ಬಂಟ್ವಾಳ : ತಾಂತ್ರಿಕ ದೋಷದಿಂದ ಕೆಟ್ಟು ನಿಂತ ಲಿಫ್ಟ್ : ನಾಲ್ವರು ಮಕ್ಕಳು ಅಪಾಯದಿಂದ ಪಾರು
Team Udayavani, Dec 25, 2020, 7:58 PM IST
ಸಾಂದರ್ಭಿಕ ಚಿತ್ರ
ಬಂಟ್ವಾಳ: ವಸತಿ ಸಮುಚ್ಚಯ ವೊಂದರಿಂದ ದಿನಪಯೋಗಿ ವಸ್ತು ಗಳನ್ನು ಖರೀದಿ ಮಾಡಲೆಂದು ಲಿಫ್ಟ್ ಮೂಲಕ ಕೆಳಗೆ ಇಳಿಯಲು ಹೋದ ನಾಲ್ವರು ಬಾಲಕಿಯರು ತಾಂತ್ರಿಕ ಅಡಚಣೆಯಿಂದ ಲಿಫ್ಟ್ ನಲ್ಲಿಯೇ ಬಾಕಿಯಾಗಿದ್ದ ಘಟನೆ ಶುಕ್ರವಾರ ಸಂಜೆ ಕಲ್ಲಡ್ಕದಲ್ಲಿ ನಡೆದಿದೆ.
ಕಲ್ಲಡ್ಕದ ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿ ಈ ಘಟನೆ ನಡೆದಿದೆ. ವಸತಿ ಸಂಕೀರ್ಣದಲ್ಲಿ ವಾಸವಾಗಿದ್ದ ಬಾಲಕಿಯರ ಜೊತೆಯಲ್ಲಿ ಬಾಲಕಿಯ ಸಂಬಂಧಿ ಬಾಲಕಿಯರು ಬಾಕಿಯಾಗಿದ್ದರು. ನೇರಳಕಟ್ಟೆಯ ನಿವಾಸಿಗಳಾದ ಫಿದಾನೈನ (15), ಮಯಿಷೀನಾ (14) ಹಾಗೂ ಸಿಯಾನಾ(13), ಅಪ್ಸ ( 19) ಅವರು ಲೆಪ್ಟ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದರು.
ಫಿದಾನೈನ ಅವಳ ಸಂಬಂಧಿಕರಾದ ಮಕ್ಕಳು ಮನೆಯಿಂದ ಕೆಳಗೆ ಕಲ್ಲಡ್ಕದಲ್ಲಿರುವ ಅಂಗಡಿಗೆ ಸಾಮಗ್ರಿಗಳ ತರಲೆಂದು ವಸತಿ ಸಂಕೀರ್ಣದ ಲಿಫ್ಟ್ ಮೂಲಕ ಕಳೆಗೆ ಬರುತ್ತಿದ್ದಂತೆ ಅರ್ಧದಲ್ಲಿ ತಾಂತ್ರಿಕ ದೋಷದಿಂದ ಲಿಫ್ಟ್ ಕೆಟ್ಟು ಹೋಗಿದೆ.
ಇದನ್ನೂ ಓದಿ : ಜನವರಿಯಲ್ಲಿ ಅಮಿತ್ ಶಾ ರಾಜ್ಯಕ್ಕೆ ಆಗಮನ; ಅಷ್ಟರಲ್ಲಿ ಸಾಕಷ್ಟು ಬದಲಾವಣೆ ಖಂಡಿತಾ: ಯತ್ನಾಳ್
ಬಾಲಕಿಯರು ಅ ಕೂಡಲೇ ಮನೆಯವರಿಗೆ ವಿಷಯ ತಿಳಿಸಿದ್ದು ಮನೆಮಂದಿ ಜೊತೆಗೆ ಸ್ಥಳೀಯರು ಲಿಫ್ಟ್ ಅರ್ಧ ಓಪನ್ ಮಾಡಿ ಅವರಿಗೆ ಗಾಳಿ ಬೀಸುವ ಉದ್ದೇಶದಿಂದ ಟೇಬಲ್ ಪ್ಯಾನ್ ಒಂದನ್ನು ಇಡುವ ವ್ಯವಸ್ಥೆ ಮಾಡಿದ್ದರು.
ಬಳಿಕ ಅಗ್ನಿಶಾಮಕ ದಳದವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಕಟ್ಟಡದ ಲಿಫ್ಟ್ ನ ಕೆಲಸ ಮಾಡಿದ ಸಂಬಂಧಿಸಿದ ಕಂಪೆನಿ ಯವರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದು ಲಿಫ್ಟ್ ನ ತಾಂತ್ರಿಕ ದೋಷವನ್ನು ಸರಿಪಡಿಸಿ ಸುಮಾರು 7.15 ಗಂಟೆಗೆ ಮಕ್ಕಳು ಯಾವುದೇ ಸಮಸ್ಯೆಯಿಲ್ಲದೆ ಹೊರಗೆ ಬರುವಂತೆ ಮಾಡಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಎಸ್.ಐ. ಅವಿನಾಶ್ ಬೇಟಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.