ಮಂಡ್ಯ : ಹೊರದೇಶದಿಂದ ಬಂದ 8 ಮಂದಿಯ ವರದಿ ನೆಗೆಟಿವ್
Team Udayavani, Dec 23, 2020, 9:50 PM IST
ಮಂಡ್ಯ: ಅಮೆರಿಕಾ, ಇಂಗ್ಲೆoಡ್‌ನಿoದ ಬಂದಿರುವ ಜಿಲ್ಲೆಯ ಎಂಟು ಜನರ ವರದಿ ನೆಗೆಟಿವ್ ಬಂದಿದೆ. ಅಂತೆಯೆ ಬುಧವಾರ ಮತ್ತೆ ಜಿಲ್ಲೆಯ 9 ಜನರು ಆಗಮಿಸಿದ್ದಾರೆ ಎಂದು ಆರೋಗ್ಯ ಇಲಾಖೆಗೆ ಮಾಹಿತಿ ಬಂದಿದೆ.
ಮಳವಳ್ಳಿಯ ಇಬ್ಬರು, ಮಂಡ್ಯ ತಾಲೂಕಿನ ನಾಲ್ವರು ಮತ್ತು ಪಾಂಡವಪುರ ಇಬ್ಬರ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ಈ ಎಲ್ಲರ ವರದಿ ನೆಗೆಟಿವ್ ಬಂದಿದೆ. ಆದರೂ 14 ದಿನ ಕ್ವಾರಂಟೈನ್ ಮಾಡಲಾಗಿದ್ದು, ಪ್ರತಿದಿನ ತಪಾಸಣೆ ನಡೆಯಲಿದೆ.
ಇನ್ನು ಕೇಂದ್ರ ಆರೋಗ್ಯ ಇಲಾಖೆಯಿಂದ ಬಂದಿರುವ ಮಾಹಿತಿಯಂತೆ ವಿದೇಶದಿಂದ ಜಿಲ್ಲೆಯ 9 ಜನರು ಬಂದಿದ್ದಾರೆ. ಈ ಪೈಕಿ ಮೂವರು ಮಂಡ್ಯ ತಾಲೂಕಿನವರಾಗಿದ್ದಾರೆ. ಇವರನ್ನು ಕ್ವಾರಂಟೈನ್ ಮಾಡಲಾಗಿದೆ. ಇಬ್ಬರ ವಿಳಾಸ ಪತ್ತೆಯಾಗಿಲ್ಲ. ಒಬ್ಬರು ವಾಪಸ್ ಹೋಗಿದ್ದಾರೆ.
ಇದನ್ನೂ ಓದಿ:ಹಳೇ ದ್ವೇಷ: ಪುರುಷರ ಶೌಚಾಲಯದಲ್ಲಿ ಮಹಿಳಾ ಕಾನ್‌ಸ್ಟೇಬಲ್ ಮೊಬೈಲ್ ನಂಬರ್ ಬರೆದ ಆಸಾಮಿ!
ಉಳಿದ ಮೂವರ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೊಳಸಲಾಗಿದೆ. ಇನ್ನು ಬುಧವಾರ ಜಿಲ್ಲೆಯ 15 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಅಂತೆಯೆ 16 ಜನರು ಸೋಂಕಿನಿoದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 202 ಸಕ್ರಿಯ ಪ್ರಕರಣಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.