ಶ್ರೀ ವಿಶ್ವೇಶತೀರ್ಥರು ಕಾಲವಾಗಿ ವರ್ಷ
Team Udayavani, Dec 29, 2020, 1:47 AM IST
ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಕಾಲವಾಗಿ ಇಂದಿಗೆ (ಡಿ. 29) ಒಂದು ವರ್ಷ.ಡಿ. 19ರ ತಡರಾತ್ರಿ ಅಸ್ವಸ್ಥರಾದ ಸ್ವಾಮೀಜಿ ಅವರನ್ನು ಡಿ. 20ರ ಮುಂಜಾವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ. 29ರಂದು ಇಹಲೋಕ ತ್ಯಜಿಸಿದರು. ಅದೇ ದಿನ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿ ಭೌತಿಕ ಶರೀರವನ್ನು ಭೂಗತಗೊಳಿಸಲಾಯಿತು. ತಿಥಿ ಪ್ರಕಾರ ಅವರ ಪ್ರಥಮ ಪುಣ್ಯಾರಾಧನೆಯನ್ನು ಡಿ. 17ರಂದು ಅದೇ ಸ್ಥಳದಲ್ಲಿ ಶಿಲಾಮಯ ವೃಂದಾವನ ಸ್ಥಾಪಿಸಿ ನಡೆಸಲಾಯಿತು. ಒಂದೇ ವಾರದಲ್ಲಿ ಡಿ. 24ರಂದು ಬೆಂಗಳೂರಿನ ಇನ್ನೊಂದು ಕಡೆ ಪ್ರಥಮ ಮೃತ್ತಿಕಾ ವೃಂದಾವನವೂ ಸ್ಥಾಪನೆಗೊಂಡಿತ್ತು.
ಸ್ವಾಮೀಜಿಯವರು 2019ರ ನ. 9ರಂದು ಅಯೋಧ್ಯೆ ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಉಡುಪಿಯಲ್ಲಿ ಆಲಿಸಿ ಮರುದಿನ ದಿಲ್ಲಿಯಲ್ಲಿ ನಡೆದ ಉನ್ನತ ಮಟ್ಟದ ಸರಕಾರಿ ಸಭೆಯಲ್ಲಿ ಭಾಗವಹಿಸಿದ್ದರು. ಈಗ ಅಸ್ತಿತ್ವಕ್ಕೆ ಬಂದ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯಾಗಿ ಸ್ವಾಮೀಜಿ ಅವರ ಉತ್ತರಾ ಧಿಕಾರಿ ಶ್ರೀ ವಿಶ್ವಪ್ರಸನ್ನ ತೀರ್ಥರು ನೇಮಕಗೊಂಡಿದ್ದು ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ.
ನಾಲ್ಕು ದಿನಗಳ ಹಿಂದೆ ಡಿ. 24ರಂದು ಬೆಂಗಳೂರಿನ ವೃಂದಾವನ ಸನ್ನಿಧಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ
ಬಿ.ಎಸ್. ಯಡಿಯೂರಪ್ಪನವರು 1992ರ ಡಿ. 7ರಂದು ಸ್ವಾಮೀಜಿಯವರು ರಾಮಲಲ್ಲಾ ವಿಗ್ರಹ ಪ್ರತಿಷ್ಠೆ ಮಾಡುವಾಗ ನಾನೂ ಪಾಲ್ಗೊಂಡಿದ್ದೆ. ಇದು ತನ್ನ ಜೀವನದ ಬಹುದೊಡ್ಡ ಭಾಗ್ಯ. ಮಂದಿರ ನಿರ್ಮಾಣಕ್ಕಾಗಿ ನಡೆಸಿದ ವಿವಿಧ ಹೋರಾಟಗಳಲ್ಲಿಯೂ ಸ್ವಾಮೀಜಿಯವರೊಂದಿಗೆ ಪಾಲ್ಗೊಂಡಿದ್ದೆ ಎಂದು ಸ್ಮರಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.