ಹಗೆತನದಿಂದ ಶಾಂತಿ ಅಸಾಧ್ಯ : ಬುದ್ಧನ ತತ್ವ ಸಾರುತ್ತಲೇ ಚೀನಕ್ಕೆ ಮೋದಿ ಬುದ್ಧಿಮಾತು
ಜಗತ್ತಿನ ಅಭಿವೃದ್ಧಿ ಮಾದರಿಗಳು ಮಾನವ ಕೇಂದ್ರಿತವಾಗಿ ರೂಪುಗೊಳ್ಳಬೇಕು
Team Udayavani, Dec 21, 2020, 11:58 PM IST
ಹೊಸದಿಲ್ಲಿ: ಹಗೆತನದಿಂದ ಎಂದಿಗೂ ಶಾಂತಿ ಸಾಧಿಸಲು ಸಾಧ್ಯವಿಲ್ಲ. ನೆರೆಹೊರೆಯವರ ಜತೆ ಸಾಮರಸ್ಯದಿಂದ ಇರುವುದನ್ನು ಕಲಿಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಚೀನಕ್ಕೆ ಪರೋಕ್ಷವಾಗಿ ಬುದ್ಧಿಮಾತು ಹೇಳಿದ್ದಾರೆ. 6ನೇ ಇಂಡೋ- ಜಪಾನ್ ಸಂವಾದ ವೀಡಿಯೋ ಕಾನೆ#ರೆನ್ಸ್‌ನಲ್ಲಿ ಮಾತನಾಡಿದ ಪ್ರಧಾನಿ, “ಸಾಮ್ರಾಜ್ಯಶಾಹಿತ್ವ ದಿಂದ ವಿಶ್ವಯುದ್ಧದವರೆಗೆ… ಶಸ್ತ್ರಾಸ್ತ್ರ ಸ್ಪರ್ಧೆಯಿಂದ ಬಾಹ್ಯಾಕಾಶದ ಓಟದವರೆಗೆ ನಾವು ಮಾತುಕತೆಗೆ ಆದ್ಯತೆ ನೀಡಿದರೆ, ಅವರು ಇತರರನ್ನು ಕೆಳಗಿಳಿಸುವ ಉದ್ದೇಶ ಹೊಂದಿದ್ದರು. ಆದರೂ, ನಾವಿಂದೂ ಅವರ ಸಮನಾಗಿ ಒಟ್ಟಿಗೆ ಮೇಲೇರುತ್ತಿದ್ದೇವೆ’ ಎಂದು ಚೀನ ಹೆಸರು ಪ್ರಸ್ತಾವಿಸದೆ ತಿಳಿಸಿದರು.
ಮಾನವಕೇಂದ್ರಿತ ಅಭಿವೃದ್ಧಿ: “ಜಾಗತಿಕ ಬೆಳವಣಿಗೆ ಕುರಿತ ಚರ್ಚೆಗಳು ಕೆಲವರಿಂದಷ್ಟೇ ಅಸಾಧ್ಯ. ಚರ್ಚೆಯ ಟೇಬಲ್ ದೊಡ್ಡದಾಗಬೇಕು. ಅದಕ್ಕೆ ತಕ್ಕಂತೆ ಕಾರ್ಯಸೂಚಿಗಳೂ ವಿಸ್ತಾರಗೊಳ್ಳಬೇಕು. ಅಭಿವೃದ್ಧಿ ಮಾದರಿಗಳು ಮಾನವ ಕೇಂದ್ರಿತವಾಗಿರಬೇಕು ಎಂದು ಸಲಹೆ ನೀಡಿದರು.
“ಚರಿತ್ರೆಯಿಂದ ಪಾಠ ಕಲಿತು, ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡಿ ಎಂದು ಭಗವಾನ್ ಬುದ್ಧ ಹೇಳಿದ್ದಾರೆ. ಅವರ ತತ್ತÌಗಳು ಶತ್ರುತ್ವದಿಂದ ಸಬಲೀಕರಣಕ್ಕೆ ನಮ್ಮನ್ನು ಪರಿವರ್ತಿಸುತ್ತವೆ. ನಮ್ಮ ಹೃದಯವನ್ನು ವಿಶಾಲಗೊಳಿಸುತ್ತವೆ’ ಎಂದು ಹೇಳಿದ್ದಾರೆ. ಭಾರತದಲ್ಲಿ ಬೌದ್ಧ ಸಾಹಿತ್ಯ, ಧರ್ಮಗ್ರಂಥಗಳನ್ನೊಳಗೊಂಡ ಬೃಹತ್ ಗ್ರಂಥಾಲಯ ನಿರ್ಮಿಸುವ ಕುರಿತೂ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್ ಭಾಗ್ವತ್
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Human Error: ಮಾನವ ಲೋಪದಿಂದಲೇ CDS ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.