ಶವ ಸಂಸ್ಕಾರ ಸುತ್ತ ನಡೆದ ಸತ್ಯ ಕಥೆ
Team Udayavani, Dec 29, 2020, 1:17 PM IST
ಅನ್ವಿತಾ ಶೆಟ್ಟಿ
ನಿಧನರಾದ ವ್ಯಕ್ತಿಗಳನ್ನು ಅವರವರ ಸಂಪ್ರದಾಯದಂತೆ ಅಗ್ನಿಸ್ಪರ್ಶ ಮಾಡುವ ಅಥವಾ ಹೂಳುವ ಪದ್ದತಿಯಿದೆ. ಇದಕ್ಕಾಗಿ ಹಳ್ಳಿ ಮತ್ತು ನಗರಗಳಲ್ಲಿ ಸರ್ಕಾರ ಪ್ರತ್ಯೇಕ ಸ್ಥಳ ವ್ಯವಸ್ಥೆಯನ್ನೂ ಕಲ್ಪಿಸಿದೆ. ಆದರೆ ಚಿತಾಗಾರಅಥವಾ ಸ್ಮಶಾಣ ಸೌಕರ್ಯ ಇಲ್ಲದ ಹಳ್ಳಿಗಳಲ್ಲಿ ಜನರು ಅಂತ್ಯಕ್ರಿಯೆಗೆ ಪಡಬಾರದು ಕಷ್ಟ ಎದುರಿಸುತ್ತಾರೆ.
ಈಗ ಇದೇ ವಿಷಯವನ್ನುಇಟ್ಟುಕೊಂಡು “ಶವ ಸಂಸ್ಕಾರ’ ಎನ್ನುವ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಮಂಡ್ಯ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ “ಶವ ಸಂಸ್ಕಾರ’ ಚಿತ್ರವನ್ನು ತೆರೆಮೇಲೆ ತರಲಾಗುತ್ತಿದೆ. “ಎಸ್‌ಕೆಎಂ ಮೂವೀಸ್’ ಬ್ಯಾನರ್‌ನಲ್ಲಿನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಕೀಲ ಎಸ್. ಕೆ ಮೋಹನ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ :ಚಿತ್ರರೂಪದಲ್ಲಿ ಆಚಾರ್ಯ ಶ್ರೀಶಂಕರ
ಸದ್ಯ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿರುವ ಚಿತ್ರತಂಡಚನ್ನರಾಯಪಟ್ಟಣ, ಮಂಡ್ಯ, ಚನ್ನಪಟ್ಟಣ,ಮದ್ದೂರು, ರಾಮನಗರ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲು ಪ್ಲಾನ್ ಹಾಕಿಕೊಂಡಿದೆ. “ಶವ ಸಂಸ್ಕಾರ’ ಚಿತ್ರದಲ್ಲಿ ಗೋವಿಂದೇ ಗೌಡ, ಅನ್ವಿತಾ ಶೆಟ್ಟಿ, ದಿವ್ಯಶ್ರೀ, ಯತಿರಾಜ್, ಪ್ರಜ್ವಲ್, ಅಕ್ಷಯ್, ದರ್ಶನ್, ಕಿರಣ್, ಗೌತಮ್, ಮೌಲ್, ಆನಂದ್, ಅಮಿತ್, ಸುದೀಪ್, ನಾಗರತ್ನ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಕಾಂತರಾಜು ಗೌಡ ಈಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಮೂರು ಗೀತೆಗಳಿಗೆ ಸುಪ್ರಿತ್ ಸಂಗೀತವಿದೆ. ಚಿತ್ರಕ್ಕೆ ರವಿಛಾಯಾಗ್ರಹಣ, ಮಂಜು ಎಸ್. ಪದ್ಮನಾಭ್ -ದಿನೇಶ್ ಸಂಕಲನವಿದೆ. ಚಿತ್ರ ಮುಂದಿನ ವರ್ಷದ ಮಧ್ಯಭಾಗದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.