ಟೋಲ್‌ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯ; ಸ್ಥಳೀಯರಿಗೆ ಶುಲ್ಕ ವಿನಾಯಿತಿ ರದ್ದು
Team Udayavani, Dec 29, 2020, 1:41 AM IST
ಕೋಟ: ರಾಷ್ಟ್ರೀಯ ಹೆದ್ದಾರಿಯ ಎಲ್ಲ ಟೋಲ್ ಪ್ಲಾಜಾಗಳಲ್ಲಿ ವಾಹನ ಸಂಚಾರಕ್ಕೆ ಜನವರಿ 1ರಿಂದ ಫಾಸ್ಟ್ಯಾಗ್ ಕಡ್ಡಾಯವಾಗಲಿದೆ ಹಾಗೂ ಟ್ಯಾಗ್ ಇಲ್ಲದ ವಾಹನಗಳು ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ. ಟೋಲ್‌ನ ಎಲ್ಲ ಲೈನ್‌ಗಳು ಫಾಸ್ಟಾಗ್‌ಗೊಳ್ಳುವುದರಿಂದ ಇದುವರೆಗೆ ಸ್ಥಳೀಯ ವಾಹನಗಳಿಗೆ ನೀಡಲಾ ಗುತ್ತಿದ್ದ ಶುಲ್ಕ ವಿನಾಯಿತಿ ರದ್ದಾಗಲಿದೆ.
ದ.ಕ., ಉಡುಪಿ ಜಿಲ್ಲೆಯ ಟೋಲ್‌ಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ತಲಪಾಡಿಯಲ್ಲಿ ಸ್ಥಳೀಯ ಪಂಚಾಯತ್ ವ್ಯಾಪ್ತಿಗೆ, ಹೆಜಮಾಡಿಯಲ್ಲಿ ಸ್ಥಳೀಯ ಗ್ರಾಮದವರಿಗೆ ಮತ್ತು ಪಡುಬಿದ್ರಿಯಲ್ಲಿ ಸ್ಥಳೀಯ ಟ್ಯಾಕ್ಸಿಗಳಿಗೆ ಶುಲ್ಕ ವಿನಾಯಿತಿ ನೀಡಲಾ ಗುತ್ತಿದೆ. ಬೈಂದೂರಿನ ಶಿರೂರಿನಲ್ಲಿ ಸ್ಥಳೀಯ 5 ಕಿ.ಮೀ. ವ್ಯಾಪ್ತಿಗೆ, ಸಾಸ್ತಾನದಲ್ಲಿ ಕೋಟ ಜಿ.ಪಂ. ವ್ಯಾಪ್ತಿಯ ಎಲ್ಲ ವಾಹನಗಳಿಗೆ ಟೋಲ್ ವಿನಾಯಿತಿ ಇದೆ. ಆದರೆ ಫಾಸ್ಟ್ಯಾಗ್ ಕಡ್ಡಾಯದ ನೆಪದಲ್ಲಿ ಅದನ್ನು ರದ್ದುಪಡಿಸಲು ರಾ.ಹೆ. ಪ್ರಾಧಿಕಾರ ಮುಂದಾಗುತ್ತಿದೆ ಎಂದು ಆರೋಪಿಸಲಾಗಿದೆ.
ಹೋರಾಟಕ್ಕೆ ಸಿದ್ಧತೆ
ಟೋಲ್‌ನ ಅಕ್ಕ-ಪಕ್ಕದ ಗ್ರಾಮಗಳ ಜನರು ಪ್ರತಿ ನಿತ್ಯ ಹತ್ತಾರು ಬಾರಿ ಟೋಲ್‌ನಲ್ಲಿ ಸಂಚರಿಸುತ್ತಾರೆ. ಹೀಗಾಗಿ ಟೋಲ್ ಪಾವತಿಸಲು ಸಾಧ್ಯವಿಲ್ಲ ಹಾಗೂ ವಾಣಿಜ್ಯ ವಾಹನಗಳಿಗೆ ಮಾಸಿಕ ಪಾಸ್ ಕೂಡ ದುಬಾರಿಯಾಗಿದೆ. ಆದ್ದರಿಂದ ಈ ಹಿಂದಿನಂತೆ ಟೋಲ್ ರಿಯಾಯಿತಿ ಮುಂದು ವರಿಸಬೇಕು. ಸ್ಥಳೀಯರಿಗೆ ಪ್ರತ್ಯೇಕವಾದ ಲೈನ್ ವ್ಯವಸ್ಥೆಗೊಳಿಸಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ. ಹೋರಾಟದ ರೂಪುರೇಷೆ ಸಿದ್ಧವಾಗುತ್ತಿದ್ದು ಸಾಸ್ತಾನದಲ್ಲಿ ಟೋಲ್‌ಗೆ ಮುತ್ತಿಗೆ ಹಾಕಿ ಶುಲ್ಕ ವಿನಾಯಿತಿಗೆ ಆಗ್ರಹಿಸಲಾಗಿದೆ.
ಸರಕಾರಿ ಅಧಿಕಾರಿ, ಜನಪ್ರತಿನಿಧಿಗಳಿಗೂ ಟ್ಯಾಗ್!
ಎಲ್ಲ ವಾಹನಗಳಿಗೂ ಕಡ್ಡಾಯವಾಗಿ ಫಾಸ್ಟಾಗ್ ಅಳವಡಿಸಬೇಕು ಎನ್ನುವುದು ಸರಕಾರದ ನಿಯಮ. ಇದುವರೆಗೆ ಉಚಿತ ಪ್ರವೇಶ ಪಡೆಯುತ್ತಿರುವ ಶಾಸಕ, ಸಂಸದ, ಸಚಿವರು ಮುಂತಾದ ಉನ್ನತ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಯಿಂದ ಹಿಡಿದು ಎಲ್ಲ ಸರಕಾರಿ ವಾಹನಗಳಿಗೂ ಫಾಸ್ಟ್ಯಾಗ್ ಕಡ್ಡಾಯವಾಗಲಿದೆ. ಆದರೆ ಅವರೆಲ್ಲರಿಗೂ ಶುಲ್ಕ ರಹಿತ ಝೀರೊ ಟ್ಯಾಗ್‌ಗಳನ್ನು ನೀಡಲಾಗುವುದರಿಂದ ಉಚಿತ ಪ್ರವೇಶ ಹಿಂದಿನಂತೆ ಮುಂದುವರಿಯಲಿದೆ.
ಸರಕಾರದ ಆದೇಶ ಪಾಲನೆ
ಜ. 1ರಿಂದ ಎಲ್ಲ ವಾಹನಗಳು ಫಾಸ್ಟ್ಯಾಗ್ ಅಧೀನದಲ್ಲಿ ಕಾರ್ಯಾ ಚರಿಸಬೇಕು ಎನ್ನುವುದು ಕೇಂದ್ರ ಸರಕಾರದ ನಿಯಮವಾಗಿದ್ದು, ಎಲ್ಲ ಟೋಲ್‌ಗಳಲ್ಲೂ ಜಾರಿಯಾಗಲಿದೆ. ಈ ಹಿಂದಿನ ಶುಲ್ಕ ವಿನಾಯಿತಿ ಕ್ರಮ ರದ್ದಾಗಲಿದೆ.
– ಶಿಶು ಮೋಹನ್, ಯೋಜನಾ ನಿರ್ದೇಶಕರು ಹೆದ್ದಾರಿ ಪ್ರಾಧಿಕಾರ
ವಿನಾಯಿತಿ ಮುಂದುವರಿಯಬೇಕು
ಸ್ಥಳೀಯರಿಗೆ ಇರುವ ಶುಲ್ಕ ರಿಯಾಯಿತಿಯನ್ನು ಯಾವುದೇ ಕಾರಣಕ್ಕೆ ರದ್ದುಪಡಿಸಲು ಅವಕಾಶ ನೀಡೆವು. ಮನವಿ ಪುರಸ್ಕರಿಸದಿದ್ದರೆ ಜಿಲ್ಲೆಯಾದ್ಯಂತ ಒಗ್ಗಟ್ಟಿನ ಹೋರಾಟ ನಡೆಸಲಿದ್ದೇವೆ.
– ಶ್ಯಾಮ್ ಸುಂದರ್ ನಾೖರಿ, ಅಧ್ಯಕ್ಷರು ಹೆದ್ದಾರಿ ಜಾಗೃತಿ ಸಮಿತಿ ಸಾಸ್ತಾನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.