4 ಘಟಕಗಳ ವಿಲೀನ-ಡಿಟಿಎಚ್: 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ
ಸರಕಾರದ ನಿರ್ಧಾರವನ್ನು ಡಿಟಿಎಸ್ ಸೇವೆ ನೀಡುವ ಸಂಸ್ಥೆಗಳು ಸ್ವಾಗತಿಸಿವೆ.
Team Udayavani, Dec 24, 2020, 1:35 PM IST
Representative Image
ಹೊಸದಿಲ್ಲಿ: ಡೈರೆಕ್ಟ್ ಟು ಹೋಮ್ (ಡಿಟಿಎಚ್) ಸೇವೆ ನೀಡುವ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಲಾಗಿದೆ. ಜತೆಗೆ ಪರವಾನಿಗೆ ನೀಡುವ ವ್ಯವಸ್ಥೆ ಯನ್ನು ಹಾಲಿ 10 ವರ್ಷಗಳಿಂದ 20 ವರ್ಷಗಳಿಗೆ ಪರಿಷ್ಕರಿಸಲು ನಿರ್ಧರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಮ್ಮತಿ ಸೂಚಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾಬ್ಡೇಕರ್ ತಿಳಿಸಿದ್ದಾರೆ. ಸದ್ಯ ಶೇ.49ರಷ್ಟು ವಿದೇಶಿ ಹೂಡಿಕೆಗೆ ಅವಕಾಶವಿದೆ ಎಂದಿದ್ದಾರೆ ಜಾಬ್ಡೇಕರ್.
ದೇಶದಲ್ಲಿ ಸದ್ಯ ಆರು ಕೋಟಿ ಮನೆಗಳಲ್ಲಿ ಡಿಟಿಎಸ್ ಸೇವೆ ಈಗ ಲಭ್ಯವಿದೆ. ಆನ್‌ಲೈನ್ ಲೈವ್ ವೀಡಿಯೋ ಸ್ಟ್ರೀಮಿಂಗ್ ವ್ಯವಸ್ಥೆಗಳಾಗಿರುವ ನೆಟ್ ಫ್ಲಿಕ್ಸ್, ಅಮೆಜಾನ್ ವೀಡಿಯೋ, ಡಿಸ್ನಿ ಪ್ಲಸ್ ಮತ್ತಿತರ ರಿಂದ ಡಿಟಿಎಚ್ ವ್ಯವಸ್ಥೆಗೆ ಪ್ರತಿಸ್ಪರ್ಧೆ ಎದುರಿಸುತ್ತಿರುವ ಸಂದರ್ಭದಲ್ಲಿಯೇ ಈ ನಿರ್ಧಾರ ಪ್ರಕಟವಾಗಿದೆ.
ಸರಕಾರದ ನಿರ್ಧಾರವನ್ನು ಡಿಟಿಎಸ್ ಸೇವೆ ನೀಡುವ ಸಂಸ್ಥೆಗಳು ಸ್ವಾಗತಿಸಿವೆ. 4 ಘಟಕಗಳ ವಿಲೀನ: ಮತ್ತೂಂದು ನಿರ್ಧಾರದಲ್ಲಿ ಕೇಂದ್ರ ಸರಕಾರದ ನಾಲ್ಕು ಮಾಧ್ಯಮ ಘಟಕಗಳವಾಗಿರುವ ಫಿಲಂ ಡಿವಿಷನ್, ಚಲನಚಿತ್ರೋತ್ಸವ ನಿರ್ದೇಶನಾಲಯ, ಮಕ್ಕಳ ಚಲನಚಿತ್ರ ಮಂಡಳಿ, ನ್ಯಾಶನಲ್ ಫಿಲಂ ಆಕೈವ್ಸ್ ಆಫ್ ಇಂಡಿಯಾಗಳನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿಯಲ್ಲಿ ವಿಲೀನಗೊಳಿಸುವ ನಿರ್ಧಾರಕ್ಕೂ ಅನುಮೋದನೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.