ಯಕ್ಷಗಾನ ಸಾಧಕರಿಗೆ ಅಕಾಡೆಮಿ ಪ್ರಶಸ್ತಿಯ ಕಿರೀಟ


Team Udayavani, Dec 22, 2020, 5:28 AM IST

ಯಕ್ಷಗಾನ ಸಾಧಕರಿಗೆ ಅಕಾಡೆಮಿ ಪ್ರಶಸ್ತಿಯ ಕಿರೀಟ

ಬಿ. ಸಂಜೀವ ಸುವರ್ಣ

ಕರ್ನಾಟಕ ಯಕ್ಷಗಾನ ಅಕಾಡೆಮಿಯ 2020ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಮತ್ತು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಿದೆ. ಪ್ರಶಸ್ತಿಗೆ ಆಯ್ಕೆಯಾದವರ ಪರಿಚಯ ಇಂತಿದೆ.

ಡಿ. ಎಸ್‌.ಶ್ರೀಧರ್‌ಗೆ ಪಾರ್ತಿಸುಬ್ಬ ಪ್ರಶಸ್ತಿ
ಹಿರಿಯ ಯಕ್ಷಗಾನ ಅರ್ಥಧಾರಿ ಹಾಗೂ ಪ್ರಸಂಗ ಕರ್ತ್ಯು ಡಿ.ಎಸ್‌. ಶ್ರೀಧರ್‌ ಅವರು ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ದರೆಮನೆಯಲ್ಲಿ 1950ರ ಆ. 25ರಂದು ಜನಿಸಿದರು. ವಿದ್ಯಾರ್ಥಿ ದೆಸೆಯಿಂದಲೇ ಯಕ್ಷಗಾನದಿಂದ ಆಕರ್ಷಿತರಾಗಿದ್ದು, ವೇಷಧಾರಿ ಯಾಗಿ, ಅರ್ಥಧಾರಿಯಾಗಿ, ವಿಮರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮೂವತ್ತೈದು ಪೌರಾಣಿಕ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಉಡುಪಿಯ ಯಕ್ಷಗಾನ ಕೇಂದ್ರವು “ಯಕ್ಷಗಾನ ಪ್ರಸಂಗ ಮಾಲಿಕಾ’ ಎಂಬ ಶೀರ್ಷಿಕೆಯಡಿ ಹದಿಮೂರು ಪ್ರಸಂಗಗಳನ್ನು ಒಂದೇ ಸಂಪುಟದಲ್ಲಿ ಪ್ರಕಟಿಸಿದೆ. 2019ರಲ್ಲಿ ಪುನಃ ಹದಿಮೂರು ಪ್ರಸಂಗಗಳ ದ್ವಿತೀಯ ಸಂಪುಟವನ್ನು ಪ್ರಕಟಿಸಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಸಂಬಂ ಧಿಸಿದ ನೂರಾರು ವಿಮರ್ಶೆಗಳು, ಚಿಂತನೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ, ಗ್ರಂಥಗಳಲ್ಲಿ ಪ್ರಕಟಗೊಂಡಿವೆ.

2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು
ಡಾ| ವಿಜಯ ನಳಿನಿ ರಮೇಶ್‌
ಡಾ| ವಿಜಯ ನಳಿನಿ ರಮೇಶ್‌ ಅವರು ಕನ್ನಡ, ಹಿಂದಿ ಭಾಷೆಯಲ್ಲಿ ಎಂ.ಎ., ಪಿಎಚ್‌.ಡಿ. ಪದವೀಧರರು. ಅವರು ಎಂ.ಎಂ. ಕಲಾ, ವಿಜ್ಞಾನ ಮಹಾವಿದ್ಯಾಲಯ, ಶಿರಸಿ ಇಲ್ಲಿ 1978ರಿಂದ 2007ರ ವರೆಗೆ ಕನ್ನಡ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ನಿವೃತ್ತರಾಗಿದ್ದಾರೆ.

ಕೆ. ತಿಮ್ಮಪ್ಪ ಗುಜರನ್‌
1950ರ ಅ. 8ರಂದು ಜನಿಸಿದ ಕೆ. ತಿಮ್ಮಪ್ಪ ಗುಜರನ್‌ ತಮ್ಮ 12ನೇ ವಯಸ್ಸಿನಲ್ಲಿಯೇ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದವರು. ಒಟ್ಟು 40 ಪ್ರಸಂಗಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಇವರ ಕಲಾಸೇವೆಯನ್ನು ಗುರುತಿಸಿ ಪಟ್ಲ ಫೌಂಡೇಶನ್‌, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

ಬಿ. ಪರಶುರಾಮ್‌
1950ರ ಜೂ. 1ರಂದು ಜನಿಸಿದ ಪರಶುರಾಮ್‌ ಅವರು ನೀನಾಸಂ ಹಾಗೂ ಎನ್‌.ಎಸ್‌.ಡಿ. ಪದ ವೀಧರರಾಗಿದ್ದು, 1986ರಿಂದ ಇಂದಿನವರೆಗೂ ಶ್ರೀ ಗೋಪಾಲಕೃಷ್ಣ ನಾಯರಿ ಮಾರ್ಗದರ್ಶನದಲ್ಲಿ ಹೊಸ ಅಲೆ ನಾಟಕಗಳ ಮತ್ತು ಮೂಡಲಪಾಯ ಯಕ್ಷಗಾನ ಕಲೆಗಳ ರುಚಿ ಉಣ ಬಡಿಸುವ ನಿಟ್ಟಿನಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಡಾ| ಚಕ್ಕೆರೆ ಶಿವಶಂಕರ್‌
ಮೂಡಲಪಾಯ ಯಕ್ಷಗಾನ ವಿದ್ವಾಂಸರು, ಸಂಘಟಕರಾಗಿರುವ ಅವರು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾ|ನ ಚಕ್ಕೆರೆ ಗ್ರಾಮದಲ್ಲಿ 1957ರ ಮೇ 19ರಂದು ಜನಿಸಿದರು. ದೇಜಗೌ ಮಾರ್ಗದರ್ಶನದಲ್ಲಿ ಮೈಸೂರು ವಿ.ವಿ.ಯಿಂದ ಪಿಎಚ್‌.ಡಿ. ಪಡೆದಿದ್ದಾರೆ. 20ಕ್ಕೂ ಹೆಚ್ಚು ಮೂಡಲಪಾಯ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ.

ಬಿ. ಸಂಜೀವ ಸುವರ್ಣ
“ಗುರು ಸುವರ್ಣ’ ಎಂದೇ ಖ್ಯಾತರಾದ ಬನ್ನಂಜೆ ಸಂಜೀವ ಸುವರ್ಣ ಅವರು 1955ರಲ್ಲಿ ಜನಿಸಿದರು. 1971-74ರ ವರೆಗೆ ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ಯಕ್ಷಗಾನದ ಪ್ರತಿಯೊಂದು ಅಂಗಗಳನ್ನು ಕೂಲಂಕಷವಾಗಿ ಅಭ್ಯಾಸ ಮಾಡಿ ಸಾಲಿಗ್ರಾಮ, ಹಿರಿಯಡ್ಕ, ಗೋಳಿಗರಡಿ ಮೇಳದಲ್ಲಿ ಯಕ್ಷಗಾನ ವೇಷಧಾರಿಯಾಗಿ ಕಲಾಸೇವೆ ಮಾಡಿದ್ದಾರೆ. 1982ರಲ್ಲಿ ಡಾ| ಶಿವರಾಮ ಕಾರಂತರ ನಿರ್ದೇಶನದ ಯಕ್ಷಗಾನ ಕೇಂದ್ರದ ವ್ಯವಸಾಯಿ ಮೇಳವಾದ ಯಕ್ಷರಂಗಕ್ಕೆ ಸೇರ್ಪಡೆಯಾಗಿದ್ದರು. 1984 ರಿಂದ ಯಕ್ಷಗಾನ ಕೇಂದ್ರದ ಗುರುಗಳಾಗಿ ನೇಮಕಗೊಂಡು ಅನಂತರ 2006ರಿಂದ ಯಕ್ಷಗಾನ ಕೇಂದ್ರದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2020ನೇ ಸಾಲಿನ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪುರಸ್ಕೃತರು
ಹರಿನಾರಾಯಣ ಬೈಪಾಡಿತ್ತಾಯ
ದ.ಕ. ಜಿಲ್ಲೆ ಕಡಬದ ಕೆಂಚಭಟ್ರೆಯಲ್ಲಿ 1946ರ ನ. 13ರಂದು ಜನಿಸಿದ ಹರಿನಾರಾಯಣ ಅವರು 7ನೇ ತರಗತಿಗೆ ಶಿಕ್ಷಣ ವನ್ನು ಸೀಮಿತಗೊಳಿಸಿ ರಂಗದತ್ತ ಹೆಜ್ಜೆ ಇಟ್ಟವರು. ಆರಂಭದಲ್ಲಿ ಚೆಂಡೆಯ ಗಂಡುಗಲಿ ನೆಡ್ಲೆ ನರಸಿಂಹ ಭಟ್‌ ಅವರಲ್ಲಿ ಶಿಷ್ಯತ್ವ ಪಡೆದು, ಚೆಂಡೆ- ಮದ್ದಳೆ ವಾದನದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಇವರ ಕುಟುಂಬವೇ ಯಕ್ಷಗಾನ ಪರಂಪರೆಯದು. ತಮ್ಮ 15ನೇ ವಯಸ್ಸಿಗೆ ಮೇಳದ ತಿರುಗಾಟ ಆರಂಭಿಸಿದ ಇವರು ಸೋಮನಾಥೇಶ್ವರ, ಧರ್ಮಸ್ಥಳ, ಕೊಲ್ಲೂರು, ಕೂಡ್ಲು, ಸುಬ್ರಹ್ಮಣ್ಯ, ಪುತ್ತೂರು, ಸುರತ್ಕಲ್‌, ಕರ್ನಾಟಕ, ಅರುವ, ಕುಂಬಳೆ, ಬಪ್ಪನಾಡು, ತಲಕಳ ಮುಂತಾದ ಟೆಂಟ್‌, ಬಯಲಾಟ ಮೇಳಗಳಲ್ಲಿ ವ್ಯವಸಾಯ ಮಾಡಿ ಸುಮಾರು ಆರು ದಶಕಗಳಿಂದ ಯಕ್ಷ ಕಲಾಮಾತೆಯ ಸೇವೆ ಮಾಡುತ್ತಾ ಬಂದಿ ದ್ದಾರೆ. ಪ್ರಸ್ತುತ ಕಲಿಕೆಯ ಆಸಕ್ತಿಯುಳ್ಳ ಮಕ್ಕಳಿಗೆ ಚೆಂಡೆ, ಮದ್ದಳೆ, ಭಾಗವತಿಕೆ ತರಬೇತಿ ನೀಡುತ್ತಾ, ಅವರನ್ನು ರಂಗಕ್ಕೆ ತರುವಲ್ಲಿ ಶ್ರಮಿಸಿದ್ದಾರೆ.

ಬೇಲ್ತೂರು ರಮೇಶ್‌
ಬೇಲ್ತೂರು ಎಂಬ ಅನ್ವರ್ಥನಾಮದಿಂದ ಪ್ರಸಿದ್ಧರಾದ ರಮೇಶ್‌ ಅವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬೇಲೂ¤ರು ಎಂಬಲ್ಲಿ 1950ರಲ್ಲಿ ಜನಿಸಿ ದರು. ಕಷ್ಟದ ನಡುವೆಯೇ ಯಕ್ಷಗಾನದ ಗೀಳನ್ನು ಬಾಲ್ಯದಿಂದಲೇ ಹೊಂದಿದ್ದರು. ಬಡಗುತಿಟ್ಟಿನ ಪ್ರಸಿದ್ಧ ಬಣ್ಣದ ವೇಷಧಾರಿ ಬೇಲೂ¤ರು ರಾಮ ಬಳೆಗಾರರು ಇವರ ಮೊದಲ ಗುರುಗಳು. ರಾಮಬಳೆಗಾರರ ಮಳೆಗಾಲದ ಹೂವಿನ ಕೋಲಿನ ಕಲಾವಿದರಾಗಿ ಯಕ್ಷಗಾನಕ್ಕೆ ಪಾದಾರ್ಪಣೆಯನ್ನು ಮಾಡಿ, ದಿ| ಬಿ.ವಿ.ಆಚಾರ್ಯ ಮತ್ತು ಸುಬ್ಬಣ್ಣ ಭಟ್ಟರ ನೇತೃತ್ವದಲ್ಲಿ ಡಾ| ಮಾರ್ತ ಆಸ್ಟನ್‌ ಜತೆಗೆ 1979ರಲ್ಲಿ ಅಮೆರಿಕಾದಲ್ಲಿ ಆ ಕಾಲದಲ್ಲಿ ಯಕ್ಷಗಾನ ಕಲೆಗೆ ಮನ್ನಣೆ ಸಿಗುವ ಹಾಗೆ ಮಾಡಿದ್ದರು. ಕೆ.ಎಸ್‌. ಉಪಾಧ್ಯಾಯ ಅವರ ಜತೆಗೆ ಹಾಂಕಾಂಗ್‌, ಜರ್ಮನಿ, ಕೆನಡ ಮತ್ತು ಡಾ| ಲೀಲಾ ಉಪಾಧ್ಯಾಯ ಅವರ ಜತೆಗೆ ಫ್ರಾನ್ಸ್‌, ಇಸ್ರೇಲ್‌ ಬೀಗೆ ಬಡಗುತಿಟ್ಟಿನ ಕಲಾವಿದರ ಪೈಕಿ ಹಲವು ಬಾರಿ ವಿದೇಶ ಪ್ರವಾಸ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಸುಬ್ರಹ್ಮಣ್ಯ ಧಾರೇಶ್ವರ
1957ರ ಸೆ. 5ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಸುಬ್ರಹ್ಮಣ್ಯ ಧಾರೇಶ್ವರ ಅವರು ಎಲೆಕ್ಟ್ರಿಶಿಯನ್‌ ಆಗಿ ಮೇಳ ವನ್ನು ಸೇರಿ, ಸುಮಾರು 46 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿ, ನಿರ್ದೇಶಕರಾಗಿ, ರಚನಾಕಾರರಾಗಿ, ಸಂಯೋಜಕರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಂಗ ಪ್ರಯೋಗಗಳಿಗಾಗಿ ಮಹಾಭಾರತ, ರಾಮಾಯಣ, ಭಾಗವತ, ದೇವಿ ಪುರಾಣದ ಪ್ರಸ್ತುತ ಬಳಕೆಯಲ್ಲಿ ಇರದ ಕೆಲವು ಪ್ರಸಂಗಗಳನ್ನು ಆಯ್ದುಕೊಂಡು, ಅದನ್ನು ಯಕ್ಷಗಾನದ ಚೌಕಟ್ಟಿಗೆ ಒಪ್ಪುವಂತೆ ಪರಿಷ್ಕರಿಸಿ, ಸಮಯದ ಮಿತಿಯೊಳಗೆ ಪ್ರದರ್ಶನಕ್ಕೆ ಯೋಗ್ಯವಾಗುವಂತೆ ಪ್ರೇಕ್ಷಕರು ಹಾಗೂ ವಿಮರ್ಶಕರು ಒಪ್ಪುವಂತೆ ಸಂಯೋಜಿಸಿ ಬಹಳ ಕಡೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಇವರ ಸಂಯೋಜನೆಯ ಹಲವು ಯಕ್ಷಗಾನ ಪ್ರಸಂಗಗಳು 100 ದಿನಗಳಿಗೂ ಹೆಚ್ಚು ಪ್ರದರ್ಶನಗೊಂಡು ಪ್ರೇಕ್ಷಕರಿಂದ ಮುಕ್ತಕಂಠದಿಂದ ಪ್ರಶಂಸಿಸಲ್ಪಟ್ಟಿದೆ.

ಸಂಜಯ್‌ ಕುಮಾರ್‌ ಶೆಟ್ಟಿ
ಮೂಡಿಗೆರೆ ತಾ|ನ ಗೋಣಿಬೀಡಿನಲ್ಲಿ 1960ರ ಜೂ. 1ರಂದು ಜನಿಸಿದ ಸಂಜಯ್‌ ಕುಮಾರ್‌ 17ನೇ ವಯಸ್ಸಿನಲ್ಲಿಯೇ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದರು. ದಿ| ಪಡ್ರೆಚಂದು ಅವರು ಮೊದಲ ಯಕ್ಷಗಾನದ ನಾಟ್ಯ ಗುರುಗಳು. ಇವರು ಶ್ರೀ ಲಲಿತಕಲಾ ಕೇಂದ್ರ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೊದಲಿಗೆ ಯಕ್ಷಗಾನ ತರಬೇತಿ ಪ್ರಾರಂಭಿಸಿದರು.

ಆವರ್ಸೆ ಶ್ರೀನಿವಾಸ ಮಡಿವಾಳ
ಆವರ್ಸೆ ಸೀನ ಎಂದೇ ಹೆಸರುವಾಸಿಯಾಗಿರುವ ಇವರು 1941ರ ಮಾರ್ಚ್‌ 6ರಂದು ಪೇರ್ಡೂರು ದೇವಸ್ಥಾನಬೆಟ್ಟು ಎಂಬಲ್ಲಿ ಜನಿಸಿದರು. ಯಕ್ಷಗಾನ ಕಲೆಯ ಬಗ್ಗೆ ಬಾಲ್ಯದಿಂದಲೇ ಆಕರ್ಷಿತರಾಗಿದ್ದ ಇವರು ಕಡುಬಡತನದ ಕಾರಣ 5ನೇ ತರಗತಿಗೆ ಶಿಕ್ಷಣವನ್ನು ಸೀಮಿತಗೊಳಿಸಿದರು. 1958ರಲ್ಲಿ ಮೊದಲ ಬಾರಿಗೆ ಕಮಲಶಿಲೆ ಮೇಳಕ್ಕೆ ಸೇರಿದರು. ಸ್ತ್ರೀ ವೇಷಧಾರಿಯಾಗಿ ಪ್ರಸಿದ್ಧರಾದ ಅವರು ಎಪ್ಪತ್ತೂಂಬತ್ತರ ಇಳಿವಯಸ್ಸಿನಲ್ಲೂ ಪ್ರಸ್ತುತ ಹವ್ಯಾಸಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗೋಪಾಲ ಆಚಾರ್ಯ ತೀರ್ಥಹಳ್ಳಿ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ 1956ರ ಫೆ. 24ರಂದು ಗೋಪಾಲ ಆಚಾರ್ಯ ಜನಿಸಿ ದರು. ಕೃಷ್ಣೋಜಿ ರಾವ್‌ ಅವರ ಮೊದಲ ಯಕ್ಷಗಾನ ಗುರುಗಳು. ಆಕರ್ಷಕ ವೇಷಗಾರಿಕೆ, ಸು# ಟವಾದ, ಪ್ರಬುದ್ಧ ಮಾತುಗಾರಿಕೆ, ಅಪ್ರತಿಮ ರಂಗತಾಂತ್ರಿಕತೆ ಅವರಲ್ಲಿ ಮೇಳೈಸಿದೆ.

ಎಂ.ಆರ್‌. ಹೆಗಡೆ ಕಾನಗೋಡ
1948ರ ಮಾ. 2ರಂದು ಜನಿಸಿದ ಹೆಗಡೆ ಅವರು ತಮ್ಮ ಹತ್ತನೇ ವಯಸ್ಸಿನಲ್ಲಿ ಯಕ್ಷಗಾನ “ದ್ರೌಪದಿ ಪ್ರತಾಪ’ದಲ್ಲಿ ನಾರದನ ಪಾತ್ರ ನಿರ್ವಹಣೆಯೊಂದಿಗೆ ಪ್ರಥಮ ರಂಗ ಪ್ರವೇಶ ಮಾಡಿದರು. 1958ರಿಂದ ಗೋಳಿ ಶ್ರೀ ಸಿದ್ಧಿವಿನಾಯಕ ನಾಟ್ಯ ಸಂಘದಲ್ಲಿ ವರ್ಣಾಲಂಕಾರ, ವೇದಿಕೆ ಸಿದ್ಧತೆ, ಪಾತ್ರ ನಿರ್ವಹಣೆ, ಸಹ ನಿರ್ದೇಶನಗಳನ್ನು ಇಂದಿನವರೆಗೂ ಮಾಡುತ್ತಾ ಬಂದಿದ್ದಾರೆ.

ವಿಟ್ಲ ಶಂಭು ಶರ್ಮ
ಕುಂಬಳೆ ಸೀಮೆಯ ಎಡನಾಡು ಗ್ರಾಮದ ಶೆಡ್ರಂಪಾಡಿಯಲ್ಲಿ 1951ರ ಅ. 13ರಂದು ಜನಿಸಿದರು. ಸ್ನಾತಕೋತ್ತರ ಪದವಿಯನ್ನು (ಅರ್ಥಶಾಸ್ತ್ರ) ಬೆಂಗಳೂರಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ಯಾಗಿದ್ದಾಗಲೇ ಬೆಂಗಳೂರು ಪುರಭವನದಲ್ಲಿ ಶೇಣಿ ಅವರ ಬಲಿಗೆ ಶುಕ್ರಾಚಾರ್ಯರ ಪಾತ್ರದಲ್ಲಿ ಅಭಿನ ಯಿಸಿದ್ದರು. 30 ವರ್ಷಗಳು ವಿವಿಧ ವಿದ್ಯಾಲಯಗಳಲ್ಲಿ ಅರ್ಥಶಾಸ್ತ್ರ ಉಪ ನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು 14ನೇ ವಯಸ್ಸಿನಲ್ಲಿಯೇ ದೊಡ್ಡ ಸಾಮಗರ ಭೀಷ್ಮನಿಗೆ ಅಭಿಮನ್ಯು ವಾಗಿ ಮಿಂಚಿದ ಕಲಾವಿದರು.

ಎ.ಎಂ. ಮುಳವಾಗಲಪ್ಪ
ಕೋಲಾರ ಜಿಲ್ಲೆ ವಕ್ಕಲೇರಿ ಹೋಬಳಿ ಅರಾಬಿಕೊತ್ತನೂರಿನಲ್ಲಿ 1959ರ ಜ. 1ರಂದು ಜನಿಸಿದ ಮುಳವಾಗಲಪ್ಪ ಅವರಿಗೆ ಮುಖವೀಣೆ ನುಡಿಸುವಲ್ಲಿ ಅವರ ತಂದೆಯವರೇ ಮೊದಲ ಗುರುಗಳು. ಅನಂತರ ಮುನಿತ್ತಾಯಪ್ಪ ಕಟೂ¤ರು ಅವರಿಂದ ಮುಖವೀಣೆ ನುಡಿಸುವಲ್ಲಿ ನಿರಂತರ ಅಭ್ಯಾಸವನ್ನು ಮಾಡಿದರು. ಅವರು ಸತ್ಯಮ್ಮ ಕೃಪಾ ಪೋಷಿತ ನಾಟಕ ಮಂಡಳಿಯನ್ನು ಸ್ಥಾಪಿಸಿ ಮಕ್ಕಳಿಗೆ ತರಬೇತಿಯನ್ನು ನೀಡುತ್ತಿದ್ದಾರೆ.

ಹನುಮಂತರಾಯಪ್ಪ
ತುಮಕೂರು ಜಿಲ್ಲೆ ಸಿರಾ ತಾ|, ಕರಿರಾಮನಹಳ್ಳಿಯ ಶ್ರೀ ಹನುಮಂತರಾಯಪ್ಪ ಅವರು ಮೂಡಲಪಾಯ ಯಕ್ಷಗಾನ ಕಲೆಯ ಪುನರುಜ್ಜೀವನಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡವರು. 1925ರ ಅ. 10ರಂದು ಜನಿಸಿದ್ದು, ಕೂಲಿಮಠದಲ್ಲಿ ಅಮರಕೋಶ, ರಾಮಾಯಣ, ಮಹಾಭಾರತ ಕಲಿತವರು.

ಟಾಪ್ ನ್ಯೂಸ್

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.