಂದ ಚುನಾವಣೆ ರಹಿತ ಕಣವಾಗಿ ಹೆಸರು ಮಾಡಿತ್ತು.
ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಪಂ ವ್ಯಾಪ್ತಿಯ ಸಾದಹಳ್ಳಿ ಗ್ರಾಮದಲ್ಲಿ ಈ ಬಾರಿಗ್ರಾಪಂ ಚುನಾವಣೆ ಮೊದಲ ಬಾರಿಗೆ ನಡೆಯುತ್ತಿದೆ. ಸಾದಹಳ್ಳಿ ಕ್ಷೇತ್ರದಲ್ಲಿ 2 ಮತಕ್ಷೇತ್ರಗಳು ಬರಲಿದ್ದು, ಅದರಲ್ಲಿ 6 ಸದಸ್ಯ ಸ್ಥಾನಗಳಿದ್ದು, ಎಲ್ಲಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.1,700 ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಈ ಸಾದಹಳ್ಳಿ ಮತಕ್ಷೇತ್ರವು ಕಳೆದ 27 ವರ್ಷಗಳಿಂದ ಚುನಾವಣೆ ಇಲ್ಲದೆ, ಮುಖಂಡರುಗಳು, ಹಿರಿಯರ ಸಮ್ಮುಖದಲ್ಲಿ ಅರಳೀ ಕಟ್ಟೆಯ ಮೇಲೆ ಕುಳಿತು ಬಂದಿರುವ ಮೀಸಲಾತಿಯ ಪ್ರಕಾರ ಆ ಜಾತಿಗೆ,ಈ ಜಾತಿಗೆಅಭ್ಯರ್ಥಿಗಳನ್ನು ಒಮ್ಮತದಿಂದ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಜಿಪಂ, ತಾಪಂ, ಲೋಕಸಭಾ ಸದಸ್ಯರ ಚುನಾವಣೆ, ವಿಧಾನ ಸಭಾ ಚುನಾವಣೆ ಮಾತ್ರ ಈ ಗ್ರಾಮದಲ್ಲಿ ನಡೆಯುತ್ತಿತ್ತು.
ಗ್ರಾಪಂ ಪೈಟ್‌ಗೆ ಮೊದಲ ಮತದಾನ: ಈ ಬಾರಿ ಸ್ವಪ್ರತಿಷ್ಠೆಯಿಂದ ಹಾಗೂ ಗ್ರಾಮ ಹಿತಾಸಕ್ತಿಯಿಂದ ಚುನಾವಣೆ ನಡೆಯುತ್ತಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾದಹಳ್ಳಿ ಜನ ಡಿ.27ರಂದು ನಡೆಯುವ ಗ್ರಾಪಂ ಚುನಾವಣೆಗೆ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ.
ಈ ಗ್ರಾಮವು ಶಾಸಕರನ್ನು ನೀಡಿದೆ. ತಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಪಂ ಉಪಾಧ್ಯಕ್ಷರು, ತಾಪಂ ಸದಸ್ಯರನ್ನು ಸಹ ಈ ಗ್ರಾಮವು ನೀಡಿದಕೀರ್ತಿಸಲ್ಲುತ್ತದೆ. ದೇಶ-ವಿದೇಶಗಳಿಗೆ ಇಲ್ಲಿನ ಬಂಡೆಯ ಕಲ್ಲುಗಳು ಕಳುಹಿಸಿಕೊಡಲಾಗುತ್ತದೆ. ಇಲ್ಲಿ ಅತೀ ಹೆಚ್ಚುಕೂಲಿ ಕಾರ್ಮಿಕರೇ ಇದ್ದಾರೆ.ಈ ಬಾರಿ ಗ್ರಾಪಂ ಚುನಾವಣೆಯಲ್ಲಿ 6 ಸ್ಥಾನಗಳಿಗೆಒಟ್ಟು 26 ಜನ ಸ್ಪರ್ಧಿಗಳು ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ 10ಜನ ನಾಮಪತ್ರಗಳನ್ನು ವಾಪಸ್ ಪಡೆದರೆ, ಉಳಿದ16 ಜನಕಣದಲ್ಲಿದ್ದಾರೆ. ನಾಮಪತ್ರ ಸಲ್ಲಿಕೆ ಕಾರ್ಯದಿಂದ ಇಲ್ಲಿಯವರೆಗೂ ಗ್ರಾಮದ ಹಿರಿಯ ಮುಖಂಡರು, ಮಾಜಿ ಶಾಸಕರು ಸೇರಿದಂತೆ ಹಲವಾರು ಅಭ್ಯರ್ಥಿಗಳನ್ನು ಮನವೊಲಿಸಲು ಪ್ರಯತ್ನಿಸಿದ್ದು, ಪ್ರಯತ್ನ ವಿಫಲವಾಗಿ ಇತಿಹಾಸದ ಮೊದಲ ಗ್ರಾಪಂ ಚುನಾವಣೆ ಈ ಗ್ರಾಮಕ್ಕೆ ಸಲ್ಲುತ್ತದೆ.
ಚುನಾವಣೆ ನಡೆಯಲು ಕಾರಣ: ಈ ಬಾರಿಯಗ್ರಾಪಂ ಚುನಾವಣೆಯಲ್ಲಿ ಹೆಚ್ಚು ಆಕಾಂಕ್ಷಿಗಳು ಗ್ರಾಮದಲ್ಲಿ ಇದ್ದಿದ್ದರಿಂದ ಚುನಾವಣೆ ನಡೆಯಲು ಕಾರಣವಾಗಿದೆ. ಎಷ್ಟೇ ಮನವೊಲಿಸಿದರೂ ಮಾತುಕತೆಗಳು ನಡೆಸಿದರೂ ನಡೆದುಕೊಂಡು ಬಂದಿರುವ ಪರಂಪರೆಉಳಿಸುವಂತೆ ಮನವೊಲಿಕೆಗೆ ಯತ್ನಿಸಿದರೂ ಆಕಾಂಕ್ಷಿಗಳು ಪಟ್ಟು ಹಿಡಿದು ಮುಂದಾಗಿರುವುದು ಬೇಸರದ ಸಂಗತಿಯಾಗಿದೆ ಎಂದುಮುಖಂಡರೊಬ್ಬರುಹೇಳಿದರು.
ಪ್ರಯತ್ನ ವಿಫಲ: 27 ವರ್ಷಗಳಿಂದ ಹಿರಿಯ ಮಾರ್ಗದರ್ಶನದಲ್ಲಿ ನಡೆದುಕೊಂಡು ಬಂದಂತಹದ್ದನ್ನು ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಆಕಾಂಕ್ಷಿಗಳು ಮಾತು ಕೇಳದೆ ಇದ್ದಿದ್ದರಿಂದ ಮನ ವೊಲಿಕೆ ಪ್ರಯತ್ನ ವಿಫಲವಾಗಿದೆ. ಕೊನೆಗಳಿಗೆಯಲ್ಲಿ ಚುನಾವಣೆಗೆ ಹೋಗಲು ಸಜ್ಜಾಗುವಂತೆ ಆಯಿತು.
ಹೆಚ್ಚು ಅಭ್ಯರ್ಥಿಗಳಿಂದ ಚುನಾವಣೆ :
ಗ್ರಾಪಂ ಚುನಾವಣೆಯಲ್ಲಿ ನಮ್ಮ ಗ್ರಾಮದಲ್ಲಿ ಯಾರೊಬ್ಬರೂ ಮತ ಹಾಕುತ್ತಿರಲಿಲ್ಲ. ನೇರವಾಗಿ ಅವಿರೋಧ ಆಯ್ಕೆ ಮಾಡಿಕೊಳ್ಳುತ್ತಿದ್ದೆವು. ಆದರೆ ಈ ಬಾರಿ ಕಣದಲ್ಲಿ ಹೆಚ್ಚಅಭ್ಯರ್ಥಿಗಳು ಇರುವುದರಿಂದ ಚುನಾವಣೆ ಅನಿವಾರ್ಯವಾಗಿದೆ. ಇದು27 ವರ್ಷದ ಇತಿಹಾಸದಮೊದಲ ಗ್ರಾಪಂ ಚುನಾವಣೆ ಆಗಿದೆ. ಹಿರಿಯರು ಮಾಡಿಕೊಂಡು ಬಂದಿದ್ದ ಸಂಪ್ರದಾಯ ಈ ಬಾರಿ ಆಗದೆ ಇರುವುದು ಬೇಸರ ತಂದಿದೆ. ಅನೇಕ ಬಾರಿ ಅಭ್ಯರ್ಥಿಗಳ ಮನವೊಲಿಕೆ ಪ್ರಯತ್ನ ಮಾಡಲಾಯಿತು ಎಂದು ಮಾಜಿ ಶಾಸಕಕೆ.ವೆಂಕಟಸ್ವಾಮಿ ತಿಳಿಸಿದರು.
ಗ್ರಾಮದಲ್ಲಿ ಎಲ್ಲರೂ ಒಮ್ಮತದಿಂದ ಒಗ್ಗಟ್ಟಾಗಿ ಅಭ್ಯರ್ಥಿಗಳನ್ನು ಗ್ರಾಪಂ ಚುನಾವಣೆಯಲ್ಲಿ ಮೀಸಲಾತಿಯ ಪ್ರಕಾರ ಅವಿರೋಧ ಆಯ್ಕೆ ಮಾಡಲಾಗುತ್ತಿತ್ತು. ಗ್ರಾಮದಲ್ಲಿಕೆಲವರ ಸ್ವಪ್ರತಿಷ್ಠೆಯಿಂದಹಾಗೂ ಗ್ರಾಮದ ಹಿತಸಕ್ತಿ ಇಲ್ಲದಕಾರಣ ಚುನಾವಣೆ ಎದುರಿಸುವಂತಾಗಿದೆ.–ಎಸ್.ಎಂ.ನಾರಾಯಣಸ್ವಾಮಿ, ತಾಪಂ ಮಾಜಿ ಉಪಾಧ್ಯಕ್ಷ
–ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.