ಹೋರಾಟದ ಹಾದಿಯಲ್ಲಿ ಬಂತು ಪರಿಹಾರ
Team Udayavani, Dec 22, 2020, 3:10 PM IST
ವೇಮಗಲ್ ಜಗನ್ನಾಥ್ ರಾವ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕೆ “ಬಂತು ಪರಿಹಾರ’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿಕಂಡು ಬರುವ ಪ್ರವಾಹ ಘಟನೆಗಳಕುರಿತಾಗಿ ಈ ಚಿತ್ರ ಮೂಡಿಬರಲಿದೆಯಂತೆ.
ಪ್ರವಾಹ ಬಂದು ಹಲವಾರು ಹಳ್ಳಿಗಳು ಕೊಚ್ಚಿ ಹೋಗಿರುತ್ತದೆ. ಒಂದು ಹಳ್ಳಿಯಲ್ಲಿ ಸ್ಕೂಲ್ ಮಾಸ್ಟರ್ ಮತ್ತು ಇಬ್ಬರು ಮಕ್ಕಳು ಬದುಕಿರುತ್ತಾರೆ. ಅವರ ಹೋರಾಟದ ಕಥಾಹಂದರ ಈ ಚಿತ್ರದಲ್ಲಿದೆ ಎಂದಿದೆ ಚಿತ್ರತಂಡ. “ಲಕ್ಷ್ಮೀ ಕಲಾಮಂದಿರ ಫಿಲಂಸ್’ ಲಾಂಛನದಲ್ಲಿ ಕೆ.ಸಿ ಗೋವಿಂದಪ್ಪ ಅಂಡ್ ಸನ್ಸ್ ಹಾಗೂ ಜಾಹಿದ್ ಖಾನ್ ಜಂಟಿಯಾಗಿ ನಿರ್ಮಿಸುತ್ತಿರುವ ‘ಬಂತು ಪರಿಹಾರ’ ಚಿತ್ರದಲ್ಲಿ ನಕುಲ್ ಗೋವಿಂದ್, ಬೇಬಿ ಮನಸ್ವಿನಿ ಗೋವಿಂದ್, ಕೆ.ಹೆಚ್ ಮೀಸೆಮೂರ್ತಿ, ಬ್ಯಾಂಕ್ ಜನಾರ್ದನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ : ಶರಣ್ ಹೊಸ ಚಿತ್ರ ಗುರು ಶಿಷ್ಯರು
ಚಿತ್ರದ ಮೂರು ಹಾಡುಗಳಿಗೆ ಅಕ್ಷಯ್ ಜೈನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಸೂರಿ ಸಂಶಯ್ ಛಾಯಾಗ್ರಹಣ, ಶಿವಪ್ರಾಸಾದ್ ಯಾದವ್ ಸಂಕಲನವಿದೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸುಮಾರು ಮೂವತ್ತು ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.