ನಿರಂತರ ವಿದ್ಯುತ್ ಗ್ರಾಹಕರ ಹಕ್ಕು
Team Udayavani, Dec 23, 2020, 12:54 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇಶಾದ್ಯಂತ ಗ್ರಾಹಕರು ಇನ್ನು ನಿರಂತರ ವಿದ್ಯುತ್ ಸಂಪರ್ಕ ಪಡೆಯುವ ಹಕ್ಕು ಹೊಂದಲಿದ್ದಾರೆ.
ವಿದ್ಯುತ್ ಪೂರೈಕೆ (ಗ್ರಾಹಕರ) ಹಕ್ಕು ನಿಯಮಗಳು, 2020ರ ಅಡಿಯಲ್ಲಿ ತರಲಾಗಿರುವ ಬದಲಾವಣೆಗಳು ಕೃಷಿ ಸಂಪರ್ಕದಂಥ ಕೆಲವು ನಿರ್ದಿಷ್ಟ ವರ್ಗಗಳನ್ನು ಬಿಟ್ಟು ಉಳಿದೆಲ್ಲ ಗ್ರಾಹಕರಿಗೆ ವರ್ಷಪೂರ್ತಿ 24×7 ವಿದ್ಯುತ್ ಪಡೆಯುವ ಹಕ್ಕನ್ನು ಕೊಡಲಿವೆ. ಕೇಂದ್ರ ಇಂಧನ ಸಚಿವ ಆರ್.ಕೆ. ಸಿಂಗ್ ಈ ವಿಚಾರವನ್ನು ಘೋಷಿಸಿದ್ದಾರೆ. “ಸರಕಾರಿ ಆಗಿರಲಿ ಅಥವಾ ಖಾಸಗಿ ಆಗಿರಲಿ; ದೇಶಾದ್ಯಂತ ವಿದ್ಯುತ್ ಪೂರೈಕೆ ಕಂಪೆನಿಗಳು(ಡಿಸ್ಕಾಂ) ಏಕಸ್ವಾಮ್ಯ ಹೊಂದಿವೆ ಮತ್ತು ಇದರಿಂದ ಗ್ರಾಹಕರಿಗೆ ಪರ್ಯಾಯವಿಲ್ಲದಂತಾಗಿದೆ. ಈ ಕಾರಣಕ್ಕಾಗಿಯೇ ಹೊಸ ನಿಯಮಗಳಲ್ಲಿ ಗ್ರಾಹಕರ ಹಕ್ಕುಗಳನ್ನು ಸ್ಥಾಪಿಸುವುದು, ಈ ಹಕ್ಕುಗಳ ಅನುಷ್ಠಾನವನ್ನು ಖಾತ್ರಿಪಡಿಸುವುದು ಅಗತ್ಯವಾಗಿತ್ತು’ ಎಂದಿದ್ದಾರೆ.
ಹೊಸ ನಿಯಮಗಳಡಿ ಗ್ರಾಹಕರ ಹಕ್ಕುಗಳು, ವಿತರಣ ಪರವಾನಿಗೆದಾರರ ಕಟ್ಟುಪಾಡುಗಳು, ಹೊಸ ಸಂಪರ್ಕದ ವಿತರಣೆ, ಅಸ್ತಿತ್ವದಲ್ಲಿ ಇರುವ ಸಂಪರ್ಕಗಳಲ್ಲಿ ಮಾರ್ಪಾಡು, ಮೀಟರಿಂಗ್ ವ್ಯವಸ್ಥೆ, ಬಿಲ್ಲಿಂಗ್ ಮತ್ತು ಪಾವತಿ ವ್ಯವಸ್ಥೆಯ ವಿಚಾರದಲ್ಲೂ ಹಲವು ಬದಲಾವಣೆಗಳನ್ನು ತರಲಾಗಿದೆ. ಎಲ್ಲ ಡಿಸ್ಕಾಂಗಳು 24×7 ಉಚಿತ ಕಸ್ಟಮರ್ ಕೇರ್ ಕಾಲ್ ಸೆಂಟರ್‌ಗಳನ್ನು ಸ್ಥಾಪಿಸುವುದು, ಗ್ರಾಹಕರ ಕುಂದುಕೊರತೆ ಪರಿಹಾರಕ್ಕಾಗಿ ಬಲಿಷ್ಠ ವ್ಯವಸ್ಥೆ ಕಡ್ಡಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Earthquakes: ಹಿಮಾಲಯದ ತಪ್ಪಲಲ್ಲಿ ಅತೀ ಹೆಚ್ಚು ಭೂಕಂಪ ಸಂಭವಿಸುವುದೇಕೆ?
Bharatpol: ಅಂತಾರಾಷ್ಟ್ರೀಯ ಪೊಲೀಸ್ ಸಹಕಾರಕ್ಕೆ “ಭಾರತ್‌ಪೋಲ್’
Kerala: 20 ವರ್ಷದಿಂದ ಪಾಳು ಬಿದಿದ್ದ ಮನೆಯ ಫ್ರಿಡ್ಜಲ್ಲಿ ತಲೆಬುರುಡೆ ಪತ್ತೆ!
Galaxy: ಹೊಸ ಗ್ಯಾಲಕ್ಸಿ ಸೃಷ್ಟಿಯನ್ನು ಕಂಡುಹಿಡಿದ ಭಾರತದ ಖಗೋಳ ವಿಜ್ಞಾನಿಗಳು!
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Yakshagana: ಕಾಲಮಿತಿ, ಕಾಲಗತಿಯ ಕಾಲದ ಯಕ್ಷಗಾನ-ಚಿಂತನೆ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್ ಡಿನ್ನರ್‌ಗೆ ಹೈ ಕಮಾಂಡ್ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.