ಊಟವಿಲ್ಲದ್ದಕ್ಕೆ ಬ್ಯಾಂಕ್ ಸಭೆ ಬಹಿಷ್ಕಾರ
Team Udayavani, Dec 25, 2020, 3:18 PM IST
ಎಚ್.ಡಿ.ಕೋಟೆ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾರ್ಡ್ ಬ್ಯಾಂಕ್) ವಾರ್ಷಿಕ ಮಹಾಸಭೆ ಅವ್ಯವಸ್ಥೆಗಳ ಆಗರವಾಗಿತ್ತು.ಗೊಂದಲದ ಗೂಡಾಗಿದ್ದ ಈ ಸಭೆಯಲ್ಲಿ ಉಪಾಹಾರ ವ್ಯವಸ್ಥೆ ಮಾಡದ ಕಾರಣ ರೈತರು ಕಾರ್ಯಕ್ರಮವನ್ನು ಬಹಿಷ್ಕರಿಸಿ ಹೊರ ನಡೆದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಎಂ.ಡಿ. ಮಂಚಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಪಿಕಾರ್ಡ್ ಬ್ಯಾಂಕ್ ವಾರ್ಷಿಕ ಸಭೆಯಲ್ಲಿ ಆಡಳಿತ ಮಂಡಳಿ ಹಾಗೂ ಸದಸ್ಯರನಡುವೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆಯಿತು.
ರೈತ ಮುಖಂಡರಾದ ಹೂ.ಕೆ.ಮಹೇಂದ್ರ, ಎಚ್.ಸಿ.ನರಸಿಂಹಮೂರ್ತಿ ಮಾತನಾಡಿ,ಬ್ಯಾಂಕ್‌ನಲ್ಲಿ 11 ಸಾವಿರಕ್ಕೂ ಅಧಿಕಸದಸ್ಯರಿದ್ದು, ಸದಸ್ಯರಿಗೆ ವಾರ್ಷಿಕ ಸಭೆಯಆಹ್ವಾನ ಪತ್ರಿಕೆ ನೀಡಿಲ್ಲ ಎಂದು ದೂರಿದರು.ಇದಕ್ಕೆ ಪ್ರತಿಕ್ರಿಯಿಸಿದ ಎಂ.ಡಿ.ಮಂಚಯ್ಯ,ನಿಯಮ ಪ್ರಕಾರ ಸದಸ್ಯತ್ವ ಇರುವ 5047ಮಂದಿಗೆ ಆಹ್ವಾನ ಪತ್ರ ಕಳುಹಿಸಲಾಗಿದೆ ಎಂದು ಅಂಚೆ ಇಲಾಖೆಯ ಸ್ವೀಕೃತಿ ದಾಖಲೆಗಳನ್ನು ಪ್ರದರ್ಶಿಸಿದರು. ಅಂಬೇಡ್ಕರ್ ಭವನದಲ್ಲಿ 200- 250 ಮಂದಿ ಮಾತ್ರ ಕುಳಿತುಕೊಳ್ಳಲು ಅವಕಾಶ ಇದೆ. ಆದರೆ, 5,047 ಮಂದಿಗೆ ಆಹ್ವಾನ ನೀಡಿದ್ದರೆ ಇಷ್ಟು ಚಿಕ್ಕ ಭವನದಲ್ಲಿ ವಾರ್ಷಿಕಸಭೆ ನಡೆಸಲು ಹೇಗೆ ಸಾಧ್ಯ ಎಂದು ಸದಸ್ಯರು ಪ್ರಶ್ನಿಸಿದರು.
ಹುನ್ನಾರ: ಇದೆಲ್ಲಾ ಪೂರ್ವಯೋಜಿತ ಹುನ್ನಾರ. ಬಹುಸಂಖ್ಯೆ ರೈತರಿಗೆ ಆಹ್ವಾನವೇಬಂದಿಲ್ಲ, ಆಡಳಿತ ಮಂಡಳಿ ಪರವಾಗಿರುವಸದಸ್ಯರಿಗಷ್ಟೇ ಆಹ್ವಾನ ನೀಡಲಾಗಿದೆ.ಸದಸ್ಯರನ್ನು 3 ಸಭೆಗೆ ಗೈರು ಮಾಡಿ ಸದಸ್ಯತ್ವ ರದ್ದು ಪಡಿಸಿ, ತಮಗೆ ಬೇಕಾದ ಸದಸ್ಯರನ್ನು ಉಳಿಸಿಕೊಳ್ಳುವ ಸಂಚು ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿ: ಈ ವೇಳೆ ಆಡಳಿತ ಮಂಡಳಿ ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಸದಸ್ಯ ಎಚ್.ಸಿ. ನರಸಿಂಹಮೂರ್ತಿ ವೇದಿಕೆಯ ನೆಲದಲ್ಲಿಯೇಕಳಿತು ಪ್ರತಿಭಟನೆಗಿಳಿಯುತ್ತಿದ್ದಂತೆಯೇಇನ್ನುಳಿದ ಸದಸ್ಯರಾದ ರೇಚಣ್ಣ, ಪ್ರಕಾಶ,ಮಲಾರ ಮಹದೇವು, ಬಾಲರಾಜು, ನಾಗರಾಜು ಮತ್ತಿತರರು ಬೆಂಬಲ ವ್ಯಕ್ತಪಡಿಸಿ ಧರಣಿ ಕುಳಿತರು.
ಆಹ್ವಾನಿತ ರೈತರಿಗೆ ಆಸನಗಳ ವ್ಯವಸ್ಥೆ ಕಲ್ಪಿಸಿಲ್ಲ, ಪತ್ರಕರ್ತರನ್ನು ಆಹ್ವಾನಿಸಿಲ್ಲ, ಲೆಕ್ಕಪತ್ರಸರಿಯಾಗಿಲ್ಲ, ಸಾಲ ಮನ್ನಾ ವಿಚಾರವಾಗಿಸಮರ್ಪಕವಾಗಿ ಮಾಹಿತಿ ನೀಡಿಲ್ಲ ಎಂದು ಕಿಡಿಕಾರಿದರು.
ಆಕ್ರೋಶ: ಮಧ್ಯಾಹ್ನವಾಗುತ್ತಿದ್ದಂತೆಯೇ ಸಭೆಗೆಗ್ರಾಮೀಣ ಭಾಗದಿಂದ ರೈತರು ಆಗಮಿಸಿದ್ದರು. ವಾರ್ಷಿಕ ಸಭೆಯಲ್ಲಿ ಉಪಾಹಾರ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಉದ್ರಿಕ್ತರಾದ ರೈತರು ಆಡಳಿತಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರೈತರಿಗೆ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗದ ಇದೊಂದು ವಾರ್ಷಿಕ ಸಭೆಯೇ?,ಕನಿಷ್ಠ ಸೌಜನ್ಯವೂ ಇಲ್ಲ ಎಂದು ದೂರಿದಸದಸ್ಯರು, ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಈ ಸಂದರ್ಭದಲ್ಲಿ ಆಡಳಿತಮಂಡಳಿ ಸಮಾಧಾನ ಪಡಿಸಲು ಯತ್ನಿಸಿದರೂಯಾವುದೇ ಉಪಯೋಗ ಆಗಲಿಲ್ಲ. ಒಟ್ಟರೆ ಪಿಕಾರ್ಡ್ ಬ್ಯಾಂಕ್ ವಾರ್ಷಿಕ ಸಭೆ ಗೊಂದಲ, ಅವ್ಯವಸ್ಥೆಗಳ ಆಗರವಾಗಿತ್ತು.
ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಕೆ.ಎನ್.ಮಲ್ಲಿಕಾರ್ಜುನ, ಶಂಕರ ಲಿಂಗೇಗೌಡ, ಪುಟ್ಟರಾಜು, ಗುರುಮೂರ್ತಿ, ಶುಭಮಂಗಳಾ, ನಾಗರಾಜು, ನಾಗರಾಜು,ಬಸವರಾಜು, ಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಾರ್ಷಿಕ ಸಭೆ ಅಪಾರ ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು.ಮಧ್ಯಾಹ್ನದ ವೇಳೆಯಲ್ಲಿ ರೈತರ ಸ್ಥಿತಿಗಮನಿಸಿದಾಗ ಉಪಾಹಾರದವ್ಯವಸ್ಥೆ ಮಾಡಬೇಕಿತ್ತು ಅನಿಸಿತು. ಕೋವಿಡ್ ಹಿನ್ನೆಲೆಯಲ್ಲಿ ಉಪಾಹಾರ ಕಲ್ಪಿಸಿಲ್ಲ. ನಮ್ಮಿಂದ ತಪ್ಪಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇವೆ. – ಎಂ.ಡಿ.ಮಂಚಯ್ಯ, ಬ್ಯಾಂಕ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.