31ರಂದು ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ
Team Udayavani, Dec 29, 2020, 5:04 PM IST
ಯಾದಗಿರಿ: ನಗರದ ವಿಬಿಆರ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿಡಿ.31ರಂದು ಎಚ್.ಸಿ.ಜಿ ಕ್ಯಾನ್ಸರ್ ಕೇರ್ ಸಹಯೋಗದಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಜನರು ರೋಗದ ಲಕ್ಷಣಗಳಿದ್ದರೆ ಸೂಕ್ತ ಚಿಕಿತ್ಸೆ ಪಡೆದು ಅದರ ಲಾಭ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಮುಖ್ಯಸ್ಥರಾದ, ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮ್ಮ ಆಸ್ಪತ್ರೆಯಲ್ಲಿ 4 ವರ್ಷಗಳಿಂದ ಹಲವಾರು ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡುಬಂದಿದ್ದೇವೆ. ಡಿ.31ರಂದು ತಮ್ಮ ಜನ್ಮದಿನ ವನ್ನು ಬೆಂಬಲಿಗರು ಸಂಭ್ರಮದಿಂದ ಆಚರಿಸುತ್ತಿದ್ದರು.
ಆದರೆ, ಈ ವರ್ಷ ಜನ್ಮದಿನ ಆಚರಣೆ ಮಾಡಿಕೊಳ್ಳುವುದಿಲ್ಲ, ಯಾವುದೇ ಸನ್ಮಾನ, ಗೌರವ ಸ್ವೀಕರಿಸುವುದಿಲ್ಲ. ಕೋವಿಡ್‌ನಿಂದ ಜನರು ಸಂಕಷ್ಟದಲ್ಲಿದ್ದಾರೆ.ಕಾರಣ ಅಭಿಮಾನಿಗಳು ನಿರಾಶೆರಾಗಬೇಡಿ. ಬದಲಾಗಿ ಶಿಬಿರದ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಜನರು ಬಾಯಲ್ಲಿ ಹಾಗೂ ದೇಹದ ಇತರೆ ಭಾಗದಲ್ಲಿ ವಾಸಿಯಾಗದಹುಣ್ಣು, ಗಂಟು, ಆಹಾರ ಸೇವಿಸಲು ಕಷ್ಟ, ಬಾಯಿ ತೆರೆಯಲುಕಷ್ಟವಾಗುವುದು, ಸ್ತ್ರೀಯರಿಗೆ ಸ್ತನದಲ್ಲಿ ಗಂಟು, ಸ್ರಾವವಿದ್ದರೆ,ಗರ್ಭಕೋಶದಲ್ಲಿ ಗಂಟು, ಥೆ„ರಾಯxನ ಗಂಟುಗಳಿದ್ದರೆ, ತೂಕ ಕಡಿಮೆಯಾಗುವುದು, ಹಸಿವು ಆಗದಿರುವುದು ಮತ್ತು ಗುಟ್ಕಾ, ಧೂಮಪಾನ, ತಂಬಾಕಿನ ಅಭ್ಯಾಸವಿದ್ದವರು ಮೊದಲು ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ| ಬಸವರಾಜ, ನಗರ ಯೋಜನಾ ಪ್ರಾ ಧಿಕಾರ ಅಧ್ಯಕ್ಷ ಬಸವರಾಜ ಚಂಡ್ರಿಕಿ, ನಗರಸಭೆ ಅಧ್ಯಕ್ಷ ವಿಲಾಸಪಾಟೀಲ, ಮುಖಂಡರಾದ ಸಿದ್ದಣಗೌಡ ಕಾಡಂನೋರ,ಶರಣಗೌಡ ಮುದ್ನಾಳ, ಮಾರುತಿ ಕಲಾಲ್, ಡಾ| ಅಮೋಘ, ಡಾ| ಕ್ಷೀತಿಶ ಇದ್ದರು.
ಹಸನಾಪುರ ಎಪಿಎಂಸಿಗೆ ಡಿಸಿ ಭೇಟಿ-ಪರಿಶೀಲನೆ :
ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಹಸನಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದಲ್ಲಿರುವಒಕ್ಕಲುತನ ಹುಟ್ಟುವಳಿ ಮಾರಾಟಸಹಕಾರ ಸಂಘದಲ್ಲಿ ತೆರೆಯಲಾಗಿರುವತೊಗರಿ ಖರೀದಿ ಕೇಂದ್ರಕ್ಕೆ ಜಿಲ್ಲಾ ಧಿಕಾರಿಡಾ| ರಾಗಪ್ರಿಯ ಸೋಮವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದಅವರು, ತೊಗರಿ ಖರೀದಿಗೆಸಂಬಂಧಿಸಿದ ಕೇಂದ್ರಗಳಲ್ಲಿ ರೈತರು ತಮ್ಮಹೆಸರು ನೋಂದಾಯಿಸಿಕೊಳ್ಳಬೇಕು. ಈವೇಳೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಬೇಕು. ತೊಗರಿ ಖರೀದಿಕುರಿತು ವ್ಯಾಪಕವಾಗಿ ಪ್ರಚಾರಕೈಗೊಳ್ಳಬೇಕು. ಆ ಮೂಲಕ ರೈತರುಈ ಯೋಜನೆಯ ಹೆಚ್ಚಿನ ಲಾಭಪಡೆಯುವಂತಾಗಬೇಕು ಎಂದು ಸೂಚಿಸಿದರು.
ಪ್ರತಿ ಕ್ವಿಂಟಲ್ ತೊಗರಿಗೆ ಕೇಂದ್ರ ಸರ್ಕಾರದ ಬೆಂಬಲೆ ಬೆಲೆಯೋಜನೆಯಡಿ 6,000 ರೂ.ಗಳನ್ನು ನಿಗದಿ ಪಡಿಸಲಾಗಿದೆ. ಪ್ರತಿರೈತರಿಂದ ಎಕರೆಗೆ 7.5 ಕ್ವಿಂಟಲ್‌ನಂತೆಗರಿಷ್ಠ 20 ಕ್ವಿಂಟಲ್ ತೊಗರಿಯನ್ನುಖರೀದಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸುರಪುರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಎಪಿಎಂಸಿ ಅಧಿಕಾರಿಗಳು ಸ್ಥಳದಲ್ಲಿದ್ದರು. ಇದೇ ಸಂದರ್ಭದಲ್ಲಿ ರೈತರು ಹಲವು ಬೇಡಿಕೆ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.