ಗ್ರಾಪಂ ಸದಸ್ಯನಿಗೂ ಇನ್ನು ನರೇಗಾ ಕೂಲಿ

| ಚುನಾವಣೆ ಹೊಸ್ತಿಲಲ್ಲಿ ಬಳುವಳಿ| ನಿರ್ಬಂಧ ತೆಗೆದು ಹಾಕಿದ ಸರ್ಕಾರ | ಅಭ್ಯರ್ಥಿಗಳು ನಿರಾಳ

Team Udayavani, Dec 25, 2020, 6:18 PM IST

ಗ್ರಾಪಂ ಸದಸ್ಯನಿಗೂ ಇನ್ನು ನರೇಗಾ ಕೂಲಿ

ಸಿಂಧನೂರು: ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಸದಸ್ಯನಾದ ವ್ಯಕ್ತಿ ಕೂಲಿಕಾರನಾಗಲು ಅನರ್ಹಎಂಬ ನಿಯಮ ತೆಗೆದು ಹಾಕಿರುವ ರಾಜ್ಯಸರ್ಕಾರ, ಗ್ರಾಪಂ ಚುನಾವಣೆ ಹೊಸ್ತಿಲಲ್ಲಿ ಬಂಪರ್‌ ಬಳುವಳಿ ನೀಡಿದೆ.

ಗ್ರಾಪಂಗೆ ಸದಸ್ಯನಾಗಿ ಆಯ್ಕೆಯಾಗುವ ಜನಪ್ರತಿನಿಧಿ ಇನ್ಮುಂದೆ ಕೂಲಿಕಾರನಾಗಿಯೂ 100 ದಿನಗಳ ಕಾಲ ಕೆಲಸ ನಿರ್ವಹಿಸಬಹುದು. ಕೂಲಿಗೂ, ಅಧಿಕಾರಕ್ಕೂ ಸಂಬಂಧವೇಇಲ್ಲವೆಂಬ ಆದೇಶವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಡಿ.7, 2020ರಂದು ಹೊರಡಿಸಿದೆ. ಜನರಿಂದ ಚುನಾಯಿತರಾದ ಸದಸ್ಯರು ಸರ್ಕಾರಿ ಸೌಲಭ್ಯಕ್ಕೆ ಅರ್ಹರಲ್ಲ ಎಂಬ ನಿರ್ಬಂಧವನ್ನು ಸರ್ಕಾರ ಸಡಿಲಿಸಿದೆ. ಜತೆಗೆ, ಚುನಾವಣೆಗೆ ಸ್ಪರ್ಧಿಸಿದರೂ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಅಧಿ  ನಿಯಮ ಅನ್ವಯವಾಗುವುದರಿಂದ ಮುಕ್ತವಾಗಿ ಪಂಚಾಯ್ತಿಗೆ ಚುನಾಯಿತರಾಗಬಹುದು ಎಂಬ ಸಂದೇಶ ರವಾನಿಸಲಾಗಿದೆ. ಆ ಮೂಲಕ ಚುನಾವಣೆ ಅಖಾಡದಲ್ಲಿರುವ ಆಕಾಂಕ್ಷಿಗಳ ದುಗುಡವನ್ನು ಸರ್ಕಾರ ನಿವಾರಿಸಿದೆ.

ಏನಿದು ಬದಲಾವಣೆ ? : ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಹೊರಡಿಸಿದ್ದ 2017ರ ಆದೇಶದ ಪ್ರಕಾರ ಪಂಚಾಯಿತಿ ಸದಸ್ಯರು ಉದ್ಯೋಗ ಖಾತ್ರಿಯಡಿ ಕೂಲಿಕಾರನಾಗಿ ಕೆಲಸ ನಿರ್ವಹಿಸುವಂತಿರಲಿಲ್ಲ. ಜತೆಗೆ, ಅವರಿಗೆದಿನಗೂಲಿ ನೀಡುವುದಕ್ಕೆ ಅವಕಾಶ ಇರಲಿಲ್ಲ.ಅಕುಶಲ ಕಾರ್ಮಿಕರಾದ ಹಿನ್ನೆಲೆಯಲ್ಲಿ ಅವರಿಗೆ ಕೂಲಿ ಕೆಲಸ ಕೊಡುವಂತೆ ಒತ್ತಡ ಬಂದಾಗಲೂ ಸರ್ಕಾರ ಸಮ್ಮತಿಸಿರಲಿಲ್ಲ. ಮಾ.5, 2019ರಂದು ಮತ್ತೂಂದು ಆದೇಶ ಹೊರಡಿಸಿ ಪಂಚಾಯಿತಿಗೆ ಚುನಾಯಿತರಾದ ಸದಸ್ಯರು ಗೌರವಾನ್ವಿತರಾದಹಿನ್ನೆಲೆಯಲ್ಲಿ ಅವರಿಗೆ ಅವಕಾಶ ನಿರಾಕರಿಸಲಾಗಿತ್ತು. ಯಾರಾದರೂ ಕೂಲಿ ಮಾಡಿದ್ದಾಗಿ ದಿನಗೂಲಿ ಪಡೆದುಕೊಂಡಿದ್ದ ಪ್ರಕರಣ ಕಂಡು ಬಂದಿದ್ದರೆ, ಕ್ರಮ ಜರುಗಿಸಿ ಮರು ವಸೂಲಿಗೆ ಮುಂದಾದ ನಿದರ್ಶನಗಳಿದ್ದವು. ಇಂತಹ ಬಹುಮುಖ್ಯ ಷರತ್ತನ್ನು ಈಗ ತೆಗದು ಹಾಕಲಾಗಿದೆ.

ಸದಸ್ಯರಿಗೂ ಈಗ ಕೂಲಿ: ಮಹಾತ್ಮ ಗಾಂಧಿ ನರೇಗಾ ಅಧಿನಿಯಮದ ಸೆಕ್ಷನ್‌-3 ರನ್ವಯ ಜಾಬ್‌ ಕಾರ್ಡ್‌ ಹೊಂದಿರುವ ಯಾವುದೇ ಗ್ರಾಮೀಣಕುಟುಂಬದ ವಯಸ್ಕ ಸದಸ್ಯರು ನರೇಗಾದಲ್ಲಿಅಕುಶಲ ಕೆಲಸಗಾರರಾಗಿ ದುಡಿಯಬಹುದಾಗಿದೆ.ಸದಸ್ಯರೆಂಬ ಕಾರಣಕ್ಕೆ ಅವರನ್ನು ನಿರ್ಬಂಧಿಸಲುಯಾವುದೇ ಅವಕಾಶಗಳಿಲ್ಲ ಎಂಬುದನ್ನು ನಿಯಮದಲ್ಲಿ ಉಲ್ಲೇಖೀಸಲಾಗಿದೆ. ಆದರೆ, ಪಂಚಾಯ್ತಿ ಸದಸ್ಯರು ವೈಯಕ್ತಿಕ ಸೌಲಭ್ಯ ಎಂದರೆ ವಸತಿ ಯೋಜನೆ ಅನುದಾನ, ವೈಯಕ್ತಿಕಶೌಚಾಲಯದ ಹಣ ಸೇರಿದಂತೆ ಯಾವುದೇ ಸವಲತ್ತು ಪಡೆಯುವಂತಿಲ್ಲವೆಂಬ ಷರತ್ತುಉಳಿಸಿಕೊಳ್ಳಲಾಗಿದೆ. ಕೂಲಿಯಾಗಿ ಕೆಲಸಮಾಡಲು ಮಾತ್ರ ಇದೀಗ ಅವಕಾಶ ನೀಡಿದ್ದು,ಚುನಾವಣೆ ಉದ್ಯೋಗ ಖಾತ್ರಿಯ ಹಕ್ಕಿಗೆತರಬಹುದು ಎಂಬ ಆತಂಕವನ್ನು ಈ ಬಾರಿ ನಿವಾರಿಸಲಾಗಿದೆ.

ಪ್ರಜಾಪ್ರಭುತ್ವದಲ್ಲಿ ಸ್ಪರ್ಧಿಸುವ ಹಕ್ಕನ್ನುಚಲಾಯಿಸಿ ನಂತರ ಸೋತರೂ ಸರಿಯೇ,ಗೆದ್ದರೂ ಸರಿಯೇ ನರೇಗಾ ಕಾರ್ಮಿಕರಾಗಿ ಕೂಲಿ ದುಡಿಯುವ ಅವಕಾಶವನ್ನು ಮುಕ್ತವಾಗಿರಿಸಲಾಗಿದೆ. ಚುನಾಯಿತ ವ್ಯಕ್ತಿ ಯಾವೊಂದು ಸರ್ಕಾರಿ ಸೌಲಭ್ಯಕ್ಕೆ ಅರ್ಹನಲ್ಲ ಎಂಬ ನಿಯಮವನ್ನು ಇದೇ ಮೊದಲ ಬಾರಿಗೆ ಸಡಿಲಿಸಿ ನಿರಾಳತೆ ಪ್ರಕಟಿಸಲಾಗಿದೆ.

– ಯಮನಪ್ಪ ಪವಾರ

ಟಾಪ್ ನ್ಯೂಸ್

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

arrest-lady

PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ

Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ

Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Padubidri; ಖಾಸಗಿ ಬಸ್‌ ಢಿಕ್ಕಿ: ವಿದ್ಯಾರ್ಥಿಗೆ ಗಂಭೀರ ಗಾಯ

Padubidri; ಖಾಸಗಿ ಬಸ್‌ ಢಿಕ್ಕಿ: ವಿದ್ಯಾರ್ಥಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

ರಾಯಚೂರು: ರೈತರ ನಿದ್ದೆಗೆಡಿಸಿದ ಬೆಳೆದು ನಿಂತ “ಬಿಳಿ ಬಂಗಾರ’ ಹತ್ತಿ

3-raichur

Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ

1-wewqewq

Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ

Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ

arrest-lady

PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.