ಕೆಕೆಆರ್ ಡಿಬಿಗೆ 1131 ಕೋ.ರೂ ಬಿಡುಗಡೆಗೆ ಸರ್ಕಾರದ ಮಂಜೂರಾತಿ
Team Udayavani, Dec 23, 2020, 5:12 PM IST
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ (ಕೆಕೆಆರ್ ಡಿಬಿ) ಮಂಡಳಿಗೆ 1131 ಕೋ. ರೂ ಬಿಡುಗಡೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಜೂರಾತಿ ನೀಡಿದ್ದು, ಇದರಲ್ಲಿ ಮೊದಲ ಕಂತಾಗಿ 952. ಕೋ. ರೂ ಬಿಡುಗಡೆಯಾಗಿದೆ ಎಂದು ಮಂಡಳಿಯ ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.
ಬಿಜೆಪಿ ಪಕ್ಷದ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ದಲ್ಲಿ 1500 ಕೋ.ರೂ ಅನುದಾನ ನೀಡುವುದಾಗಿ ಪ್ರಕಟಿಸಲಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಮಂಡಳಿ 1131 ಕೋ. ರೂ ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಕಳುಹಿಸಿ ಕೊಡ ಲಾಗಿತ್ತು. ಈಗ ಅದಕ್ಕೆ ಮುಖ್ಯಮಂತ್ರಿಗಳು ಅನುಮೋದನೆ ನೀಡುವುದರ ಮುಖಾಂತರ ಈ ಭಾಗದ ಅಭಿವೃದ್ಧಿಗೆ ಬದ್ದ ಎಂಬುದನ್ನು ನಿರೂಪಿಸಿದ್ದಾರೆ. ಇದಕ್ಕೆ ಕಲ್ಯಾಣ ಕರ್ನಾಟಕ ಭಾಗದಿಂದ ಅಭಿನಂದನೆ ಸಲ್ಲಿಸಲಾಗುವುದು. ಕಾಮಗಾರಿಗಳ ಕ್ರಿಯಾ ಯೋಜನೆ ಸಲ್ಲಿಸುವಂತೆ ಈ ಭಾಗದ ಎಲ್ಲ ಶಾಸಕರಿಗೆ ಪತ್ರ ಬರೆಯಲಾಗುವುದು ಎಂದರು.
371 ಜೆ ವಿಧಿ ಅಡಿ ಮಂಡಳಿ ಅಸ್ತಿತ್ವಕ್ಕೆ ಬಂದ 2013-14 ನೇ ಸಾಲಿನಿಂದ ಏಳು ವರ್ಷಗಳಲ್ಲಿ ಒಂದು ಸಲ ಮಾತ್ರ ಘೋಷಣೆ ಅನುದಾನ ಬಿಡುಗಡೆಯಾಗಿದ್ದನ್ನು ಬಿಟ್ಟರೆ ಉಳಿದ ವರ್ಷಗಳಲ್ಲಿ ಕಡಿಮೆಯೇ ಅನುದಾನ ಬಿಡುಗಡೆಯಾಗಿದೆ. ಘೋಷಣೆ ಮಾಡಿದ ಹಣ ಸಂಪೂರ್ಣ ಬಿಡುಗಡೆಯಾಗದೇ ಮನಸ್ಸಿಗೆ ಬಂದಂತೆ ಹಣ ಬಿಡುಗಡೆಯಾಗಿದೆ . ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಲಿಕ್ಕಾಗಿಲ್ಲ. ಹಿಂದಿನ ಕಾಂಗ್ರೆಸ್ ಸರಕಾರವೇ ಘೋಷಣೆ ಅನುದಾನ ಬಿಡುಗಡೆಗೊಳಿಸದೇ ಮಂಡಳಿಯನ್ನು ವೆಂಟಿಲೇಟರ್ ನಲ್ಲಿಟ್ಟು ಕೋಮಾಗೆ ಕಳುಹಿಸಿದೆ. ಆದರೆ ಬಿಜೆಪಿ ಸರ್ಕಾರ ಇಂತಹ ಸಮಯದಲ್ಲೂ 1131 ಕೋ. ರೂ ಬಿಡುಗಡೆ ಮಾಡುವ ಮುಖಾಂತರ ಕೋಮಾದಿಂದ ಹೊರ ತರುವ ಹೆಜ್ಜೆ ಇರಿಸಿದೆ ಎಂದು ಅಪ್ಪುಗೌಡ ವಿವರಿಸಿದರು.
2013-14 ರಲ್ಲಿ 153 ಕೋ. ರೂ ಬಿಡುಗಡೆ ಮಾಡಲಾಗುವುದು ಎಂಬುದಾಗಿ ಹೇಳಿ ಕೇವಲ 30 ಕೋ. ರೂ ಬಿಡುಗಡೆ ಮಾಡಲಾಯಿತು. ಅದೇ ರೀತಿ 2014-15ರಲ್ಲಿ 600 ಕೋ. ರೂ ಬಿಡುಗಡೆ ಅನುಮೋದನೆ ನೀಡಲಾಗಿತ್ತಾದರೂ ಜತೆಗೆ ಕೆಕೆಆರ್ ಡಿಬಿ ಆಡಳಿತ ಮಂಡಳಿ 862 ಕೋ.ರೂ ಮೊತ್ತದ ಕ್ರಿಯಾ ಯೋಜನೆ ರೂಪಿಸಲಾಯಿತ್ತಾದರೂ ಕೇವಲ 300 ಕೋ. ರೂ ಬಿಡುಗಡೆ ಮಾಡಲಾಯಿತಿ.ಅದೇ ರೀತಿ 2015-16ರಲ್ಲಿ 1000ಕೋ ರೂ ವ್ಯಯ ಮಾಡಲಾಗಿ, ಜತೆಗೆ 1000 ಕೋ. ರೂ ಮೊತ್ತದ ಕ್ರಿಯಾ ಯೋಜನೆ ರೂಪಿಸಲಾಗಿದ್ದರೂ ಸರ್ಕಾರದಿಂದ 250 ಕೋ ರೂ ಬಿಡುಗಡೆಯಾಯಿತು. 2016-17ರಲ್ಲಿ 1000. ಕೋ. ರೂ ಘೋಷಿಸಲಾಗಿ, ಇದಕ್ಕೆ 1000 ಕೋ.ರೂ ಮೊತ್ತದ ಕಾಮಗಾರಿ ಯೋಜನೆ ರೂಪಿಸಲಾಗಿದ್ದರೂ ಆ ಅವಧಿಯಲ್ಲಿ 750 ಕೋ. ರೂ ಬಿಡುಗಡೆಯಾಗಿತ್ತು. 2017-18ರಲ್ಲಿ 1000 ಕೋ ರೂ ಅನುಮೋದನೆಯಲ್ಲಿ ಮಂಡಳಿಯೂ ರೂಪಿಸಿದ 1500 ಕೋ ರೂ. ಮೊತ್ತದ ಕ್ರಿಯಾ ಯೋಜನೆಗೆ ಸರ್ಕಾರ 800 ಕೋ.ರೂ ಮಾತ್ರ ಬಿಡುಗಡೆ ಮಾಡಿತು. ಆದರೆ 2018-19 ರಲ್ಲಿ 1000 ಕೋ. ರೂ ಘೋಷಣೆ ಯಲ್ಲಿ 1000 ಕೋ.ರೂ ಬಿಡುಗಡೆಯಾಗಿದೆ. ಉಳಿದಂತೆ 2019-20ರಲ್ಲಿ ಘೋಷಣೆ 1500 ಕೋ. ರೂ.ದಲ್ಲಿ ಜತೆಗೆ ಮಂಡಳಿಯ 1500 ಕೋ. ರೂ ಕ್ರಿಯಾ ಯೋಜನೆಯಲ್ಲಿ 1125 ಕೋ. ರೂ ಬಿಡುಗಡೆಯಾಗಿದೆ. ಪ್ರಸಕ್ತ 2020-21ರಲ್ಲಿ ಘೋಷಣೆ ಯ 1500 ಕೋ ರೂ ದಲ್ಲಿ 1131 ಕೋ. ರೂ ಮಂಜೂರಾತಿ ಗೆ ಅನುಮೋದನೆ ದೊರೆತು 952 ಕೋ. ರೂ ಬಿಡುಗಡೆಯಾಗಿದೆ. ಉಳಿದ 179 ಕೋ ರೂ ಬಿಡುಗಡೆಗೂ ಪ್ರಯತ್ನ ಮುಂದುವರೆಯಲಿದೆ ಎಂದು ದತ್ತಾತ್ರೇಯ ಪಾಟೀಲ್ ವಿವರಣೆ ನೀಡಿದರು.
ಪಾರದರ್ಶಕತೆಗೆ ಒತ್ತು: ಮಂಡಳಿಯ ಕಾಮಗಾರಿಗಳಲ್ಲಿ ಪಾರದರ್ಶಕ ತರುವ ನಿಟ್ಟಿನಲ್ಲಿ ಮಂಡಳಿಯ ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಗುತ್ತಿದೆ. ಈ ಮೊದಲೇ ಇಲ್ಲೇ ಮಂಡಳಿಯಲ್ಲೇ ಅನುಮೋದನೆ ನೀಡಲಾಗುತ್ತಿತ್ತು. ಆದರೆ ಹಿಂದಿನ ಕಾಮಗಾರಿಗಳಲ್ಲಿ ಕೆಲವು ಅವ್ಯವಹಾರ ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಹೆಜ್ಜೆ ಇಡಲಾಗಿದೆ ಎಂದು ಅಪ್ಪುಗೌಡ ಇದೇ ಸಂದರ್ಭದಲ್ಲಿ ತಿಳಿಸಿದರು.
ನಿಯೋಗ: ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ತೊಗರಿಗೆ ಕೇಂದ್ರದ ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ತನ್ನ ಪಾಲಿನ ಪ್ರೋತ್ಸಾಹ ಧನ ನಿಗದಿ ಮಾಡದೇ ಇರುವುದರಿಂದ ರೈತರಿಗೆ ಅನ್ಯಾಯ ವಾಗುವುದರಿಂದ ಹಿಂದಿನ ಸರ್ಕಾರದಂತೆ ಈಗಲೂ ಪ್ರೋತ್ಸಾಹ ಧನ ನಿಗದಿಗೊಳಿಸುವಂತೆ ಮುಖ್ಯಮಂತ್ರಿ ಬಳಿ ನಿಯೋಗ ಹೋಗುವುದಾಗಿ ಇದೇ ಸಂದರ್ಭದಲ್ಲಿ ದತ್ತಾತ್ರೇಯ ಪಾಟೀಲ್ ರೇವೂರ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜೀ ಪಾಟೀಲ್, ಕುಡಾ ಅಧ್ಯಕ್ಷ ದಯಾಘನ್ ಧಾರವಾಡಕರ್, ಪ್ರಮುಖ ರಾದ ಮಹಾದೇವ ಬೆಳಮಗಿ, ಅಶೋಕ ಬಗಲಿ, ಸೂರಜ್ ಸಿಂಗ್ ತಿವಾರಿ ಸೇರಿದಂತೆ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.