ಖೇಲೋ ಇಂಡಿಯಾ: ಮತ್ತೆ 4 ಕ್ರೀಡೆಗಳ ಸೇರ್ಪಡೆ
Team Udayavani, Dec 21, 2020, 10:55 PM IST
ಹೊಸದಿಲ್ಲಿ: ಮಲ್ಲಕಂಬ ಹಾಗೂ ಕಳರಿಪಯಟ್ಟು ಸಹಿತ ನಾಲ್ಕು ಸ್ಥಳೀಯ ಕ್ರೀಡೆಗಳಿಗೆ ಕ್ರೀಡಾ ಸಚಿವಾಲಯ 2021ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಮ್ಮತಿ ನೀಡಿದೆ.
ಮುಂದಿನ ವರ್ಷದಲ್ಲಿ ಹರ್ಯಾಣದಲ್ಲಿ ನಡೆಯಲಿರುವ “ಖೇಲೋ ಇಂಡಿಯಾ ಯೂತ್ ಗೇಮ್ಸ್’ನಲ್ಲಿ ಈ ಸ್ಥಳೀಯ ಕ್ರೀಡೆಗಳನ್ನು ಕಾಣಬಹುದಾಗಿದೆ. ಕರ್ನಾಟಕದ ಮಲ್ಲಕಂಬ, ಕೇರಳದ ಕಳರಿಪಯಟ್ಟು, ಪಂಜಾಬ್‌ನ ಗಾಟ್ಕ ಹಾಗೂ ಮಣಿಪುರದ ಥಾಂಗ್-ತಾ ಕ್ರೀಡೆಗಳು ಖೇಲೋ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದೆ.
ಮುಂದಿನ ಪೀಳಿಗೆಗೆ ಪರಿಚಯ
ಕ್ರೀಡಾ ಸಚಿವ ಕಿರಣ್ ರಿಜಿಜು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, “ಭಾರತ ಸ್ಥಳೀಯ ಕ್ರೀಡೆಗಳ ಸಮೃದ್ಧವಾದ ಸಂಸ್ಕೃತಿಯನ್ನು ಹೊಂದಿದೆ. ಇಂಥ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ ಮುಂದಿನ ಪೀಳಿಗೆಗೆ ತಲುಸಿಸಬೇಕು ಈಗಾಗಲೇ ಕೆಲವು ಸ್ಥಳಿಯ ಕ್ರೀಡೆಗಳು ಕಣ್ಮರೆಯಾಗಿದೆ. ಇನ್ನುಳಿದ ಕೆಲವು ಕ್ರೀಡೆಗಳನ್ನಾದರೂ ಉಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು.
ಈ ಕ್ರೀಡೆಗಳಲ್ಲಿನ ಸ್ಪರ್ಧಿಗಳಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ವಿಶ್ವಕ್ಕೆ ತೋರಿಸಲು ಖೇಲೋ ಇಂಡಿಯಾ ಗೇಮ್ಸ್‌ಗಿಂತ ಉತ್ತಮ ವೇದಿಕೆ ದೊರೆಯದು. ಅದರಂತೆ 2021ರ ಖೇಲೋ ಇಂಡಿಯಾ ಕೂಟದಲ್ಲಿ ಯೋಗಾಸನದ ಜತೆಗೆ ಈ ನಾಲ್ಕು ಕ್ರೀಡೆಗಳು ಎಲ್ಲರ ಗಮನ ಸೆಳೆಯಲಿದೆ ಎಂಬ ಭರವಸೆ ಹೊಂದಿದ್ದೇನೆ ಎಂದು ರಿಜಿಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.