ವಿಶೇಷ ಸಿಬ್ಬಂದಿ ನೇಮಿಸಿ
Team Udayavani, Dec 23, 2020, 6:30 PM IST
ಗುಳೇದಗುಡ್ಡ: ಆಡಿಟ್ ಆಗದಿದ್ದರೇ ಪುರಸಭೆಗೆ ಇಲಾಖೆಯಿಂದ ಅನುದಾನ ಪಡೆಯಲು ಸಾಧ್ಯವಾಗುವುದಿಲ್ಲ. ಆಡಿಟ್ ಪೂರ್ಣಗೊಳ್ಳುವವರೆಗೆ ಅದಕ್ಕೆ ವಿಶೇಷ ಸಿಬ್ಬಂದಿ ನೇಮಿಸಬೇಕು ಎಂದು ಪುರಸಭೆ ಸದಸ್ಯರು ಆಗ್ರಹಿಸಿ, ಪುರಸಭೆ ಮುಖ್ಯಾಧಿಕಾರಿಗಳಿಗೆ ಆಡಿಟ್ ಕೈಗೊಳ್ಳಲು ಒಪ್ಪಿಗೆ ಸೂಚಿಸಿದರು.
ಪುರಸಭೆ ಸಭಾ ಭವನದಲ್ಲಿ ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಜ್ಯೋತಿ ಗಿರೀಶ ಎರಡು ವರ್ಷಗಳವರೆಗೆ ಪುರಸಭೆಯ ಆಡಿಟ್ ಆಗಿಲ್ಲ ಎಂದುವಿಷಯ ಚರ್ಚೆಗೆ ತಂದಾಗ, ಆಡಿಟ್ ಮಾಡಿದರೆ ಹೆಚ್ಚಿನ ಅನುದಾನ ಬರುತ್ತದೆ. ಮೊದಲು ಆಡಿಟ್ ಮಾಡಿಸಲುಕ್ರಮ ಕೈಗೊಳಿ ಎಂದು ಸದಸ್ಯರಾದ ಶ್ಯಾಮ ಮೇಡಿ, ವಿಠ್ಠಲ ಕಾವಡೆ, ವಿನೋದ ಮದ್ದಾನಿ, ಸಂತೋಷ ನಾಯನೇಗಲಿ, ಉಮೇಶ ಹುನಗುಂದ ಹೇಳಿದರು.
ತಾಪಂ ಕಚೇರಿಗೆ ಜಾಗ ನೀಡುವ ವಿಷಯ ಚರ್ಚೆಗೆ ಬಂದಾಗ ಪುರಸಭೆ ಸದಸ್ಯರು ಕಚೇರಿಗೆ ಬಂದಾಗ ಜಾಗದ ವ್ಯವಸ್ಥೆ ಇಲ್ಲ. ಮೊದಲು ಸದಸ್ಯರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿ ಎಂದು ಸಂತೋಷ ನಾಯನೇಗಲಿ ಹೇಳಿದರು.
ನಕಲು ಪ್ರತಿಗೆ ಪಟ್ಟು: ಪುರಸಭೆ ವ್ಯಾಪ್ತಿಯ ಬಡಾವಣೆ ಅಭಿವೃದ್ಧಿಗೆ ಸಲ್ಲಿಸಿರುವ ನಕ್ಷೆಗಳಿಗೆ ಅನುಮೋದನೆ ನೀಡುವ ವಿಷಯ ಚರ್ಚೆಗೆ ಬಂದಾಗ ಜೆಡಿಎಸ್ ಸದಸ್ಯ ರಾದ ಉಮೇಶ ಹುನಗುಂದ, ಸಂತೋಷ ನಾಯನೇಗಲಿ ನಕಲು ಪ್ರತಿ ಕೊಡಬೇಕು ಎಂದು ಕೇಳಿದರೆ ಅಧಿಕಾರಿಗಳು ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ನಕಲು ಪ್ರತಿಗಾಗಿ ಪಟ್ಟು ಹಿಡಿದರು. ಅಧ್ಯಕ್ಷೆ ಶಿಲ್ಪಾ ಹಳ್ಳಿ, ನಿಮಗೆ ನಕಲು ಪ್ರತಿ ಕೊಡುತ್ತಾರೆ. ಪದೇ ಪದೇ ಅದನ್ನೇ ಕೇಳಬೇಡಿ, ಪ್ರತಿ ಕೊಡಲು ನಾನು ಹೇಳಿದ್ದೇನೆ ಕುಳಿತುಕೊಳ್ಳಿ ಎಂದಾಗ ಕೆಲಕಾಲ್ತ ಮಾತಿನ ಚಕಮಕಿ ನಡೆಯಿತು. ಆಗ ಮುಖ್ಯಾ ಧಿಕಾರಿಗಳು ಸಭೆ ಶಿಷ್ಟಾಚಾರ ಪಾಲಿಸಬೇಕೆಂದು ಹೇಳಿದರು.
ಸದಸ್ಯ ರಫೀಕ ಕಲಬುರ್ಗಿ ಮಾತನಾಡಿ, ಸಭೆಯ ಶಿಷ್ಟಾಚಾರ ಉಲ್ಲಂಘಿಸಿ ಸದಸ್ಯರು ಮಾತನಾಡುತ್ತಾರೆ. ಅಧ್ಯಕ್ಷರ ರೂಲಿಂಗ್ ಬಳಿಕ ಬೇರೆ ವಿಷಯ ಕೈಗೆತ್ತಿಕೊಂಡಾಗ ಸದಸ್ಯರು ಮತ್ತೆ ಮೊದಲಿನ ವಿಷಯ ಪ್ರಸ್ತಾಪ ಮಾಡುವುದು ಸರಿಯಾದ ಕ್ರಮವಲ್ಲ. ಅಧಿಕಾರಿಗಳಿಗೆ ಬೆರಳು ಮಾಡಿ ಮಾತನಾಡುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಹೇಳಿದರು.ವ್ಯಾಪಾರಸ್ಥರಿಗೆ ಅಗತ್ಯ ಮೂಲಸೌಲಭ್ಯ ಒದಗಿಸಬೇಕೆಂದು ಅಧ್ಯಕ್ಷೆ ಶಿಲ್ಪಾ ಹಳ್ಳಿ ಅಧಿಕಾರಿಗಳಿಗೆ ಸೂಚಿಸಿದರು.
ಜೆಡಿಎಸ್ ಸದಸ್ಯರಾದ ಉಮೇಶ ಹುನಗುಂದ,
ಸಂತೋಷ ನಾಯನೇಗಲಿ ಪಟ್ಟಣದಲ್ಲಿ ಯಾವೊಂದು ಬೀದಿದೀಪಗಳು ಸರಿಯಾಗಿಲ್ಲ. ಗುತ್ತಿಗೆದಾರರಿಗೆ ಸರಿಯಾಗಿ ತಾಕೀತು ಮಾಡಿ ಎಂದರು. ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ, ಸದಸ್ಯರಾದ ವಿನೋದ ಮದ್ದಾನಿ, ವಿಠuಲ ಕಾವಡೆ, ಶ್ಯಾಮ ಮೇಡಿ, ರಾಜು ಹೆಬ್ಬಳ್ಳಿ, ಪಟ್ಟಣದಲ್ಲಿ ಬೀದಿ ದೀಪಗಳ ನಿರ್ವಹಣೆ ಸರಿಯಾಗಿಲ್ಲ. ಈ ರೀತಿಯಾಗದಂತೆ ಸರಿಯಾದ ವ್ಯವಸ್ಥೆ ಮಾಡಿ, ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಎಸ್‌ಎಫ್‌ಸಿ ಯೋಜನೆಯಲ್ಲಿ ಹೊಲಿಗೆ ಯಂತ್ರಗಳ ವಿತರಣೆಗೆ, ವಿಶೇಷಚೇತನರಿಗೆ ತ್ರಿಚಕ್ರ ವಾಹನ ವಿತರಿಸಲು ಹೊಸ ಅರ್ಜಿ ಕರೆಯಲು, ವಿವಿಧ ಅನುದಾನದಲ್ಲಿ ಬದಲಿ ಕ್ರಿಯಾ ಯೋಜನೆಗೆ ಅನುಮೋದಿಸಲು, ಬಡಾವಣೆಅಭಿವೃದ್ಧಿಗೆ ವಿನ್ಯಾಸ ನಕ್ಷೆಗಳಿಗೆ ಅನುಮೋದಿಸುವುದಕ್ಕೆ ಒಪ್ಪಿಗೆ ಸೂಚಿಸಲಾಯಿತು.
ಪುರಸಭೆ ಉಪಾಧ್ಯಕ್ಷೆ ಷರೀಫಾ ಮಂಗಳೂರು, ಸದಸ್ಯರಾದ ಶ್ಯಾಮ ಮೇಡಿ, ವಿಠuಲ ಕಾವಡೆ, ವಿನೋದ ಮದ್ದಾನಿ, ಸಂತೋಷ ನಾಯನೇಗಲಿ, ಉಮೇಶಹುನಗುಂದ, ಅಂಬು ಕವಡಿಮಟ್ಟಿ, ರಫೀಕ ಕಲಬುರ್ಗಿ, ಯಲ್ಲಪ್ಪ ಮನ್ನಿಕಟ್ಟಿ, ವಿದ್ಯಾ ಮುರಗೋಡ, ವಂದನಾ ಭಟ್ಟಡ, ಸುಮಿತ್ರಾ ಕೊಡಬಳಿ, ರಾಜವ್ವ ಹೆಬ್ಬಳ್ಳಿ, ಜ್ಯೋತಿ ಆಲೂರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.