ಕಲಬುರಗಿ: ಮುಂದಿನ ತಿಂಗಳು ವೀರಶೈವ-ಲಿಂಗಾಯತ ಯುವ ರಾಷ್ಟ್ರೀಯ ಕಾರ್ಯಚಟುವಟಿಕೆಗೆ ಚಾಲನೆ
Team Udayavani, Dec 25, 2020, 7:19 PM IST
ಕಲಬುರಗಿ: ಅಖಿಲ ಭಾರತ ವೀರಶೈವ-ಲಿಂಗಾಯತ ರಾಷ್ತ್ರೀಯ ಯುವ ಘಟಕದ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡುವ ಹಾಗೂ ಲಾಂಛನ ಅನಾವರಣ ಸಮಾವೇಶ ಮುಂದಿನ ತಿಂಗಳು ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಯುವ ರಾಷ್ಟ್ರೀಯ ಘಟಕದ ಅಧ್ಯಕ್ಷ ಮಹಾಂತೇಶ ಪಾಟೀಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಯುವ ಘಟಕಕ್ಕೆ ಈಚೆಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈಗ ಘಟಕದ ಕಾರ್ಯ ಚಟುವಟಿಕೆಗಳನ್ನು ಹಿಂದೆಂದಿಗಿಂತಲೂ ವಿಸ್ತರಿಸಲು ಪ್ರಮುಖವಾಗಿ ಈಗಿನ ಸದಸ್ಯತ್ವ ದ್ವಿಗುಣಗೊಳಿಸುವುದು, ವೀರಶೈವ ಲಿಂಗಾಯತವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದು, ಯಾವುದೇ ಕಾರಣಕ್ಕೂ ಸಮಾಜ ಹಿಂದುಳಿದ ವರ್ಗಕ್ಕೆ ಸೇರುವವರೆಗೂ ಹಿಂದೆ ಸರಿಯುವುದಿಲ್ಲ ಎಂದು ಗುಡುಗಿದರು.
ಕರ್ನಾಟಕ, ತಮಿಳನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ಇತರೆಡೆ ಸೇರಿ ನಾಲ್ಕು ಕೋಟಿಗೂ ಅಧಿಕ ಜನಸಂಖ್ಯೆವಿದೆ. ಎಲ್ಲರನ್ನು ಸಂಘಟಿಸುವುದು, ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಪ್ರಮುಖ ಉದ್ದೇಶಗಳಾಗಿದ್ದು, ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿರಲು ಕಾರ್ಯಗಳನ್ನು ರೂಪಿಸಲಾಗಿದೆ ಎಂದರು.
ಇದನ್ನೂ ಓದಿ: ಭಾರತದ ರೈತ ಪ್ರತಿಭಟನೆ: ಸಮಸ್ಯೆ ಬಗೆಹರಿಸಲು ಮೈಕ್ ಪೊಂಪಿಯೊಗೆ ಪತ್ರ ಬರೆದ ಅಮೆರಿಕನ್ ಸಂಸದರು
ಪ್ರತಿ ತಾಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯ, ಪ್ರತಿ ತಾಲೂಕು ಕೇಂದ್ರದಲ್ಲಿ ಬಸವ ನಿಲಯ ಸ್ಥಾಪಿಸುವುದು ಯುವ ರಾಷ್ಟ್ರೀಯ ಘಟಕದ ಮುಂದಿರುವ ಕಾರ್ಯಗಳಾಗಿವೆ. ಧಾರವಾಡದಲ್ಲಿ ನಡೆಯುವ ಯುವ ಘಕಟದ ಕಾರ್ಯ ಚಟುವಟಿಕೆ ಚಾಲನಾ ಸಮಾವೇಶ ಇದಕ್ಕೆಲ್ಲ ನಾಂದಿ ಹಾಡಲಿದೆ ಎಂದರು.
ವೀರಶೈವ ಲಿಂಗಾಯತ ನಿಗಮದ ಕಚೇರಿ ಖನಿಜ ಭವನದಲ್ಲಿ ಶುರುವಾಗುವ ಲಕ್ಷಣ ಗಳಿವೆ. ನಿಗಮದ ಆಡಳಿತ ಮಂಡಳಿಯ ಸಭೆ ಈವರೆಗೂ ಆಗಿಲ್ಲ ಎಂದು ನಿಗಮದ ನಿರ್ದೇಶಕರಾದ ಮಹಾಂತೇಶ ಪಾಟೀಲ್ ತಿಳಿಸಿದರು.
ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಪ್ರಮುಖ ಪದಾಧಿಕಾರಿಗಳಾದ ಉಮೇಶ್ ಪಾಟೀಲ್, ಸಿದ್ರಾಮಪ್ಪ ಪಾಟೀಲ್, ಶಿವರಾಜ ಪಾಟೀಲ್, ಉದಯ ಪಾಟೀಲ್, ಚಿದಾನಂದ ಮಟ್ಟೂರ, ಗೋಪನಗೌಡ, ಈರಣ್ಣಗೊಳೆದ ಸೇರಿದಂತೆ ಮುಂತಾದವರಿದ್ದರು.
ಇದನ್ನೂ ಓದಿ: ಮೋದಿ ಪ್ರಧಾನಿಯಾಗಿರುವವರೆಗೂ ರೈತರ ಜಮೀನು ಸುರಕ್ಷಿತ: ಅಮಿತ್ ಶಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.