ಪೊಲೀಸರ ಸಲಹೆ, ಮುನ್ನೆಚ್ಚರಿಕೆ ನಿರ್ಲಕ್ಷಿಸದಿರಿ
ಕರಾವಳಿಯಲ್ಲಿ ಹೆಚ್ಚುತ್ತಿದೆ ಸುಲಿಗೆ, ದರೋಡೆ ಆತಂಕ
Team Udayavani, Dec 27, 2020, 5:55 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಸಾರ್ವಜನಿಕರು ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳಿಂದಲೂ ಸುಲಿಗೆ, ದರೋಡೆಗಳನ್ನು ಸ್ವಲ್ಪ ಮಟ್ಟಿಗೆ ತಪ್ಪಿಸಲು ಸಾಧ್ಯವಿದೆ. ಪ್ರತೀ ಮನೆಯವರ ಸಹಕಾರದಿಂದ ಇಡೀ ಊರನ್ನೇ ಸುರಕ್ಷಿತವಾಗಿಟ್ಟುಕೊಳ್ಳಲು ಸಾಧ್ಯ. ಆಗ ಜಾಗೃತ ಸಮಾಜ ಸುರಕ್ಷಿತ ಸಮಾಜವಾಗಿ ರೂಪುಗೊಳ್ಳುತ್ತದೆ.
ನ್ಯೂ ಬೀಟ್ ಬಲಗೊಳ್ಳಲಿ
ರಾಜ್ಯದಲ್ಲಿ ಈ ಹಿಂದಿನ ಪೊಲೀಸ್ ಬೀಟ್ ವ್ಯವಸ್ಥೆ ಬದಲಾಯಿಸಿ ನ್ಯೂ ಬೀಟ್ ಜಾರಿಗೊಳಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಇದು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಅಲ್ಲದೆ ಪೊಲೀಸ್ ಮ್ಯಾನುವಲ್ ಪ್ರಕಾರ ಗ್ರಾಮ ರಕ್ಷಣಾ ಸಮಿತಿ ರಚನೆ, ದಳಪತಿಗಳ ನಿಯೋಜನೆಗೂ ಅವಕಾಶವಿತ್ತು. ಆದರೆ ನಮ್ಮ ಜಿಲ್ಲೆಯಲ್ಲಿ ಇಂತಹ ವ್ಯವಸ್ಥೆಗಳು ಜಾರಿಯಲ್ಲಿಲ್ಲ. ಈ ಹಿಂದೆ ಇದ್ದ “ಗೂರ್ಖಾ ಕಾವಲು’ ಕೂಡ ಈಗ ಇಲ್ಲ. ಚೆಕ್‌ಪೋಸ್ಟ್‌ಗಳು ಮತ್ತು ಸಿಸಿ ಕೆಮರಾಗಳ ಅಳವಡಿಕೆಗೆ ಇನ್ನುಷ್ಟು ಆದ್ಯತೆ ದೊರೆಯಬೇಕಿದೆ.
ಮಾಹಿತಿ ನೀಡಲು ಅಂಜಿಕೆ ಬೇಡ
ಸಾರ್ವಜನಿಕರು ಪೊಲೀಸ್ ಠಾಣೆಗೆ ಯಾವುದೇ ರೀತಿಯ ಮಾಹಿತಿ ನೀಡಲು ಹಿಂಜರಿಯಬೇಕಾಗಿಲ್ಲ. ಎಲ್ಲ ರೀತಿಯ ಗೌಪ್ಯತೆ ಕಾಪಾಡಿಕೊಳ್ಳಲಾಗುತ್ತದೆ. ಪ್ರತಿಯೊಂದು ಮನೆಯವರೂ ಠಾಣೆಯ ಸಂಪರ್ಕ ಹೊಂದಿರುವುದು ಉತ್ತಮ. ತುರ್ತು ಸಂದರ್ಭದಲ್ಲಿ ಸ್ಥಳೀಯ ಪೊಲೀಸರಿಗೆ ಅಥವಾ 112 ತುರ್ತು ಸಹಾಯವಾಣಿಗೆ ಮಾಹಿತಿ ನೀಡಬಹುದು. ಮಾಹಿತಿಗಳನ್ನು 112 ಐNಈಐಅ ಆ್ಯಪ್ ಮೂಲಕವೂ ರವಾನಿಸಬಹುದು.
-ಬಿ.ಎಂ. ಲಕ್ಷ್ಮೀಪ್ರಸಾದ್, ಎಸ್‌ಪಿ, ದ.ಕ.
ಪೊಲೀಸರ ಸಲಹೆ-ಸೂಚನೆ
– ಅನುಮಾನಾಸ್ಪದ ವ್ಯಕ್ತಿಗಳು ಮನೆ ಪಕ್ಕದಲ್ಲಿ ತಿರುಗಾಡುವುದು, ಅಪರಿಚಿತ ವಾಹನಗಳನ್ನು ನಿಲ್ಲಿಸಿರುವುದು ಕಂಡುಬಂದರೆ ತತ್‌ಕ್ಷಣ ಠಾಣೆಗೆ ಮಾಹಿತಿ ನೀಡಬೇಕು.
– ಮನೆಬಿಟ್ಟು ಹೋಗುವಾಗ ನೆರೆಯ ವಿಶ್ವಾಸದ ಮನೆಯವರಿಗೆ ತಿಳಿಸಿ. ಸಾಧ್ಯವಾದರೆ ಪೊಲೀಸ್ ಠಾಣೆಗೂ ಮಾಹಿತಿ ನೀಡಿ.
– ಕೆಲಸಗಾರರನ್ನು ನೇಮಿಸುವಾಗ ಅವರ ಭಾವಚಿತ್ರ, ಸಂಪೂರ್ಣವಿಳಾಸ ಪಡೆದು ನೇಮಿಸಿ. ಒಂದು ವಾರದೊಳಗೆ ಆ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಬೆಲೆ ಬಾಳುವ ಸೊತ್ತುಗಳನ್ನು ಕೆಲಸದಾಳುವಿನ ಗಮನಕ್ಕೆ ಬಾರದಂತೆ ಇಡಬೇಕು.
– ಮನೆ ಮನೆಗಳಿಗೆ ಬರುವ ಮಾರಾಟಗಾರರ ಬಗ್ಗೆ ಎಚ್ಚರದಿಂದ ಇರಬೇಕು.
– ಯಾರಾದರೂ ಮನೆ ಬಾಗಿಲು ತಟ್ಟಿದರೆ, ಕಾಲಿಂಗ್ ಬೆಲ್ ಮಾಡಿದರೆ ಬಂದವರು ಯಾರೆಂದು ಖಚಿತಪಡಿಸಿ ಕೊಳ್ಳದೇ ಬಾಗಿಲು ತೆರೆಯದಿರಿ.
– ಮನೆಯಲ್ಲಿರುವ ಹಣ, ಚಿನ್ನಾಭರಣಗಳನ್ನು ಭದ್ರವಾಗಿ ಡಬೇಕು ಅಥವಾ ಸೇಫ್ ಲಾಕರ್‌ಗಳಲ್ಲಿ ಇಡುವ ವ್ಯವಸ್ಥೆ ಮಾಡಬೇಕು.
– ಮನೆಯ ಮುಂಬಾಗಿಲು ಮತ್ತು ಹಿಂಬಾಗಿಲುಗಳು ಭದ್ರವಾಗಿರಲಿ.
– ಮನೆಯ ದೂರವಾಣಿಗೆ ಕರೆ ಮಾಡಿ ಯಾರೂ ಇಲ್ಲದಿರು ವುದನ್ನು ಖಚಿತಪಡಿಸಿಕೊಂಡು ಕಳ್ಳತನ ಮಾಡಿರುವ ನಿದರ್ಶನಗಳಿರುವುದರಿಂದ ಈ ಬಗ್ಗೆ ಎಚ್ಚರದಿಂದ ಇರಬೇಕು, ದೂರವಾಣಿಗೆ ಕಾಲರ್ ಐಡಿ ಅಳವಡಿಸಿಕೊಳ್ಳಬೇಕು.
– ಮನೆಯ ಅಕ್ಕಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಲ್ಲಿ ಕಳ್ಳರು ತಂಗುವ ಸಾಧ್ಯತೆ ಇರುವುದರಿಂದ ಎಚ್ಚರದಿಂದ ಇರಬೇಕು.
– ಮಾಧ್ಯಮಗಳಲ್ಲಿ ಬರುವ ಅಪರಾಧಗಳ ಬಗ್ಗೆ ತಿಳಿದುಕೊಂಡು ವಂಚಕರಿಂದ ಮೋಸ ಹೋಗದಂತೆ ಎಚ್ಚರದಿಂದಿರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.