ಬಿಡಿಎ: ಮತ್ತೂಂದು ಸಗಟು ನಿವೇಶನ ಹಂಚಿಕೆ ಪ್ರಕರಣ ಬಯಲು

ಈಗ ಹೊಸಕೆರೆಹಳ್ಳಿ ಸರದಿ , 180 ಫಲಾನುಭವಿಗಳಲ್ಲಿ 80ಕ್ಕೂ ಹೆಚ್ಚು ಅಕ್ರಮ , ಕಾರ್ಯಪಡೆ ವರದಿಯಲ್ಲಿ ಉಲ್ಲೇಖ

Team Udayavani, Dec 23, 2020, 12:36 PM IST

ಬಿಡಿಎ: ಮತ್ತೂಂದು ಸಗಟು ನಿವೇಶನ ಹಂಚಿಕೆ ಪ್ರಕರಣ ಬಯಲು

ಬೆಂಗಳೂರು: ಸಗಟು ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಅಕ್ರಮ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದ ಪ್ರಕರಣ ಇನ್ನೂ ಹಸಿ ಯಾಗಿರುವಾಗಲೇ ಮತ್ತೂಂದು ಅಂತಹದ್ದೇ ಸಗಟು ನಿವೇಶನಗಳ ಹಂಚಿಕೆ ಪ್ರಕರಣ ಅದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಬೆಳಕಿಗೆ ಬಂದಿದೆ. ಈ ಬಾರಿ ಹೊಸಕೆರೆಹಳ್ಳಿಯ ಸರದಿ.

ವಿಚಿತ್ರವೆಂದರೆ, ಈ ಹಿಂದಿನ ಪ್ರಕರಣದಂತೆಯೇ ಇದರಲ್ಲೂ ಬಿಡಿಎ ಕಾರ್ಯದರ್ಶಿ-3 ಹಂತದ ಅಧಿಕಾರಿ ನೇತೃತ್ವದಲ್ಲಿ ಪ್ರಾಧಿಕಾರದಹಲವುಸಿಬ್ಬಂದಿಶಾಮೀಲಾಗಿರುವುದು ತನಿಖೆಯಿಂದ ಬಯಲಾಗಿದೆ.

ಬನಶಂಕರಿ 3ನೇ ಹಂತದ ಹೊಸಕೆರೆಹಳ್ಳಿಯ ಸರ್ವೇ ನಂಬರ್‌ 89, 90, 91 ಮತ್ತು 94ರಲ್ಲಿ ಈ ಹಿಂದೆ ಬಿಡಿಎ ಒಕ್ಕಲೆಬ್ಬಿಸಿದ್ದ ಗುಡಿಸಲು ನಿವಾಸಿಗಳಿಗೆಹಂಚಿಕೆ ಮಾಡಿದ 180 ನಿವೇಶನಗಳಲ್ಲಿ  ಹೆಚ್ಚು-ಕಡಿಮೆ ಅರ್ಧಕ್ಕರ್ಧ ನಿವೇಶನಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸ್ವತಃಬಿಡಿಎ ಪೊಲೀಸ್‌ ಉಪಾಧೀಕ್ಷಕರ ನೇತೃತ್ವದ ಕಾರ್ಯಪಡೆ ತನ್ನ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಸಿಸ್ಟರ್ ಅಭಯಾ ಕೊಲೆ ಪ್ರಕರಣ: ಪಾದ್ರಿ, ಸನ್ಯಾಸಿನಿಗೆ ಜೀವಾವಧಿ ಶಿಕ್ಷೆ ವಿಧಿಸಿದ CBI ಕೋರ್ಟ್

ಈ ಹಿಂದೆ ಬಿಡಿಎ ಉಪಕಾರ್ಯದರ್ಶಿ-3 ಹುದ್ದೆಯಲ್ಲಿದ್ದ ಹಾಗೂ ಈಗ ಕರ್ನಾಟಕ ಕೈಗಾರಿಕಾ ಪ್ರದೇ ಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿಶೇಷ ಭೂಸ್ವಾಧೀನಾಧಿಕಾರಿ ಆಗಿರುವ ಅನಿಲ್‌ ಕುಮಾರ್‌ ಸೇರಿದಂತೆ 11 ಜನ ಬಿಡಿಎ ಸಿಬ್ಬಂದಿ ಶಾಮೀಲಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬಿಡಿಎ ಆಯುಕ್ತರು ನೋಟಿಸ್‌ ಜಾರಿ ಮಾಡಿದ್ದಾರೆ. ಇದರತನಿಖಾ ವರದಿ “ಉದಯವಾಣಿ’ಗೆ ಲಭ್ಯವಾಗಿದೆ.

ಪ್ರಕರಣದ ವಿವರ: ಹೊಸಕೆರೆಹಳ್ಳಿಯಲ್ಲಿ ಉದ್ದೇಶಿತ ಸರ್ವೆ ನಂಬರ್‌ಗಳಲ್ಲಿದ್ದ ಗುಡಿಸಲು ನಿವಾಸಿಗಳನ್ನು ಈ ಹಿಂದೆ ಒಕ್ಕಲೆಬ್ಬಿಸಲಾಗಿತ್ತು. ಇದರಲ್ಲಿ 541 ಫಲಾನು ಭವಿಗಳಿಗೆ ಬೇರೆ ಕಡೆಗೆ ಸಗಟು ನಿವೇಶನ ಹಂಚಿಕೆ ಮಾಡಬೇಕಿತ್ತು. ಅದರಲ್ಲಿ ಮೊದಲ ಹಂತದಲ್ಲಿ 238 ಫಲಾನುಭವಿಗಳಿಗೆ ಮಾತ್ರ 20×30 ಚದರಡಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಉಳಿದಿದ್ದರಲ್ಲಿ180 ಫಲಾನುಭವಿಗಳಿಗೆ 2ನೇ ಹಂತದಲ್ಲಿ ಹಂಚಿಕೆ ಮಾಡುವ ವೇಳೆ ಈ ಅವ್ಯವಹಾರ ನಡೆದಿದೆ.

ಈ ಬಗ್ಗೆ ಖಾಸಗಿ ವ್ಯಕ್ತಿಯೊಬ್ಬರು ದಾಖಲೆ ಸಹಿತಬಿಡಿಎಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಬಿಡಿಎ ವಿಶೇಷ ಕಾರ್ಯಪಡೆ ತನಿಖೆ ನಡೆಸಿತು. ಪ್ರಕರಣದ ದಾಖಲೆಗಳು ಹಾಗೂ ಮೂಲ ಕಡತಗಳಿಂದ ಬಿಡಿಎಗೆ ವಂಚಿಸಿರುವುದು ಮತ್ತು ಆಮೂಲಕ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿರುವುದು ಕಂಡು ಬಂದಿದೆ.

ಈಚೆಗೆ ಕನ್ನಿಂಗ್‌ ಹ್ಯಾಂ ರಸ್ತೆಯಲ್ಲಿ ಬಿಡಿಎಗೆ ಪರ್ಯಾಯವಾಗಿ ಅಥವಾ ಬಿಡಿಎ ಉಪ ಶಾಖೆ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಕಚೇರಿ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ತಯಾರಿಸುತ್ತಿದ್ದ ಹತ್ತಾರು ದಾಖಲೆ ವಶಪಡಿಸಿಕೊಳ್ಳಲಾಗಿತ್ತು.ನೂರಾರು ಕೋಟಿ ರೂ.ಅವ್ಯವಹಾರ ಪ್ರಕರಣದ ತನಿಖೆಯನ್ನು ವಿಶೇಶ ತನಿಖಾ ತಂಡ (ಎಸ್‌ಐಟಿ)ಕ್ಕೆ ವಹಿಸುವುದಾ ಗಿಯೂ ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಪ್ರಕಟಿಸಿದ್ದರು. ಈ ಬೆನ್ನಲ್ಲೇ ಪ್ರಕರಣ ಬಹಿರಂಗಗೊಂಡಿದೆ.

ಪ್ರಕರಣದ ಅವ್ಯವಹಾರದ ಮೊತ್ತ ಎಷ್ಟು ಹಾಗೂ ಅನರ್ಹರಿಗೆ ಹಂಚಿಕೆಮಾಡಲಾದ ಭೂಮಿಯ ಪ್ರಮಾಣ ಎಷ್ಟು ಎಂಬುದನ್ನು ಇನ್ನಷ್ಟೇ ಲೆಕ್ಕ ಹಾಕಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆಕೆಲವು ಸಿಬ್ಬಂದಿಗೆ ನೋಟಿಸ್‌ ನೀಡಲಾಗಿದೆ. ಡಾ. ಮಹದೇವ್‌, ಆಯುಕ್ತರು, ಬಿಡಿಎ

 

-ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.