ಗಡಿನಾಡಲ್ಲಿ ರಂಗೇರಿದ ಹಳ್ಳಿ ಫೈಟ್
ಮತಕ್ಕಾಗಿ ಹಣ- ಹೆಂಡದ ಹೊಳೆ,ಅಭ್ಯರ್ಥಿ ಖರ್ಚು-ವೆಚ್ಚಕ್ಕಿಲ್ಲ ಕಡಿವಾಣ
Team Udayavani, Dec 21, 2020, 5:04 PM IST
ಬೀದರ: ಗಡಿ ನಾಡು ಬೀದರನಲ್ಲಿ ಮೊದಲ ಹಂತದ ಗ್ರಾಪಂ ಚುನಾವಣೆಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ “ಹಳ್ಳಿ ಫೈಟ್’ ಮತ್ತಷ್ಟು ರಂಗೇರಿದೆ. ಮತದಾರ ಪ್ರಭುಗಳನ್ನು ಸೆಳೆಯಲು ರಣತಂತ್ರ ರೂಪಿಸಿರುವ ಅಭ್ಯರ್ಥಿಗಳು ತೆರೆ ಮೆರೆಯಲ್ಲಿ ಕಸರತ್ತುಗಳನ್ನು ನಡೆಸುತ್ತಿದ್ದು, ತೀವ್ರ ಚಳಿ ನಡುವೆಯೂ ಗ್ರಾಮಗಳಲ್ಲಿ ಅಖಾಡದ ಕಾವು ಜೋರಾಗಿದೆ.
ಗಡಿ ಜಿಲ್ಲೆ ಬೀದರನಲ್ಲಿ 178 ಗ್ರಾಪಂಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಗ್ರಾಪಂ ಪಕ್ಷ ರಹಿತ ಚುನಾವಣೆ ಆಗಿದ್ದರೂ ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆದಿದ್ದು, ರಾಜಕೀಯ ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯಾಗಿಸಿಕೊಂಡಿದ್ದಾರೆ. ಹೀಗಾಗಿ ಜಿಲ್ಲೆಯ ಚುನಾಯಿತ ಪ್ರತಿನಿ ಧಿಗಳು ತಮ್ಮ ಪಕ್ಷಗಳ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಡಿ.22ರಂದು ಬಸವಕಲ್ಯಾಣ, ಹುಲಸೂರ, ಭಾಲ್ಕಿ, ಹುಮನಾಬಾದ ಮತ್ತು ಚಿಟಗುಪ್ಪಾ ತಾಲೂಕುಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಕದನಕ್ಕೆ ಇನ್ನೂ ಎರಡು ದಿನ ಮಾತ್ರ ಬಾಕಿ ಉಳಿದಿದ್ದು, ಮಿನಿ ಸಮರದ ಕಣವಾಗಿ ಮಾರ್ಪಟ್ಟಿದೆ. ಹೇಗಾದರೂ ಸರಿ ಈ ಬಾರಿ ಪಂಚಾಯತ ಗದ್ದುಗೆ ಏರಲೇಬೇಕೆಂಬ ಆಸೆ ಹೊತ್ತಿರುವ ಕದನ ಕಲಿಗಳು ಕೋವಿಡ್-19 ಆತಂಕವನ್ನೇ ಬದಗಿಟ್ಟು ತಮ್ಮ ಚಿಹ್ನೆ ಗುರುತುಗಳೊಂದಿಗೆ ಬಿರುಸಿನ ಪ್ರಚಾರಕ್ಕೆ ಇಳಿದಿದ್ದಾರೆ. ಬಹುತೇಕರು ಫೆಸ್‌ಬುಕ್, ವಾಟ್ಸ್ ಆ್ಯಪ್ ಮೂಲಕ ಡಿಜಿಟಲ್ ಪ್ರಚಾರದ ಮೊರೆ ಹೋಗಿದ್ದಾರೆ.
ಇನ್ನೂ ಅಧಿಕಾರ ವಿಕೇಂದ್ರೀಕರಣದಿಂದಾಗಿ ಪಂಚಾಯತಗಳಿಗೆ ಅನುದಾನ ಹರಿದು ಬರುತ್ತಿರುವ ಕಾರಣ ಗ್ರಾಪಂ ಚುನಾವಣೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಜತೆಗೆ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ 5 ವರ್ಷಕ್ಕೆ ನಿಗದಿಪಡಿಸಿರುವುದು, ಸ್ಥಳೀಯವಾಗಿ ಜನರ ಕೆಲಸ ಮಾಡಿಕೊಟ್ಟು ರಾಜಕೀಯಕ್ಷೇತ್ರದಲ್ಲಿ ಬೆಳೆಯಬಹುದೆಂಬ ಆಸೆ ಸಣ್ಣಪುಟ್ಟ ನಾಯಕರಲ್ಲಿ ಬೆಳೆಯುತ್ತಿರುವುದರಿಂದ ಯುವ ಸಮೂಹ ಸ್ಪರ್ಧೆಗಿಳಿದಿದ್ದು, ಜಿದ್ದಾ ಜಿದ್ದಿನ ಪೈಪೋಟಿಗೆ ವೇದಿಕೆ ಸಿದ್ಧವಾಗುತ್ತಿದೆ. ಪ್ರತಿ ಗ್ರಾಮ, ಓಣಿಗಳಲ್ಲಿ ಚುನಾವಣೆಯದ್ದೇ ಸದ್ದು. ಪಂಚಾಯತಿ ಕಟ್ಟೆ, ಹೊಟೇಲ್‌ಗಳು,ಸಭೆ- ಸಮಾರಂಭಗಳಲ್ಲಿ ಕದನದ ಚರ್ಚೆ ನಡೆಯುತ್ತಿದೆ.
78 ಗ್ರಾಪಂ, 3151 ಸದಸ್ಯ ಸ್ಥಾನ : ಗಡಿ ಜಿಲ್ಲೆ ಬೀದರನಲ್ಲಿ ಒಟ್ಟು 185 ಗ್ರಾಪಂಗಳ ಪೈಕಿ 7 ಪಂಚಾಯತಿ ಅವಧಿ ಇನ್ನೂ ಮುಗಿದಿಲ್ಲ. ಹೀಗಾಗಿ 178 ಗ್ರಾಪಂಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 1047 ಕ್ಷೇತ್ರಗಳ 3151 ಸದಸ್ಯ ಸ್ಥಾನಕ್ಕೆ ಚುನಾವಣೆ ಜರುಗಲಿದ್ದು, 9,99,001 ಜನರು ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಬೀದರ ರಾಜ್ಯದಲ್ಲೇ ಇವಿಎಂ ಬಳಸುತ್ತಿರುವ ಏಕೈಕೆ ಜಿಲ್ಲೆ ಆಗಿದೆ.
ಹಣ- ಹೆಂಡದ ಸುರಿಮಳೆ : ಇನ್ನೂ ಪಂಚಾಯತ ಕದನಕ್ಕೆ ಖರ್ಚು-ವೆಚ್ಚಕ್ಕೆ ಮಿತಿ ಇಲ್ಲವಾದ್ದರಿಂದ ಅಭ್ಯರ್ಥಿಗಳು ತೆರೆ ಮರೆಯಲ್ಲಿ ಹಣ- ಹೆಂಡದ ಹೊಳೆ ಹರಿಸುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧದ ನಡುವೆಯೂ ಅಭ್ಯರ್ಥಿಗಳು ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿರುವ ಮದ್ಯವನ್ನು ಮಿತಿ ಮೀರಿ ಹಂಚುತ್ತಿದ್ದಾರೆ. ಅಭ್ಯರ್ಥಿಗಳ ಪರ ಕೆಲಸ ಮಾಡುತ್ತಿರುವ ಬೆಂಬಲಿಗರಿಗಾಗಿ ಹಳ್ಳಿಗಳ ಹೊರ ವಲಯದ ದಾಬಾಗಳು ನಿತ್ಯ ಬುಕ್ ಆಗಿರುತ್ತಿದ್ದು, ಗುಂಡು- ತುಂಡಿನ ವ್ಯವಸ್ಥೆ ಎಗ್ಗಿಲ್ಲದೇ ಸಾಗಿದೆ. ವಿಶೇಷವಾಗಿ ಎಂದಿಗೂ ಹುಟ್ಟು ಹಬ್ಬಗಳನ್ನು ಆಚರಿಸಿಕೊಳ್ಳದವರು ಸಹ ಇದೇ ನೆಪದಲ್ಲಿ ಭರ್ಜರಿ ಬಾಡೂಟ ಮಾಡಿಸುವುದು, ಸಾರ್ವಜನಿಕ ಕಾರ್ಯಕ್ಕೆ ಹಣ ಖರ್ಚು ಮಾಡಿ ಓಲೈಸಿಕೊಳ್ಳುತ್ತಿದ್ದಾರೆ.
–ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.