ಹಲವುಯೋಜನೆಗಳಿಗೆ ಬಮೂಲ್ ಅನುದಾನ
Team Udayavani, Dec 22, 2020, 1:47 PM IST
ಚನ್ನಪಟ್ಟಣ: ಹಾಲು ಉತ್ಪಾದಕರಿಂದ ಕೇವಲ ಹಾಲನ್ನು ಕೊಳ್ಳುವ ವ್ಯವಹಾರಮಾತ್ರ ಮಾಡದೆ ಅವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಬಮೂಲ್ ರೂಪಿಸಿದ್ದು ಅವುಗಳನ್ನುಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಬಮೂಲ್ ಶಿಬಿರದ ಕೃಷಿ ಅಧಿಕಾರಿ ಜಿತೇಂದ್ರಕುಮಾರ್ ಸಲಹೆ ನೀಡಿದರು.
ತಾಲೂಕಿನ ಮಾದೇಗೌಡನದೊಡ್ಡಿಗ್ರಾಮದಲ್ಲಿ ನಡೆದ ಎಂಪಿಸಿಎಸ್ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಕೇವಲ ಹಾಲು ಕೊಳ್ಳುವ ವ್ಯಾಪಾರ ಮಾಡದೆ ಬಂದ ಲಾಭವನ್ನು ರೈತರಿಗೆನೀಡಲಾಗುತ್ತದೆ, ಹಾಗೆಯೇ ಪ್ರತಿಭಾ ಪುರಸ್ಕಾರ, ವಿಮಾ ಯೋಜನೆ, ಹೈನುಗಾರಿಕೆ ಯಂತ್ರಗಳಿಗೆಸಹಾಯಧನ, ತರಬೇತಿ ಹೀಗೆ ಹಲವಾರುಯೋಜನೆಗಳಿಗೆಬಮೂಲ್ ಅನುದಾನ ಒದಗಿಸುತ್ತಿದೆ ಎಂದರು.
ಸಂಘದ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಬಮೂಲ್‌ನಿಂದ ಸಿಗುವಸವಲತ್ತುಗಳ ಬಗ್ಗೆ ರೈತರಿಗೆ ತಿಳಿಸಿ, ಅಗತ್ಯವಿದ್ದವರಿಗೆ ಅವುಗಳನ್ನುತಲುಪಿಸುವ ಕೆಲಸ ಮಾಡಬೇಕು, ಯಾರೂ ಈ ಯೋಜನೆಗಳಿಂದವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.ಸಂಘದ ಅಧ್ಯಕ್ಷ ಸತೀಶ್ ಮಾತನಾಡಿ, ಕಳೆದ ಸಾಲಿನಲ್ಲಿ ಸಂಘವು 1.66ಲಕ್ಷ ರೂ. ಲಾಭ ಗಳಿಸಿದ್ದು, ಇನ್ನಷ್ಟು ಲಾಭ ಪಡೆಯಬೇಕೆಂದರೆ ಗುಣಮಟ್ಟದ ಹಾಲನ್ನು ಸಂಘಕ್ಕೆ ಸರಬರಾಜು ಮಾಡಬೇಕು ಎಂದು ಮನವಿ ಮಾಡಿದರು.
ಸಂಘದ ಕಾರ್ಯದರ್ಶಿ ಮಹೇಶ ಅವರು ಸಂಘದ ಲೆಕ್ಕಶೋಧನಾ ವರದಿ ಮತ್ತು ಮಂಡಳಿಯ ಅನುಪಾಲನಾವರದಿ ಓದಿ, ಅನುಮೋದನೆ ಪಡೆದುಕೊಂಡರು. ಸಂಘದ ಉಪಾಧ್ಯಕ್ಷೆಜಯಮ್ಮ, ನಿರ್ದೇಶಕರಾದ ಮಾದೇ ಗೌಡ, ಪಾರ್ಥಸಾರಥಿ ಇತರರಿದ್ದರು.
ದುಡಿದ ಹಣದಲ್ಲಿ ಶೇ.5 ಕಡು ಬಡವರಿಗೆ ನೀಡಿ: ಸ್ವಾಮೀಜಿ :
ಮಾಗಡಿ: ಸದಸ್ಯರಿಗೆ 1 ಲಕ್ಷ ರೂ., ಮನೆ ನಿರ್ಮಾಣಕ್ಕೆ5 ಲಕ್ಷ ರೂ.ವರೆಗೂ ಸಾಲ ನೀಡುತ್ತಿದ್ದು, ವೀರಶೈವ- ಲಿಂಗಾಯಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತ, ಸಮಾಜದ ಆಸ್ತಿ ಆಗಿ ಸಂಘ ವನ್ನು ಉಳಿಸಿಕೊಂಡು ಬರಲಾಗು ತ್ತಿದೆ ಎಂದು ಬಂಡೇಮಠದ ಬಸವ ಲಿಂಗ ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದರು.
ಪಟ್ಟಣದ ಎನ್‌ಇಎಸ್ ಬಡಾವಣೆಸರ್ವೋದಯ ಶಿಕ್ಷಣ ಸಂಸ್ಥೆ ಆವರಣ ದಲ್ಲಿ ಏರ್ಪಡಿಸಿದ್ದ ವೀರಶೈವ ಕ್ರೆಡಿಟ್‌ಕೋ ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ವೀರ ಶೈವ-ಲಿಂಗಾಯಿತ ಶಿಕ್ಷಕರು, ವ್ಯಾಪಾರಿ ಗಳು, ಉದ್ಯಮಿಗಳು ದುಡಿದ ಹಣ ವನ್ನು ಶೇ.5 ಸಮಾಜದಕಡುಬಡವರಿಗೆ ನೀಡಿದರೆ ಸಮಾಜ ಮೇಲೆತ್ತಲು ಸಾಧ್ಯವಾಗುತ್ತದೆ ಎಂದರು.
ಕೆಆರ್‌ಐಡಿಎಲ್‌ಅಧ್ಯಕ್ಷಎಂ.ರುದ್ರೇ ಶ್ ಮಾತನಾಡಿ, ವೀರಶೈವ ಸಮಾಜದ ಬ್ಯಾಂಕ್, ಸೊಸೈಟಿಗಳಲ್ಲಿ ಯಾವುದೇಅವ್ಯವಹಾರ, ಕೆಟ್ಟಹೆಸರು ಪಡೆದಿಲ್ಲ, ಈ ಸೊಸೈಟಿಯೂ ಉತ್ತಮವಾಗಿ ನಡೆದುಕೊಂಡು ಹೋಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಸಿಇಒ ತೋಂಟಾರಾಧ್ಯ ಮಾತನಾಡಿ, ನಿವ್ವಳ ಲಾಭದ ವಿವರಣೆ ನೀಡಿದರು. ವೀರಶೈವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಸ್.ಸಿ,ಬಿ.ಎಸ್. ಶಿವರುದ್ರಯ್ಯ ಮಾತನಾಡಿದರು. ಇದೇ ವೇಳೆ ವೀರಶೈವ ಸಮಾಜದ 38 ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ, ನೀಡಲಾಯಿತು.ಗದ್ದುಗೆ ಮಠದ ಮಹಂತ ಸ್ವಾಮೀಜಿ, ಗುಮ್ಮಸಂದ್ರ ರುದ್ರಮುನ್ನೇಶ್ವರ ಮಠದ ಚಂದ್ರಶೇಖರ ಸ್ವಾಮೀಜಿ, ಸೊಸೈಟಿ ಉಪಾಧ್ಯಕ್ಷ ಪಿ.ಗಂಗಾಧರಯ್ಯ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.