4 ದೇಶಗಳಿಗೆ ಹಬ್ಬಿದ ಸೋಂಕು; ಯುಕೆಯಲ್ಲಿ ಕೋವಿಡ್ ಹೊಸ ಸ್ವರೂಪ; ಜಗತ್ತಿನಾದ್ಯಂತ ಹಬ್ಬುವ ಭೀತಿ


Team Udayavani, Dec 22, 2020, 12:50 AM IST

4 ದೇಶಗಳಿಗೆ ಹಬ್ಬಿದ ಸೋಂಕು; ಯುಕೆಯಲ್ಲಿ ಕೋವಿಡ್ ಹೊಸ ಸ್ವರೂಪ; ಜಗತ್ತಿನಾದ್ಯಂತ ಹಬ್ಬುವ ಭೀತಿ4 ದೇಶಗಳಿಗೆ ಹಬ್ಬಿದ ಸೋಂಕು; ಯುಕೆಯಲ್ಲಿ ಕೋವಿಡ್ ಹೊಸ ಸ್ವರೂಪ; ಜಗತ್ತಿನಾದ್ಯಂತ ಹಬ್ಬುವ ಭೀತಿ

ಜರ್ಮನಿಯ ಏರ್‌ಪೋರ್ಟ್‌ನ ಹೊರಗಡೆ ಯುಕೆಯಿಂದ ಬಂದ ಪ್ರಯಾಣಿಕರಿಗೆಂದು ತುರ್ತು ವಾಹನ ಸನ್ನದ್ಧವಾಗಿ ನಿಂತಿರುವುದು.

ಹೊಸದಿಲ್ಲಿ: 2021ರ ಹೊಸ ವರ್ಷವು “ಕೊರೊನಾ’ ಕರಾಳತೆಯಿಂದ ಮುಕ್ತಿ ನೀಡ ಬಹುದು ಎಂಬ ನಿರೀಕ್ಷೆಯಲ್ಲಿದ್ದ ಜಗತ್ತಿಗೆ “ಯುಕೆಯಲ್ಲಿ ಪತ್ತೆಯಾದ ವೈರಸ್‌ನ ಹೊಸ ಸ್ವರೂಪ’ವು ತೀವ್ರ ನಿರಾಸೆಯ ಜೊತೆಗೆ ಆತಂಕವನ್ನೂ ಉಂಟುಮಾಡಿದೆ. ಬ್ರಿಟನ್‌ನಲ್ಲಿ ಅತಿ ವೇಗವಾಗಿ ಹಬ್ಬುವ ಹೊಸ ಸ್ವರೂಪ ಪತ್ತೆಯಾದ ಬೆನ್ನಲ್ಲೇ ಹಲವು ದೇಶಗಳು ಪ್ರಯಾಣ ನಿರ್ಬಂಧ ವಿಧಿಸಿವೆಯಾದರೂ, ಅಷ್ಟರಲ್ಲಾಗಲೇ, ದಕ್ಷಿಣ ಆಫ್ರಿಕಾ, ಇಟಲಿ, ಆಸ್ಟ್ರೇಲಿಯಾಗೆ ಈ ವೈರಸ್‌ ಪ್ರವೇಶ ಪಡೆದಾಗಿದೆ.

ಯು.ಕೆ.ಯಿಂದ ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ಗೆ ಬಂದಿಳಿದ ಇಬ್ಬರು ಪ್ರಯಾಣಿಕರಿಗೆ ಹೊಸ ಸ್ವರೂಪದ ಸೋಂಕು ಹಬ್ಬಿರುವುದು ಸೋಮವಾರ ಪತ್ತೆಯಾಗಿದೆ. ಇವರಿಬ್ಬರನ್ನೂ ಸದ್ಯಕ್ಕೆ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಇಟಲಿಯಲ್ಲೂ ಇತ್ತೀಚೆಗೆ ಯುಕೆ ಯಿಂದ ಆಗಮಿಸಿದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಫ್ರಾನ್ಸ್‌ನಲ್ಲಿ ಕೂಡ ಹೊಸ ಸ್ವರೂಪದ ವೈರಸ್‌ ವ್ಯಾಪಿಸುತ್ತಿರುವ ಲಕ್ಷಣ ಕಾಣಿಸುತ್ತಿರುವುದಾಗಿ ಸರಕಾರ ತಿಳಿಸಿದೆ.

ಸಂಸದೀಯ ಸಮಿತಿ ವರದಿ ಸಲ್ಲಿಕೆ: ಯಾವುದೇ ಲಸಿಕೆಗೂ ತುರ್ತು ಬಳಕೆಗೆ ಅನುಮತಿ ನೀಡುವ ಮುನ್ನ, ಆ ಲಸಿಕೆಯನ್ನು ದೊಡ್ಡ ಮಟ್ಟದ ಜನರ ಮೇಲೆ ಪ್ರಯೋಗಿಸಿ ಯಶಸ್ವಿಯಾಗಲಾಗಿದೆಯೇ ಎಂಬುದನ್ನು ನೋಡುವುದು ಅತೀ ಮುಖ್ಯ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಆನಂದ್‌ ಶರ್ಮಾ ನೇತೃತ್ವದ ಸಂಸದೀಯ ಸಮಿತಿ ಹೇಳಿದೆ. ಸೋಮವಾರ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಸಮಿತಿಯು ವರದಿ ಸಲ್ಲಿಸಿದ್ದು, ಲಸಿಕೆ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳ ಮೇಲೆ ಕಣ್ಣಿಡಲು ಮತ್ತು ಲಸಿಕೆಯ ಕಾಳಸಂತೆ ಮಾರಾಟ ತಪ್ಪಿಸಲು ಸಮಗ್ರ ಸಾರ್ವಜನಿಕ ಆರೋಗ್ಯ ಕಾನೂನು ರೂಪಿಸ ಬೇಕಿದೆ ಎಂದೂ ಸಲಹೆ ನೀಡಿದೆ.

ಇದೇ ವೇಳೆ, ರವಿವಾರದಿಂದ ಸೋಮ ವಾರದ ವರೆಗೆ 24 ಗಂಟೆಗಳಲ್ಲಿ ದೇಶಾದ್ಯಂತ 24,337 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಅವಧಿಯಲ್ಲಿ 333 ಮಂದಿ ಸಾವಿಗೀಡಾಗಿದ್ದಾರೆ.

ನಿಯೋಜಿತ ಅಧ್ಯಕ್ಷ ಬೈಡೆನ್‌ಗೆ ಲಸಿಕೆ: ಅಮೆರಿಕದ ಜನರಲ್ಲಿ ಲಸಿಕೆ ಕುರಿತು ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ಅವರು ಲಸಿಕೆಯ ಮೊದಲ ಡೋಸ್‌ ಅನ್ನು ಪಡೆದುಕೊಂಡಿದ್ದಾರೆ. ಈ ಪ್ರಕ್ರಿಯೆಯು ಟಿವಿಗಳಲ್ಲಿ ನೇರ ಪ್ರಸಾರವಾಗಿದೆ. ಶುಕ್ರವಾರವಷ್ಟೇ ಉಪಾಧ್ಯಕ್ಷ ಮೈಕ್‌ ಪೆನ್ಸ್‌, ಹೌಸ್‌ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಸೇರಿದಂತೆ ಪ್ರಮುಖರು ಮೊದಲ ಡೋಸ್‌ ಪಡೆದಿದ್ದರು.

ಷೇರುಪೇಟೆಗೂ ತಟ್ಟಿದ “ಕೊರೊನಾ’ ಭೀತಿ!
ಮುಂಬಯಿ: ಷೇರುಪೇಟೆಯ ಸತತ 6 ದಿನಗಳ ದಾಖಲೆಯ ನಾಗಾಲೋಟಕ್ಕೆ “ಕೊರೊನಾದ ಹೊಸ ಸ್ವರೂಪ’ ಬ್ರೇಕ್‌ ಹಾಕಿದೆ. ಯು.ಕೆ.ಯಲ್ಲಿ ಕೊರೊನಾವೈರಸ್‌ನ ಭಿನ್ನ ಸ್ವರೂಪ ಪತ್ತೆಯಾಗಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಅಲ್ಲದೆ ಮುಂದಿನ ವರ್ಷ ಆರ್ಥಿಕ ಚೇತರಿಕೆಯಾಗಬಹುದು ಎಂಬ ನಿರೀಕ್ಷೆಯ ಮೇಲೆ ದಟ್ಟ ಕಾರ್ಮೋಡ ಕವಿಯುವಂತೆ ಮಾಡಿದೆ. ಈ ಎಲ್ಲ ಭೀತಿಗಳಿಂದಾಗಿ ಹೂಡಿಕೆದಾರರು ಸೋಮವಾರ ಒಂದೇ ಸಮನೆ ಷೇರುಗಳ ಮಾರಾಟದಲ್ಲಿ ತೊಡಗಿಸಿಕೊಂಡ ಪರಿಣಾಮ, ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 1407 ಅಂಕಗಳ ಕುಸಿತ ದಾಖಲಿಸಿ, ದಿನಾಂತ್ಯಕ್ಕೆ 45,553.96ರಲ್ಲಿ ಕೊನೆಗೊಂಡಿದೆ. ನಿಫ್ಟಿ ಕೂಡ 432.15 ಅಂಕ ಕುಸಿದು, 13,328.40ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಒಎನ್‌ಜಿಸಿ ಷೇರುಗಳು ಶೇ.9.15ರಷ್ಟು ಕುಸಿದು ಭಾರೀ ನಷ್ಟ ಅನುಭವಿಸಿವೆ. ಇಂಡಸ್‌ಇಂಡ್‌ ಬ್ಯಾಂಕ್‌, ಎಂಆ್ಯಂಡ್‌ಎಂ, ಎಸ್‌ಬಿಐ, ಎನ್‌ಟಿಪಿಸಿ, ಐಟಿಸಿ, ಆಕ್ಸಿಸ್‌ ಬ್ಯಾಂಕ್‌, ಪವರ್‌ಗ್ರಿಡ್‌ ಷೇರುಗಳೂ ಕುಸಿತ ಕಂಡಿವೆ.

ಚಿನ್ನದ ದರ ಏರಿಕೆ: ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯ ಪರಿಣಾಮವೆಂಬಂತೆ, ಹೊಸದಿಲ್ಲಿ ಚಿನಿವಾರ ಮಾರುಕಟ್ಟೆಯಲ್ಲಿ ಸೋಮವಾರ ಚಿನ್ನದ ದರ 496 ರೂ. ಹೆಚ್ಚಳವಾಗಿದ್ದು, 10 ಗ್ರಾಂ.ಗೆ 50,297ರೂ.ಗೆ ತಲುಪಿದೆ. ಬೆಳ್ಳಿ ದರವೂ 2,249ರ ಭಾರೀ ಏರಿಕೆ ಕಂಡು, ಕೆಜಿಗೆ 69,477 ಆಗಿದೆ. ಇದೇ ವೇಳೆ, ಅಮೆರಿಕನ್‌ ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ ಸೋಮವಾರ 23 ಪೈಸೆ ಕುಸಿದು, 73.79ಕ್ಕೆ ತಲುಪಿದೆ.

ಭಾರತೀಯರು ಅತಂತ್ರ
ಕ್ರಿಸ್‌ಮಸ್‌ ಮತ್ತು ಹೊಸ ವರ್ಷವನ್ನು ಹೆತ್ತವ ರೊಂದಿಗೆ, ಕುಟುಂಬ ಸದಸ್ಯರೊಂದಿಗೆ ಕಳೆಯ ಲೆಂದು ವಿಮಾನ ಟಿಕೆಟ್‌ ಬುಕ್‌ ಮಾಡಿದ್ದ ನೂರಾರು ಭಾರತೀಯ ವಿದ್ಯಾರ್ಥಿಗಳು ಬ್ರಿಟನ್‌ನಲ್ಲಿ ಅತಂತ್ರರಾಗಿದ್ದಾರೆ. ಕೊರೊನಾ ವೈರಸ್‌ನ ಹೊಸ ಸ್ವರೂಪ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ವಿಮಾನಗಳ ಸಂಚಾರಕ್ಕೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳಿಗೆ ದಿಕ್ಕೇ ತೋಚದಂತಾಗಿದೆ. ಈ ನಡುವೆ ಐರೋಪ್ಯ ಒಕ್ಕೂಟದ ಔಷಧ ನಿಯಂತ್ರಣ ಸಂಸ್ಥೆಯು ಫೈಜರ್‌ ಲಸಿಕೆಯ ಬಳಕೆಗೆ ಒಪ್ಪಿಗೆ ನೀಡಿದೆ. ಕ್ರಿಸ್ಮಸ್‌ ಬಳಿಕ 27 ದೇಶಗಳಲ್ಲಿ ಲಸಿಕೆ ಬಳಕೆ ಆರಂಭವಾಗಲಿದೆ.

ನಾವು ದೇಶೀಯ ಕೊರೊನಾ ಲಸಿಕೆಯನ್ನು ಬಿಡುಗಡೆ ಮಾಡುವ ಹಂತಕ್ಕೆ ಬಂದಿದ್ದೇವೆ. ಸದ್ಯದಲ್ಲೇ ನಮ್ಮದೇ ಆದ ಲಸಿಕೆ ಬಿಡುಗಡೆಯಾ ಗುತ್ತಿರುವುದು ಖುಷಿಯ ಸಂಗತಿ.
ಎಂ. ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ಟಾಪ್ ನ್ಯೂಸ್

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

KLE Technological University: Awarded Honorary Doctorate to Murugesh Nirani

KLE Technological University: ಮುರುಗೇಶ್‌ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.