ನೆನಪಿನ ಶಕ್ತಿಯ ಮೂಲಕ ದಾಖಲೆ ಬರೆದ ತಾನೀಶ್‌


Team Udayavani, Dec 25, 2020, 3:35 PM IST

kolar-tdy-1

ಕೋಲಾರ: ತನ್ನ ಅಗಾಧ ನೆನಪಿನ ಶಕ್ತಿಯ ಮೂಲಕವೇಜಿಲ್ಲೆಯ ಲಕ್ಕೂರಿನ ಪುಟ್ಟ ಪೋರ ಎನ್‌.ತಾನೀಶ್‌ ಇಂಡಿಯನ್‌ ಬುಕ್‌ ಆಫ್ ರೆಕಾರ್ಡ್‌ ಜೊತೆಗೆ ಹಲವು ದಾಖಲೆಗಳನ್ನು ಮಾಡಿ ಗಮನ ಸೆಳೆದಿದ್ದಾರೆ.

ಮಾಲೂರು ತಾಲೂಕಿನ ಚಿಕ್ಕತಿರುಪತಿಯ ಸಮೀಪದ, ಲಕ್ಕೂರು ಗ್ರಾಮದ ಕೇವಲ 2 ವರ್ಷ 4 ತಿಂಗಳ ಪುಟ್ಟ ಕಂದಪ್ರತಿಷ್ಠಿತ ಮಹತ್ತರ ಸಾಧನೆಯಲ್ಲಿ ಇಂಡಿಯನ್‌ ಬುಕ್‌ ಆಫ್ ರೆಕಾರ್ಡ್ಸ್‌, ಕರ್ನಾಟಕ ಅಚಿವರ್ಸ್‌ ಬುಕ್‌ ಆಫ್‌ ರೆಕಾರ್ಡ್‌,ವಿಲ್‌ ಮೆಡಲ್‌ ಬುಕ್‌ ಆಫ್‌ ರೆಕಾರ್ಡ್‌ ಹಾಗೂ ಕಿಡ್ಸ್‌ ವರ್ಡ್‌ ರೆಕಾರ್ಡ್‌ ಮಾಡುವ ಮೂಲಕ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ವಿಶ್ವಮಾನವ ಕುವೆಂಪು ಫೌಂಡೇಷನ್‌ ರಾಜ್ಯಅಧ್ಯಕ್ಷ ಹಾಗೂ ಅರಳು ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಯುವ ಕವಿ ಲಕ್ಕೂರು ಎಂ.ನಾಗರಾಜ್‌ ಹಾಗೂ ಶ್ವೇತಾಂಜಲಿ ಭರತನಾಟ್ಯ ಶಾಲೆ ಸಂಸ್ಥಾಪಕಿ ಅಧ್ಯಕ್ಷೆ ಶ್ವೇತನಾಗರಾಜ್‌ದಂಪತಿಯ ಪುತ್ರ ಎನ್‌.ತಾನೀಶ್‌ ಈ ಎಲ್ಲಾ ಸಾಧನೆ ಮಾಡಿರುವ ಪೋರನಾಗಿದ್ದಾನೆ.

ಉತ್ತರ ನೀಡುತ್ತಾನೆ: ತಾನೀಶ್‌ ದೇಶದ ಮೂವತ್ತು ರಾಜ್ಯಗಳ ಹೆಸರು ಮತ್ತು ರಾಜಧಾನಿಗಳ ಹೆಸರು, 150 ಜನಮಹಾನ್‌ ಸಾಧಕರ ಭಾವಚಿತ್ರಗಳ ಹೆಸರು, ಜ್ಞಾನಪೀಠಪ್ರಶಸ್ತಿ ಪಡೆದ ಪುರಸ್ಕೃತರ ಹೆಸರು, ಕರ್ನಾಟಕದ 30 ಜಿಲ್ಲೆಗಳು, ಪ್ರಂಪಚದ ವಿವಿಧ ದೇಶಗಳ ಹೆಸರುಗಳು, 90 ಪ್ಲಾಷ್‌ ಕಾರ್ಡ್ಸ್‌ ಹೆಸರುಗಳು, ಪ್ರಚಲಿತ ವಿದ್ಯಮಾನದ ಸಾಮಾನ್ಯ ಜ್ಞಾನದ 80 ಪ್ರಶ್ನೆಗಳಿಗೆ ಪಟ ಪಟನೆ ಉತ್ತರ ನೀಡುತ್ತಾನೆ. ಹಣ್ಣು, ತರಕಾರಿ, ಬಣ್ಣಗಳು, ವಾಹನಗಳು, ಮಾನವ ದೇಹದ ಅಂಗಾಂಗಳು, ಕನ್ನಡ ವರ್ಣಮಾಲೆ, 12 ತಿಂಗಳುಗಳು, ಇಂಗ್ಲೀಷ್‌ ಅಲ್ಪಾಬೇಟ್ಸ್‌, ಆಕ್ಷನ್‌ ವರ್ಡ್ಸ್‌ಗಳನ್ನು ಬಹು ಬೇಗನೆ ಹೇಳುವ ಮೂಲಕ ಅಚ್ಚರಿ ಮೂಡಿಸುತ್ತಾನೆ.

ಗೌರವ: ತಾನೀಶ್‌ ಮೇರು ಪ್ರತಿಭೆಯನ್ನು ಗುರ್ತಿಸಿ ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್ಸ್‌, ಕರ್ನಾಟಕ ಅಚಿವರ್ಸ್‌ ಬುಕ್‌ ಆಫ್‌ ರೆಕಾರ್ಡ್‌, ವೀಲ್‌ ಮೆಡಲ್‌ ಬುಕ್‌ ಆಫ್‌ರೆಕಾರ್ಡ್‌, ಹಾಗೂ ಕಿಡ್ಸ್‌ವರ್ಡ್‌ ರೆಕಾರ್ಡ್ಸ್‌ ಪದಕ, ಮೆಡಲ್‌ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಿದೆ.ಗಿನ್ನಿಸ್‌ ದಾಖಲೆ ಗುರಿ: ನೆನಪಿನ ಶಕ್ತಿಯ ಜೊತೆಗೆ ಸಂಸ್ಕೃತಿಯ ಪ್ರತಿಬಿಂಬವಾದ ಭರತನಾಟ್ಯ ಕಲಿಕೆಯ ಜೊತೆಗೆ ಕರಾಟೆ, ತಬಲ, ಸ್ಕೇಟಿಂಗ್‌ ತರಗತಿಗಳ ತರಬೇತಿ ಪಡೆಯುವಮೂಲಕ ಮಹತ್ತರ ಸಾಧನೆಯತ್ತ ಗಿನ್ನಿಸ್‌ ದಾಖಲೆ ನಿರ್ಮಿಸುವ ಗುರಿಯತ್ತ ತನ್ನ ನಿರಂತರ ಅಭ್ಯಾಸವನ್ನು ಅಮ್ಮನ ಸಹಕಾರದಿಂದ ಪಡೆಯುತ್ತಿದ್ದಾನೆ ಎಂದು ತಂದೆ ಲಕ್ಕೂರು ಎಂ.ನಾಗರಾಜ್‌ ತಿಳಿಸಿದರು.

ಪ್ರೋತ್ಸಾಹ: ಅಕ್ಕರೆಯ ಕಂದ ತಾನೀಶ್‌ ಒಂದು ವರ್ಷದಮಗು ವಿದ್ದಾಗಲೇ ಯಾವುದೇ ವಿಷಯವನ್ನು ಒಮ್ಮೆ ಹೇಳಿದರೆ ಸಾಕು ಕೂಡಲೇ ಅರ್ಥೈಕೊಂಡು ಮರು ಕ್ಷಣದಲ್ಲಿಯೇ ನಮಗೆ ಹೇಳಿ ಕೊಡುವಷ್ಟು ಸಮರ್ಥವಾದ ಜ್ಞಾನ ಪಡೆದಿದ್ದಾನೆ. ಇದನ್ನು ಪ್ರೋತ್ಸಾಹಿಸುವ ಮೂಲಕ ಈ ಸಾಧನೆಗೆ ಕಾರಣವಾಗಿದೆ ಎಂದು ತಾಯಿ ಶ್ವೇತನಾಗರಾಜ್‌ ತಿಳಿಸಿದರು.

ಟಾಪ್ ನ್ಯೂಸ್

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolara-RSS

Kolara: ಹೈಕೋರ್ಟ್‌ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್‌ ಪಥಸಂಚಲನ

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Bannana-Leaf

Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.