ರಸ್ತೆ ಹಾಳುಗೆಡವಿದ ಗುತ್ತಿಗೆದಾರರ ವಿರುದ್ಧ ಕ್ರಮ
Team Udayavani, Dec 27, 2020, 6:10 PM IST
ಚಿತ್ರದುರ್ಗ: ಮಿತಿ ಮೀರಿದ ಮಣ್ಣಿನ ಲೋಡ್ ಹೊತ್ತು ಲಾರಿಗಳು ಸಂಚರಿಸಿದ್ದರಿಂದ ಮೂರು ತಿಂಗಳಹಿಂದಷ್ಟೇ ನಿರ್ಮಿಸಿದ್ದ ರಸ್ತೆ ಹಾಳಾಗಿದ್ದು, ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸೂಚಿಸಿದರು.
ಹಾಳಾಗಿದ್ದ ರಸ್ತೆಗೆ ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ತೇಪೆ ಹಾಕಿದ್ದರಿಂದ ಇಂಗಳದಾಳ್ ಭಾಗದ ಜನತೆ ಶಾಸಕರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಶನಿವಾರಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್, ಗಣಿ ಮತ್ತುಭೂವಿಜ್ಞಾನ ಇಲಾಖೆ ಅಥವಾ ಅರಣ್ಯಇಲಾಖೆಯಿಂದ ಅನುಮತಿ ಪಡೆಯದೆರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿಇಂಗಳದಾಳ್ ಮಾರ್ಗವಾಗಿ ಸುಮಾರು40 ಟನ್ ಮಣ್ಣು ಹೊತ್ತ ಲಾರಿಗಳಸಂಚರಿಸಿವೆ. ಇದರಿಂದ ಮೂರು ತಿಂಗಳ ಹಿಂದೆ ಕೋಟ್ಯಂತರ ರೂ. ವೆಚ್ಚದಲ್ಲಿನಿರ್ಮಿಸಿದ ರಸ್ತೆ ಹಾಳಾಗಿದೆ. ಕೋವಿಡ್‌ಮತ್ತಿತರೆ ಕಾರಣಕ್ಕೆ ಅನುದಾನ ತರಲುಒದ್ದಾಡುವ ಸ್ಥಿತಿ ಇದೆ. ಆದ್ದರಿಂದ ರಸ್ತೆಹಾಳು ಮಾಡಿದವರೇ ಅದನ್ನು ಪುನರ್‌ನಿರ್ಮಾಣ ಮಾಡಬೇಕು. ಈ ಬಗ್ಗೆ ಗಣಿ ಇಲಾಖೆ ಅಧಿಕಾರಿಗಳು ದೂರು ದಾಖಲಿಸಬೇಕೆಂದರು.
ಕೆಆರ್‌ಡಿ ಕಂಪನಿ ವ್ಯವಸ್ಥಾಪಕ ಚಂದ್ರಶೇಖರ್ ಮಾತನಾಡಿ, ಈಗಾಗಲೇ ಗುಂಡಿ ಬಿದ್ದಿರುವ ಕಡೆಗಳಲ್ಲಿ ಡಾಂಬರ್ ಹಾಕಿದ್ದೇವೆ. ಉಳಿದ ಕಡೆಯೂ ಸರಿಮಾಡಿಕೊಡುತ್ತೇವೆ ಎಂದರು. ಇದಕ್ಕೆಗ್ರಾಮಸ್ಥರು ಹಾಗೂ ಶಾಸಕರುಒಪ್ಪಲಿಲ್ಲ. ಇಂಗಳದಾಳ್ ಗೇಟಿನಿಂದಲಂಬಾಣಿಹಟ್ಟಿವರೆಗೆ ರಸ್ತೆ ಸಂಪೂರ್ಣಹಾಳಾಗಿದೆ. ಹೊಸದಾಗಿ ಮಾಡಿ ಎಂದುಪಟ್ಟು ಹಿಡಿದರು. ಪಿಎನ್‌ಸಿ ಕಂಪನಿಹೆದ್ದಾರಿ ಕಾಮಗಾರಿ ಕೈಗೆತ್ತಿಕೊಂಡಿದ್ದು,ಕೆಆರ್‌ಡಿ ಕಂಪನಿಯವರು ಮಣ್ಣುಹೊಡೆಯುವ ಗುತ್ತಿಗೆ ಪಡೆದಿದ್ದಾರೆ.
ಹೆದ್ದಾರಿ ನಿರ್ಮಾಣ ಮಾಡುವ ಕಾರಣಕ್ಕೆ ಹಳ್ಳಿಗಳ ರಸ್ತೆ ಹಾಳು ಮಾಡುವುದುಸರಿಯಲ್ಲ. ಹಾಳಾಗಿರುವ ರಸ್ತೆ ದುರಸ್ಥಿ ಮಾಡಿಕೊಡಬೇಕು. ಅದನ್ನು ಬಿಟ್ಟು ಲಾಬಿ ಮಾಡುವುದು ಸರಿಯಲ್ಲ ಎಂದು ಶಾಸಕ ತಿಪ್ಪಾರೆಡ್ಡಿ ಆಕ್ಷೇಪಿಸಿದರು.
ಸಿಪಿಐ ಬಾಲಚಂದ್ರ ನಾಯ್ಕ, ಆರ್‌ಎಫ್‌ಒ ಸಂದೀಪ್ ನಾಯಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಮಾಪತಿ ಮತ್ತಿತರರು ಇದ್ದರು.
ಬೌನ್ಸರ್ ಕರೆತಂದ ಗುತ್ತಿಗೆದಾರ! : ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ರಸ್ತೆ ಹಾಳಾಗಿರುವುದನ್ನು ಪರಿಶೀಲಿಸಲುತೆರಳುವ ಜಾಗಕ್ಕೆ ಗುತ್ತಿಗೆದಾರ ಚಂದ್ರಶೇಖರ್, ಆರು ಜನ ಬೌನ್ಸರ್‌ಗಳನ್ನು ಕರೆತಂದಿದ್ದರು. ಇದನ್ನು ಗಮನಿಸಿದ ಶಾಸಕರು ಇವರು ಯಾರು, ಇಲ್ಲಿಗೆಯಾಕೆ ಬಂದಿದ್ದಾರೆ ಎಂದು ಪ್ರಶ್ನಿಸಿದರು. ತಕ್ಷಣ ಗುತ್ತಿಗೆದಾರ ಚಂದ್ರಶೇಖರ್‌ಇವರನ್ನು ಸಿನಿಮಾ ಶೂಟಿಂಗ್‌ಗಾಗಿ ಕರೆತಂದಿದ್ದೇನೆ ಎಂದರು. ತಕ್ಷಣಬೌನ್ಸರ್ ಹುಡುಗರನ್ನು ವಿಚಾರಿಸಿದಾಗ ಸೆಕ್ಯೂರಿಟಿಗಾಗಿ ಬಂದಿದ್ದೇವೆ ಎಂದುಉತ್ತರಿಸಿದರು. ಇದರಿಂದ ಕೆರಳಿದ ಶಾಸಕರು ರೌಡಿಸಂ ಮಾಡಲು ಬಂದಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಎಲ್ಲರ ಮೇಲೆ ದೂರು ದಾಖಲಿಸುವಂತೆ ಸೂಚನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.